MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • 'ಓಯ್ ಬಿರಿಯಾನಿ, ಇನ್ನೊಂದು ಕ್ಯಾಚ್ ಬಿಡು' ರೋಹಿತ್ ಶರ್ಮಾರ ಫೇಮಸ್ ಡೈಲಾಗ್ ಹೊಡೆದು ಪಾಕ್ ಆಟಗಾರನ ಕೆಣಕಿದ್ರು

'ಓಯ್ ಬಿರಿಯಾನಿ, ಇನ್ನೊಂದು ಕ್ಯಾಚ್ ಬಿಡು' ರೋಹಿತ್ ಶರ್ಮಾರ ಫೇಮಸ್ ಡೈಲಾಗ್ ಹೊಡೆದು ಪಾಕ್ ಆಟಗಾರನ ಕೆಣಕಿದ್ರು

ಏಷ್ಯನ್ ಗೇಮ್ಸ್‌ನ‌ ಪುರುಷರ ವಿಭಾಗದ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗು ಬಡಿದು ಟೀಂ ಇಂಡಿಯಾ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಹೈ-ವೋಲ್ಟೇಜ್ ಪಂದ್ಯದಲ್ಲಿ ಮೈದಾನದಲ್ಲಿ ಒಂದಷ್ಟು ಹೈಡ್ರಾಮಾಗಳು ನಡೆದ್ರೆ, ಮೈದಾನದ ಆಚೆಗೂ ನಡೆಯಿತು. ಏನದು? ಸ್ಟೋರಿ ಓದಿ..

1 Min read
Author : Ganesh Mabla Gowda
Published : Oct 03 2026, 03:18 PM IST
Share this Photo Gallery
  • FB
  • TW
  • Linkdin
  • Whatsapp
15
ಭಾರತದ ಅಭಿಮಾನಿಗಳಿಂದ ಗೇಲಿ
Image Credit : social media

ಭಾರತದ ಅಭಿಮಾನಿಗಳಿಂದ ಗೇಲಿ

ಏಷ್ಯನ್ ಗೇಮ್ಸ್ 2026ರ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಒಂದು ತಮಾಷೆಯ ಪ್ರಸಂಗ ನಡೆಯಿತು. ಮೈದಾನದಲ್ಲಿ ಸುಲಭದ ಕ್ಯಾಚ್‌ಗಳನ್ನು ಕೈಚೆಲ್ಲಿದ ಪಾಕಿಸ್ತಾನದ ಆಟಗಾರ ಸೈಮ್ ಅಯೂಬ್ (Saim Ayub) ಅವರನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಗ್ಯಾಲರಿಯಿಂದಲೇ ಗೇಲಿ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಓಯ್ ಬಿರಿಯಾನಿ.. ಇನ್ನೊಂದು ಕ್ಯಾಚ್ ಬಿಡೋ
Image Credit : social media

ಓಯ್ ಬಿರಿಯಾನಿ.. ಇನ್ನೊಂದು ಕ್ಯಾಚ್ ಬಿಡೋ

ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗ್ತಿರುವ ವಿಡಿಯೋದಲ್ಲಿ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಸೈಮ್ ಅಯೂಬ್ ಅವರನ್ನು ಭಾರತದ ಅಭಿಮಾನಿಗಳು ಟ್ರೋಲ್ ಮಾಡಿದರು. ಒಬ್ಬ ಅಭಿಮಾನಿ 'ಓಯ್... ಬಿರಿಯಾನಿ...' ಎಂದು ಕೂಗಿದರೆ, ಇನ್ನೊಬ್ಬ ಅಭಿಮಾನಿ 'ಅಣ್ಣಾ, ಇನ್ನೊಂದು ಕ್ಯಾಚ್ ಬಿಟ್ಟುಬಿಡು ಪ್ಲೀಸ್!' (ಏಕ್ ಔರ್ ಕ್ಯಾಚ್ ಛೋಡ್ ನಾ) ಎಂದು ತಮಾಷೆ ಮಾಡಿದ್ದಾನೆ. ಅಷ್ಟೇ ಅಲ್ಲದೆ.. ಇಡೀ ಪ್ರೇಕ್ಷಕರ ಗುಂಪು 'ಛೋಡೇಗಾ ಭಾಯ್ ಛೋಡೇಗಾ... ಪಾಕಿಸ್ತಾನ್ ಕ್ಯಾಚ್ ಛೋಡೇಗಾ' (ಬಿಡ್ತಾನೆ ಭಾಯ್ ಬಿಡ್ತಾನೆ... ಪಾಕಿಸ್ತಾನ ಕ್ಯಾಚ್ ಬಿಡ್ತಾನೆ) ಎಂದು ಜೋರಾಗಿ ಕೂಗಿದ್ದಾರೆ.

