Ipl

(Search results - 3341)

Ankeet Chavan

CricketJun 16, 2021, 4:40 PM IST

ಐಪಿಎಲ್‌ ಸ್ಪಾಟ್‌ ಫಿಕ್ಸರ್‌ ಅಂಕಿತ್ ಚೌವಾಣ್ ನಿಷೇಧ ಶಿಕ್ಷೆ ಅಂತ್ಯ

ಚೌವಾಣ್ ಸ್ಪಾಟ್ ಫಿಕ್ಸಿಂಗ್ ನಡೆಸಿರುವುದು ತನಿಖೆಯ ವೇಳೆ ದೃಢವಾಗುತ್ತಿದ್ದಂತೆಯೇ 2013ರ ಸೆಪ್ಟೆಂಬರ್‌ನಲ್ಲಿ ಮುಂಬೈ ಮೂಲದ ಸ್ಪಿನ್ನರ್ ಮೇಲೆ ಬಿಸಿಸಿಐ ಆಜೀವ ನಿಷೇಧ ಶಿಕ್ಷೆ ವಿಧಿಸಿತ್ತು. ಇನ್ನು ಕಳೆದ ತಿಂಗಳು ಬಿಸಿಸಿಐ ನೈತಿಕ ಅಧಿಕಾರಿಗಳು ಆಜೀವ ಶಿಕ್ಷೆಯ ಬದಲು 7 ವರ್ಷಗಳ ಶಿಕ್ಷೆಯನ್ನು ವಿಧಿಸಿತ್ತು. ಹೀಗಾಗಿ ರಾಜಸ್ಥಾನ ರಾಯಲ್ಸ್ ಮಾಜಿ ಬೌಲರ್ ಬಿಸಿಸಿಐ ನಿರಾಪೇಕ್ಷಣ ಪತ್ರಕ್ಕೆ ಎದುರು ನೋಡುತ್ತಿದ್ದಾರೆ.

David Warner

CricketJun 11, 2021, 3:44 PM IST

'ದಿ ಹಂಡ್ರೆಡ್‌' ಟೂರ್ನಿಯಿಂದ ಹಿಂದೆ ಸರಿದ ವಾರ್ನರ್-ಸ್ಟೋನಿಸ್

ಭಾರತದಲ್ಲಿ ನಡೆಯುತ್ತಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಕೋವಿಡ್ ಕಾರಣದಿಂದ ದಿಢೀರ್ ಸ್ಥಗಿತವಾದ ಬೆನ್ನಲ್ಲೇ ಕಠಿಣ ಕ್ವಾರಂಟೈನ್‌ ಮುಗಿಸಿ ತವರಿಗೆ ವಾಪಾಸಾಗಿದ್ದರು. ಇದೀಗ ವೆಸ್ಟ್‌ ಇಂಡೀಸ್ ಹಾಗೂ ಬಾಂಗ್ಲಾದೇಶ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಆಸ್ಟ್ರೇಲಿಯಾ ಪ್ರಾಥಮಿಕ ತಂಡದಲ್ಲಿ ಈ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.

ಗೆಳತಿಯೊಂದಿಗೆ ಹೊಸ ಬಾಳಿಗೆ ಕಾಲಿಟ್ಟ ಡ್ಯಾನಿಶ್, ಶುಭಾಶಯಗಳ ಮಹಾಪೂರ

Cine WorldJun 10, 2021, 11:51 PM IST

ಗೆಳತಿಯೊಂದಿಗೆ ಹೊಸ ಬಾಳಿಗೆ ಕಾಲಿಟ್ಟ ಡ್ಯಾನಿಶ್, ಶುಭಾಶಯಗಳ ಮಹಾಪೂರ

ಬೆಂಗಳೂರು(ಜೂ.  10)   ನಟ, ನಿರೂಪಕ, ಸ್ಟ್ಯಾಂಡ್‌ ಅಪ್ ಕಾಮಿಡಿಯನ್‌ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಡ್ಯಾನಿಶ್‌ ಸೇಠ್‌ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಅನ್ಯಾ ರಂಗಸ್ವಾಮಿ ಜೊತೆ ಗುರುವಾರ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

