Asianet Suvarna News Asianet Suvarna News

ಮತ್ತೊಮ್ಮೆ ದೇಶವಿಭಜನೆ ಮಾಡಲು ಕಾಂಗ್ರೆಸ್‌ ಹುನ್ನಾರ, ಯುಪಿ ಸಿಎಂ ಆದಿತ್ಯನಾಥ್‌ ಆಕ್ರೋಶ


ಆದಿತ್ಯನಾಥ್ ಅವರು ಬಿಜೆಪಿ ಅಭ್ಯರ್ಥಿ ರಾಮ್ ಸತ್ಪುಟೆಗಾಗಿ ಸೊಲ್ಲಾಪುರದಲ್ಲಿ ಸಮಾವೇಶ ನಡೆಸಿದರು. ನಂತರ ಸಾಂಗ್ಲಿ ಮತ್ತು ಕೊಲ್ಲಾಪುರದ ಹತ್ಕನಂಗಲೆ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಜಯ್‌ಕಾಕಾ ಪಾಟೀಲ್ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಧೈರ್ಯಶೀಲ ಮಾನೆ ಪರ ಮತಯಾಚಿಸಿದರು. ಎಲ್ಲಾ ಮೂರು ಸ್ಥಾನಗಳಿಗೆ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.
 

UP CM Yogi Adityanath  says Congress leading nation towards a second Partition san
Author
First Published May 2, 2024, 1:23 PM IST


ಮುಂಬೈ (ಮೇ.2):  ಕಾಂಗ್ರೆಸ್ ದೇಶವನ್ನು ಇಸ್ಲಾಮೀಕರಣ ಮಾಡಲು ಯತ್ನಿಸುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಆರೋಪಿಸಿದ್ದಾರೆ. ಕಾಂಗ್ರೆಸ್ ಭಾರತವನ್ನು "ಎರಡನೇ ವಿಭಜನೆ" ಯತ್ತ ಕೊಂಡೊಯ್ಯುತ್ತಿದೆ ಎಂದೂ ಆರೋಪಿಸಿದ ಅವರು,  'ಹಿಂದೂ ಭಯೋತ್ಪಾದನೆ' ಎಂಬ ಪದವನ್ನು ಸೃಷ್ಟಿಸಿದ್ದಕ್ಕಾಗಿ ಕಾಂಗ್ರೆಸ್‌ ಪಕ್ಷವನ್ನು ಖಂಡನೆ ಮಾಡಿದರು. ಆದಿತ್ಯನಾಥ್ ಅವರು ಮಹಾಯುತಿ-ಎನ್‌ಡಿಎ ಅಭ್ಯರ್ಥಿಗಳನ್ನು ಬಲಪಡಿಸಲು ಮಹಾರಾಷ್ಟ್ರದಲ್ಲಿ ಸರಣಿ ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಪಶ್ಚಿಮ ಮಹಾರಾಷ್ಟ್ರದ ಈಗಾಗಲೇ ತಮ್ಮ ಪ್ರಚಾರವನ್ನು ಮುಗಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಸೋಲಾಪುರದಲ್ಲಿ ಬಿಜೆಪಿಯ ರಾಮ್ ಸತ್ಪುಟೆ ಮತ್ತು ನಂತರ ಸಾಂಗ್ಲಿ ಮತ್ತು ಕೊಲ್ಲಾಪುರದ ಹತ್ಕನಂಗಲೆ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಜಯ್‌ಕಾಕಾ ಪಾಟೀಲ್ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಧೈರ್ಯಶೀಲ ಮಾನೆ ಅವರನ್ನು ಬೆಂಬಲಿಸಲು ಸಾರ್ವಜನಿಕ ಸಮಾವೇಶ ನಡೆಸಿದರು. ಎಲ್ಲಾ ಮೂರು ಸ್ಥಾನಗಳಿಗೆ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

ಭಗವಾನ್ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದ್ದಕ್ಕಾಗಿ ಮತ್ತು ದೇಶಾದ್ಯಂತ ಮುಸ್ಲಿಮರಿಗೆ ಗೋಹತ್ಯೆ ಮಾಡಲು ಅವಕಾಶ ನೀಡಿದ್ದಕ್ಕಾಗಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ನೋಡಿ. ಅಲ್ಪಸಂಖ್ಯಾತರಿಗೆ ಅವರವರ ಇಷ್ಟದ ಆಹಾರವನ್ನು ಹೊಂದಲು ಇದು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.. ಇದು ಹಸುಗಳನ್ನು ಮುಕ್ತವಾಗಿ ವಧೆ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಭಾರತ ಇದನ್ನು ಒಪ್ಪಿಕೊಳ್ಳುತ್ತದೆಯೇ? ಎಂದು ಆದಿತ್ಯನಾಥ್ ಹೇಳಿದ್ದಲ್ಲದೆ,  ಕಾಂಗ್ರೆಸ್‌ಗೆ ಮತ ಹಾಕುವುದು ಪಾಪ ಮಾಡಿದಂತೆ ಎಂದಿದ್ದಾರೆ.

ದೇಶದ ಗಡಿಗಳು ಅಸುರಕ್ಷಿತವಾಗಿದ್ದವು,  ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ಮತ್ತು ನಕ್ಸಲಿಸಂ ತಾಂಡವವಾಡುತ್ತಿತ್ತು. ಕೇಂದ್ರದಲ್ಲಿ ಹತ್ತು ವರ್ಷಗಳ ಬಿಜೆಪಿ ಆಡಳಿತದಿಂದ ವಿಶ್ವದಲ್ಲಿ ಭಾರತದ ಸ್ಥಾನಮಾನ ದೊಡ್ಡ ಮಟ್ಟದಲ್ಲಿ ಹೆಚ್ಚಿದೆ ಎಂದು ಹೇಳಿದ್ದಾರೆ.

'ಹಿಂದೂ ಸಮುದಾಯವನ್ನು ಅವಮಾನಿಸಲು 'ಹಿಂದೂ ಭಯೋತ್ಪಾದನೆ' ಎಂಬ ಪದವನ್ನು ಸೃಷ್ಟಿಸಿದ್ದು ಕಾಂಗ್ರೆಸ್. ಆಗ ಯುಪಿಎ ಅಧಿಕಾರದಲ್ಲಿತ್ತು. ಇಂದು ನಮ್ಮ ಗಡಿಯನ್ನು ಯಾರೂ ದಾಟಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆ ಮತ್ತು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರಗಳ ವೈಫಲ್ಯವನ್ನು ಅವರು ಟೀಕಿಸಿದರು. ಪ್ರಸ್ತುತ ಭಾರತದಲ್ಲಿ ಒಂದು ಘಟನೆ ನಡೆದರೆ, ಪಾಕಿಸ್ತಾನವು 'ನವ ಭಾರತ'ದ ಸಂಕಲ್ಪವನ್ನು ಗುರುತಿಸಿ ಶೀಘ್ರವಾಗಿ ವಿವರಣೆಯನ್ನು ನೀಡುತ್ತದೆ ಎಂದಿದ್ದಾರೆ.

ಏ.23, 24ಕ್ಕೆ ರಾಜ್ಯಕ್ಕೆ ಶಾ, ಯೋಗಿ ಆಗಮನ: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಬೃಹತ್ ಸಮಾವೇಶ

"ಈ 'ನವ ಭಾರತ' ಸಾರ್ವಭೌಮತ್ವವನ್ನು ಗೌರವಿಸುತ್ತದೆ ಮತ್ತು ಅನಗತ್ಯ ಹಸ್ತಕ್ಷೇಪದಿಂದ ದೂರವಿರುತ್ತದೆ, ಆದರೆ ಇದು ಪ್ರಚೋದನೆಗಳಿಗೆ ಖಂಡಿತಾಗಿ ಪ್ರತಿಕ್ರಿಯೆ ನೀಡುತ್ತದೆ. ಇದು ಕಾಂಗ್ರೆಸ್ ಕಾಲದ ಭಾರತವಲ್ಲ, ಅಲ್ಲಿ ತಾಳ್ಮೆ ಮತ್ತು ಶಾಂತಿಗಾಗಿ ವಿನಂತಿ ಮಾಡಲಾಗುತ್ತಿತ್ತು. ಯಾರಾದರೂ ಇಂದು ನಮ್ಮ ಕೆನ್ನೆಗೆ  ಹೊಡೆದರೆ, ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ  ಎಂದು ಹೇಳಿದರು.

ಗೂಂಡಾ, ಕ್ರಿಮಿನಲ್‌ಗಳಿಗೆ ರಾಮ್ ನಾಮ್ ಸತ್ಯ ಗತಿ, ಸಿಎಂ ಯೋಗಿ ಆದಿತ್ಯನಾಥ್ ವಾರ್ನಿಂಗ್

“ಕಾಂಗ್ರೆಸ್ ರಾಮನ ಅಸ್ತಿತ್ವವನ್ನು ಪ್ರಶ್ನಿಸಿತು. ರಾಮಜನ್ಮಭೂಮಿ ಆಂದೋಲನದ ನಿರ್ಣಯವಾದಾಗ ರಕ್ತದ ನದಿಗಳು ಹರಿಯುತ್ತವೆ ಎಂದಿದ್ದರು. ಮೊದಲಿಗೆ, ಅವರು ಭಗವಾನ್ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದರು ಮತ್ತು ಈಗ ಅವರು ಭಗವಾನ್ ರಾಮ ಎಲ್ಲರಿಗೂ ಸೇರಿದವರು ಎಂದು ಹೇಳುತ್ತಾರೆ. ಇದು ಅವರು ದ್ವಂದ್ವ ನೀತಿಗೆ ಉದಾಹರಣೆ”ಎಂದು ಹೇಳಿದರು. ಪಿತ್ರಾರ್ಜಿತ ತೆರಿಗೆಯನ್ನು ಜಿಜ್ಯಾಗೆ ಹೋಲಿಸಿದ ಅವರು, "ಭಾರತವು ಈ ಪಿತ್ರಾರ್ಜಿತ ತೆರಿಗೆಯನ್ನು ಎಂದಿಗೂ ಸ್ವೀಕರಿಸುವುದಿಲ್ಲ" ಎಂದು ಯುಪಿ ಮುಖ್ಯಮಂತ್ರಿ ಹೇಳಿದರು.

Latest Videos
Follow Us:
Download App:
  • android
  • ios