ಗಣೇಶ ಹಬ್ಬದ ಹೊಸ್ತಿಲಲ್ಲಿ, ಹೂವು, ಹಣ್ಣು, ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಹಬ್ಬದ ಪೂಜೆಗೆ ಅಗತ್ಯವಿರುವ ವಸ್ತುಗಳ ದರ ದುಪ್ಪಟ್ಟಾಗಿದ್ದು, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈ ಲೇಖನದಲ್ಲಿ ಬೆಂಗಳೂರಿನ ಮಾರುಕಟ್ಟೆಯಲ್ಲಿನ ಇಂದಿನ ಸಂಪೂರ್ಣ ದರಪಟ್ಟಿಯನ್ನು ನೀಡಲಾಗಿದೆ.
ಬೆಂಗಳೂರು (ಸೆ.13): ಗಣೇಶ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಎಲ್ಲೆಡೆ ಗಣಪತಿಪೂರ್ತಿಯನ್ನ ಭರ್ಜರಿಯಾಗಿ ಸ್ಥಾಪಿಸುತ್ತಿದ್ದಂತೆ ಇತ್ತ ಮಾರ್ಕೆಟ್‌ನಲ್ಲಿ ಹೂವು, ಹಣ್ಣು ತರಕಾರಿ ಬೆಲೆಗಳು ಗಗನಕ್ಕೇರಿವೆ. ಹಬ್ಬದ ಪೂಜೆಗೆ ಅಗತ್ಯವಿರುವ ಹಣ್ಣುಗಳು, ಹೂಗಳ ದರದಲ್ಲಂತೂ ಭಾರೀ ಏರಿಕೆಯಾಗಿದೆ. ಬೆಲೆ ಏರಿಕೆಯಾದರೂ ಜನ ಖರೀದಿಸಲು ಮುಗಿಬಿದ್ದಿದ್ದಿದ್ದಾರೆ.
ಹಬ್ಬಕ್ಕೆ ಶಾಕ್ ಕೊಟ್ಟ ದರ ಏರಿಕೆ
ಹೂವು ಹಣ್ಣುಗಳಲ್ಲದೆ ದಿನಸಿ ಸಾಮಾನು, ಹಬ್ಬದ ಸಾಮಗ್ರಿ ಕೂಡ ಬೆಲೆ ಏರಿಕೆಯಾಗಿದೆ. ಹಬ್ಬದ ಸಂಭ್ರಮದಲ್ಲಿ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಸಾಮಾನ್ಯ ದಿನಗಳಲ್ಲಿ ಇದ್ದ ಹೂವಿನ ತೋರಣಗಳಿಗೆ ಇಂದು ಡಬಲ್ ಬೆಲೆ ಏರಿಕೆಯಾಗಿದೆ. ಯಾವ್ಯಾವ ಹೂಗಳು ಬೆಲೆ ಎಷ್ಟಿದೆ ಅಂತಾ ಇಂದಿನ ದರದಂತೆ ಇಲ್ಲಿ ಪಟ್ಟಿ ಸಿದ್ಧಪಡಿಸಲಾಗಿದೆ. ನೀವು ಹೂವು ಖರೀದಿಸುವ ಮುನ್ನ ಈ ಪಟ್ಟಿಯನ್ನು ಒಮ್ಮೆ ನೋಡಿ.
ಹೂಗಳ ಬೆಲೆ ಎಷ್ಟು
- ಸೇವಂತಿಗೆ 1kg : ₹350
- ತಾವರೆ ಹೂವು (ಜೋಡಿ) : ₹50
- ಗುಲಾಬಿ (ಬಟನ್) : 1kg ಗೆ 350
- ಮಿಕ್ಸ್ ಹೂವು : 1kg : ₹300 - ₹400
- ಕನಕಾಂಬರ (ಮೊಳ) : ₹50 : ₹2000 (1kg)
- ಮಲ್ಲಿಗೆ (ಮೊಳ) : ₹50 : ₹1000 (1kg)
- ತುಳಸಿ ತೋರಣ (ಮೊಳ) : ₹60
- ಮಾವಿನ ಎಲೆ (ಕಟ್ಟು) : ₹10 - ₹30
- ಬಾಳೆ ದಿಂಡು (ಜೋಡಿ) : ₹50 - ₹80
ಇಂದಿನ ಹಣ್ಣುಗಳ ದರ(KG) ಹೇಗಿದೆ?
- ಸೇಬು: ₹200 ರಿಂದ ₹300(1kg)
- ದಾಳಿಂಬೆ: ₹100 ರಿಂದ ₹250(1kg)
- ಸಪೋಟ: ₹150 ರಿಂದ ₹200(1kg)
- ದ್ರಾಕ್ಷಿ: ₹120 ರಿಂದ ₹150 (1kg)
- ಮೂಸಂಬಿ ಹಾಗೂ ಕಿತ್ತಳೆ: ₹80 ರಿಂದ ₹100(1kg)
- ಬಾಳೆ ಹಣ್ಣು- 80 ರಿಂದ 150(1kg)
ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರ ಎಷ್ಟು?
- ಈರುಳ್ಳಿ: ₹60 ರಿಂದ ₹70(1KG)
- ಹನಿಮೆಣಸಿನಕಾಯಿ : 40 ರಿಂದ 60(1KG)
- ಬೀಟ್‌ರೂಟ್: ₹50 ರಿಂದ ₹60(1KG)
- ಬೆಳ್ಳುಳ್ಳಿ: ₹200 ರಿಂದ ₹250
- ನಿಂಬೆಹಣ್ಣು : (ಒಂದಕ್ಕೆ) ₹8 ರಿಂದ ₹15
- ನುಗ್ಗೆಕಾಯಿ : (ಒಂದಕ್ಕೆ)₹10 ರಿಂದ ₹15
- ಕ್ಯಾಪ್ಸಿಕಂ ₹50-₹70
- ಬಟಾಣಿ: ₹ 140 ರಿಂದ 160
ಇಂದಿನ ದಿನಸಿ ಸಾಮಗ್ರಿ ಬೆಲೆ ಎಷ್ಟು?
- ಬೆಲ್ಲ : ₹50 ರಿಂದ ₹55
- ತೊಗರಿಬೇಳೆ : ₹160 ರಿಂದ ₹170
- ಹುರಿಗಡಲೆ :₹150 ರಿಂದ ₹180
- ಕಡಲೆಬೀಜ : ₹100 ರಿಂದ ₹140
- ಸಕ್ಕರೆ : ₹60 ರಿಂದ ₹80
- ಚಿರೋಟಿ ರವೆ : ₹90 ರಿಂದ ₹100
- ಮೈದಾ ಹಿಟ್ಟು : ₹45 ರಿಂದ ₹50
- ಕಡಲೆಕಾಳು : ₹90 ರಿಂದ ₹100
- ಅಡುಗೆ ಎಣ್ಣೆ : ₹190 ರಿಂದ ₹210 (ಆಯಾ ಬ್ರ್ಯಾಂಡ್ಗಳು ಮೇಲೆ ದರ ಬದಲಾಗುತ್ತದೆ.


