ಪ್ರಾಣಿಗಳ ಗರ್ಭಧಾರಣೆಯ ಅವಧಿಯು ಅವುಗಳ ದೇಹ ರಚನೆಗೆ ಅನುಗುಣವಾಗಿ ಬದಲಾಗುತ್ತದೆ. ಮನುಷ್ಯರಂತೆಯೇ ಸುಮಾರು 230 ದಿನಗಳ ಕಾಲ ಗರ್ಭಧರಿಸಿ ಮರಿಗೆ ಜನ್ಮ ನೀಡುವ ಪ್ರಾಣಿ ಚಿಂಪಾಂಜಿ. ಹೆರಿಗೆಯ ನಂತರವೂ ತಾಯಿ ಚಿಂಪಾಂಜಿಯು ತನ್ನ ಮರಿಯನ್ನು ಮನುಷ್ಯರಂತೆಯೇ ಆರೈಕೆ ಮಾಡುತ್ತದೆ.
ಮಾನವರಲ್ಲಿ ಸಾಮಾನ್ಯವಾಗಿ ಗರ್ಭಧಾರಣೆ ಅವಧಿ ಸುಮಾರು ಒಂಭತ್ತು ತಿಂಗಳು ಆಗಿರುತ್ತದೆ. ಆರಂಭದಿಂದ ಗರ್ಭದಲ್ಲಿ ಭ್ರೂಣವು ಹಂತ ಹಂತವಾಗಿ ಬೆಳವಣಿಗೆಯಾಗಿ ಒಂಭತ್ತು ತಿಂಗಳ ನಂತರ ಮಗು ಜನಿಸುತ್ತದೆ. ಮಾನವನ ರೀತಿ ಪ್ರಾಣಿ ಜಗತ್ತಿನ ಎಲ್ಲ ಜೀವಿಗಳು ಇದೇ ರೀತಿ ಒಂಭತ್ತು ತಿಂಗಳು ಗರ್ಭಧಾರಣೆ ಮಾಡುತ್ತವಾ?
ಇಲ್ಲ. ಮನುಷ್ಯರ ರೀತಿಯಲ್ಲೇ ಗರ್ಭಧಾರಣೆ ಅವಧಿ ಇರುವುದಿಲ್ಲ. ಪ್ರತಿಯೊಂದು ಪ್ರಾಣಿಯ ದೇಹ ರಚನೆ, ವರ್ಗ, ಬೆಳವಣಿಗೆಯ ವೇಗಕ್ಕೆ ಅನುಗುಣವಾಗಿ ಗರ್ಭಧಾರಣೆ ಅವಧಿ ಬದಲಾಗುತ್ತೆ. ಕೆಲವು ಪ್ರಾಣಿಗಳು ಕೆಲವೇ ವಾರಗಳಲ್ಲಿ ಮರಿಗಳು ಜನಿಸಿದರೆ, ಇನ್ನೂ ಕೆಲವು ಪ್ರಾಣಿಗಳಲ್ಲಿ ಹಲವು ತಿಂಗಳುಗಳವರೆಗೆ ಗರ್ಭಧಾರಣೆ ಇರುತ್ತದೆ. ಉದಾಹರಣೆಗೆ ನಾಯಿ, ಬೆಕ್ಕುಗಳಲ್ಲಿ ಸುಮಾರು ಎರಡು ತಿಂಗಳ ಅವಧಿ ಇದ್ದರೆ, ಆನೆ ಸುಮಾರು 22 ತಿಂಗಳು ಗರ್ಭಧಾರಣೆ ಇರುತ್ತದೆ. ಕೆಲವು ಪ್ರಾಣಿಗಳು ತಮ್ಮ ಮರಿಗಳನ್ನು ಹಲವಾರು ತಿಂಗಳುಗಳು ಅಥವಾ ವರ್ಷಗಳವರೆಗೆ ಹೊತ್ತೊಯ್ಯುತ್ತವೆ.
ಯಾವ ಪ್ರಾಣಿ 230 ದಿನಗಳ ನಂತರ ಜನ್ಮ ನೀಡುತ್ತದೆ?
ಚಿಂಪಾಂಜಿ ಗರ್ಭಧಾರಣೆಯ ಅವಧಿ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅದು ಸುಮಾರು 230 ದಿನಗಳ ನಂತರ ಮರಿಗೆ ಜನ್ಮ ನೀಡುತ್ತದೆ! ಚಿಂಪಾಂಜಿಗಳು, ದೊಡ್ಡ ಮಂಗಗಳು ಅವು ಮಾನವರ ಹತ್ತಿರದ ಸಂಬಂಧಿಗಳಾಗಿವೆ. ಅವುಗಳ ಗರ್ಭಧಾರಣೆಯು ಅನೇಕ ಸಣ್ಣ ಸಸ್ತನಿಗಳಿಗಿಂತ ಹೆಚ್ಚು ಕಾಲ ಇರುತ್ತದೆ. ನಿಖರವಾದ ಗರ್ಭಾವಸ್ಥೆಯ ಅವಧಿಯು ಚಿಂಪಾಂಜಿಗಳ ನಡುವೆ ಸ್ವಲ್ಪ ಬದಲಾಗಬಹುದು ಆದರೆ ಸಾಮಾನ್ಯವಾಗಿ ಮರಿಗಳಿಗೆ ಜನ್ಮನೀಡಲು ಸುಮಾರು 230 ದಿನಗಳು ಅವಧಿ ಬೇಕಾಗುತ್ತದೆ.
ಮನುಷ್ಯರಂತೆಯೇ ಚಿಂಪಾಂಜಿಗೂ ಹೆರಿಗೆ ನೋವು ಕಾಣುತ್ತದೆಯೇ?
ಅಂದರೆ ಮರಿಗಳಿಗೆ ಜನ್ಮ ನೀಡಲು ಮಾನವರಂತೆಯೇ ತುಸು ಕಮ್ಮಿ ಏಳೂವರೆ ತಿಂಗಳು ಗರ್ಭಾವಸ್ಥೆ ಅವಧಿ ಹೊಂದಿರುತ್ತವೆ. ಅವುಗಳ ಗರ್ಭಧಾರಣೆ ಅವಧಿ ಮನುಷ್ಯರ ಗರ್ಭಾವಧಿಯನ್ನ ಹೋಲುತ್ತದೆ. ಅಂದರೆ ಹೆಣ್ಣು ಚಿಂಪಾಂಜಿಯು ಹೆರಿಗೆಯಾಗುವ ಮೊದಲು ಏಳು ತಿಂಗಳಿಗಿಂತ ಹೆಚ್ಚು ಕಾಲ ಗರ್ಭದಲ್ಲಿ ಬೆಳೆಯುತ್ತಿರುವ ಮಗುವನ್ನು ಹೊತ್ತುಕೊಂಡಿರುತ್ತದೆ. ಈ ಅವಧಿಯಲ್ಲಿ ಭ್ರೂಣವು ಗರ್ಭಾಶಯದೊಳಗೆ ಮಾನವ ರೀತಿಯಲ್ಲೇ ಬೆಳವಣಿಗೆ ಕಂಡುಬರುತ್ತೆ. ಮರಿಗಳ ಜನನದ ನಂತರ ಮಾನವರಂತೆಯೇ ಮರಿಗಳಿಗೆ ತಾಯಿ ಚಿಂಪಾಂಜಿ ಆರೈಕೆ ಮಾಡುತ್ತದೆ. ಹೆರಿಗೆಯ ನಂತರ ಮರಿ ಚಿಂಪಾಂಜಿ ತನ್ನ ತಾಯಿಯ ಮೇಲೆ ಹೆಚ್ಚು ಅವಲಂಬಿತವಾಗುತ್ತದೆ. ತಾಯಿ ಚಿಂಪಾಂಜಿ ಮರಿಗಳಿಗೆ ಆಹಾರ, ರಕ್ಷಣೆ, ಓಡಾಟ ಅಗತ್ಯವಾಗಿ ಬದುಕುಳಿಯುವ ಕೌಶಲ್ಯಗಳನ್ನು ತಾಯಿ ಚಿಂಪಾಂಜಿಯೇ ಕಲಿಸುತ್ತದೆ.
ಮರಿಗಳಿಗೆ ಜನ್ಮ ನೀಡಿದ ಬಳಿಕ ಚಿಂಪಾಂಜಿ ಜವಾಬ್ದಾರಿ ಹೆಚ್ಚುತ್ತೆ
ಚಿಂಪಾಂಜಿ ಶಿಶುಗಳು ಜನನದ ನಂತರ ಅಬ್ಬಾ ಭಾರ ಇಳಿತು ಅಂತಾ ತಕ್ಷಣ ಮರಿಗಳನ್ನ ಬಿಟ್ಟು ಸ್ವಾತಂತ್ರ್ಯವಾಗಿ ಹೊರಟುಬಿಡುವುದಿಲ್ಲ, ಮಾನವರಂತೆಯೇ ಮರಿಗಳಿಗೆ ಜನ್ಮ ನೀಡಿದ ಬಳಿಕ ಇನ್ನಷ್ಟು ಜವಾಬ್ದಾರಿ ಹೆಚ್ಚುತ್ತದೆ. ಮರಿಗಳ ಆರೈಕೆ, ಪೋಷಣೆ, ಆಹಾರದ ನೀಡುವುದರ ಜೊತೆಗೆ ಮರಿಗಳೊಂದಿಗೆ ಸಮಯವನ್ನು ಕಳೆಯುತ್ತವೆ.
ಚಿಕ್ಕ ಚಿಂಪಾಂಜಿಗಳು ತಮ್ಮ ಸಮುದಾಯದ ಗುಂಪುಗಳನ್ನ ಗುರುತಿಸುತ್ತವೆ. ಕೇವಲ ಪರಿಚಿತ ಚಿಂಪಾಂಜಿಗಳೊಂದಿಗೆ ಮಾತ್ರ ಬೆರೆಯುತ್ತವೆ. ಕ್ರಮೇಣ ಮರ ಹತ್ತುವುದು, ಆಹಾರ ಹುಡುಕುವುದು ಇತರ ಚಿಂಪಾಂಜಿಗಳೊಂದಿಗೆ ಸಂವಹನ ನಡೆಸುವಂತಹ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತವೆ.


