MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Other Sports
  • ಆಧುನಿಕತೆ ಮತ್ತು ಸಂಪ್ರದಾಯದ ಸುಂದರ ಸಂಗಮ , ಪಿ.ವಿ. ಸಿಂಧು ಅವರ ಬೆಂಗಳೂರಿನ ಮನೆ ಹೇಗಿದೆ ಗೊತ್ತಾ?

ಆಧುನಿಕತೆ ಮತ್ತು ಸಂಪ್ರದಾಯದ ಸುಂದರ ಸಂಗಮ , ಪಿ.ವಿ. ಸಿಂಧು ಅವರ ಬೆಂಗಳೂರಿನ ಮನೆ ಹೇಗಿದೆ ಗೊತ್ತಾ?

ಒಂದು ಒಳ್ಳೆ ಮನೆ ಅಂದ್ರೆ ಕೇವಲ ಐಷಾರಾಮಿ ಸೌಲಭ್ಯಗಳಿರುವ ಜಾಗವಲ್ಲ. ಅಲ್ಲಿ ನೆಮ್ಮದಿ ಇರಬೇಕು, ನೆನಪುಗಳಿರಬೇಕು. ಮನೆಯವರ ವ್ಯಕ್ತಿತ್ವವೂ ಪ್ರತಿಯೊಂದು ಮೂಲೆಯಲ್ಲೂ ಕಾಣಬೇಕು. ಇದಕ್ಕೆ ಪಿ.ವಿ. ಸಿಂಧು ಮನೆ ಉತ್ತಮ ನಿದರ್ಶನ.

3 Min read
Author : Roopa Hegde
Published : Oct 26 2026, 11:21 AM IST
Share this Photo Gallery
  • FB
  • TW
  • Linkdin
  • Whatsapp
16
ಸಿಂಧು ಮನೆಗೆ ಫರಾ ಖಾನ್‌ ಭೇಟಿ
Image Credit : Asianet News

ಸಿಂಧು ಮನೆಗೆ ಫರಾ ಖಾನ್‌ ಭೇಟಿ

ಇತ್ತೀಚೆಗೆ ಬಾಲಿವುಡ್ ನಿರ್ದೇಶಕಿ ಫರಾ ಖಾನ್ ತಮ್ಮ ಯೂಟ್ಯೂಬ್ ಸರಣಿಗಾಗಿ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಅವರ ಮನೆಗೆ ಭೇಟಿ ನೀಡಿದ್ದರು. ತಮ್ಮ ಅಡುಗೆ ಸಹಾಯಕ ದಿಲೀಪ್ ಜೊತೆ ಫರಾ, ಸಿಂಧು ಮನೆಗೆ ಬಂದಿದ್ದರು. ಎರಡು ಬಾರಿ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವ ಪಿ.ವಿ. ಸಿಂಧು, ಭಾರತಕ್ಕೆ ಹಲವು ಹೆಮ್ಮೆಯ ಕ್ಷಣಗಳನ್ನು ನೀಡಿದ್ದಾರೆ. ಕ್ರೀಡಾಂಗಣದ ಹೊರಗೂ ತಮ್ಮದೇ ಆದ ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಪತಿ ವೆಂಕಟ ದತ್ತ ಸಾಯಿ ಅವರೊಂದಿಗೆ ವಾಸಿಸುತ್ತಿರುವ ಸಿಂಧು ಅವರ ಮದುವೆ 2024ರ ಡಿಸೆಂಬರ್ 22ರಂದು ಉದಯಪುರದಲ್ಲಿ ನಡೆದಿತ್ತು. ಪಿ.ವಿ. ಸಿಂಧು ಅವರ ಮನೆಗೆ ಭೇಟಿ ನೀಡ್ತಿದ್ದಂತೆ ದೊಡ್ಡ ಮರದ ಮುಂಭಾಗದ ಬಾಗಿಲು ಅತಿಥಿಗಳನ್ನು ಸ್ವಾಗತಿಸುತ್ತದೆ. ಫರಾ ಖಾನ್‌ ಅವರನ್ನು ಸಿಂಧು, ಅವರ ಪತಿ ಹಾಗೂ ಮುದ್ದಿನ ಸಾಕು ನಾಯಿ ಅತಿಥಿಗಳನ್ನು ಬರಮಾಡಿಕೊಂಡರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮನೆ ಒಳಾಂಗಣ
Image Credit : Asianet News