IPL Rajeev Shulka

CricketJun 10, 2021, 1:48 PM IST

ಐಪಿಎಲ್ 2021 ಭಾಗ-2 ದಿನಾಂಕ ಖಚಿತಪಡಿಸಿದ ರಾಜೀವ್ ಶುಕ್ಲಾ

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೇಲೆ ಕೋವಿಡ್ ತನ್ನ ವಕ್ರದೃಷ್ಟಿ ಬೀರಿತ್ತು. ಬಯೋ ಬಬಲ್‌ನೊಳಗಿದ್ದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಮೇ 04ರಂದು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ನಡೆದಿದ್ದು, ಇನ್ನೂ 31 ಪಂದ್ಯಗಳು ನಡೆಯಬೇಕಿವೆ.

ICC BCCI

CricketJun 10, 2021, 9:51 AM IST

ಅಕ್ಟೋಬರ್ 10ರೊಳಗೆ ಐಪಿಎಲ್‌ ಮುಗಿಸಲು ಐಸಿಸಿ ಒತ್ತಡ?

ಐಸಿಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, ಅಕ್ಟೋಬರ್ 18ರಿಂದ ಟಿ20 ವಿಶ್ವಕಪ್‌ ಆರಂಭಗೊಳ್ಳಬೇಕಿದ್ದು, ಐಸಿಸಿ ಟೂರ್ನಿಗಳು ಆರಂಭವಾಗುವ ಮುನ್ನ ಕನಿಷ್ಠ 7-10 ದಿನಗಳ ಮೊದಲು ಬೇರಾರ‍ಯವುದೇ ಟೂರ್ನಿಗಳನ್ನು ನಡೆಸುವಂತಿಲ್ಲ ಎನ್ನುವ ನಿಯಮವಿದೆ.

Yuzvendra Chahal

CricketJun 8, 2021, 5:17 PM IST

ಪತ್ನಿ ಜತೆ ಭರ್ಜರಿ ವರ್ಕೌಟ್‌ ಮಾಡುತ್ತಿದ್ದಾರೆ ಯುಜುವೇಂದ್ರ ಚಹಲ್..!

ಇತ್ತೀಚೆಗೆ ನಡೆದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಯುಜುವೇಂದ್ರ ಚಹಲ್ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಮಾಡಿರಲಿಲ್ಲ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಚಹಲ್ ತಮ್ಮ ಫಿಟ್ನೆಸ್‌ನತ್ತ ಗಮನ ಹರಿಸಿದ್ದಾರೆ. ಹೀಗಾಗಿ ಪತ್ನಿ ಧನಶ್ರೀ ವರ್ಮಾ ಜತೆ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ವರ್ಕೌಟ್‌ ಮಾಡಲಾರಂಭಿಸಿದ್ದಾರೆ.

IPL BCCI

CricketJun 7, 2021, 4:46 PM IST

ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಯುಎಇ ಚರಣದ ವೇಳಾಪಟ್ಟಿ ಫೈನಲ್‌..!

ನವದೆಹಲಿ: ಭಾರತದ ಚುಟುಕು ಕ್ರಿಕೆಟ್ ಹಬ್ಬ ಇಂಡಿಯನ್‌ ಪ್ರೀಮಿಯರ್ ಲೀಗ್‌ಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಕೋವಿಡ್ ಕಾರಣದಿಂದಾಗಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಬಿಸಿಸಿಐ ಈ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಹೀಗಾಗಿ ಐಪಿಎಲ್ ಭಾಗ 2 ಟೂರ್ನಿ ಯಾವಾಗ ಎಂದು ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಇದೀಗ ಗುಡ್‌ ನ್ಯೂಸ್ ನೀಡಿದೆ.

Trent Boult

CricketJun 7, 2021, 4:11 PM IST

ಟ್ರೆಂಟ್ ಬೌಲ್ಟ್ 2ನೇ ಟೆಸ್ಟ್‌ಗೆ ತಂಡಕೂಡಿಕೊಳ್ಳಲಿದ್ದಾರೆ: ಕಿವೀಸ್ ಕೋಚ್ ಸ್ಟೆಡ್

ಎರಡನೇ ಟೆಸ್ಟ್‌ ಪಂದ್ಯಕ್ಕೆ ತಂಡದಲ್ಲಿ ಕೆಲವೊಂದು ಬದಲಾವಣೆಗಳಾಗುವ ಸಾಧ್ಯತೆಯಿದೆ ಎಂದು ಸ್ಟೆಡ್ ಸುಳಿವು ನೀಡಿದ್ದಾರೆ. ಬ್ರಿಟೀಷ್ ಸರ್ಕಾರವು ತನ್ನ ಕ್ವಾರಂಟೈನ್‌ ನಿಯಮಾವಳಿಗಳನ್ನು ಕೊಂಚ ಸಡಿಲಗೊಳಿಸಿದೆ. ಹೀಗಾಗಿ ಟ್ರೆಂಟ್ ಬೌಲ್ಟ್ ನಾವು ಅಂದುಕೊಂಡಿದ್ದಕ್ಕಿಂತ ಮೂರ್ನಾಲ್ಕು ದಿನ ಮುಂಚಿತವಾಗಿಯೇ ಐಸೋಲೇಷನ್‌ನಿಂದ ಹೊರಬರುವ ಸಾಧ್ಯತೆಯಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಕೋಚ್ ತಿಳಿಸಿದ್ದಾರೆ.

CSK Franchise

CricketJun 5, 2021, 4:18 PM IST

ಐಪಿಎಲ್‌ ಹರಾಜಿನಲ್ಲಿ ಈ ನಾಲ್ವರು ವಿಕೆಟ್ ಕೀಪರ್‌ಗಳ ಮೇಲೆ ಕಣ್ಣಿಟ್ಟಿದೆ ಸಿಎಸ್‌ಕೆ..!

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳು ದೀರ್ಘಕಾಲ ಕ್ರಿಕೆಟ್‌ ಆಡುವುದಿಲ್ಲ, ಅದಕ್ಕೆ ಅಪವಾದ ಎನ್ನುವಂತೆ ಆಡಂ ಗಿಲ್‌ಕ್ರಿಸ್ಟ್, ಕುಮಾರ ಸಂಗಕ್ಕರ, ಮಾರ್ಕ್‌ ಬೌಷರ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರಂತಹ ಕೆಲವೇ ಕೆಲವು ಆಟಗಾರರು ದಶಕಗಳ ಕಾಲ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ಇನ್ನು ಐಪಿಎಲ್ ವಿಚಾರಕ್ಕೆ ಬಂದರೆ ಮಹೇಂದ್ರ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಾಧ್ಯ ದೈವ ಎನಿಸಿಕೊಂಡಿದ್ದಾರೆ. ಸದ್ಯ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದು, ಮುಂಬರುವ ದಿನಗಳಲ್ಲಿ ಐಪಿಎಲ್‌ಗೂ ವಿದಾಯ ಹೇಳುವ ಸಾಧ್ಯತೆಯಿದೆ. ಹೀಗಾಗಿ 2022ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ ನಾಲ್ವರು ವಿದೇಶಿ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ಗಳ ಮೇಲೆ ಕಣ್ಣಿಟ್ಟಿದೆ. ಯಾರು ಅವರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Mohammed Siraj

CricketJun 4, 2021, 3:41 PM IST

ಮೊಹಮ್ಮದ್ ಸಿರಾಜ್ ಬಳಿ ಈಗಲೂ ಇದೆ ಸೆಲ್ಪ್ ಸ್ಟಾರ್ಟ್‌ & ಕಿಕ್ಕರ್ ಇಲ್ಲದ ಬೈಕ್‌..!

ನವದೆಹಲಿ: ಆಟೋ ಚಾಲಕನ ಮಗ ಮೊಹಮ್ಮದ್ ಸಿರಾಜ್ ಇದೀಗ ಟೀಂ ಇಂಡಿಯಾದ ಭವಿಷ್ಯದ ಆಶಾಕಿರಣವಾಗಿ ಬೆಳೆದು ನಿಂತಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ದದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಸಿಕ್ಕ ಅವಕಾಶವನ್ನು ಭರಪೂರವಾಗಿ ಉಪಯೋಗಿಸಿಕೊಂಡ ಸಿರಾಜ್, ಟೆಸ್ಟ್ ಸರಣಿಯಲ್ಲಿ ಭಾರತ ಪರ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿದರು. ಆಸೀಸ್ ವಿರುದ್ದದ ಕೊನೆಯ 3 ಟೆಸ್ಟ್‌ ಪಂದ್ಯಗಳನ್ನಾಡಿ 13 ವಿಕೆಟ್ ಕಬಳಿಸುವಲ್ಲಿ ಸಿರಾಜ್ ಯಶಸ್ವಿಯಾಗಿದ್ದರು. ಇದಾದ ಬಳಿಕ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲೂ ಕರಾರುವಕ್ಕಾದ ಯಾರ್ಕರ್ ಹಾಗೂ ಬೌನ್ಸರ್‌ ಮೂಲಕ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳೆದುರು ಸಿರಾಜ್ ಪ್ರಾಬಲ್ಯ ಮೆರೆದಿದ್ದಾರೆ.

ತಮ್ಮ ಸಂಕಷ್ಟದ ದಿನಗಳಲ್ಲಿ ವಿರಾಟ್ ಕೊಹ್ಲಿ ಹೇಗೆ ನೆರವಾಗಿದ್ದರು ಹಾಗೂ ತಮ್ಮ ಬಳಿ ಇರುವ ಹಳೆಯ ಬೈಕ್‌ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ

IPL Franchisee

CricketJun 2, 2021, 10:56 AM IST

ಐಪಿಎಲ್‌ಗೆ ವಿದೇಶಿಗರು ಗೈರಾದ್ರೆ ಫ್ರಾಂಚೈಸಿಗಳಿಗೆ ಲಾಭ!

ಬಹುತೇಕ ತಂಡಗಳಿಗೆ ದ್ವಿಪಕ್ಷೀಯ ಸರಣಿಗಳು ಇರುವ ಕಾರಣ, ಐಪಿಎಲ್‌ಗೆ ತಾರಾ ಆಟಗಾರರನ್ನು ಕಳುಹಿಸಲು ಆಗುವುದಿಲ್ಲ ಎಂದು ವಿವಿಧ ರಾಷ್ಟ್ರಗಳ ಕ್ರಿಕೆಟ್‌ ಮಂಡಳಿಗಳು ಬಿಸಿಸಿಐಗೆ ಮಾಹಿತಿ ನೀಡಿವೆ ಎನ್ನಲಾಗಿದೆ.

Top 10 News

NewsJun 1, 2021, 5:20 PM IST

IPL ಸ್ಟೇಡಿಯಂಗೆ ಫ್ಯಾನ್ಸ್‌ಗೆ ಅವಕಾಶ, ರಮ್ಯಾಗೆ ಬಂತು ಹೊಸ ಸಂದೇಶ: ಜೂ.1ರ ಟಾಪ್ 10 ಸುದ್ದಿ!

ಕೊರೋನಾ ಆಧುನಿಕ ಜಗತ್ತಿನಲ್ಲಿ ನಡೆದ ನ್ಯೂಕ್ಲೀಯರ್‌ ದಾಳಿಗಿಂತ ಭೀಕರವಾಗಿದೆ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ. ವಾರಾಣಸಿಯಲ್ಲಿ ಕಟ್ಟಡ ಕುಸಿತದಲ್ಲಿ ಮೃತರಾದವರಿಗೆ ಪ್ರಧಾನಿ ಸಂತಾಪ ಸೂಚಿಸಿದ್ದಾರೆ. ಲಸಿಕೆ, ಅಂಗಾಂಗ ಸುರಕ್ಷಿತ ಸಾಗಾಣೆಗೆ ಆ್ಯಂಬಿಟ್ಯಾಗ್ ಅಭಿವೃದ್ಧಿ ಮಾಡಲಾಗಿದೆ. ನಟಿ ರಮ್ಯಾಗೆ ಅಭಿಮಾನಿಗಳ ಸಂದೇಶ, ಐಪಿಎಲ್ ವೀಕ್ಷಿಸಲು ಫ್ಯಾನ್ಸ್‌ಗೆ ಅವಕಾಶ ಸೇರಿದಂತೆ ಜೂನ್ 1ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Nicholas Pooran

CricketJun 1, 2021, 4:11 PM IST

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಂಡೀಸ್ ಕ್ರಿಕೆಟಿಗ ನಿಕೋಲಸ್‌ ಪೂರನ್‌

ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್‌) ತಂಡವನ್ನು ಪ್ರತಿನಿಧಿಸಿದ್ದ ನಿಕೋಲಸ್ ಪೂರನ್ ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಪಂಜಾಬ್‌ ತಂಡ ಪ್ಲೇ ಆಫ್‌ ಪ್ರವೇಶಿಸದಿದ್ದರೂ, ಪೂರನ್ ಬ್ಯಾಟಿಂಗ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ಪೂರನ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.

Trent Boult

CricketJun 1, 2021, 3:07 PM IST

ಐಪಿಎಲ್ 2021 ಭಾಗ-2: ತಮ್ಮ ಲಭ್ಯತೆಯ ಬಗ್ಗೆ ತುಟಿ ಬಿಚ್ಚಿದ ಟ್ರೆಂಟ್ ಬೌಲ್ಟ್

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಐಪಿಎಲ್‌ ಟೂರ್ನಿಯ ಇನ್ನುಳಿದ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲು ಬಿಸಿಸಿಐ ಈಗಿನಿಂದಲೇ ಸಿದ್ದತೆಯನ್ನು ಆರಂಭಿಸಿದೆ. ಇದರ ಬೆನ್ನಲ್ಲೇ ಐಪಿಎಲ್ ಭಾಗ-2 ಟೂರ್ನಿಯಲ್ಲಿ ಹಲವು ತಾರಾ ವಿದೇಶಿ ಆಟಗಾರರು ಪಾಲ್ಗೊಳ್ಳುವುದು ಅನುಮಾನ ಎನ್ನುವಂತಹ ಮಾತುಗಳು ಕೇಳಿ ಬಂದಿವೆ. ಹೀಗಿರುವಾಗಲೇ ಟ್ರೆಂಟ್ ಬೌಲ್ಟ್‌ ಮತ್ತೊಮ್ಮೆ ಮುಂಬೈ ಇಂಡಿಯನ್ಸ್‌ ಜೆರ್ಸಿ ತೊಡುವ ಮಾತುಗಳನ್ನಾಡಿದ್ದಾರೆ.

IPL fans

CricketJun 1, 2021, 12:38 PM IST

ಐಪಿಎಲ್ 2021‌: ಸ್ಟೇಡಿಯಂಗೆ ಪ್ರೇಕ್ಷಕರಿಗೆ ಪ್ರವೇಶ?

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ‍್ಯದರ್ಶಿ ಜಯ್‌ ಶಾ, ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಬುಧವಾರ ಯುಎಇಗೆ ತೆರಳಿ, ಅಲ್ಲಿನ ಕ್ರಿಕೆಟ್‌ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈಗಾಗಲೇ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅರಬ್ಬರ ನಾಡಿಗೆ ಬಂದಿಳಿದ್ದು, ಟೂರ್ನಿ ಆಯೋಜನೆಯ ಕುರಿತಂತೆ ಯೋಜನೆ ನಡೆಸುತ್ತಿದ್ದಾರೆ.