- Home
- News
- State
- Karnataka Latest News Live: ಎಲೆಕ್ಷನ್ ಕಾರಣಕ್ಕೆ ಹಿರಿಯೂರಲ್ಲಿ ಸಿಎಂ ಪುಂಗಿ ಊದಿದ್ದಾರೆ: ಸಂಸದ ಗೋವಿಂದ ಕಾರಜೋಳ
LIVE NOW
Karnataka Latest News Live: ಎಲೆಕ್ಷನ್ ಕಾರಣಕ್ಕೆ ಹಿರಿಯೂರಲ್ಲಿ ಸಿಎಂ ಪುಂಗಿ ಊದಿದ್ದಾರೆ: ಸಂಸದ ಗೋವಿಂದ ಕಾರಜೋಳ

ಸಾರಾಂಶ
ಚಿತ್ರದುರ್ಗ: ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಈ ಮೊದಲು ಹಿರಿಯೂರು ಏಕೆ ನೆನಪಾಗಲಿಲ್ಲ, ಎಲೆಕ್ಷನ್ ಅನ್ನುವ ಕಾರಣಕ್ಕೆ ಪುಂಗಿ ಊದಿ ಹೋಗಿದ್ದಾರೆಂದು ಸಂಸದ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷದಲ್ಲಿ 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ಗೆ ಹಿರಿಯೂರಿನ ಅಭಿವೃದ್ಧಿ ನೆನಪಾಗಿಲ್ಲವಾ? ಉಪ ಚುನಾವಣೆ ಹಿನ್ನೆಲೆ ಹಿರಿಯೂರು ಕಡೆ ಸಿಎಂ ಬಂದಿದ್ದು, ಇಲ್ಲವಾದರೆ ತಿರುಗಿ ನೋಡುತ್ತಿರಲಿಲ್ಲ. ಹಾಗಾಗಿಯೇ ಕನಕಪುರದಷ್ಟೆ ಹಿರಿಯೂರು ಕೂಡ ಮುಖ್ಯ ಎಂದಿದ್ದಾರೆ ಎಂದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಿಜೆಪಿ, ಜೆಡಿಎಸ್ ಒಂದೇ ಮುಖದ ಎರಡು ನಾಣ್ಯಗಳು. ಹಿರಿಯೂರಲ್ಲಿ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಸಿಎಂ ಆರೋಪಿಸಿದ್ದಾರೆ. ಭ್ರದ್ರಾ ಮೇಲ್ದಂಡೆ ಯೋಜನೆ ಆರಂಭ ಮಾಡಿದ್ದು ಬಿಜೆಪಿ ಎಂದು ತಿರುಗೇಟು ನೀಡಿದರು.