
ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದ ವನ್ಯಜೀವಿ ರಹಸ್ಯ
ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ವೈವಿಧ್ಯಮಯ ವನ್ಯಜೀವಿಗಳಿವೆ. ಇಲ್ಲಿನ ದರೋಜಿ ಪ್ರದೇಶವನ್ನು ಕರಡಿ ಧಾಮವೆಂದು ಘೋಷಿಸಲಾಗಿದ್ದು, ಇದು ಕರಡಿಗಳ ಸಂತತಿ ಹೆಚ್ಚಳಕ್ಕೆ ಕಾರಣವಾಗಿದೆ. ಈ ಧಾಮದಲ್ಲಿ ಚಿರತೆ, ಮುಳ್ಳುಹಂದಿ ಮತ್ತು ಕಾಡುಹಂದಿಗಳೂ ಕಂಡುಬರುತ್ತವೆ.
ಈಗಿನ ವಿಜಯನಗರ ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆ ಪಕ್ಕದಲ್ಲೇ ಇರುವ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ವೈವಿಧ್ಯಮಯ ವನಸಿರಿ ಇದೆ. ಇಲ್ಲಿ ಚಂದನದ ಚಿರತೆ ಕಂಡುಬರುತ್ತದೆ. ಹಗರಿಬೊಮ್ಮನಹಳ್ಳಿ ಸುತ್ತಲಿನ ಜಾಗದಲ್ಲಿ ಈ ಚಿರತೆ ಕಾಣಿಸಿಕೊಂಡಿತ್ತು. ಈ ಪ್ರದೇಶ ನೈಸರ್ಗಿಕವಾಗಿ ಕರಡಿಗಳಿಗೆ ಅತ್ಯಂತ ಪ್ರಾಶಸ್ತ್ಯ ಸ್ಥಳವಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ಈ ಜಾಗವನ್ನು ಅಂದರೆ ದರೋಜಿ ಪ್ರದೇಶವನ್ನು ಕರಡು ಧಾಮ ಎಂದು ಘೋಷಣೆ ಮಾಡಲಾಗಿದೆ.
ಕರಡಿಗಳ ಆಹಾರ ಕ್ರಮದಲ್ಲಿ ಕೀಟಗಳೇ ಮುಖ್ಯ ಆಹಾರ. ಗೆದ್ದಲು, ಇರುವೆಗಳೇ ಮುಖ್ಯ ಆಹಾರ. ಇನ್ನು ಮಳೆಗಾಲ ಸೀಸನ್‌ನಲ್ಲಿ ಹಣ್ಣುಗಳು ಮತ್ತು ಗೆಡ್ಡೆ, ಗೆಣಸುಗಳನ್ನು ತಿನ್ನುತ್ತವೆ. ಇಲ್ಲಿ ಮರಿಗಳನ್ನು ಅತ್ಯಂತ ಸುರಕ್ಷಿತವಾಗಿ ಕರಡಿಗಳು ನೋಡಿಕೊಳ್ಳುತ್ತವೆ. ಕರಡಿಗಳು ತಮ್ಮ ಮಕ್ಕಳನ್ನು ಬೆನ್ನ ಮೆಲೆಯೇ ಕೂರಿಸಿಕೊಂಡು ಹೋಗುತ್ತವೆ. ಒಂದು ಅವಧಿಯಲ್ಲಿ ಕರಡಿ ಕುಣಿತ ಹಾಗೂ ಕರಡಿಗಳು ಇರುವ ಕಾಡಿನ ರಕ್ಷಣೆಗೆ ಸರ್ಕಾರ ಕ್ರಮವಹಿಸಿದ ಬೆನ್ನಲ್ಲಿಯೇ ಕರಡಿ ಧಾಮವನ್ನು ನಿರ್ಮಾಣ ಮಾಡಲಾಯಿತು. ಇದೀಗ ಕರಡಿ ಧಾಮ ಮಾಡಿದ್ದರಿಂದ ಕರಡಿಗಳ ಸಂತತಿ ಹೆಚ್ಚಾಗಿದೆ. ಇನ್ನು ಈ ಭಾಗದಲ್ಲಿ ಚಿಪ್ಪುಹಂದಿಗಳು, ಮುಳ್ಳು ಹಂದಿಗಳು, ಕಾಡು ಹಂದಿಗಳ ಸಂಖ್ಯೆಯೂ ಹೆಚ್ಚಾಗಿದೆ.