ವಿಶಾಖಪಟ್ಟಣ (ಅ.22): ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ವಾತಾವರಣ ಸೃಷ್ಟಿಯಾಗಿದ್ದು ಅಕ್ಟೋಬರ್‌ 23-24ರಂದು ವಾಯುಭಾರ ಕುಸಿತ ಸಂಭವಿಸುವ ಸಾಧ್ಯತೆ ಇದೆ. 

ಈ ಕಾರಣ ಕರಾವಳಿ ಆಂಧ್ರಪ್ರದೇಶ, ರಾಯಲಸೀಮೆ ಹಾಗೂ ತೆಲಂಗಾಣದಲ್ಲಿ ಮುಂದಿನ 3 ದಿನ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ 24ರವರೆಗೆ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಸೂಚಿಸಿದೆ. 

ಇನ್ನೂ 3 ದಿನ ಭಾರಿ ಮಳೆ : ಎಲ್ಲೆಲ್ಲಿ ಅಬ್ಬರಿಸಲಿದ್ದಾನೆ ವರುಣ? ..

ತೆಲಂಗಾಣ, ಆಂಧ್ರದಲ್ಲಿ ಭಾರೀ ಮಳೆಯ ಮುನ್ಸೂಚನೆ ಇರುವ ಕಾರಣ ಈ ರಾಜ್ಯಗಳಿಗೆ ಹೊಂದಿಕೊಂಡಿರುವ ಹಾಗೂ ಈಗಾಗಲೇ ನೆರೆಯಿಂದ ನಲುಗಿರುವ ಕರ್ನಾಟಕದ ಗಡಿ ಭಾಗಗಳ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. 

ಇದು ಈ ವರ್ಷದ 4ನೇ ವಾಯುಭಾರ ಕುಸಿತವಾಗಿದೆ. ಅ.5, 9 ಹಾಗೂ 16ರಂದು ವಾಯುಭಾರ ಕುಸಿತ ಸಂಭವಿಸಿ ಸಾಕಷ್ಟುಮಳೆ ಸುರಿದಿತ್ತು.