- Home
- Sports
- Cricket
- 'ಈಗ ಆಯ್ಕೆಗಾರರಿಗೆ ಧೈರ್ಯ ಇದೆ' ಭುವಿ ಕಂಬ್ಯಾಕ್ ಬಗ್ಗೆ ದಿನೇಶ್ ಕಾರ್ತಿಕ್ ಸಂಚಲನಕಾರಿ ಹೇಳಿಕೆ
'ಈಗ ಆಯ್ಕೆಗಾರರಿಗೆ ಧೈರ್ಯ ಇದೆ' ಭುವಿ ಕಂಬ್ಯಾಕ್ ಬಗ್ಗೆ ದಿನೇಶ್ ಕಾರ್ತಿಕ್ ಸಂಚಲನಕಾರಿ ಹೇಳಿಕೆ
ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಟೀಂ ಇಂಡಿಯಾಗೆ ಭುವನೇಶ್ವರ್ ಕುಮಾರ್ ಕಂಬ್ಯಾಕ್ ಮಾಡಿದ್ದಾರೆ. ಭುವಿ ಆಯ್ಕೆ ಬೆನ್ನಲ್ಲೇ ಅವರ ಆಪ್ತ ಸ್ನೇಹಿತ, ಆರ್‍ಸಿಬಿ ಕೋಚ್ ಸಂಚಲನಕಾರಿ ಹೇಳಿಕೆಯನ್ನ ನೀಡಿದ್ದಾರೆ. ಅವರು ಏನು ಹೇಳಿದ್ದಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ

ನಾಲ್ಕು ವರ್ಷಗಳ ಬಳಿಕ ಭುವಿ ಕಂಬ್ಯಾಕ್
ನ್ಯೂಜಿಲೆಂಡ್ ವಿರುದ್ಧದ ಟಿ-ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ ಆಗಿದೆ. ಖುಷಿಯ ಸುದ್ದಿ ಏನಂದರೆ ಆರ್‍ಸಿಬಿ ಸ್ಟಾರ್, ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಅಜಿತ್ ಅಗರ್ಕರ್‍ಗೆ ಬಿಸಿಸಿಐ ಗೇಟ್ ಪಾಸ್ ನೀಡಿದ್ದು, ಅವರ ಬದಲಿಯಾಗಿ ಹಂಗಾಮಿಯಾಗಿ ಪ್ರಗ್ಯಾನ್ ಓಜಾ ಅವರ ನೇತೃತ್ವದ ಆಯ್ಕೆ ಸಮಿತಿ ಭುವನೇಶ್ವರ್ ಕುಮಾರ್‍ಗೆ ಮಣೆ ಹಾಕಿದೆ. ಈ ಬೆನ್ನಲ್ಲೇ ದಿನೇಶ್ ಕಾರ್ತಿಕ್ ಮಾತನ್ನಾಡಿದ್ದಾರೆ.
ಏನಂದ್ರು ದಿನೇಶ್ ಕಾರ್ತಿಕ್?
ಭುವಿ ತಂಡಕ್ಕೆ ಆಯ್ಕೆ ಆಗಿದ್ದಾರೆ. ನನಗೆ ತುಂಬಾ ಖುಷಿ ಆಗಿದೆ. ಆಯ್ಕೆಗಾರರು ಧೈರ್ಯ ಮಾಡಿ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನಾನು ಇದನ್ನು ಸ್ವಾಗತಿಸುತ್ತೇನೆ. ಭುವನೇಶ್ವರ್ ಕುಮಾರ್ ಅವರನ್ನು ತಂಡಕ್ಕೆ ಕರೆತರಲು ನಾಲ್ಕು ವರ್ಷಗಳು ಬೇಕಾಯಿತು. ನಾಲ್ಕು ವರ್ಷಗಳಿಂದ ಆಯ್ಕೆಯಾಗದ ವ್ಯಕ್ತಿಯನ್ನು ಆಯ್ಕೆ ಮಾಡುವ ಧೈರ್ಯ ತೋರಿದ ಆಯ್ಕೆದಾರರಿಗೆ ಅಭಿನಂದನೆಗಳನ್ನ ತಿಳಿಸುತ್ತೇನೆ. ಕಳೆದ ವರ್ಷ ಟೀಂ ಇಂಡಿಯಾದ ಎಲ್ಲಾ ವೇಗಿಗಳನ್ನ ಪರೀಕ್ಷೆಗೆ ಒಳಪಡಿಸಲಾಯಿತು. ನೀವು ಸ್ಕಿಲ್ ಮೇಲೆ ಗಮನ ನೀಡಿದ್ದರೆ ಭುವಿ ಅತ್ಯುತ್ತಮ ಆಯ್ಕೆ ಆಗಿದೆ ಎಂದು ಭುವಿ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ಪ್ರದರ್ಶನದ ಬಗ್ಗೆ ಮಾತು
ಭುವಿ ಬೌಲಿಂಗ್ ಗುಣಮುಟ್ಟ ಅತ್ಯುತ್ತಮ ಆಗಿದೆ. ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡ್ತಾರೆ. ಎರಡೂ ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯವನ್ನು ಭುವಿ ಹೊಂದಿದ್ದಾರೆ. ಡೆತ್ ಓವರ್‍ಗಳಲ್ಲಿ ಒತ್ತಡವನ್ನು ನಿಭಾಯಿಸುತ್ತಾರೆ. ಕಳೆದ ಐಪಿಎಲ್ ಗಮನಿಸಿದ್ರೆ.. ಎಲ್ಲಾ ತಂಡಗಳು 200ಕ್ಕೂ ಹೆಚ್ಚು ರನ್ ಗಳಿಸುತ್ತಿದ್ದಾಗಲೂ ಭುವಿ 28 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ ಎಂದರು.
ನ್ಯೂಜಿಲೆಂಡ್ ವಿರುದ್ಧವೇ ಕೊನೆಯ ಮ್ಯಾಚ್ ಆಗಿತ್ತು..
ಭುವಿ ಮೈದಾನಕ್ಕೆ ಹೋಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಆನಂದಿಸಬೇಕು ಎಂದು ನಾನು ಭಾವಿಸುತ್ತೇನೆ. ಅವರ ಸಾಮರ್ಥ್ಯಕ್ಕೆ ಅವರು ಅರ್ಹರಾಗಿದ್ದಾರೆ ಎಂದು ಭುವಿ ಹೇಳಿದ್ದಾರೆ. ಕಾಕತಾಳಿಯ ಎಂಬುವಂತೆ ಭುವಿ ಅವರು ಕೊನೆಯದಾಗಿ ನ್ಯೂಜಿಲೆಂಡ್ ವಿರುದ್ಧ ಪಂದ್ಯವನ್ನ ಆಡಿದ್ದು. ನಾಲ್ಕು ವರ್ಷಗಳ ಬಳಿಕ ಮತ್ತೆ ನ್ಯೂಜಿಲೆಂಡ್ ವಿರುದ್ಧವೇ ಆಡುವ ಅವಕಾಶ ಸಿಕ್ಕಿದೆ. ನವೆಂಬರ್ 22, 2022ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭುವಿ ಕಣಕ್ಕಿಳಿದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

