ರಾಷ್ಟ್ರೀಯ ಕಾರ್ಟಿಂಗ್: ಬೆಂಗಳೂರಿನ ಇಶಾನ್ ಮಾದೇಶ್‌ಗೆ ಗೆಲುವು, ಕೊನೆ 2 ಸುತ್ತು ಯಶಸ್ವಿ ಮುಕ್ತಾಯಗೊಂಡಿದೆ. ಕಿರಿಯರ ವಿಭಾಗದಲ್ಲಿ ಕಿಯಾನ್ ಶಾ, ಹಿರಿಯರ ವಿಭಾಗದಲ್ಲಿ ಕೃಷ್ ಗುಪ್ತಾಗೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ.
India News Live: ರಾಷ್ಟ್ರೀಯ ಕಾರ್ಟಿಂಗ್ - ಬೆಂಗಳೂರಿನ ಇಶಾನ್ ಮಾದೇಶ್‌ಗೆ ಗೆಲುವು

ನವದೆಹಲಿ (ನ.9): ಬಿಹಾರ 2ನೇ ಹಂತದ ಚುನಾವಣೆಗೆ ಸಿದ್ದವಾಗುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಡುವೆ ಗನ್ ಸಮರ ಶುರುವಾಗಿದೆ. 'ಕಾಂಗ್ರೆಸ್ಸಿಗರ ತಲೆಗೆ ನಾಡಬಂದೂಕು (ಕಟ್ಟಾ) ಇಟ್ಟು ಆರ್ಜೆಡಿಯು, ಬಿಹಾರದ ಸಿಎಂ ಅಭ್ಯರ್ಥಿ ಹುದ್ದೆ ಪಡೆದಿದೆ' ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬಿಹಾರ ಚುನಾವಣಾ ಕಣದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಕಾಂಗ್ರೆಸ್ ಇದೇ ರೀತಿಯ ಹೇಳಿಕೆ ಮೂಲಕ ತಿರುಗೇಟು ನೀಡಿದೆ. ಪ್ರಧಾನಿ ಆಡಿರುವ ಮಾತು ಅವರ ಹುದ್ದೆಯ ಘನತೆಗೆ ಕುಂದು ಎಂದು ಕಾಂಗ್ರೆಸ್ ನಾಯಕಿ ಹಾಗೂ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 9th November: ರಾಷ್ಟ್ರೀಯ ಕಾರ್ಟಿಂಗ್ - ಬೆಂಗಳೂರಿನ ಇಶಾನ್ ಮಾದೇಶ್‌ಗೆ ಗೆಲುವು
India News Live 9th November: ಐರನ್ ಮ್ಯಾನ್ ರೇಸ್ ಪೂರ್ಣಗೊಳಿಸಿದ ತೇಜಸ್ವಿ ಸೂರ್ಯ-ಅಣ್ಣಾಮಲೈ, ಕನ್ನಡದಲ್ಲಿ ಮೋದಿ ಅಭಿನಂದನೆ
ಐರನ್ ಮ್ಯಾನ್ ರೇಸ್ ಪೂರ್ಣಗೊಳಿಸಿದ ತೇಜಸ್ವಿ ಸೂರ್ಯ-ಅಣ್ಣಾಮಲೈ, ಕನ್ನಡದಲ್ಲಿ ಮೋದಿ ಅಭಿನಂದನೆ, ಅತೀ ಕಠಿಣ ಹಾಗೂ ಸವಾಲಿನ ಈಜು, ಓಟ ಹಾಗೂ ಸೈಕ್ಲಿಂಗ್ ಮೂಲಕ ಟ್ರಯಥ್ಲಾನ್ ಪೂರ್ಣಗೊಳಿಸಿದ್ದಾರೆ.
India News Live 9th November: ನಾಲ್ಕು ಬಾರಿ ದೃಶ್ಯ ಸಿನಿಮಾ ನೋಡಿ ಪತ್ನಿ ಹತ್ಯೆಗೈದ ಗಂಡ, ಒಂದು ಕಾರಣದಿಂದ ತಗ್ಲಾಕೊಂಡ
ನಾಲ್ಕು ಬಾರಿ ದೃಶ್ಯ ಸಿನಿಮಾ ನೋಡಿ ಪತ್ನಿ ಹತ್ಯೆಗೈದ ಗಂಡ, ಒಂದು ಕಾರಣದಿಂದ ತಗ್ಲಾಕೊಂಡ, ದೃಶ್ಯ ಸಿನಿಮಾ ಶೈಲಿಯಲ್ಲಿ ಎಸ್ಕೇಪ್ ಆಗಲು ಎಲ್ಲಾ ಪ್ರಯತ್ನ ಮಾಡಿದ್ದಾನೆ. ಈತನ ಪ್ಲಾನ್ ಕೆಲ ದಿನಗಳಿಂದ ಯಶಸ್ವಿ ಕೂಡ ಆಗಿದೆ. ಆದರೆ ಒಂದು ಕಾರಣದಿಂದ ಅರೆಸ್ಟ್ ಆದ.
India News Live 9th November: ತಿಂಗಳ ಹಿಂದಿನ ಜಗಳಕ್ಕೆ ದ್ವೇಷ - ತಂದೆಯ ಪಿಸ್ತೂಲ್ ತಂದು ಕ್ಲಾಸ್‌ಮೇಟ್‌ಗೆ ಗುಂಡಿಕ್ಕಿದ್ದ ಪಿಯುಸಿ ವಿದ್ಯಾರ್ಥಿ
Gurugram student shooting: ಗುರುಗ್ರಾಮದಲ್ಲಿ, 17 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಪರವಾನಗಿ ಪಡೆದ ಪಿಸ್ತೂಲಿನಿಂದ ತನ್ನ ಸಹಪಾಠಿಗೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿ ಬದುಕುಳಿದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
India News Live 9th November: ಮೊಬೈಲ್ ಬಳಕೆದಾರರಿಗೆ ಮತ್ತೊಮ್ಮೆ ಶಾಕಿಂಗ್ ನ್ಯೂಸ್! ಡಿ.1ರಿಂದ ರೀಚಾರ್ಜ್ ದರ ಏರಿಕೆ? ಎಷ್ಟು ಹೆಚ್ಚಳ?
ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಡಿಸೆಂಬರ್ 1 ರಿಂದ ತಮ್ಮ ರೀಚಾರ್ಜ್ ದರಗಳನ್ನು ಸುಮಾರು 10% ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಸಂಭಾವ್ಯ ದರ ಏರಿಕೆಯು ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ.
India News Live 9th November: ನಾಥದ್ವಾರ, ಗುರುವಾಯೂರ್‌ಗೆ 30 ಕೋಟಿ, ತಿರುಪತಿ ಸೇರಿ ಹಲವು ಮಂದಿರಕ್ಕೆ ಅಂಬಾನಿ ಕೋಟ್ಯಂತರ ರೂ ದೇಣಿಗೆ
ನಾಥದ್ವಾರ, ಗುರುವಾಯೂರ್‌ಗೆ 30 ಕೋಟಿ, ತಿರುಪತಿ ಸೇರಿ ಹಲವು ಮಂದಿರಕ್ಕೆ ಅಂಬಾನಿ ಕೋಟ್ಯಂತರ ರೂ ದೇಣಿಗೆ ನೀಡಿದ್ದಾರೆ. ದೇವರ ದರ್ಶನ ಮಾಡಿ ದೇಣಿಗೆ ನೀಡಿರುವ ಮುಕೇಶ್ ಅಂಬಾನಿ ದೇಗುಲದ ಸೇವಾ ಸದನ, ಅನ್ನ ಛತ್ರ ಅಡುಗೆ ಮನೆ ಸೇರಿದಂತೆ ಹಲವು ನಿರ್ಮಾಣ ಕಾರ್ಯಗಳನ್ನು ಘೋಷಿಸಿದ್ದಾರೆ.