ಮನೆ ಒಳಾಂಗಣ

ಮನೆಯ ಒಳಗೆ ಪ್ರವೇಶಿಸುತ್ತಿದ್ದಂತೆ, ಸುಂದರವಾದ ಚಿತ್ರಗಳು, ಒಳಾಂಗಣ ಸಸ್ಯಗಳು ಮತ್ತು ರಗ್ಗುಗಳಿಂದ ಅಲಂಕರಿಸಲಾದ ಹಾಲ್ ಗಮನ ಸೆಳೆಯುತ್ತದೆ. ಮನೆಯ ಗೋಡೆಯೊಂದರಲ್ಲಿ ಕಪ್ಪು-ಬಿಳುಪು ಛಾಯಾಚಿತ್ರಗಳ ಸಂಗ್ರಹವಿದೆ. ಸಿಂಧು ಅವರ ಬ್ಯಾಡ್ಮಿಂಟನ್ ವೃತ್ತಿಜೀವನದ ಪ್ರಮುಖ ಕ್ಷಣಗಳ ಚಿತ್ರಗಳ ಜೊತೆಗೆ ಮದುವೆಯ ಫೋಟೋ ಕೂಡ ಇಲ್ಲಿದೆ. ಹೀಗಾಗಿ, ಈ ಜಾಗ ಕೇವಲ ಒಂದು ಹಾದಿಯಂತೆ ಕಾಣುವುದಿಲ್ಲ. ಬದಲಿಗೆ, ಸಿಂಧು ಅವರ ಜೀವನದ ಪ್ರಮುಖ ನೆನಪುಗಳನ್ನು ಸಾರುವ ಪುಟ್ಟ ಸಂಗ್ರಹಾಲಯದಂತಿದೆ. ಮನೆಯ ಇತರ ಸಣ್ಣಪುಟ್ಟ ಅಲಂಕಾರಗಳೂ ಅಲ್ಲಿನ ಆತ್ಮೀಯತೆಯನ್ನು ಹೆಚ್ಚಿಸಿವೆ.

Related Articles

Related image1
ಬೆಂಗಳೂರಲ್ಲಿ ನಡೆದ ರಾಷ್ಟ್ರೀಯ ರೊಟಾಕ್ಸ್‌ ಕಾರ್ಟಿಂಗ್‌ ಚಾಂಪಿಯನ್‌ಶಿಪ್‌, ಕೃಷ್ ಗುಪ್ತಾ ಚಾಂಪಿಯನ್
Related image2
ಪ್ಯಾರಾ ಏಷ್ಯಾಡ್‌: ಭಾರತ ಸಾರ್ವಕಾಲಿಕ ದಾಖಲೆ! ಕಡಿಮೆ ಸ್ಪರ್ಧಿಗಳಿದ್ದರೂ ಶ್ರೇಷ್ಠ ಪ್ರದರ್ಶನ ತೋರಿದ ಟೀಮ್ ಇಂಡಿಯಾ
36
ಬೋಹೋ ಶೈಲಿಯ ಲಿವಿಂಗ್ ರೂಮ್
Image Credit : Asianet News

ಬೋಹೋ ಶೈಲಿಯ ಲಿವಿಂಗ್ ರೂಮ್

ಮನೆಯ ಹಾಲ್ನಿಂದ ಒಳಗೆ ಹೋದರೆ ವಿಶಾಲವಾದ ಲಿವಿಂಗ್ ರೂಮ್ ಕಾಣಿಸುತ್ತದೆ. ನೆಲದಿಂದ ಚಾವಣಿಯವರೆಗೆ ಇರುವ ದೊಡ್ಡ ಕಿಟಕಿಗಳ ಮೂಲಕ ನೈಸರ್ಗಿಕ ಬೆಳಕು ಒಳಗೆ ಬರುತ್ತದೆ. ಮೃದುವಾದ ಪಾಸ್ಟೆಲ್ ಬಣ್ಣಗಳೇ ಈ ಕೋಣೆಯ ಪ್ರಮುಖ ಆಕರ್ಷಣೆ. ತಿಳಿ ಹಸಿರು ಬಣ್ಣದ ಆರಾಮದಾಯಕ ಸೋಫಾಗಳು, ಕಾಂಟ್ರಾಸ್ಟ್ ಬಣ್ಣದ ಹೊದಿಕೆ ಮತ್ತು ಕಸೂತಿ ವಿನ್ಯಾಸದ ಕುಶನ್ಗಳು ಕೋಣೆಗೆ ಸುಂದರವಾದ ಲುಕ್ ನೀಡುತ್ತವೆ. ಅತಿಯಾದ ಅಲಂಕಾರಗಳಿಂದ ಕೋಣೆಯನ್ನು ತುಂಬಿಸುವ ಬದಲು, ಕೆಲವೇ ವಿಶೇಷ ವಸ್ತುಗಳಿಗೆ ಇಲ್ಲಿ ಆದ್ಯತೆ ನೀಡಲಾಗಿದೆ. ವಿಭಿನ್ನ ವಿನ್ಯಾಸದ ಉದ್ದನೆಯ ಲ್ಯಾಂಪ್ ಕೂಡ ಕೋಣೆಗೆ ಬೆಚ್ಚಗಿನ ಬೆಳಕನ್ನು ನೀಡುವುದರ ಜೊತೆಗೆ ಅದರ ಸೌಂದರ್ಯವನ್ನು ಹೆಚ್ಚಿಸುತ್ತದೆ.

46
ಮಹಾಭಾರತದ ಪಾತ್ರಗಳಿರುವ ಚೆಸ್ ಬೋರ್ಡ್
Image Credit : Asianet News

ಮಹಾಭಾರತದ ಪಾತ್ರಗಳಿರುವ ಚೆಸ್ ಬೋರ್ಡ್

ಸಿಂಧು ಅವರ ಮನೆಯಲ್ಲಿರುವ ಅತ್ಯಂತ ವಿಶೇಷ ವಸ್ತು ಎಂದರೆ ಮಹಾಭಾರತದ ಕಥೆಯನ್ನು ನೆನಪಿಸುವ ಚೆಸ್ ಬೋರ್ಡ್. ಗಾಜು ಮತ್ತು ಮಾರ್ಬಲ್ನಿಂದ ವಿನ್ಯಾಸಗೊಳಿಸಿರುವ ಈ ಚೆಸ್ ಬೋರ್ಡ್ನಲ್ಲಿ ಪಾಂಡವರು ಮತ್ತು ಕೌರವರನ್ನು ಪ್ರತಿನಿಧಿಸುವ ಕಾಯಿಗಳಿವೆ. ಎರಡು ಅಂತಸ್ತಿನ ವಿಶೇಷ ವಿನ್ಯಾಸದ ಬೋರ್ಡ್ನಲ್ಲಿ ಮಹಾಭಾರತದ ದೃಶ್ಯಗಳನ್ನು ಕೆತ್ತಲಾಗಿದೆ. ಆಧುನಿಕ ವಿನ್ಯಾಸದ ಮನೆಯ ನಡುವೆ ಈ ಸಾಂಪ್ರದಾಯಿಕ ಕಲಾಕೃತಿ ವಿಭಿನ್ನವಾಗಿ ಕಾಣಿಸುತ್ತದೆ. ಮನೆಯ ಅಲಂಕಾರಕ್ಕೆ ಭಾರತೀಯ ಸಂಸ್ಕೃತಿಯ ಸ್ಪರ್ಶ ನೀಡುವುದರ ಜೊತೆಗೆ, ಮನೆಗೆ ಬರುವ ಅತಿಥಿಗಳ ಗಮನವನ್ನೂ ಸೆಳೆಯುತ್ತದೆ. ಮನೆ ಅಂದರೆ ಕೇವಲ ಸುಂದರವಾಗಿ ಕಾಣುವ ಜಾಗವಲ್ಲ, ಮನೆಯವರ ಆಸಕ್ತಿ ಮತ್ತು ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಸ್ಥಳವೂ ಹೌದು ಎನ್ನುವುದಕ್ಕೆ ಈ ಚೆಸ್ ಬೋರ್ಡ್ ಉತ್ತಮ ಉದಾಹರಣೆ.

56
ಮರದ ಡೈನಿಂಗ್ ಟೇಬಲ್ ಮತ್ತು ಮಾಡ್ಯುಲರ್ ಕಿಚನ್
Image Credit : Asianet News

ಮರದ ಡೈನಿಂಗ್ ಟೇಬಲ್ ಮತ್ತು ಮಾಡ್ಯುಲರ್ ಕಿಚನ್

ಲಿವಿಂಗ್ ರೂಮ್ನ ಪಕ್ಕದಲ್ಲೇ ಡೈನಿಂಗ್ ಏರಿಯಾ ಇದೆ. ಇಲ್ಲಿ ಗಾಢ ಬಣ್ಣದ ಮರದ ಡೈನಿಂಗ್ ಟೇಬಲ್ ಮತ್ತು ಅದಕ್ಕೆ ಹೊಂದಿಕೆಯಾಗುವ ಕುರ್ಚಿಗಳನ್ನು ಇರಿಸಲಾಗಿದೆ. ಕುರ್ಚಿಗಳ ತಿಳಿ ಕಂದು ಬಣ್ಣದ ಮೆತ್ತನೆಯ ಆಸನಗಳು ಗಾಢ ಮರದ ಬಣ್ಣಕ್ಕೆ ಕಾಂಟ್ರಾಸ್ಟ್ ಲುಕ್ ನೀಡುತ್ತವೆ. ಡೈನಿಂಗ್ ಏರಿಯಾದ ಪಕ್ಕದಲ್ಲೇ ಮಾಡ್ಯುಲರ್ ಕಿಚನ್ ಇದ್ದು, ಕೌಂಟರ್ ಮೇಲೆ ಬಿಳಿ ಮಾರ್ಬಲ್ ಫಿನಿಶ್ ನೀಡಲಾಗಿದೆ. ಮರದ ವಿನ್ಯಾಸ ಮತ್ತು ತಿಳಿ ಬಣ್ಣಗಳ ಸಂಯೋಜನೆ ಮನೆಯ ಈ ಭಾಗಕ್ಕೆ ಸರಳವಾದ, ಆಧುನಿಕ ನೋಟವನ್ನು ನೀಡುತ್ತದೆ.

66
ಈಜುಕೊಳದ ಪಕ್ಕದಲ್ಲಿ ಸುಂದರ ಗಾರ್ಡನ್
Image Credit : Asianet News

ಈಜುಕೊಳದ ಪಕ್ಕದಲ್ಲಿ ಸುಂದರ ಗಾರ್ಡನ್

ಸಿಂಧು ಅವರ ಮನೆಯ ಮತ್ತೊಂದು ಆಕರ್ಷಣೆ ಎಂದರೆ ಈಜುಕೊಳ ಮತ್ತು ಹಸಿರಿನಿಂದ ಕೂಡಿದ ಗಾರ್ಡನ್. ಡೈನಿಂಗ್ ಏರಿಯಾದಿಂದಲೇ ತೆಳುವಾದ ಪರದೆಗಳ ಮೂಲಕ ಹೊರಗಿನ ಈಜುಕೊಳ ಮತ್ತು ಉದ್ಯಾನವನವನ್ನು ನೋಡಬಹುದು. ಇದರಿಂದ ಮನೆಯೊಳಗೆ ಕುಳಿತಿದ್ದರೂ ಹೊರಗಿನ ಹಸಿರು ವಾತಾವರಣ ಕಣ್ಣಿಗೆ ಬೀಳುತ್ತದೆ. ಈಜುಕೊಳದ ಪಕ್ಕದಲ್ಲಿ ಬೂದು ಬಣ್ಣದ ಸೋಫಾಗಳು ಮತ್ತು ಸೆಂಟರ್ ಟೇಬಲ್ ಹೊಂದಿರುವ ವಿಶ್ರಾಂತಿ ಸ್ಥಳವಿದೆ. ಬಿಡುವಿನ ಸಮಯದಲ್ಲಿ ಕುಳಿತುಕೊಳ್ಳಲು ಅಥವಾ ಕುಟುಂಬದವರೊಂದಿಗೆ ಸಮಯ ಕಳೆಯಲು ಇದು ಸೂಕ್ತವಾದ ಜಾಗವಾಗಿದೆ. ಮನೆಯ ಒಳಭಾಗದಲ್ಲಿರುವ ಗಾಜು, ಮಾರ್ಬಲ್ ಮತ್ತು ಪಾಲಿಶ್ ಮಾಡಿದ ಪೀಠೋಪಕರಣಗಳ ನಡುವೆ ಸಸ್ಯಗಳ ಹಸಿರು ಬಣ್ಣ ವಿಶೇಷ ಆಕರ್ಷಣೆ ನೀಡುತ್ತದೆ. ಒಳಾಂಗಣ ಮತ್ತು ಹೊರಾಂಗಣದ ನಡುವೆ ಸುಂದರವಾದ ಸಂಪರ್ಕವನ್ನೂ ಕಲ್ಪಿಸುತ್ತದೆ. ಒಟ್ಟಿನಲ್ಲಿ, ಪಿ.ವಿ. ಸಿಂಧು ಅವರ ಮನೆ ಆಧುನಿಕ ವಿನ್ಯಾಸ, ಸಾಂಪ್ರದಾಯಿಕ ಕಲಾಕೃತಿಗಳು, ವೈಯಕ್ತಿಕ ನೆನಪುಗಳು ಮತ್ತು ಹಸಿರಿನ ಸುಂದರ ಸಂಯೋಜನೆಯಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegde ಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಬ್ಯಾಡ್ಮಿಂಟನ್
ಕ್ರೀಡೆಗಳು
 
