ನಗೋಯಾ: 2026ರ ಏಷ್ಯನ್ ಗೇಮ್ಸ್ನಲ್ಲಿ ಮೈಸೂರಿನ ಪ್ರಣವಿ ಅರಸ್ ಮಹಿಳಾ ಗಾಲ್ಫ್ ವೈಯುಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಂದಹಾಗೆ ಪ್ರಣವಿ, ಆರ್ಸಿಬಿ ತಂಡದ ಅಪ್ಪಟ ಅಭಿಮಾನಿ ಕೂಡಾ ಹೌದು.
ಏಷ್ಯನ್ ಗೇಮ್ಸ್ನ ಪುರುಷರ ವಿಭಾಗದ ಕ್ರಿಕೆಟ್ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗು ಬಡಿದು ಟೀಂ ಇಂಡಿಯಾ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಹೈ-ವೋಲ್ಟೇಜ್ ಪಂದ್ಯದಲ್ಲಿ ಮೈದಾನದಲ್ಲಿ ಒಂದಷ್ಟು ಹೈಡ್ರಾಮಾಗಳು ನಡೆದ್ರೆ, ಮೈದಾನದ ಆಚೆಗೂ ನಡೆಯಿತು. ಏನದು? ಸ್ಟೋರಿ ಓದಿ..
ಗುವಾಹಟಿ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ 406 ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತುವ ಮೂಲಕ ಹೊಸ ದಾಖಲೆ ಬರೆದಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಈ ಪಿಚ್ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಕ್ರಿಕೆಟ್ ಜಗತ್ತಿನ ಕಿಂಗ್ ವಿರಾಟ್ ಕೊಹ್ಲಿ 29ನೇ ವಯಸ್ಸಿಗೆ ಮಾಡಿದ ಸಾಧನೆಯನ್ನು ಭಾರತೀಯ ಕ್ರಿಕೆಟ್ನ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಅವರು ಕೇವಲ 15 ವರ್ಷಕ್ಕೆ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತೀಯರಲ್ಲಿ ಅತಿ ಕಿರಿಯ ವಯಸ್ಸಿಗೆ ಈ ಸಾಧನೆ ಮಾಡಿದ ಸೆಲೆಬ್ರಿಟಿಗಳ ಸಾಲಿಗೆ ಸೇರಿದ್ದಾರೆ.
ಏಷ್ಯನ್ ಗೇಮ್ಸ್ನ ಎರಡನೇ ಸೆಮಿಫೈನಲ್ನಲ್ಲಿ ಶ್ರೀಲಂಕವನ್ನು ಮಣಿಸಿ ಭಾರತ ಫೈನಲ್ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಲಂಕಾ ಆಟಗಾರ ತಿರಿಂಡು ರತ್ನಾಯಕೆ ವಿಶೇಷ ಸಾಧನೆ ಮಾಡಿ ಗಮನ ಸೆಳೆದರು.
ಕೆನಡಾದಲ್ಲಿ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ವಿಜಯಪುರ ಜಿಲ್ಲೆಯ ಸಚಿನ್ ಸಾಳುಂಕೆ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. 105 ಕೆ.ಜಿ ಪುರುಷರ ವಿಭಾಗದಲ್ಲಿ ಇವರ ಸಾಧನೆಗೆ ಸಚಿವ ಎಂ.ಬಿ. ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾದಲ್ಲಿ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕ್ರೇಜ್ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಇವರೆಲ್ಲಾ ಆಟದಲ್ಲಿ ಮುಂದಿದ್ದರೂ, ಓದಿನಲ್ಲಿ ಸ್ವಲ್ಪ ಹಿಂದೆಯೇ ಇದ್ದಾರೆ. ಹಾಗಾದರೆ ನಮ್ಮ ತಂಡದಲ್ಲಿ ಅತಿ ಹೆಚ್ಚು ಓದಿರುವ ಆಟಗಾರ ಯಾರು ಅಂತ ನಿಮಗೆ ಗೊತ್ತಾ?
ಬೆಂಗಳೂರು: 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಭಾರತ ಕಂಡ ಅತ್ಯಂತ ಯಶಸ್ವಿ ಬ್ಯಾಟರ್ಗಳಲ್ಲಿ ಒಬ್ಬರು. ಆದರೆ ರಾಹುಲ್ ದ್ರಾವಿಡ್ ತಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕದ್ದುಮುಚ್ಚಿ ಮಗನ ಮ್ಯಾಚ್ ನೋಡುತ್ತಿದ್ದರಂತೆ. ಈ ಬಗ್ಗೆ ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೇವಲ 30 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಅಭಿಷೇಕ್ ಶರ್ಮಾ ವಿಶ್ವದಾಖಲೆ ಬರೆದಿದ್ದಾರೆ. ಪಂಜಾಬ್ ಮೂಲದ ಈ ಯುವ ಆಟಗಾರನ ಸ್ಫೋಟಕ ಬ್ಯಾಟಿಂಗ್ ಹಿಂದಿನ ಸಕ್ಸಸ್ ಸೀಕ್ರೆಟ್ ಈಗ ಕ್ರೀಡಾ ವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.
ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ 3ನೇ ಹಾಗೂ ಕೊನೆ ಟಿ20 ಪಂದ್ಯ ಗುರುವಾರ ನಡೆಯಲಿದೆ. ಮೊದಲೆರಡು ಪಂದ್ಯದಲ್ಲಿ ಗೆದ್ದಿದ್ದ ಭಾರತ, ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ಸ್ವೀಪ್ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ 3 ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
Explore the Sports Photo Gallery (ಕ್ರೀಡಾ ಚಿತ್ರ ಗ್ಯಾಲರಿ) on Asianet Suvarna News. Action-packed images from cricket, football, kabaddi, and other sporting events. ಕ್ರಿಕೆಟ್, ಫುಟ್ಬಾಲ್, ಕಬಡ್ಡಿ ಮತ್ತು ಇತರ ಕ್ರೀಡೆಗಳ ರೋಚಕ ಕ್ಷಣಗಳ ಚಿತ್ರಗಳು.