ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರು ಬೆಟ್ಟದಲ್ಲಿ ಚಿಕ್ಕಮ್ಮ ಮತ್ತು ಅಕ್ಕನ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತೆಯಾಗಿದ್ದ ಮಹಿಳೆ, ಅವಿವಾಹಿತ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಇದೇ ಕಾರಣಕ್ಕೆ ಇಬ್ಬರೂ ಈ ದುರಂತ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಕಲಬುರಗಿ: ಸಂಬಂಧದಲ್ಲಿ ಅವರಿಬ್ಬರು ಚಿಕ್ಕಮ್ಮ- ಮಗ. ಆದರೆ ಈ ಹುಚ್ಚಖೋಡಿ ಪ್ರೀತಿ ಈ ಇಬ್ಬರನ್ನು ಅಕ್ಷರಶಃ ಕುರುಡರನ್ನಾಗಿಸಿದೆ. ಆತನೆನೋ ಅವಾಹಿತ. 23 ರ ಹರೆಯದ ಯುವಕ‌. ಇನ್ನು ಆಕೆಗೆ ಗಂಡ ಇದ್ದಾನೆ. ಮುದ್ದಾದ ಮಗು ಇದೆ‌. ಆದರೂ ಈಕೆ ತನ್ನ ಅಕ್ಕಳ ಮಗನ ಜೊತೆಗೆ ಪ್ರೀತಿಯ ಸಂಬಂಧ ಬೆಳೆಸಿದ್ದಳು. ಈ ಕುರುಡು ಪ್ರೀತಿ ಈ ಇಬ್ಬರನ್ನ ಬಲಿ ತೆಗೆದುಕೊಂಡಿದೆ. ಈ ಕುಡಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.

ಸಂಕನೂರು ಬೆಟ್ಟದಲ್ಲಿ ವಿಚಿತ್ರ ಪ್ರೇಮದ ಕರಾಳ ಅಂತ್ಯ!

ಇದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರು ಗ್ರಾಮದ ಹೊರವಲಯದಲ್ಲಿರುವ ಬೆಟ್ಟ ಪ್ರದೇಶ. ಇಲ್ಲಿನ ದಟ್ಟವಾದ ಗಿಡಗಂಟಿಗಳ ನಡುವೆ ಒಂದು ಗಂಡು ಇನ್ನೊಂದು ಹೆಣ್ಣಿನ ಮೃತದೇಹ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಇಬ್ಬರೂ ಒಂದೇ ಮರಕ್ಕೆ, ಒಂದೇ ಬಟ್ಟೆಯಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದು ನಾಲ್ಕು ದಿನಗಳೇ ಕಳೆದು ಹೋಗಿವೆ. ಕುರಿ ಕಾಯುವ ಹುಡುಗರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರವೇ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಬಂದು ಪರಿಶೀಲಿಸುವ ಹೊತ್ತಿಗೆ ಶವ ಕೊಳೆತು ದುರ್ವಾಸನೆ ಬೀರಲು ಆರಂಭಿಸಿದ್ವು. ಶವದ ಫೋಟೋಗಳನ್ನು ಕಳಿಸಿ ವಿಚಾರಿಸಿದಾಗ,ಮೃತರನ್ನು ಯಾದಗಿರಿ ಜಿಲ್ಲೆಯ ಬಾಚವಾರ ಗ್ರಾಮದ 23 ವರ್ಷದ ಬಸವರಾಜ್ ಹಾಗೂ ಚಿತ್ತಾಪುರ ಪಟ್ಟಣದ ಬಸವನಗರ ನಿವಾಸಿ 32 ವರ್ಷದ ಶರಣಮ್ಮ ಭೀಮನಹಳ್ಳಿ ಎಂದು ಗುರುತಿಸಲಾಗಿದೆ.

ಆತನೇನೋ ಅವಿವಾಹಿತ, ಆಕೆಗೆ ಗಂಡ-ಮುದ್ದಾದ ಮಗುವಿದೆ

ಹೀಗೆ ನೇಣಿಗೆ ಕೊರಲೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಇವರಿಬ್ಬರೂ ಸಂಬಂಧಿಕರು. ಈ ಬಸವರಾಜ್ ಅವಿವಾಹಿತನಾದರೆ, ಶರಣಮ್ಮಳಿಗೆ 12 ವರ್ಷಗಳ ಹಿಂದೆಯೇ ಮದುವೆಯಾಗಿದೆ. ಸಭ್ಯ ಗಂಡ, ಮುದ್ದಾದ ಹೆಣ್ಣು ಮಗು ಮನೆಯಲ್ಲಿದ್ದರೂ ಈ ಶರಣಮ್ಮ, ತನ್ನ ಸಂಬಂಧಿಕ ಬಸವರಾಜನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಅಷ್ಟಕ್ಕೂ ಬಸವರಾಜ್, ಈ ಶರಣಮ್ಮಳಿಗೆ ಏನಾಗಬೇಕು ಎನ್ನುವುದು ಗೊತ್ತಾದ್ರೆ ಶಾಕ್ ಆಗ್ತೀರಾ. ಶರಣಮ್ಮಳ ಸಹೋದರಿಯ ಮಗನೆ ಈ ಬಸವರಾಜ್. ಅಂದ್ರೆ ಬಸವರಾಜನ ಪಾಲಿಗೆ ಈಕೆ ಚಿಕ್ಕಮ್ಮ. ತಾಯಿ ಮಗನ ಪವಿತ್ರ ಸಂಬಂಧ ಹೊಂದಿರುವ ಇವರು, ಮಾಡಿದ್ದು ಮಾತ್ರ ಇಡೀ ಸಮಾಜವೇ ತಲೆತಗ್ಗಿಸುವ ಕೆಲಸ.

ಅಕ್ಕನ ಮಗನ ಜೊತೆ ಅಕ್ರಮ ಸಂಬಂಧ!

ಹೊತ್ತಲದ ಹೊತ್ತಲ್ಲಿ ಸಹ ವಿಡಿಯೋ ಕಾಲ್ ಮಾಡಿ ಗಂಟೆಗಟ್ಟಲೆ ಮಾತನಾಡುವುದು, ಆಗಾಗ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೊರಡುವುದು ಸೇರಿದಂತೆ ಇವರ ಸರಸಸಲ್ಲಪ ನಡದೇ ಇತ್ತು. ಈ ವಿಚಾರ ಸ್ವತಃ ಆಕೆಯ ಗಂಡನಿಗೂ ಗೊತ್ತಾದ ನಂತರ ಬೈದು ಬುದ್ಧಿ ಹೇಳಿದ್ದ. ಸಮಾಜ ಮತ್ತು ಸ್ವಾಭಿಮಾನಕ್ಕೆ ಹೆದರಿ, ಮತ್ತು ಮಗಳ ಭವಿಷ್ಯ ಹಾಳಾಗಬಾರದು ಎನ್ನುವ ಕಾರಣಕ್ಕೆ ಹಾಗೂ ಮುಂದಾದರೂ ತಪ್ಪು ತಿದ್ದಿಕೊಳ್ಳಬಹುದು ಎನ್ನುವ ನಿರೀಕ್ಷೆಯಿಂದ ಈಕೆಯ ಗಂಡ ಈಕೆಗೆ ಮತ್ತೆ ಮತ್ತೆ ಅವಕಾಶ ಕೊಡುತ್ತಲೇ ಇದ್ದ. ಅದಾಗಿವೆ ಕಳೆದ ನಾಲ್ಕು ದಿನಗಳ ಹಿಂದೆ, ಮನೆ ಬಿಟ್ಟು ಬಸವರಾಜನ ಜೊತೆ ಬೈಕ್ ಹತ್ತಿ ಹೊರಟವಳು, ಸದ್ಯ ಆತನೊಂದಿಗೆ ಹೆಣವಾಗಿ ಪತ್ತೆಯಾಗಿದ್ದಾಳೆ.

ಚಿಕ್ಕಮ್ಮ-ಮಗ ಎನ್ನುವ ಪವಿತ್ರ ಸಂಬಂಧವನ್ನೇ ಸಾಯಿಸಿದವರು, ಶವವಾಗಿದ್ದರೂ ಏಕೆ?

ಇವರು ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಒಂದೂವರೆ ಕಿಲೋಮೀಟರ್ ಕಾಲ್ನಡಿಗೆಯ ಮೂಲಕ ಮಾತ್ರ ಹೋಗಬಹುದಾಗಿದೆ. ಆ ಸ್ಥಳದಿಂದ ಕೊಳತ ಶವಗಳನ್ನ ಆಸ್ಪತ್ರೆಗೆ ಸಾಗಿಸಲು ಪೊಲೀಸರು ಪಟ್ಟ ಕಷ್ಟ ಅತಿಷ್ಟಲ್ಲ. ಸದ್ಯ ಚಿತ್ತಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳ ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

ಸಂಕನೂರು ಬೆಟ್ಟದಲ್ಲಿ ನಡೆದ ಈ ಘಟನೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಅಕ್ರಮ ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆಯೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯಿಂದಷ್ಟೇ ನಿಜವಾದ ಕಾರಣ ಹೊರಬರಬೇಕಿದೆ. (ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ)