ನೇಪಾಳ ಪ್ರವಾಹದಲ್ಲಿ ನಾಯಿ, ಬೆಕ್ಕು, ಜಾನುವಾರ, ಕಾಡು ಪ್ರಾಣಿಗಳು ಕೊಚ್ಚಿ ಹೋಗಿದೆ. ಬಹುತೇಕ ಮೃತಪಟ್ಟಿವೆ. ಈ ಪೈಕಿ ಎರಡು ಗೋಲ್ಡನ್ ರಿಟ್ರೀವರ್ ಪ್ರವಾಹ ನೀರಿನಲ್ಲಿ ಈಜುತ್ತಾ ಉತ್ತರ ಪ್ರದೇಶದಲ್ಲಿ ದಡ ಸೇರಿದೆ. ಈ ನಾಯಿಗಳ ರಕ್ಷಿಸಿದ ಯುವಕ ವಿಶೇಷ ಮನವಿ ಮಾಡಿದ್ದಾರೆ.

ಲಖನೌ (ಆ.30) ನೇಪಾಳ ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋದವರು, ಸಾವಿನ ಸಂಖ್ಯೆಗಳು ಏರಿಕೆಯಾಗುತ್ತಲೇ ಇದೆ. ಹುಡುಕಾಟ, ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ 5 ವರ್ಷದ ಪುಟ್ಟ ಕಂದಮನ್ನು ಮೂರು ದಿನಗಳ ಬಳಿಕ ಅವಶೇಷಗಳಿಡಿಯಿಂದ ಜೀವಂತವಾಗಿ ರಕ್ಷಿಸಲಾಗಿದೆ. ಇದೀಗ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ನೇಪಾಳ ಪ್ರವಾಹದಲ್ಲಿ ಎರಡು ಗೋಲ್ಡನ್ ರಿಟ್ರೀವರ್ ನಾಯಿ ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ಈ ನಾಯಿಗಳು ಹೇಗಾದರೂ ಮಾಡಿ ಪ್ರವಾಹ ನೀರಿನಿಂದ ಮೇಲೆ ಬರಲು ಪ್ರಯತ್ನಿಸಿದೆ. ಆದರೆ ಪ್ರವಾಹ ನೀರಿನಲ್ಲೇ ಕೊಚ್ಚಿ ಹೋದ ಈ ಎರಡು ನಾಯಿಗಳು ಈಜುತ್ತಾ ಉತ್ತರ ಪ್ರದೇಶದಲ್ಲಿ ದಡ ಸೇರಿದ ಘಟನೆ ನಡೆದಿದೆ. ಹರಿಯುವ ನೀರಿನಲ್ಲಿನ ನಾಯಿಗಳು ಈಜುತ್ತಾ ದಡ ಸೇರಲು ಪ್ರಯತ್ನಿಸುತ್ತಿದ್ದ ನಾಯಿಗಳನ್ನು ಕಂಡ ಯುವಕ ರಕ್ಷಣೆ ಮಾಡಿದ್ದಾನೆ.

ಮಹಾರಾಜ್‌ಗಂಜ್ ಜಿಲ್ಲೆ ಸೇರಿಕೊಂಡ ಶ್ವಾನ

ನೇಪಾಳ ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋದ ಕೆಲ ಮೃತದೇಹಗಳು ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ. ನೇಪಾಳ ನದಿ ಉತ್ತರ ಪ್ರದೇಶದ ಮೂಲಕ ಹರಿಯುತ್ತದೆ. ಮಹಾ ಪ್ರವಾಹದಲ್ಲಿ ಎರಡು ಗೋಲ್ಡನ್ ರಿಟ್ರೀವರ್ ನಾಯಿ ಸತತ ಹೋರಾಟ ಮಾಡಿದೆ. ಆದರೆ ನೇಪಾಳದುದ್ದಕ್ಕೂ ಪ್ರವಾಹ ನೀರಿನ ವೇಗ, ಕಲ್ಲು ಮಣ್ಣುಗಳಿಂದ ಕೂಡಿತ್ತು. ಹೀಗಾಗಿ ದಡ ಸೇರಲು ಸಾಧ್ಯವಾಗಿಲ್ಲ. ಈಜುತ್ತಾ ನೇಪಾಳದಿಂದ ಗಡಿ ದಾಟಿ ಉತ್ತರ ಪ್ರದೇಶದ ಗಡಿ ದಿಲ್ಲೆ ಮಹಾರಾದ್‌ಗಂಜ್ ಗ್ರಾಮಕ್ಕೆ ಆಗಮಿಸಿದೆ.

ಗಾಯಗೊಂಡ ಶ್ವಾನಗಳಿಗೆ ಸ್ಥಳೀಯರ ಆರೈಕೆ

ಹರಿಯುವ ನೀರಿನಲ್ಲಿ ಎರಡು ಶ್ವಾನಗಳು ಈಜಿ ದಡ ಸೇರುವ ಪ್ರಯತ್ನ ಮಾಡಿತ್ತು. ಎರಡು ಗೋಲ್ಡನ್ ರಿಟ್ರೀವರ್ ಶ್ವಾನಗಳು ಮಹಾರಾಜ್‌ಗಂಜ್ ಗ್ರಾಮದ ಬಳಿ ದಡ ಸೇರಲು ಯತ್ನಿಸಿರುವುದು ಗಮನಿಸಿದ ಸ್ಥಳೀಯರು ಎರಡೂ ನಾಯಿಗಳನ್ನು ರಕ್ಷಿಸಿದ್ದಾರೆ. ನಾಯಿಗಳನ್ನು ರಕ್ಷಿಸಿ ಆರೈಕೆ ಮಾಡಲಾಗಿದೆ. ಪ್ರವಾಹ ನೀರಿನಲ್ಲಿ ಕೊಚ್ಚಿ ಹೋದ ಕಾರಣ ನಾಯಿಯ ಕಣ್ಣು ಸೇರಿದಂತೆ ಹಲವೆಡೆ ಗಾಯವಾಗಿದೆ.

ಆರೈಕೆ ನೀಡಿದ ಯುವಕನ ವಿಶೇಷ ಮನವಿ

ಶ್ವಾನಗಳ ಆರೈಕೆ ಮಾಡಿದ ಸ್ಥಳೀಯ ಯುವಕ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೋದ ಉದ್ದೇಶ, ಈ ನಾಯಿ ನೇಪಾಳ ಪ್ರವಾಹದಲ್ಲಿ ಸಿಲುಕಿ ಈಜಿಕೊಂಡ ಬಂದು ಇಲ್ಲಿ ದಡ ಸೇರಿದೆ. ಈ ನಾಯಿಗಳ ಮಾಲೀಕರು ಇದ್ದರೆ ನಮ್ಮನ್ನು ಸಂಪರ್ಕಿಸಿ ನಾಯಿ ಹಿಂದಿರುಗಿಸುತ್ತೇವೆ ಎಂದು ಯುವಕ ಮನವಿ ಮಾಡಿದ್ದಾನೆ. ನೇಪಾಳ ಪ್ರವಾಹದಲ್ಲಿ ಈ ನಾಯಿಗಳ ಮಾಲೀಕರು ಇದ್ದಾರೋ, ಅವರ ಪರಿಸ್ಥಿತಿ ಏನು ಅನ್ನೋದು ಗೊತ್ತಿಲ್ಲ. ಒಂದು ವೇಳೆ ನಾಯಿ ಮಾಲೀಕರು ಇದ್ದರೆ ಸಂಪರ್ಕಿಸಿ, ನಾಯಿ ಇಲ್ಲಿ ಸುರಕ್ಷಿತವಾಗಿದೆ ಎಂದಿದ್ದಾನೆ.