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
2nd TEST • SA vs AUS
Result
SASA
425/9
AUSAUS
99 & 295
SA beat AUS by 31 runs
Schedule ›
5th T20 • IND vs WI
abandoned
INDIND
118/5
WIWI
-
Match abandoned
Schedule ›
3rd T20 • NZ vs IND 2026
NZNZ
Tue, 27 Oct, 2026
INDIND
12:30 pm
Match yet to begin.
Schedule ›
3rd TEST • SA vs AUS
SASA
Tue, 27 Oct, 2026
AUSAUS
02:00 pm
Match yet to begin.
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Latest Videos
Recommended Stories
Recommended image1
ಪ್ಯಾರಾ ಏಷ್ಯಾಡ್‌: ಭಾರತ ಸಾರ್ವಕಾಲಿಕ ದಾಖಲೆ! ಕಡಿಮೆ ಸ್ಪರ್ಧಿಗಳಿದ್ದರೂ ಶ್ರೇಷ್ಠ ಪ್ರದರ್ಶನ ತೋರಿದ ಟೀಮ್ ಇಂಡಿಯಾ
Recommended image2
ಬೆಂಗಳೂರಲ್ಲಿ ನಡೆದ ರಾಷ್ಟ್ರೀಯ ರೊಟಾಕ್ಸ್‌ ಕಾರ್ಟಿಂಗ್‌ ಚಾಂಪಿಯನ್‌ಶಿಪ್‌, ಕೃಷ್ ಗುಪ್ತಾ ಚಾಂಪಿಯನ್
Recommended image3
ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತ ಮಿಂಚಿಂಗ್​: 85 ಪದಕ ತಂದ ಕ್ರೀಡಾಪಟುಗಳು- ಪ್ರಧಾನಿ ಮೋದಿ ವಿಶೇಷ ಭೇಟಿ
Related Stories
Recommended image1
ಬೆಂಗಳೂರಲ್ಲಿ ನಡೆದ ರಾಷ್ಟ್ರೀಯ ರೊಟಾಕ್ಸ್‌ ಕಾರ್ಟಿಂಗ್‌ ಚಾಂಪಿಯನ್‌ಶಿಪ್‌, ಕೃಷ್ ಗುಪ್ತಾ ಚಾಂಪಿಯನ್
Recommended image2
ಪ್ಯಾರಾ ಏಷ್ಯಾಡ್‌: ಭಾರತ ಸಾರ್ವಕಾಲಿಕ ದಾಖಲೆ! ಕಡಿಮೆ ಸ್ಪರ್ಧಿಗಳಿದ್ದರೂ ಶ್ರೇಷ್ಠ ಪ್ರದರ್ಶನ ತೋರಿದ ಟೀಮ್ ಇಂಡಿಯಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved