ಚಿಕ್ಕಮಗಳೂರಿನ ಬರದ ನಾಡಲ್ಲಿ ಉಕ್ಕಿದೆ ನೀರು

ಚಿಕ್ಕಮಗಳೂರು ಜಿಲ್ಲೆಯ ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು ಎಂಬ ಕುಖ್ಯಾತಿಗೆ ಒಳಗಾಗಿರುವ ಕಡೂರಿನಲ್ಲಿ ಬೋರ್ವೆಲ್’ನಿಂದ ನೀರು ನಿರಂತರವಾಗಿ ಚಿಮ್ಮುವ ಮೂಲಕ ಜನರನ್ನು ವಿಸ್ಮಯದಿಂದ ಮುಳುಗುವಂತೆ ಮಾಡಿದೆ.

First Published Nov 15, 2018, 4:22 PM IST | Last Updated Nov 15, 2018, 4:22 PM IST

ಚಿಕ್ಕಮಗಳೂರು ಜಿಲ್ಲೆಯ ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು ಎಂಬ ಕುಖ್ಯಾತಿಗೆ ಒಳಗಾಗಿರುವ ಕಡೂರಿನಲ್ಲಿ ಬೋರ್ವೆಲ್’ನಿಂದ ನೀರು ನಿರಂತರವಾಗಿ ಚಿಮ್ಮುವ ಮೂಲಕ ಜನರನ್ನು ವಿಸ್ಮಯದಿಂದ ಮುಳುಗುವಂತೆ ಮಾಡಿದೆ.

ಸೋಮೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ವರ್ಷದ ಹಿಂದೆ ಕೊರೆಸಿದ್ದ ಬೋರ್ವೆಲ್’ನಲ್ಲಿ ಮೊದಲು ಅರ್ಧ ಇಂಚು ನೀರು ಬರುತಿತ್ತು. ಇದೀಗ 2 ದಿನಗಳಿಂದ ನೀರು ನಿರಂತರವಾಗಿ ಚಿಮ್ಮುತ್ತಿದೆ. ಈ ವಿಸ್ಮಯ ಕಂಡು ಸೋಮೇಶ್ವರ ಸ್ವಾಮಿಯ ಶಕ್ತಿಗೆ ಉಘೇ ಅಂತ ಭಕ್ತರು ಕೈಮುಗಿಯುತ್ತಿದ್ದಾರೆ.