ಸಚಿವ ರೇವಣ್ಣ ಬೆಂಬಲಿಗನಿಗೆ ಡಿಸಿ ರೋಹಿಣಿ ಕೊಟ್ಟ ‘ಮರಳೇಟು’
ಅಕ್ರಮ ಮರಳು ದಾಸ್ತಾನಿಗೆ ಶಿಫಾರಸ್ಸು ಆರೋಪದಲ್ಲಿ ಕಾರಣ ಕೇಳಿ ಹಾಸನ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಿಗೆ ಡಿಸಿ ರೋಹಿಣಿ ಸಿಂಧೂರಿ ನೋಟಿಸ್ ನೀಡಿದ್ದಾರೆ. ಜಿಪಂ ಉಪಾಧ್ಯಕ್ಷ ಸುಪ್ರದೀಪ್ ಯಜಮಾನ್ ಅವರಿಗೆ ನೋಟಿಸ್ ನೀಡಲಾಗಿದೆ. ಹಾನುಬಾಳು ಜಿಪಂ ಕ್ಷೇತ್ರದ ಜೆಡಿಎಸ್ ಸದಸ್ಯರಾಗಿರುವ ಯಜಮಾನ್ ಉತ್ತರ ನೀಡಬೇಕಾಗಿದೆ. ಅರೆಕೆರೆಯಲ್ಲಿ 9000 ಟನ್ ಅಕ್ರಮ ದಾಸ್ತಾನು ಮರಳು ಜಪ್ತಿ ಮಾಡಲಾಗಿತ್ತು. ಚುನಾಯಿತ ಪ್ರತಿನಿಧಿಯಾಗಿ ಅಪಕೀರ್ತಿಕರ ನಡತೆ ಹೊಂದಿದ್ದೀರಿ, ಹುದ್ದೆಗೆ ತರವಲ್ಲದ ರೀತಿ ನಡೆದುಕೊಂಡಿದ್ದೀರೆಂದು ಚಾಟಿ ಬೀಸಿರುವ ಡಿಸಿ ನಿಮ್ಮ ವಿರುದ್ದ ಏಕೆ ಕ್ರಮವಹಿಸಬಾರದು ಎಂದು ಪ್ರಶ್ನೆ ಮಾಡಿದ್ದಾರೆ.