ಕುಲಭೂಷಣ್ ಜಾಧವ್ ತೀರ್ಪು ಪರಿಶೀಲನೆಗೆ ಪಾಕ್‌ ಸಂಸತ್ತಿನಲ್ಲಿ ಅನುಮೋದನೆ...

ಕುಲಭೂಷಣ್ ಜಾಧವ್ ತೀರ್ಪು ಪರಿಶೀಲಿಸುವ ಮಸೂದೆಗೆ ಪಾಕಿಸ್ತಾನ ಸಂಸತ್ತು ಅನುಮೋದನೆ ನೀಡಿದೆ. ಅಂತರರಾಷ್ಟ್ರೀಯ ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸುವುದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಯಲಿದೆ.

ಕೊರೋನಾ ನಡುವೆ ಬಿಹಾರ ಚುನಾವಣೆ: ಬಿಜೆಪಿ ಪ್ರಣಾಳಿಕೆಯಲ್ಲಿ ಮಹತ್ವದ ಘೋಷಣೆ!...

ಹಾರ ವಿಧಾನಸಭಾ ಚುನಾವಣೆ ಸಂಬಂಧ ಇಂದು ಬಿಜೆಪಿ ತನ್ನ ಪ್ರಣಾಳಿಕೆ ಜಾರಿ ಮಾಡಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪಾಟ್ನಾದಲ್ಲಿ ಬಿಜೆಪಿಯ ಐದು ಸೂತ್ರ, ಒಂದು ಗುರಿ, 11 ಸಂಕಲ್ಪದ ಕಲ್ಪನೆಯ ದಾಖಲೆ ಜಾರಿಗೊಳಿಸಿದೆ. ಈ ಪ್ರಣಾಳಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ಬಿಹಾರಾದ್ಯಂತ ಉಚಿತ ಕೊರೋನಾ ಲಸಿಕೆ ಹಾಗೂ 19 ಲಕ್ಷ ಉದ್ಯೋಗ ಕಲ್ಪಿಸುವ ಮಾತು ಕೊಟ್ಟಿದೆ.

ಚೀನಾ, ಪಾಕ್‌ ಗಡಿಯಲ್ಲಿ 10 ಸುರಂಗಕ್ಕೆ ಭಾರತ ಸಿದ್ಧತೆ!...

ಚೀನಾ ಗಡಿಯಲ್ಲಿ ತನ್ನ ಮೂಲಸೌಕರ್ಯ ಬಲಪಡಿಸಿಕೊಳ್ಳುತ್ತಿರುವ ಭಾರತ, ಈಗ ಲಡಾಖ್‌ ಹಾಗೂ ಕಾಶ್ಮೀರ ಪ್ರದೇಶದಲ್ಲಿ 10 ಬೃಹತ್‌ ಸುರಂಗಗಳನ್ನು ಕೊರೆಯುವ ಯೋಜನೆ ಹಾಕಿಕೊಂಡಿದೆ. ಸುಮಾರು 100 ಕಿ.ಮೀ.ನಷ್ಟುಉದ್ದವಾಗಿರುವ ಈ ಸುರಂಗಗಳನ್ನು ಸರ್ವಋುತುಗಳಲ್ಲಿ ಸೇನೆಯ ಸುಗಮ ಸಂಚಾರಕ್ಕಾಗಿ ನಿರ್ಮಿಸುವ ಉದ್ದೇಶವಿದೆ.

ಪಾತಕಿ ದಾವೂದ್‌ ಆಸ್ತಿ ಹರಾಜಿಗೆ ಸಿದ್ಧತೆ...

ಭೂಗತ ಪಾತಕಿ, 1993ರ ಮುಂಬೈ ಸರಣಿ ಸ್ಫೋಟದ ಮಾಸ್ಟರ್‌ ಮೈಂಡ್‌ ದಾವೂದ್‌ ಇಬ್ರಾಹಿಂಗೆ ಸೇರಿದ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡ್‌ ತಾಲೂಕಿನಲ್ಲಿರುವ ಪಿತ್ರಾರ್ಜಿತ ಆಸ್ತಿಯನ್ನು ನವೆಂಬರ್‌ 10ರಂದು ಹರಾಜಿಗೆ ಇಡಲಾಗುತ್ತಿದೆ. ಕಳ್ಳ ಸಾಗಣೆ ಹಾಗೂ ವಿದೇಶಿ ವಿನಿಮಯ ವಂಚನೆ ವಿಭಾಗದ ಅಧಿಕಾರಿಗಳು ಮಹಾರಾಷ್ಟ್ರದ ಕೊಂಕಣ ಪ್ರಾಂತ್ಯದಲ್ಲಿರುವ ದಾವೂದ್‌ ಪೂರ್ವಜರಿಗೆ ಸೇರಿದ 7 ಭೂಮಿಯನ್ನು ಹರಾಜು ಹಾಕುತ್ತಾರೆ ಎಂದು ವರದಿಗಳೂ ತಿಳಿಸಿವೆ.

ವಾಯುಭಾರ ಕುಸಿತ : ಈ ರಾಜ್ಯಗಳಲ್ಲಿ 3 ದಿನ ಭಾರಿ ಮಳೆ...

ವಾಯುಭಾರ ಕುಸಿತದಿಂದ ಮುಂದಿನ ಮೂರು ದಿನಗಳ ಕಾಲ ಈ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

IPL ಐಪಿಎಲ್ ಲೀಗ್‌ನಿಂದ ಕಿಕೌಟ್‌ ಪಕ್ಕಾ: ಚೆನ್ನೈ ಇಂದಿನ ಸ್ಥಿತಿಗೆ ಕಾರಣ ಯಾರು ಗೊತ್ತಾ?...

ಮೂರು ಬಾರಿ ಚಾಂಪಿಯನ್ ಆದ ಸಿಎಸ್‌ಕೆ ಇಂದಿನ ಸ್ಥಿತಿಗೆ ಕಾರಣ ಯಾರು? ಕ್ಯಾಪ್ಟನ್‌ ಧೋನಿನಾ ಅಥವಾ ಆಟಗಾರರಾ? ಅಥವಾ ಫ್ರಾಂಚೈಸಿಗಳಾ? ಚೆನ್ನೈ ಸೋಲಿಗೆ ಎಲ್ಲರೂ ತಮ್ಮದೇ ಆದ ವಾದ ಮಂಡಿಸುತ್ತಿದ್ದಾರೆ. ಕೆಲವರಂತೂ ಕ್ಯಾಪ್ಟನ್ ಧೋನಿ ವಿರುದ್ಧವೇ ಹರಿ ಹಾಯ್ತಿದ್ದಾರೆ. 

ಹುಟ್ಟಿದ ಕ್ಷಣವೇ ಜೂನಿಯರ್ ಚಿರು ಫೋಟೋ ರಿವೀಲ್!...

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಕುಟುಂಬದವರು ಇಂದು ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ.  ಲಿಟಲ್ ಸ್ಟಾರ್ ಹುಟ್ಟಿದ ಕ್ಷಣದಲ್ಲಿಯೇ ಫೋಟೋ ವೈರಲ್ ಆಗುತ್ತಿದೆ.

5 ಮದುವೆಯಾದ ಆಂಟಿ 6ನೆಯವನನ್ನು ಪ್ರೀತಿಸಿ ಬಂದಳು...

ಐವರನ್ನು ಮದುವೆಯಾಗಿದ್ದ ಮಹಿಳೆ 6ನೇ ಮದುವೆಗೆ ಯತ್ನಿಸಿದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಸದ್ಯ ಆಕೆಯನ್ನು ಸ್ವಾಧಾರ ಗೃಹದ ಆಶ್ರಯಕ್ಕೆ ಒಪ್ಪಿಸಲಾಗಿದೆ.

ಕ್ಷುದ್ರ ಗ್ರಹದ ಮೇಲೆ ಇಳಿದ ನಾಸಾ ನೌಕೆ, ಮಣ್ಣು ಸಂಗ್ರಹ!...

ನಾಸಾದ ಒಸಿರಿಸ್‌ ಆರ್‌ಇಕ್ಸ್‌ ನೌಕೆ 4 ವರ್ಷಗಳ ಸುದೀರ್ಘ ಪ್ರಯಾಣದ ಬಳಿಕ ಭೂಮಿಯಿಂದ ಸುಮಾರು 32.1 ಕೋಟಿ ಕಿ.ಮೀ. ದೂರದಲ್ಲಿರುವ ಬೆನ್ನು ಎಂಬ ಕ್ಷುದ್ರಗ್ರಹದ ಮೇಲೆ ಇಳಿಯುವಲ್ಲಿ ಯಶಸ್ವಿಯಾಗಿದೆ.

ATMನಿಂದ 5000ಕ್ಕಿಂತ ಹೆಚ್ಚು ಹಣ ತೆಗೆದರೆ ಶುಲ್ಕ: 5 ಬಾರಿ ಉಚಿತ ಹಣ ವಿಡ್ರಾವಲ್‌ ಕೂಡಾ ರದ್ದು?...

ಇನ್ನು ಮುಂದೆ ನೀವು ಎಟಿಎಂನಿಂದ 5000 ರು.ಗಿಂತ ಹೆಚ್ಚಿನ ಹಣವನ್ನು ತೆಗೆದರೆ ಅದಕ್ಕೆ ಹೆಚ್ಚುವರಿ ಶುಲ್ಕವನ್ನು ತೆರಬೇಕಾಗಿ ಬರಬಹುದು. ಏಕೆಂದರೆ ಎಟಿಎಂನಿಂದ ಹಣ ತೆಗೆಯಲು ಈಗಿರುವ ನಿಯಮದಲ್ಲಿ 8 ವರ್ಷಗಳ ಬಳಿಕ ಬದಲಾವಣೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.