Related Articles

Related image1
ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ! ಆಮೇಲೆ 'ಡಿಂಪಲ್ ಕ್ವೀನ್' ಕೊಟ್ಟ ರಿಯಾಕ್ಷನ್ ಹೇಗಿತ್ತು ಗೊತ್ತಾ?
Related image2
384 ದಿನಗಳಿಂದ ಅವಮಾನಕ್ಕೆ ಒಳಗಾಗುತ್ತಿದೆ ಪಾಕ್‌, ಇವತ್ತಿನ ಪಂದ್ಯ ಆರಂಭಕ್ಕೂ ಮುನ್ನ ಆಗಿದ್ದೇನು?
35
ರೋಹಿತ್ ಶರ್ಮಾ ಡೈಲಾಗ್ ನೆನಪಿಸಿದ ಫ್ಯಾನ್ಸ್
Image Credit : social media

ರೋಹಿತ್ ಶರ್ಮಾ ಡೈಲಾಗ್ ನೆನಪಿಸಿದ ಫ್ಯಾನ್ಸ್

ಅಭಿಮಾನಿಗಳ ತಮಾಷೆ ಅಷ್ಟಕ್ಕೇ ನಿಲ್ಲಲಿಲ್ಲ. ರೋಹಿತ್ ಶರ್ಮಾರ ಪ್ರಸಿದ್ಧ ಡೈಲಾಗ್ 'ಕೋಯಿ ಗಾರ್ಡನ್ ಮೇ ನಹೀ ಘೂಮೇಗಾ' (ಯಾರೂ ತೋಟದಲ್ಲಿ ವಾಕಿಂಗ್ ಮಾಡಿದಂತೆ ಮೈದಾನದಲ್ಲಿ ಅಡ್ಡಾಡಬಾರದು) ಎಂಬ ಮಾತನ್ನು ಕೂಗಿ ಅಯೂಬ್ ಅವರ ಕಳಪೆ ಫೀಲ್ಡಿಂಗ್ ಅಣಕಿಸಿದ್ದಾರೆ.

45
ದುಬಾರಿಯಾದ ಕ್ಯಾಚ್ ಡ್ರಾಪ್
Image Credit : social media

ದುಬಾರಿಯಾದ ಕ್ಯಾಚ್ ಡ್ರಾಪ್

ಭಾರತೀಯ ಅಭಿಮಾನಿಗಳು ಅಯೂಬ್‌ನನ್ನು ಟ್ರೋಲ್ ಮಾಡಲು ಮುಖ್ಯ ಕಾರಣವೂ ಇತ್ತು. ಅಯೂಬ್ ಬರೋಬ್ಬರಿ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮತ್ತು ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಸುಲಭದ ಕ್ಯಾಚ್‌ಗಳನ್ನು ಡ್ರಾಪ್ ಮಾಡಿದ್ದ.

55
ಲಾಭ ಪಡೆದ ಅಭಿಷೇಕ್ ಶರ್ಮಾ
Image Credit : social media

ಲಾಭ ಪಡೆದ ಅಭಿಷೇಕ್ ಶರ್ಮಾ

ಕ್ಯಾಚ್ ಡ್ರಾಪ್‌ನ ಲಾಭ ಪಡೆದ ಅಭಿಷೇಕ್ ಶರ್ಮಾ.. ಕೇವಲ 28 ಎಸೆತಗಳಲ್ಲಿ 61 ರನ್ ಚಚ್ಚಿ ಪಾಕಿಸ್ತಾನದ ಬೌಲರ್‌ಗಳನ್ನು ಬೆಂಡೆತ್ತಿದರು. ಪಾಕ್ ಕಳಪೆ ಫೀಲ್ಡಿಂಗ್ ಮತ್ತು ಭಾರತೀಯ ಅಭಿಮಾನಿಗಳ ತಮಾಷೆಯ ಸ್ಲೆಡ್ಜಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

Indian Fans Sledging Saim Ayub Saying 🤣

- Koi garden me nahi ghumega.... Varna IYKYK 😅
- Oyeeee... Biryani.
- Ek aur catch drop kar na. pic.twitter.com/IsYKRlSrM1

— Mukku (@Cric_Mukku) October 3, 2026

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಟೀಮ್ ಇಂಡಿಯಾ
ಪಾಕಿಸ್ತಾನ
ಕ್ರಿಕೆಟ್
ಏಷ್ಯನ್ ಗೇಮ್ಸ್
 

Latest Videos
Recommended Stories
Recommended image1
ಏಷ್ಯನ್ ಗೇಮ್ಸ್‌ನಲ್ಲಿ ಪಾಕ್ ಹಾರಾಟಕ್ಕೆ ಬ್ರೇಕ್‌; ಮತ್ತೊಮ್ಮೆ ಚಿನ್ನ ಗೆದ್ದ ಟೀಂ ಇಂಡಿಯಾ!
Recommended image2
384 ದಿನಗಳಿಂದ ಅವಮಾನಕ್ಕೆ ಒಳಗಾಗುತ್ತಿದೆ ಪಾಕ್‌, ಇವತ್ತಿನ ಪಂದ್ಯ ಆರಂಭಕ್ಕೂ ಮುನ್ನ ಆಗಿದ್ದೇನು?
Recommended image3
Cricket; ಪಾಕ್ ವಿರುದ್ಧ ವೈಭವ್-ಅಭಿಷೇಕ್ ಅಬ್ಬರಕ್ಕೆ ಯುವಿ 14 ವರ್ಷದ ಯುವಿ ದಾಖಲೆ ಧೂಳೀಪಟ!
Related Stories
Recommended image1
ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ! ಆಮೇಲೆ 'ಡಿಂಪಲ್ ಕ್ವೀನ್' ಕೊಟ್ಟ ರಿಯಾಕ್ಷನ್ ಹೇಗಿತ್ತು ಗೊತ್ತಾ?
Recommended image2
384 ದಿನಗಳಿಂದ ಅವಮಾನಕ್ಕೆ ಒಳಗಾಗುತ್ತಿದೆ ಪಾಕ್‌, ಇವತ್ತಿನ ಪಂದ್ಯ ಆರಂಭಕ್ಕೂ ಮುನ್ನ ಆಗಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved