MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gruha Lakshmi Beneficiaries
Bengaluru Parking Rules
RSS Defamation Case
RSS Chief Mohan Bhagwat
KPSC Recruitment Scam
Mysuru Dasara 2026
Minister Satish Jarkiholi
Bengaluru 1 Rs Auto-ride
CM DK Shivakumar vs HDK
Toxic Day 3 Collections
ISRO GSLV-F17 Launch
Nepal Floods Disaster
Tata Sons Mega Deal
September Monsoon Deficit
Crazystar V Ravichandran
Rahul Gandhi vs BJP & RSS
  • Home
  • News
  • India News
  • ಲಂಡನ್ ಕೆಲಸ, ಕೋಟಿ ಸಂಬಳ ತೊರೆದು IAS ಆಗಿದ್ದ ದಿವ್ಯಾ ಮಿತ್ತಲ್ ದಿಢೀರ್ ರಾಜೀನಾಮೆ

ಲಂಡನ್ ಕೆಲಸ, ಕೋಟಿ ಸಂಬಳ ತೊರೆದು IAS ಆಗಿದ್ದ ದಿವ್ಯಾ ಮಿತ್ತಲ್ ದಿಢೀರ್ ರಾಜೀನಾಮೆ

ಲಂಡನ್‌ನ ಉನ್ನತ ಉದ್ಯೋಗ ತೊರೆದು ತಾಯ್ನಾಡಿನ ಸೇವೆಗಾಗಿ ಐಎಎಸ್ ಆಗಿದ್ದ ದಿವ್ಯಾ ಮಿತ್ತಲ್, 13 ವರ್ಷಗಳ ಸಾರ್ಥಕ ಸೇವೆಯ ನಂತರ ತಮ್ಮ ಹುದ್ದೆಗೆ ಸ್ವಯಂಪ್ರೇರಿತ ರಾಜೀನಾಮೆ ನೀಡಿದ್ದಾರೆ. ಸ್ಥಾನದಿಂದ ಕೆಳಗಿಳಿದರೂ ದೇಶದ ಅಭಿವೃದ್ಧಿಗಾಗಿ ಜನಸೇವೆಯ ಮಿಷನ್ ಎಂದಿಗೂ ನಿಲ್ಲುವುದಿಲ್ಲ ಎಂದಿದ್ದಾರೆ.

2 Min read
Author : Ganesh Mabla Gowda
Published : Aug 30 2026, 04:36 PM IST
Share this Photo Gallery
  • FB
  • TW
  • Linkdin
  • Whatsapp
16
ಬೆಂಗಳೂರಲ್ಲಿ ಓದಿದವರು
Image Credit : x.com

ಬೆಂಗಳೂರಲ್ಲಿ ಓದಿದವರು

ಕೆಲವರು ಹುದ್ದೆಗಾಗಿ ಅಧಿಕಾರ ನಡೆಸುತ್ತಾರೆ, ಇನ್ನು ಕೆಲವರು ಬದಲಾವಣೆಗಾಗಿ ಅಧಿಕಾರ ಬಳಸುತ್ತಾರೆ. ಅಂತಹ ಸಾಲಿನಲ್ಲಿ ನಿಲ್ಲುವವರು ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್. ಐಐಟಿ, ಐಐಎಂ ಪದವಿ ಪಡೆದು ಲಂಡನ್‌ನಲ್ಲಿ ನೆಲೆಸಿದ್ದರೂ, ತಾಯ್ನಾಡಿನ ಸೇವೆಗಾಗಿ ಮರಳಿದ್ದ ಈ ಅಧಿಕಾರಿ ಈಗ ತಮ್ಮ 13 ವರ್ಷಗಳ ಆಡಳಿತಾತ್ಮಕ ಸೇವೆಗೆ ರಾಜೀನಾಮೆ ನೀಡಿದ್ದಾರೆ. ಅವರ ಈ ನಿರ್ಧಾರದ ಹಿಂದೆ ಒಂದು ಅದ್ಭುತವಾದ ಮತ್ತು ಭಾವುಕವಾದ ಕಥೆಯಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಲಂಡನ್‌ನಿಂದ ಭಾರತದ ಹಳ್ಳಿಗಳವರೆಗೆ..
Image Credit : x.com

ಲಂಡನ್‌ನಿಂದ ಭಾರತದ ಹಳ್ಳಿಗಳವರೆಗೆ..

ದಿವ್ಯಾ ಮಿತ್ತಲ್ ಅವರ ಜೀವನದ ಹಾದಿ ಸಾಮಾನ್ಯವಾದುದಲ್ಲ. ಐಐಟಿ ದೆಹಲಿ ಮತ್ತು ಐಐಎಂ ಬೆಂಗಳೂರಿನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಓದಿ, ಲಂಡನ್‌ನಲ್ಲಿ ಕೈತುಂಬಾ ಸಂಬಳ ಬರುವ ಹಣಕಾಸು ಉದ್ಯೋಗದಲ್ಲಿದ್ದರು. ಜೀವನದಲ್ಲಿ ಎಲ್ಲವನ್ನೂ ಸಾಧಿಸಿದೆ ಎನಿಸಿದಾಗಲೂ ಅವರಿಗೆ ಒಳಗೇನೋ ಒಂದು ಕೊರಗು. ನನ್ನ ದೇಶದ ಮಣ್ಣು ನನಗೆ ನೀಡಿದ ಶಿಕ್ಷಣ ಮತ್ತು ಆತ್ಮವಿಶ್ವಾಸದ ಋಣವನ್ನು ನಾನು ತೀರಿಸಬೇಕು ಎಂಬ ಹಂಬಲ ಅವರಲ್ಲಿತ್ತು. ಇದೇ ಕಾರಣಕ್ಕೆ ಅವರು ಲಂಡನ್ ಕೆಲಸ ಬಿಟ್ಟು ಭಾರತಕ್ಕೆ ಮರಳಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಐಎಎಸ್ ಅಧಿಕಾರಿಯಾದರು.

Related Articles

Related image1
ಸಾವು ಗೆದ್ದು ಬಂದ ಕಂದಮ್ಮ: ಪ್ರವಾಹದ ಅವಶೇಷಗಳಡಿ 3 ದಿನಗಳ ಬಳಿಕ 6 ವರ್ಷದ ಬಾಲಕಿ ಜೀವಂತ ಪತ್ತೆ
Related image2
ಲೋನ್ ಸೆಟಲ್‌ಮೆಂಟ್‌ ಅಂದರೇನು? ಬ್ಯಾಂಕ್‌ಗಳು ದೊಡ್ಡ ಮೊತ್ತದ ಸಾಲಕ್ಕೆ ಸಣ್ಣ ಮೊತ್ತ ಪಡೆದು ಕೈತೊಳೆಯಲು ಒಪ್ಪುವುದೇಕೆ?
36
ಜನಸಾಮಾನ್ಯರ ಕಣ್ಣೀರು ಒರೆಸಿದ 13 ವರ್ಷಗಳು
Image Credit : x.com

ಜನಸಾಮಾನ್ಯರ ಕಣ್ಣೀರು ಒರೆಸಿದ 13 ವರ್ಷಗಳು

ಉತ್ತರ ಪ್ರದೇಶದ ದೇವರಿ ಹಾಗೂ ಮಿರ್ಜಾಪುರದಂತಹ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವಾಗ ದಿವ್ಯಾ ಅವರು ಕೇವಲ ಫೈಲುಗಳಿಗೆ ಸಹಿ ಹಾಕಲಿಲ್ಲ. ಬದಲಾಗಿ ಜನರ ಕಷ್ಟಗಳಿಗೆ ಸ್ಪಂದಿಸಿದರು. ಅಸಾಧ್ಯ ಎಂಬುದು ಕೇವಲ ಒಂದು ಅಭಿಪ್ರಾಯವೇ ಹೊರತು ಸತ್ಯವಲ್ಲ ಎಂಬುದನ್ನು ಅವರು ಮಿರ್ಜಾಪುರದಲ್ಲಿ ಸಾಬೀತುಪಡಿಸಿದರು. ಅಶಕ್ತರಿಗೆ ಘನತೆಯ ಬದುಕು ನೀಡಿದಾಗ ರೈತರ ಹೊಲಕ್ಕೆ ನೀರು ತಲುಪಿದಾಗ ಅವರ ಕಣ್ಣಲ್ಲಿ ಕಂಡ ಸಂತೋಷವೇ ನನಗೆ ನಿಜವಾದ ನೆಮ್ಮದಿ ನೀಡಿತು ಎಂದು ದಿವ್ಯಾ ಸ್ಮರಿಸಿದ್ದಾರೆ.

46
ವೃದ್ಧೆಯ ಆಶೀರ್ವಾದ ಮತ್ತು ಆ ಭಾವುಕ ಕ್ಷಣ
Image Credit : x.com

ವೃದ್ಧೆಯ ಆಶೀರ್ವಾದ ಮತ್ತು ಆ ಭಾವುಕ ಕ್ಷಣ

ತಮ್ಮ ರಾಜೀನಾಮೆಯ ಬಗ್ಗೆ ಬರೆಯುತ್ತಾ ದಿವ್ಯಾ ಅವರು ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಲಾಹುರಿಯಾ ದಿಹ್ ಎಂಬ ಗುಡ್ಡಗಾಡು ಹಳ್ಳಿಗೆ ಮೊದಲ ಬಾರಿಗೆ ನೀರು ಬಂದಾಗ ಅಲ್ಲಿನ ಒಬ್ಬ ವೃದ್ಧೆ ಕಣ್ಣೀರು ಹಾಕುತ್ತಾ ದಿವ್ಯಾ ಅವರ ತಲೆ ಮುಟ್ಟಿ ಆಶೀರ್ವಾದ ಮಾಡಿದ್ದರಂತೆ. ಆ ತಾಯಿಯ ಸ್ಪರ್ಶ ನನ್ನನ್ನು ಸದಾ ಜೀವಂತವಾಗಿರಿಸುತ್ತದೆ. ಹುದ್ದೆ ಇಂದು ಹೋಗಬಹುದು, ಆದರೆ ಆ ಪ್ರೀತಿ ಎಂದಿಗೂ ಮಾಸದು ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.

