ಕಲಾಪದಲ್ಲಿ ಸದ್ದು ಮಾಡಿದ ಇಂದಿರಾ ಕ್ಯಾಂಟೀನ್ ಹಗರಣ!

ಕಲಾಪದಲ್ಲಿ ಗದ್ದಲಕ್ಕೆ ಕಾರಣವಾದ ಇಂದಿರಾ ಕ್ಯಾಂಟೀನ್ ಹಗರಣಬಿಜೆಪಿ ಶಾಸಕ ಎ ರಾಮದಾಸ್ ಮಾಡಿದ್ದ ಗಂಭೀರ ಆರೋಪರಾಮದಾಸ್ ಆರೋಪಕ್ಕೆ ಕಾಂಗ್ರೆಸ್ ಸದಸ್ಯರ ವಿರೋಧದಾಖಲೆ ಇದ್ದರೆ ಎಸಿಬಿಗೆ ಕೊಡುವಂತೆ ಜೆಡಿಎಸ್ ಸಲಹೆ

Share this Video
  • FB
  • Linkdin
  • Whatsapp

ಬೆಂಗಳೂರು(ಜು.12): ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಹಗರಣ, ಇಂದು ವಿಧಾನಸಭೆ ಕಲಾಪದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಇಂದಿರಾ ಕ್ಯಾಂಟೀನ್ ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ನಿನ್ನೆ ಬಿಜೆಪಿ ಶಾಸಕ ಎ ರಾಮದಾಸ್ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಇಂದು ಕಾಂಗ್ರೆಸ್ ಸದಸ್ಯರು ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

ಇನ್ನು ಜೆಡಿಎಸ್ ಸದಸ್ಯರು ಕೂಡ ಮಧ್ಯಪ್ರವೇಶಿಸಿ ಒಂದು ವೇಳೆ ಹಗರಣ ನಡೆದ ಕುರಿತು ರಾಮದಾಸ್ ಅವರಲ್ಲಿ ಮಾಹಿತಿ ಇದ್ದರೆ, ಕೂಡಲೇ ಎಸಿಬಿ ಗೆ ಕೊಡುವಂತೆ ಒತ್ತಾಯಿಸಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Related Video