ಇಸ್ಲಮಾಬಾದ್(ಅ.22): ಕುಲಭೂಷಣ್ ಜಾಧವ್ ತೀರ್ಪು ಪರಿಶೀಲಿಸುವ ಮಸೂದೆಗೆ ಪಾಕಿಸ್ತಾನ ಸಂಸತ್ತು ಅನುಮೋದನೆ ನೀಡಿದೆ. ಅಂತರರಾಷ್ಟ್ರೀಯ ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸುವುದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಯಲಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯದ ಸುಗ್ರೀವಾಜ್ಞೆ ಎಂಬ ಹೆಸರಿನ ಕರಡು ಮಸೂದೆಯನ್ನು ಪಾಕಿಸ್ತಾನ ಸಂಸತ್ತಿನಲ್ಲಿ ಚರ್ಚಿಸಿ ಕಾನೂನು ಮತ್ತು ನ್ಯಾಯದ ರಾಷ್ಟ್ರೀಯ ಸ್ಥಾಯಿ ಸಮಿತಿ ಅನುಮೋದನೆ ನೀಡಿದೆ. ವಿರೋಧ ಪಕ್ಷದ ತೀವ್ರ ವಿರೋಧದ ಮಧ್ಯೆ ಈ ಬೆಳವಣಿಗೆ ನಡೆದಿದೆ.

ನಾಗ್ ಮಿಸೈಲ್ ಪರೀಕ್ಷೆ ಯಶಸ್ವಿ : ಇಲ್ಲಿವೆ ಫೋಟೋಸ್

ಚರ್ಚೆಯಲ್ಲಿ ಪಾಲ್ಗೊಂಡ, ಫೆಡರಲ್ ಕಾನೂನು ಸಚಿವ, ನ್ಯಾ.ಫರೋ ನಸೀಮ್ ಅಂತಾರಾಷ್ಟ್ರೀಯ ನ್ಯಾಯಾಲಯದ ನಿರ್ದೇಶಗಳ ಪ್ರಕಾರ ಮಸೂದೆ ಮಂಡಿಸಿರುವುದಾಗಿ ಹೇಳಿದೆ.

ಸಂಸತ್ತಿನಲ್ಲಿ ಮದೂಸೆಯನ್ನು ಅನುಮೋದಿಸದಿದ್ದರೆ ಅಂತಾರಾಷ್ಟ್ರೀಯ ನ್ಯಾಯಾಲಯದ ನಿರ್ದೇಶ ಉಲ್ಲಂಘಿಸಿದ ಕಾರಣಕ್ಕೆ ಪಾಕಿಸ್ತಾನ ನಿರ್ಬಂಧಗಳನ್ನು  ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಕುಲಭೂಷಣ್ ಜಾಧವ್ ಕುರಿತ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

50 ವರ್ಷದ ನಿವೃತ್ತ ನೌಕೆ ಅಧಿಕಾರಿ ಜಾಧವ್ ಅವರಿಗೆ 2017ರಲ್ಲಿ ಪಾಕಿಸ್ತಾನಿ ಮಿಲಿಟರಿ ನ್ಯಾಯಾಲಯ ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. 2017ರಲ್ಲಿ ಭಾರತ ಪಾಕಿಸ್ತಾನದ ತೀರ್ಪಿನ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.