MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಪ್ರಗ್ಯಾನ್ ಓಜಾ ಚೀಫ್ ಸೆಲೆಕ್ಟರ್ ಆಗುತ್ತಿದ್ದಂತೆಯೇ ಟೀಂ ಇಂಡಿಯಾದಲ್ಲಿ ಸತತವಾಗಿ ಸ್ಥಾನ ಪಡೆಯುತ್ತಿದ್ದ ಈ 5 ಆಟಗಾರರಿಗೆ ಶುರುವಾಯ್ತು ನಡುಕ..!

ಪ್ರಗ್ಯಾನ್ ಓಜಾ ಚೀಫ್ ಸೆಲೆಕ್ಟರ್ ಆಗುತ್ತಿದ್ದಂತೆಯೇ ಟೀಂ ಇಂಡಿಯಾದಲ್ಲಿ ಸತತವಾಗಿ ಸ್ಥಾನ ಪಡೆಯುತ್ತಿದ್ದ ಈ 5 ಆಟಗಾರರಿಗೆ ಶುರುವಾಯ್ತು ನಡುಕ..!

ಬೆಂಗಳೂರು: ಅಜಿತ್ ಅಗರ್ಕರ್ ಅವರಿಂದ ತೆರವಾದ ಬಿಸಿಸಿಐ ಚೀಫ್ ಸೆಲೆಕ್ಟರ್ ಸ್ಥಾನಕ್ಕೆ ಹೊಸದಾಗಿ ಪ್ರಗ್ಯಾನ್ ಓಜಾ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಸತತವಾಗಿ ಸ್ಥಾನ ಪಡೆಯುತ್ತಿದ್ದ ಐದು ಆಟಗಾರರಿಗೆ ಇದೀಗ ನಡುಕ ಶುರುವಾಗಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

2 Min read
Author : Naveen Kodase
Published : Oct 21 2026, 12:22 PM IST
Share this Photo Gallery
  • FB
  • TW
  • Linkdin
  • Whatsapp
16
ಐದು ಆಟಗಾರರಿಗೆ ಶುರುವಾಯ್ತು ನಡುಕ
Image Credit : X

ಐದು ಆಟಗಾರರಿಗೆ ಶುರುವಾಯ್ತು ನಡುಕ

ಭಾರತ ಕ್ರಿಕೆಟ್‌ನ ಮಾಜಿ ಆಟಗಾರ ಪ್ರಗ್ಯಾನ್ ಓಜಾ ಇದೀಗ ಟೀಂ ಇಂಡಿಯಾ ಸ್ಟಾರ್ ಆಟಗಾರರ ಭವಿಷ್ಯ ನಿರ್ಧರಿಸಲು ರೆಡಿಯಾಗಿದ್ದಾರೆ. ಅಜಿತ್ ಅಗರ್ಕರ್ ಯಾವೆಲ್ಲಾ ಆಟಗಾರರನ್ನು ಬ್ಯಾಕ್‌ಅಪ್ ಮಾಡಿದ್ದರೋ, ಅವರ ಪೈಕಿ ಕೆಲ ಆಟಗಾರರಿಗೆ ಇದೀಗ ಹೊಸ ತಲೆನೋವು ಶುರುವಾಗಿದೆ. ಇದೀಗ ಓಜಾ ಚೀಫ್ ಸೆಲೆಕ್ಟರ್ ಆಗುತ್ತಿದ್ದಂತೆಯೇ ಈ ಐದು ಭಾರತೀಯ ಆಟಗಾರರಿಗೆ ನಡುಕ ಶುರುವಾಗಿದೆ. ಈ ಲಿಸ್ಟ್‌ನಲ್ಲಿ ಅಚ್ಚರಿಯ ಹೆಸರುಗಳು ಇವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
1. ರವೀಂದ್ರ ಜಡೇಜಾ:
Image Credit : ANI

1. ರವೀಂದ್ರ ಜಡೇಜಾ:

ಟೀಂ ಇಂಡಿಯಾ ದಿಗ್ಗಜ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಇದೀಗ ಓಜಾ ತಾವು ಚೀಫ್ ಸೆಲೆಕ್ಟರ್ ಆಗುತ್ತಿದ್ದಂತೆಯೇ ಏಕದಿನ ತಂಡದಿಂದ ಗೇಟ್‌ಪಾಸ್ ನೀಡಿದ್ದಾರೆ. ಜಡ್ಡು ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಯಲ್ಲಿ ಭಾರತ ತಂಡದ ಭಾಗವಾಗಿದ್ದರು. ಆದರೆ ಓಜಾ ಚೀಫ್ ಸೆಲೆಕ್ಟರ್ ಆಗುತ್ತಿದ್ದಂತೆಯೇ ಕಿವೀಸ್ ಎದುರಿನ ಏಕದಿನ ಸರಣಿಯಿಂದ ಜಡೇಜಾ ಅವರನ್ನು ಹೊರಗಿಡಲಾಗಿದೆ. ಹೀಗಾಗಿ ಜಡ್ಡು 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

Related Articles

Related image1
ನಾನಿನ್ನೂ ಬೆಸ್ಟ್ ಫಾರ್ಮ್‌ನಲ್ಲಿದ್ದೇನೆ: ಫಿಟ್‌ನೆಸ್ ಟೀಕಾಕಾರರಿಗೆ ಮೊಹಮ್ಮದ್ ಶಮಿ ತಿರುಗೇಟು
Related image2
ಜೈಲರ್ 2 ಸಿನ್ಮಾಗಾಗಿ ಸಂಜು ಸ್ಯಾಮ್ಸನ್ ಸಂಪೂರ್ಣ ಎರಡು ಥಿಯೇಟರ್ ಬುಕ್ಕಿಂಗ್..! ಮೂವಿ ನೋಡಲು ಟೀಂ ಇಂಡಿಯಾದ ಈ ಆಟಗಾರರಿಗೂ ಆಹ್ವಾನ
36
2. ವಾಷಿಂಗ್ಟನ್ ಸುಂದರ್;
Image Credit : X/Sundarwashi5

2. ವಾಷಿಂಗ್ಟನ್ ಸುಂದರ್;

ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್‌ಗೆ ಮಾಜಿ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಹೆಚ್ಚು ಹೆಚ್ಚು ಅವಕಾಶ ನೀಡುತ್ತಾ ಬಂದಿದ್ದರು. ಸುಂದರ್ ಮೂರು ಮಾದರಿಯಲ್ಲೂ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಓಜಾ ಇದೀಗ ಸುಂದರ್‌ಗೆ ಸೀಮಿತ ಓವರ್‌ಗಳ ತಂಡದಿಂದ ಗೇಟ್‌ಪಾಸ್ ನೀಡಿದ್ದಾರೆ. ಸುಂದರ್ ಬದಲಿಗೆ ಇದೀಗ ಓಜಾ ಕಿವೀಸ್ ಎದುರಿನ ಟಿ20 ಹಾಗೂ ಏಕದಿನ ಸರಣಿಯಲ್ಲಿ ನಮನ್ ಧೀರ್‌ಗೆ ಅವಕಾಶ ನೀಡಿದ್ದಾರೆ. ಸುಂದರ್‌ ಕೂಡಾ ಟೆಸ್ಟ್‌ಗೆ ಸೀಮಿತವಾಗುವ ಸಾಧ್ಯತೆಯಿದೆ.

46
3. ಯಶಸ್ವಿ ಜೈಸ್ವಾಲ್:
Image Credit : X/BCCI

3. ಯಶಸ್ವಿ ಜೈಸ್ವಾಲ್:

ಟೀಂ ಇಂಡಿಯಾ ಟೆಸ್ಟ್ ಆರಂಭಿಕನಾಗಿ ಯಶಸ್ಸು ಗಳಿಸಿರುವ ಯಶಸ್ವಿ ಜೈಸ್ವಾಲ್, 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಬ್ಯಾಕ್‌ಅಪ್ ಓಪನ್ನರ್ ಆಗಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಓಜಾ ಚೀಫ್ ಸೆಲೆಕ್ಟರ್ ಆಗುತ್ತಿದ್ದಂತೆಯೇ ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಓಜಾ ನೇತೃತ್ವದ ಟೀಮ್ ಮ್ಯಾನೇಜ್‌ಮೆಂಟ್ ಇದೀಗ ಜೈಸ್ವಾಲ್ ಬದಲಿಗೆ ಏಕದಿನ ಕ್ರಿಕೆಟ್‌ನಲ್ಲಿ ಋತುರಾಜ್ ಗಾಯಕ್ವಾಡ್ ಅವರನ್ನು ಬ್ಯಾಕ್‌ಅಪ್ ಓಪನ್ನರ್ ಮಾಡುವ ಲಕ್ಷಣಗಳು ಕಾಣಿಸುತ್ತಿವೆ.

56
4. ಸೂರ್ಯಾನ್ಶ್ ಶೆಡ್ಗೆ:
Image Credit : X

4. ಸೂರ್ಯಾನ್ಶ್ ಶೆಡ್ಗೆ:

ವೇಗದ ಬೌಲಿಂಗ್ ಆಲ್ರೌಂಡರ್ ಸೂರ್ಯಾನ್ಶ್‌ ಶೆಡ್ಗೆ ಭಾರತ ಸೀಮಿತ ಓವರ್‌ಗಳ ತಂಡದಲ್ಲಿ ಬ್ಯಾಕ್‌ಅಪ್ ಆಲ್ರೌಂಡರ್ ರೂಪದಲ್ಲಿ ಸ್ಥಾನ ಪಡೆಯುತ್ತಾ ಬಂದಿದ್ದರು. ಈಗ ಓಜಾ ಚೀಫ್ ಸೆಲೆಕ್ಟರ್ ಆದ ಬೆನ್ನಲ್ಲೇ ಶೆಡ್ಗೆಗೆ ಗೇಟ್‌ಪಾಸ್ ನೀಡಿ ಮೂರು ಮಾದರಿಯಲ್ಲೂ ಮತ್ತೋರ್ವ ಆಲ್ರೌಂಡರ್ ನಿತೀಶ್‌ ಕುಮಾರ್ ರೆಡ್ಡಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಶೆಡ್ಗೆ ಟೀಂ ಇಂಡಿಯಾಗೆ ಮತ್ತೆ ಕಮ್‌ಬ್ಯಾಕ್‌ ಮಾಡಬೇಕಿದ್ದರೇ, ದೇಶಿ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರದರ್ಶನ ತೋರಬೇಕಿದೆ.

66
5. ಸಾರಾನ್ಶ್‌ ಜೈನ್:
Image Credit : X

5. ಸಾರಾನ್ಶ್‌ ಜೈನ್:

ಆಫ್‌ಸ್ಪಿನ್ ಆಲ್ರೌಂಡರ್ ಸಾರಾನ್ಶ್‌ ಜೈನ್ ಅವರಿಗೆ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ಲಂಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಸ್ಥಾನ ನೀಡಿತ್ತು. ಇದೀಗ ಓಜಾ ನೇತೃತ್ವದಲ್ಲಿ ಕಿವೀಸ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಆಯ್ಕೆ ಮಾಡುವಾಗ ಸಾರಾನ್ಶ್‌ ಜೈನ್ ಹೆಸರು ನಾಪತ್ತೆಯಾಗಿದೆ. ಜೈನ್ ಮತ್ತೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಸಾಧ್ಯತೆ ಕಷ್ಟವಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಅಜಿತ್ ಅಗರ್ಕರ್
ರವೀಂದ್ರ ಜಡೇಜಾ
 

Latest Videos
Recommended Stories
Recommended image1
ನಾನಿನ್ನೂ ಬೆಸ್ಟ್ ಫಾರ್ಮ್‌ನಲ್ಲಿದ್ದೇನೆ: ಫಿಟ್‌ನೆಸ್ ಟೀಕಾಕಾರರಿಗೆ ಮೊಹಮ್ಮದ್ ಶಮಿ ತಿರುಗೇಟು
Recommended image2
ಸಂಜು-ಅಭಿಷೇಕ್ ಓಪನ್ನರ್; ವೈಭವ್ ಔಟ್, ಭುವಿ ಇನ್..! ಕಿವೀಸ್ ಎದುರಿನ ಮೊದಲ ಟಿ20 ಪಂದ್ಯಕ್ಕೆ ಬಲಿಷ್ಠ ಭಾರತ ಸಂಭಾವ್ಯ ತಂಡ ಪ್ರಕಟ..!
Recommended image3
ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ, ಈಗ ರಣಜಿ ಪಂದ್ಯಕ್ಕೂ ಗೈರು! ಈಗ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಕೋಚ್
Related Stories
Recommended image1
ನಾನಿನ್ನೂ ಬೆಸ್ಟ್ ಫಾರ್ಮ್‌ನಲ್ಲಿದ್ದೇನೆ: ಫಿಟ್‌ನೆಸ್ ಟೀಕಾಕಾರರಿಗೆ ಮೊಹಮ್ಮದ್ ಶಮಿ ತಿರುಗೇಟು
Recommended image2
ಜೈಲರ್ 2 ಸಿನ್ಮಾಗಾಗಿ ಸಂಜು ಸ್ಯಾಮ್ಸನ್ ಸಂಪೂರ್ಣ ಎರಡು ಥಿಯೇಟರ್ ಬುಕ್ಕಿಂಗ್..! ಮೂವಿ ನೋಡಲು ಟೀಂ ಇಂಡಿಯಾದ ಈ ಆಟಗಾರರಿಗೂ ಆಹ್ವಾನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved