ಚಿಕ್ಕಮಗಳೂರು (ಅ.22) : ಐವರನ್ನು ಮದುವೆಯಾಗಿದ್ದ ಮಹಿಳೆ 6ನೇ ಮದುವೆಗೆ ಯತ್ನಿಸಿದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಸದ್ಯ ಆಕೆಯನ್ನು ಸ್ವಾಧಾರ ಗೃಹದ ಆಶ್ರಯಕ್ಕೆ ಒಪ್ಪಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಸ್ತೂರಿಬಾ ಸದನದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ, ಬಳ್ಳಾರಿ ಮೂಲದ ಮಹಿಳೆ ಈಗಾಗಲೇ ಐವರನ್ನು ಮದುವೆಯಾಗಿದ್ದು, ಮೂವರು ಮಕ್ಕಳನ್ನು ಹೊಂದಿದ್ದಾರೆ. ಐದು ವಿವಾಹಗಳ ನಂತರವೂ ಕಡೂರು ಮೂಲದ ವ್ಯಕ್ತಿಯೊಬ್ಬರನ್ನು ಪ್ರೀತಿಸಿ ಕಡೂರಿಗೆ ಬಂದು ನೆಲೆಸಿದ್ದಾರೆ. 

ಬೆಳಗಾವಿ: ಸೋಫಾಸೆಟ್‌ ಕೊಡಿಸಲಿಲ್ಲ ಎಂದು ವಿವಾಹಿತೆ ಆತ್ಮಹತ್ಯೆ! ...

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ. ಸದ್ಯ ಮಹಿಳೆಯನ್ನು ಸ್ವಾಧಾರಗೃಹದ ಆಶ್ರಯಕ್ಕೆ ಒಪ್ಪಿಸಿದ್ದು, ಆಕೆಯ ಮಕ್ಕಳ ವಿದ್ಯಾಭ್ಯಾಸದ ಖರ್ಚು ಭರಿಸುವ ಭರವಸೆ ನೀಡಿದ್ದೇವೆ. ಜತೆಗೆ ಮನೆ ಕೆಲಸ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದರು.