ಪಾಟ್ನಾ(ಅ.22): ಬಿಹಾರ ವಿಧಾನಸಭಾ ಚುನಾವಣೆ ಸಂಬಂಧ ಇಂದು ಬಿಜೆಪಿ ತನ್ನ ಪ್ರಣಾಳಿಕೆ ಜಾರಿ ಮಾಡಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪಾಟ್ನಾದಲ್ಲಿ ಬಿಜೆಪಿಯ ಐದು ಸೂತ್ರ, ಒಂದು ಗುರಿ, 11 ಸಂಕಲ್ಪದ ಕಲ್ಪನೆಯ ದಾಖಲೆ ಜಾರಿಗೊಳಿಸಿದೆ. ಈ ಪ್ರಣಾಳಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ಬಿಹಾರಾದ್ಯಂತ ಉಚಿತ ಕೊರೋನಾ ಲಸಿಕೆ ಹಾಗೂ 19 ಲಕ್ಷ ಉದ್ಯೋಗ ಕಲ್ಪಿಸುವ ಮಾತು ಕೊಟ್ಟಿದೆ.

ಐದು ವರ್ಷದಲ್ಲಿ ಐದು ಲಕ್ಷ ಉದ್ಯೋಗ ನೀಡುವ ಘೋಷಣೆ:

ಬಿಜೆಪಿ ಜಾರಿಗೊಳಿಸಿದ ಈ ಪ್ರಣಾಳಿಕೆ ಜೊತೆ ವಿಡಿಯೋ ಒಂದನ್ನೂ ಜಾರಿಗೊಳಿಸಿದೆ. ಇದನ್ನು ಟ್ವೀಟ್ ಹಾಗೂ ಫೆಸ್‌ಬುಕ್ದ ಖಾತೆಯಲ್ಲೂ ಶೇರ್ ಮಾಡಿಕೊಂಡಿದ್ದಾರೆ. ಇಲ್ಲಿ ಮುಂದಿನ ಐದು ವರ್ಷಗಳಲ್ಲಿ ಐದು ಲಕ್ಷ ಉದ್ಯೋಗ ಕಲ್ಪಿಸುವ ಭರವಸೆ ನೀಡಿದೆ. ಜೊತೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುfದಾಗಿಯೂ ತಿಳಿಸಿದೆ. ಅಲ್ಲದೇ ಬಿಹಜಾರದಲ್ಲಿ ಒಂದು ಕೋಟಿ ಮಹಿಳೆಯರನ್ನು ಸ್ವಾವಲಂಭಿಯಾಗಿಸುವ ಸಂಕಲ್ಪವನ್ನೂ ಮಾಡಿದೆ.

ಬಿಜೆಪಿ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳುಬಿಹ

* ಬಿಹಾರದ ಪ್ರತಿಯೊಬ್ಬರಿಗೂ ಫ್ರೀ ಕೊರೋನಾ ಲಸಿಕೆ

* 2025 ರೊಳಗೆ ದರ್‌ಭಂಗಾದಲ್ಲಿ ಏಮ್ಸ್‌ ಆಸ್ಪತ್ರೆ ನಿರ್ಮಾಣ

* ಎಂಎಸ್‌ಪಿಯಲ್ಲಿ ರೈತರ ಬೆಳೆ ಖರೀದಿ

* ಉನ್ನತ ಶಿಕ್ಷಣ ವಿಶ್ವವಿದ್ಯಾನಿಲಯ ಹಾಗೂ ಸಂಸ್ಥೆಗಳಲ್ಲಿ ಮೂರು ಲಕ್ಷ  ಉಪನ್ಯಾಸಕರ ನೇಮಕ

* ಬಿಹಾರದಲ್ಲಿ ನೆಕ್ಸ್ಟ್‌ ಜನರೇಷನ್ ಐಟಿ ಹಬ್‌ ಆಗಿ ಅಭಿವೃದ್ಧಿ ಪಡಿಸಿ ಮುಂದಿನ ಐದು ವರ್ಷಗಳಲ್ಲಿ ಐದು ಲಕ್ಷಕ್ಕೂ ಅಧಿಕ ಉದ್ಯೋಗ

* ಐವತ್ತು ಸಾವಿರ ಕೋಟಿ ವ್ಯವಸ್ಥೆ ಮಾಡಿ ಒಂದು ಕೋಟಿ ಮಹಿಳೆಯರನ್ನು ಸ್ವಾವಲಂಭಿಯಾಗಿಸುವ ಯೋಜನೆ

*  2022ರವರೆಗೆ 30 ಲಕ್ಷ ಮಂದಿಗೆ ಮನೆ ನಿರ್ಮಾಣ

* ಮೆಡಿಕಲ್, ಇಂಜಿನಿಯರಿಂಗ್ ಹಾಘೂ ತಂತ್ರಜ್ಞಾನ ಶಿಕ್ಷಣವನ್ನು ಹಿಂದಿಯಲ್ಲಿ ಆರಂಭಿಸುವ ಭರವಸೆ

* ಮೀನು ಉತ್ಪಾದನೆಯಲ್ಲಿ ಬಿಹಾರವನ್ನು ದೇಶದ ನಂಬರ್ ವನ್ ರಾಜ್ಯವನ್ನಾಗಿಸುವ ಯತ್ನ