56
ರಾಜೀನಾಮೆಗೆ ಕಾರಣವೇನು?
Image Credit : x.com

ರಾಜೀನಾಮೆಗೆ ಕಾರಣವೇನು?

ಇಂದು ನನ್ನ ಕಣ್ಣುಗಳು ಕೃತಜ್ಞತೆಯಿಂದ ತುಂಬಿವೆ. ನನ್ನ ದೇಶದ ಮಣ್ಣು ನನಗೆ ನೀಡಿದ ಕನಸುಗಳು ಇನ್ನೂ ಬಾಕಿ ಇವೆ. ಅಧಿಕೃತ ಹುದ್ದೆ ಅಂತ್ಯವಾಗಬಹುದು, ಆದರೆ ದೇಶಕ್ಕಾಗಿ ನಾನು ಕಂಡ ಕನಸು ಮತ್ತು ನನ್ನ ಮಿಷನ್ ಬದಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. 2013ರ ಬ್ಯಾಚ್‌ನ ಈ ಅಧಿಕಾರಿ ವೈಯಕ್ತಿಕ ಕಾರಣಗಳಿಂದಾಗಿ ಮತ್ತು ದೇಶಕ್ಕಾಗಿ ಮತ್ತಷ್ಟು ವಿಭಿನ್ನವಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

66
ಜನಪರ ಕೆಲಸಗಳು ಮುಂದುವರಿಯಲಿ
Image Credit : x.com

ಜನಪರ ಕೆಲಸಗಳು ಮುಂದುವರಿಯಲಿ

ದಿವ್ಯಾ ಮಿತ್ತಲ್ ಅವರ ಈ ನಡೆ ಇಂದಿನ ಯುವಜನತೆಗೆ ಮಾದರಿ. ಅಧಿಕಾರ ಎನ್ನುವುದು ಕೇವಲ ಕುರ್ಚಿಯಲ್ಲ, ಅದು ಜನರ ಸೇವೆ ಮಾಡುವ ಅವಕಾಶ ಎಂಬುದನ್ನು ತೋರಿಸಿಕೊಟ್ಟು ಅವರು ನಿರ್ಗಮಿಸಿದ್ದಾರೆ. ಹುದ್ದೆ ಬಿಟ್ಟರೂ ಅವರ ಜನಪರ ಕೆಲಸಗಳು ಮುಂದುವರಿಯಲಿ ಎಂಬುದೇ ಎಲ್ಲರ ಆಶಯ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಐಎಎಸ್
ಟ್ರೆಂಡಿಂಗ್ ನ್ಯೂಸ್
ವೈರಲ್ ಸುದ್ದಿ
ನ್ಯೂಸ್‌ ರೌಂಡ್‌ಅಪ್

Latest Videos
Recommended Stories
Recommended image1
ಮಾರ್ಗ ಮಧ್ಯೆ ಪೆಟ್ರೋಲ್, ಡೀಸೆಲ್​​ ಖಾಲಿಯಾಯ್ತಾ? ತೊಂದರೆಗೆ ಸಿಲುಕಿದ್ದೀರಾ? ಚಿಂತೆ ಬಿಡಿ- ಹೀಗೆ ಮಾಡಿ
Recommended image2
ಕೇವಲ ಎರಡೇ ಅಕ್ಷರ! ದೇಶದ ಅತಿಸಣ್ಣ ಹೆಸರಿನ 2 ರೈಲು ಸ್ಟೇಷನ್‌ ಮಾಹಿತಿ ಟ್ವೀಟ್‌ ಮಾಡಿದ ಭಾರತೀಯ ರೈಲ್ವೆ! ಏನಿದರ ವಿಶೇಷ?
Recommended image3
ಎವರೆಸ್ಟ್​, LG ಇಂಗಿನ ಪೌಡರ್​ ಭಾರಿ ಡೇಂಜರ್​: ಎರಡೂ ಕಂಪೆನಿಯನ್ನು ಬ್ಯಾನ್​ ಮಾಡಿದ FSSAI
Related Stories
Recommended image1
ಸಾವು ಗೆದ್ದು ಬಂದ ಕಂದಮ್ಮ: ಪ್ರವಾಹದ ಅವಶೇಷಗಳಡಿ 3 ದಿನಗಳ ಬಳಿಕ 6 ವರ್ಷದ ಬಾಲಕಿ ಜೀವಂತ ಪತ್ತೆ
Recommended image2
ಲೋನ್ ಸೆಟಲ್‌ಮೆಂಟ್‌ ಅಂದರೇನು? ಬ್ಯಾಂಕ್‌ಗಳು ದೊಡ್ಡ ಮೊತ್ತದ ಸಾಲಕ್ಕೆ ಸಣ್ಣ ಮೊತ್ತ ಪಡೆದು ಕೈತೊಳೆಯಲು ಒಪ್ಪುವುದೇಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved