ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಕೊಲ್ಲಾಪುರದಿಂದ ಬಂದ ರೈಲಿನ ಬೋಗಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಆಸನದ ಕೆಳಗೆ ಅರೆಬೆತ್ತಲೆ, ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದ್ದು, ಬಲ ತ್ಕಾರ ವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಧಾರವಾಡ (ಆ.30): ರೈಲ್ವೆ ಬೋಗಿಯಲ್ಲಿ ಅರೆಬೆತ್ತಲೆಯಲ್ಲಿ ಮಲಗಿದಂತಿರುವ ಮಹಿಳೆಯ ಶವ ಪತ್ತೆಯಾದ ಘಟನೆ ಇಂದು ಬೆಳಗ್ಗೆ ಧಾರವಾಡ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ರೈಲ್ವೆ ಸೀಟಿನ ಕೆಳಗೆ ಶವ ಕಂಡು ಸಿಬ್ಬಂದಿ ಶಾಕ್!
ಕೊಲ್ಲಾಪುರದಿಂದ ಧಾರವಾಡಕ್ಕೆ ಇಂದು ಬೆಳಗ್ಗೆ ಬಂದಿದ್ದ ರೈಲಿನಲ್ಲಿ ಘಟನೆ ನಡೆದಿದೆ. ಪ್ರಯಾಣಿಕರು ಇಳಿಯುತ್ತಿದ್ದಂತೆ ರೈಲ್ವೆ ಸಿಬ್ಬಂದಿ ಬೋಗಿಗಳ ತಪಾಸಣೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಸೀಟಿನ ಕೆಳಗೆ ಮಲಗಿದಂತೆ ರಕ್ತಸಿಕ್ತ ಸ್ಥಿತಿಯಲ್ಲಿ ಮಹಿಳೆಯ ಶವ ಕಂಡು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಇದೇ ರೈಲಿನಲ್ಲಿ ಮಹಿಳೆ ಪ್ರಯಾಣಿಸಿದ್ದು ರಾತ್ರಿ ಒಂಟಿಯಾಗಿ ಪ್ರಯಾಣಿಸುವುದು ತಿಳಿದು ದುಷ್ಕರ್ಮಿಗಳು ಬಲತ್ಕಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಮಹಿಳೆ ಎಲ್ಲಿಯವರು? ಎಲ್ಲಿಗೆ ಪ್ರಯಾಣ ಬೆಳಸಿದ್ದರು ಎಂಬ ಬಗ್ಗೆ ಗುರುತು ಸಿಕ್ಕಿಲ್ಲ.
ಸ್ಥಳಕ್ಕೆ ರೈಲ್ವೆ ಪೊಲೀಸರು ದೌಡು
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ರೈಲ್ವೆ ಪೊಲೀಸರು, ಮೃತ ಮಹಿಳೆಯ ಗುರುತು ಪತ್ತೆ ಹಚ್ಚಲು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಹಿಳೆ ಎಲ್ಲಿಂದ ರೈಲ್ವೆಗೆ ಹತ್ತಿದ್ದಾಳೆ. ಬಲತ್ಕಾರ ಮಾಡಿ ಕೊಂದಿರುವ ದುಷ್ಕರ್ಮಿಗಳು ಯಾರು ಎಂಬ ಬಗ್ಗೆ ತನಿಖೆ, ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿರುವ ಪೊಲೀಸರು. ಧಾರವಾಡ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