India News Live 9th November: ಭಾರತದ ಪ್ರಗತಿಯ ಏಟಿಗೆ ಚೀನಾ ವಿಲವಿಲ - 11 ಲಕ್ಷ ಕೋಟಿಗೆ ಏರಿದ ಎಲೆಕ್ಟ್ರಾನಿಕ್ಸ್ ಉತ್ಪಾದನೆ! ಡಿಟೇಲ್ಸ್ ಇಲ್ಲಿದೆ
ಕಳೆದ ದಶಕದಲ್ಲಿ ಭಾರತದ ಆರ್ಥಿಕತೆಯು 11ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿದಿದೆ. 'ಮೇಕ್ ಇನ್ ಇಂಡಿಯಾ'ದಂತಹ ಯೋಜನೆಗಳಿಂದಾಗಿ, ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 11.3 ಲಕ್ಷ ಕೋಟಿಗೆ ಏರಿದ್ದು, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿದೆ.
India News Live 9th November: ಅಭಿಷೇಕ್ ಶರ್ಮಾಗೆ ಖಡಕ್ ವಾರ್ನಿಂಗ್ ಕೊಟ್ಟ ಇರ್ಫಾನ್ ಪಠಾಣ್! ಏನಾಯ್ತು?
ಅಗ್ರೆಸಿವ್ ಆಟಕ್ಕೂ ಒಂದು ಮಿತಿ ಇರಬೇಕು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಯುವ ಆಟಗಾರ ಅಭಿಷೇಕ್ ಶರ್ಮಾಗೆ ಎಚ್ಚರಿಕೆ ನೀಡಿದ್ದಾರೆ. ಆಕ್ರಮಣಕಾರಿ ಆಟಕ್ಕೆ ಮಿತಿ ಇರಬೇಕು, ಪ್ರತಿ ಬಾಲ್‌ಗೂ ಮುಂದೆ ಬಂದು ಆಡಬೇಡ ಎಂದು ಹೇಳಿದ್ದಾರೆ.
India News Live 9th November: ಟೀಂ ಇಂಡಿಯಾಗೆ ಇವನೇ ಲಕ್ಕಿ ಕ್ಯಾಪ್ಟನ್; ಇವನಿದ್ರೆ ವಿಶ್ವಕಪ್ ಗೆಲ್ಲೋದು ಪಕ್ಕಾ!
ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ನಾಯಕನಾಗಿ ಅಜೇಯ ಪ್ರದರ್ಶನ ನೀಡುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿದೆ. 78.12ರ ಗೆಲುವಿನ ಶೇಕಡಾವಾರು ಪ್ರಮಾಣದೊಂದಿಗೆ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾದ ಲಕ್ಕಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.
India News Live 9th November: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ಟೀಂ ಇಂಡಿಯಾ ಆಯ್ಕೆ ಮಾಡಿದ ಹರ್ಷಾ ಬೋಗ್ಲೆ; ಜೈಸ್ವಾಲ್‌ಗಿಲ್ಲ ಸ್ಥಾನ!
ಪ್ರಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷಾ ಬೋಗ್ಲೆ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಸಂಭಾವ್ಯ 15ರ ಬಳಗವನ್ನು ಆಯ್ಕೆ ಮಾಡಿದ್ದಾರೆ. ಅವರ ತಂಡದಲ್ಲಿ ಸ್ಪೋಟಕ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ನಿತೀಶ್ ಕುಮಾರ್ ರೆಡ್ಡಿಗೆ ಸ್ಥಾನ ಸಿಕ್ಕಿಲ್ಲ.
India News Live 9th November: ಮುಸ್ಲಿಮರು ಆರೆಸ್ಸೆಸ್ ಸೇರಬಹುದೇ? ಪ್ರಶ್ನೆಗೆ ಮೋಹನ್ ಭಾಗವತ್ ನೀಡಿದ ಉತ್ತರವೇನು?
ಬ್ರಾಹ್ಮಣರು, ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ತಮ್ಮ 'ಪ್ರತ್ಯೇಕತೆಯನ್ನು' ಬಿಟ್ಟು 'ಭಾರತ ಮಾತೆಯ ಪುತ್ರರು' ಎಂದು ಬಂದರೆ ಆರ್‌ಎಸ್‌ಎಸ್ ಶಾಖೆಗಳಿಗೆ ಸೇರಲು ಸ್ವಾಗತ ಎಂದು ಭಾಗವತ್ ಹೇಳಿದರು.
India News Live 9th November: ಲವ್ ಜಿಹಾದ್‌ಗೆ ಒಳಗಾಗದಂತೆ ನಮ್ಮ ಹೆಣ್ಣು ಮಕ್ಕಳನ್ನು ಬೆಳೆಸೋದು ನಮ್ಮ ಕೈಲಿದೆ - ಮೋಹನ್ ಭಾಗವತ್
RSS Chief Mohan Bhagwat on Love Jihad ಬೆಂಗಳೂರಿನಲ್ಲಿ ಮಾತನಾಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಲವ್ ಜಿಹಾದ್ ತಡೆಯಲು ಹಿಂದೂ ಹೆಣ್ಣುಮಕ್ಕಳಿಗೆ ಮನೆಯಲ್ಲೇ ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದ್ದಾರೆ.
India News Live 9th November: ನಮ್ಮ ಪೂರ್ವಜರೆಲ್ಲರೂ ಒಂದೇ, ಭಾರತದಲ್ಲಿ ಅಹಿಂದು ಅನ್ನೋದೇ ಇಲ್ಲ ಎಂದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ಭಾರತದಲ್ಲಿ "ಅಹಿಂದು" (ಹಿಂದೂ ಅಲ್ಲದವರು) ಇಲ್ಲ, ಎಲ್ಲರೂ ಒಂದೇ ಪೂರ್ವಜರ ವಂಶಸ್ಥರು ಮತ್ತು ದೇಶದ ಮೂಲ ಸಂಸ್ಕೃತಿ ಹಿಂದೂ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
India News Live 9th November: ಸಂಜು ಸ್ಯಾಮ್ಸನ್ ಬೇಕಿದ್ರೆ, ಜಡೇಜಾ ಜತೆಗೆ ಈ ಬಿಗ್ ಹಿಟ್ಟರ್ ಕೊಡಿ ಎಂದು ಬೇಡಿಕೆಯಿಟ್ಟ ರಾಜಸ್ಥಾನ ರಾಯಲ್ಸ್!
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟ್ರೇಡ್ ವಿಂಡೋ ಕೊನೆಯಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗಲೇ ಸಂಜು ಸ್ಯಾಮ್ಸನ್ ಟ್ರೇಡಿಂಗ್ ವಿಚಾರವಾಗಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಸಂಜು ಬೇಕಿದ್ರೆ ನಮಗೆ ಜಡೇಜಾ ಜತೆಗೆ ಈ ಸ್ಪೋಟಕ ಬ್ಯಾಟರ್ ಬೇಕು ಎಂದು ರಾಜಸ್ಥಾನ ಡಿಮ್ಯಾಂಡ್ ಇಟ್ಟಿದೆ.
India News Live 9th November: ಬರ್ತ್‌ಡೇ ಪಾರ್ಟಿಯಲ್ಲಿ ಗಾಂಜಾ ಸೇವನೆ - ಪಾಕಶಾಸ್ತ್ರದಲ್ಲಿ ಪದವಿ ಮಾಡ್ತಿದ್ದ ಆರು ವಿದ್ಯಾರ್ಥಿಗಳ ಬಂಧನ
ಹೈದರಾಬಾದ್‌ನ ಕಲಿನರಿ ಅಕಾಡೆಮಿ ಆಫ್ ಇಂಡಿಯಾದ ಆರು ವಿದ್ಯಾರ್ಥಿಗಳನ್ನು ಬರ್ತ್‌ಡೇ ಪಾರ್ಟಿಯಲ್ಲಿ ಗಾಂಜಾ ಸೇವಿಸಿದ್ದಕ್ಕಾಗಿ ಬಂಧಿಸಲಾಗಿದೆ. ತನಿಖೆ ವೇಳೆ 11 ವಿದ್ಯಾರ್ಥಿಗಳು ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿದ್ದರು.ಆದರೆ ನಿಷೇಧಿತ ಟಿಹೆಚ್‌ಸಿ ಸೇವಿಸಿದ್ದ ಆರು ಮಂದಿಯನ್ನು ಬಂಧಿಸಲಾಗಿದೆ.
India News Live 9th November: ವಿಶ್ವಕಪ್ ಗೆದ್ದ ರಿಚಾ ಘೋಷ್ ಈಗ ಪಶ್ಚಿಮ ಬಂಗಾಳ DSP! ಪ್ರತಿ ರನ್‌ಗೆ ₹1 ಲಕ್ಷ ಪಡೆದ ಸ್ಟಾರ್ ವಿಕೆಟ್ ಕೀಪರ್!
ಮಹಿಳಾ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರ್ತಿ, ಬಂಗಾಳದ ರಿಚಾ ಘೋಷ್‌ಗೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಭರ್ಜರಿ ಗೌರವ ಸಲ್ಲಿಸಿವೆ. ಸರ್ಕಾರವು ಬಂಗಭೂಷಣ ಪ್ರಶಸ್ತಿ ಮತ್ತು ಡಿಎಸ್‌ಪಿ ಹುದ್ದೆ ನೀಡಿ ಗೌರವಿಸಲಾಗಿದೆ.
India News Live 9th November: ಜಲಪಾತ ನೋಡಲು ಹೋಗಿ 19, 20ರ ಹರೆಯದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು
NIT Silchar students drown: ಜಲಪಾತ ನೋಡಲು ಹೋಗಿದ್ದ ಎನ್‌ಐಟಿ ಸಿಲ್ಚಾರ್‌ನ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.ಒಬ್ಬರ ಶವ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಶೋಧ ನಡೆದಿದೆ.
India News Live 9th November: ಈ ಆಟಗಾರ ಚೆನ್ನೈ ಸೇರೋದು ಫಿಕ್ಸ್! ವಿಡಿಯೋ ಮೂಲಕ ಗುಟ್ಟು ಬಿಟ್ಟುಕೊಟ್ಟ ಸಿಎಸ್‌ಕೆ ಫ್ರಾಂಚೈಸಿ
ಐಪಿಎಲ್ ಆಟಗಾರರ ವರ್ಗಾವಣೆ ಚರ್ಚೆಗಳ ನಡುವೆ, ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರುವ ವದಂತಿಗಳು ಹೆಚ್ಚಾಗಿವೆ. ಸಿಎಸ್‌ಕೆ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪರೋಕ್ಷ ಸುಳಿವು ನೀಡುವ ವಿಡಿಯೋ ಪೋಸ್ಟ್ ಮಾಡಿದೆ.
India News Live 9th November: ಅಮೆರಿಕಾದಲ್ಲಿ ಭಾರತಕ್ಕೆ ಬೇಕಾಗಿದ್ದ ಇಬ್ಬರು ಮೋಸ್ಟ್ ವಾಂಟೆಂಡ್ ಗ್ಯಾಂಗ್‌ಸ್ಟಾರ್‌ಗಳ ಬಂಧನ
Most wanted Gangsters arrested: ಭಾರತಕ್ಕೆ ಬೇಕಾಗಿದ್ದ ಹರ್ಯಾಣ ಮೂಲದ ಇಬ್ಬರು ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟಾರ್‌ಗಳಾದ ವೆಂಕಟೇಶ್ ಗಾರ್ಗ್ ಮತ್ತು ಭಾನು ರಾಣಾನನ್ನು ಅಮೆರಿಕಾದಲ್ಲಿ ಬಂಧಿಸಲಾಗಿದೆ. ಇವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಪರ್ಕ ಹೊಂದಿದ್ದರು.
India News Live 9th November: ದೆಹಲಿಯದ್ದು ಗಾಳಿಯಲ್ಲ ವಿಷಾನಿಲ; ಶೇ. 50ರಷ್ಟು ನೌಕರರಿಗೆ ವರ್ಕ್ ಫ್ರಮ್ ಹೋಮ್!
Delhi Air Quality Crisis AQI Crosses 400; ದೆಹಲಿಯ ವಾಯುಗುಣಮಟ್ಟ 'ಅತ್ಯಂತ ಅಪಾಯಕಾರಿ' ಮಟ್ಟ ತಲುಪಿದ್ದು, ಸರ್ಕಾರವು 50% ನೌಕರರಿಗೆ ವರ್ಕ್ ಫ್ರಂ ಹೋಮ್ ಮತ್ತು ಕಚೇರಿ ಸಮಯ ಬದಲಾವಣೆಯಂತಹ ಕ್ರಮಗಳನ್ನು ಜಾರಿಗೊಳಿಸಿದೆ.