ಚುನಾವಣಾ ಆಯೋಗದಿಂದ ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಹಲವರು ಹೆಸರು, ವಿಳಾಸ ಸೇರಿದಂತೆ ಕೆಲ ಕಾರಣಗಳಿಂದ ನೋಟಿಸ್ ಜಾರಿಯಾಗಿದೆ. ಇದೀಗ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿರುವ ಎಲೆಕ್ಷನ್ ಕಮಿಷನರ್‌ಗೆ ನೋಟಿಸ್ ನೀಡಲಾಗಿದೆ.

ನವದೆಹಲಿ (ಸೆ.20) ಭಾರತದಲ್ಲಿ ಹಂತ ಹಂತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ( SIR) ಪ್ರಕ್ರಿಯೆ ನಡೆಯುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಬಿಎಲ್ಒ, ಚುನಾವಣಾ ಆಯೋಗ ಸಿಬ್ಬಂದಿ ಸೇರಿದಂತೆ ಹಲವರು ನಿರಂತರ ಕೆಲಸ ಮಾಡುತ್ತಿದ್ದಾರೆ. ಇತ್ತ ವಿಪಕ್ಷ ನಾಯಕರು SIR ಪ್ರಕ್ರಿಯೆ ಕೈಬಿಡಲು ಹೋರಾಟ ಮಾಡುತ್ತಲೇ ಇದ್ದಾರೆ. ಹಲವು ನಾಯಕರಿಗೆ ಈಗಾಗಲೇ SIR ನೋಟಿಸ್ ನೀಡಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಎಲೆಕ್ಷನ್ ಕಮಿಷನರ್ ಎಸ್ಎಸ್ ಸಂಧುಗೆ SIR ನೋಟಿಸ್ ನೀಡಲಾಗಿದೆ. ಇದೀಗ ಭಾರಿ ಚರ್ಚೆಯಾಗುತ್ತಿದೆ.

ಹೆಸರಿನ ಸ್ಪೆಲ್ಲಿಂಗ್ ಮಿಸ್‌ಮ್ಯಾಚ್

ಚುನಾವಣಾ ಆಯೋಗ ಕಮಿಷನರ್ ಎಸ್ಎಸ್ ಸಂಧು ಹೆಸರಿನ ಸ್ಪೆಲ್ಲಿಂಗ್ ಮಿಸ್ ಮ್ಯಾಚ್ ಆಗಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರು ಹಾಗೂ ದಾಖಲೆಗಳಲ್ಲಿರುವ ಹೆಸರಿನ ಸ್ಪೆಲ್ಲಿಂಗ್ ಮಿಸ್ ಮ್ಯಾಚ್ ಆಗುತ್ತಿದೆ. ಹೀಗಾಗಿ ಎಸ್ಎಸ್ ಸಂಧುಗೆ SIR ನೋಟಿಸ್ ನೀಡಲಾಗಿದೆ. ಇದೀಗ ಎಸ್ಎಸ್ ಸಂಧು ಪೂರಕ ದಾಖಲೆ ಸಲ್ಲಿಕೆ ಮಾಡಿ ದೋಷ ಸರಿಪಡಿಸಿಕೊಳ್ಳಬೇಕಿದೆ.

ಚರ್ಚೆಗೆ ಕ್ರಾರಣವಾದ ನೋಟಿಸ್

ಮತದಾರರ ಪಟ್ಟಿ ಪರಿಷ್ಕರಣೆ ವೆರಿಫಿಕೇಶನ್ ಪ್ರಕ್ರಿಯೆ ಸಂಬಂಧ ನೋಟಿಸ್ ನೀಡಲಾಗಿದೆ. ಇದೀಗ ನೋಟಿಸ್ ಪಡೆದವರು ಸೂಕ್ತ ದಾಖಲೆಗಳನ್ನು ಚುನಾವಣಾ ಆಯೋಗದ ಕೇಂದ್ರಗಳಿಗೆ ಸಲ್ಲಿಕೆ ಮಾಡಿ ದೋಷ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಎಲೆಕ್ಷನ್ ಕಮಿಷನರ್‌ಗೆ SIR ನೋಟಿಸ್ ನೀಡಿರುವುದು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ವಿಪಕ್ಷಗಳು ಸೇರಿದಂತೆ ಹಲವರು SIR ಪ್ರಕ್ರಿಯೆ ವಿರೋಧಿಸಿದ್ದರು. ವಿಪಕ್ಷ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು SIR ಪ್ರಕ್ರಿಯೆ ವಿರೋಧಿಸಿದ್ದಾರೆ. SIR ಪ್ರಕ್ರಿಯೆ ಮೂಲಕ ಜನಸಾಮಾನ್ಯರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.

ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿ ವೋಟರ್ ಐಡಿ ಪಡೆದ ಬಹುತೇಕರ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇನ್ನು ಎರಡು ವೋಟರ್ ಐಡಿ, ಬೇರೆ ಬೇರೆ ವಿಳಾಸ, ಹೆಸರು, ವಿಳಾಸದಲ್ಲಿ ದೋಷಗಳಿಂದ ಹಲವರಿಗೆ ನೋಟಿಸ್ ನೀಡಲಾಗಿದೆ. ಇದಕ್ಕೆ ಸಲ್ಲಿಸಬೇಕಾದ ಪೂರಕ ದಾಖಲೆಗಳನ್ನು ಚುನಾವಣಾ ಆಯೋಗ ಸೂಚಿಸಿದೆ. ಇದೀಗ ಎಳೆಕ್ಷನ್ ಕಮಿಷನರ್ ತಮ್ಮ ಹೆಸರಿನ ಪೂರಕ ದಾಖಲೆ ಸಲ್ಲಿಕೆ ಮಾಡಿ ದೋಷ ಸರಿಪಡಿಸಿಕೊಳ್ಳಬೇಕು.