ಕಳೆದ ದಶಕದಲ್ಲಿ ಭಾರತದ ಆರ್ಥಿಕತೆಯು 11ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿದಿದೆ. 'ಮೇಕ್ ಇನ್ ಇಂಡಿಯಾ'ದಂತಹ ಯೋಜನೆಗಳಿಂದಾಗಿ, ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 11.3 ಲಕ್ಷ ಕೋಟಿಗೆ ಏರಿದ್ದು, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿದೆ.  

ಕಳೆದ ಹತ್ತು ವರ್ಷಗಳಿಂದ ದೇಶದ ಆರ್ಥಿಕತೆ ಏರುಗತಿಯಲ್ಲಿ ಸಾಗುತ್ತಿದೆ. ಆರ್ಥಿಕತೆಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ ಈ ಒಂದು ದಶಕದಲ್ಲಿ ಘಟಾನುಘಟಿ ದೇಶಗಳನ್ನು ಮಣಿಸಿ 4ನೇ ಸ್ಥಾನಕ್ಕೆ ಏರಿದ್ದು, ಕೆಲವೇ ತಿಂಗಳುಗಳಲ್ಲಿ 3ನೇ ಸ್ಥಾನಕ್ಕೆ ಏರಲಿದೆ. ಹಲವು ದಶಕಗಳಿಂದ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವೆಂದೇ ಹೇಳಿಕೊಂಡು ಬರಲಾಗಿದೆ. ಅದರ ಸ್ಥಿತಿ ಬದಲಾಗುವ ಯಾವುದೇ ಸಾಧ್ಯತೆಯೂ ಇರಲಿಲ್ಲ. ಆದರೆ ಇದೀಗ ದೇಶದ ಆರ್ಥಿಕತೆ ಅತಿ ವೇಗದಲ್ಲಿ ಏರುತ್ತಿದೆ. 2047ರ ವೇಳೆಗೆ ಒಂದು ವರ್ಗ ಭಾರತವನ್ನು ಮುಸ್ಲಿಂರಾಷ್ಟ್ರವನ್ನಾಗಿ ಮಾಡುವ ಪಣ ತೊಟ್ಟಿದ್ದರೆ, ಸ್ವಾತಂತ್ರ್ಯದ 100ನೇ ವರ್ಷಾಚರಣೆಯ ವರ್ಷವಾಗಿರುವ ಈ ಸಂದರ್ಭದಲ್ಲಿ ಭಾರತವನ್ನು ವಿಕಸಿತ ಭಾರತ ಅರ್ಥಾತ್​ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಪಣ ತೊಟ್ಟಿದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ.

ಭಾರತ ಮುಂಚೂಣಿ

ಇದಾಗಲೇ ಹಲವಾರು ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯನ್ನು ಸಾಧಿಸುತ್ತಿದೆ. ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಭಾರತದ ಅಭಿವೃದ್ಧಿ ಬೆಳೆಯುತ್ತಿದೆ. ಹಲವು ರಾಷ್ಟ್ರಗಳ ಕಂಪೆನಿಗಳು ತಮ್ಮ ಶಾಖೆಯನ್ನು ಭಾರತದಲ್ಲಿ ತೆರೆಯಲು ಹವಣಿಸುತ್ತಿರುವ ಮಟ್ಟಿಗೆ ಇದಾಗಲೇ ಭಾರತ ಬೆಳೆದು ನಿಂತಿದೆ. ಸ್ವದೇಶಿ ವಸ್ತುಗಳ ಬಳಕೆಯಿಂದಾಗಿ ಭಾರತ ಬೇರೆ ದೇಶಗಳ ಅವಲಂಬನೆಯನ್ನು ಕಡಿಮೆ ಮಾಡಿರುವ ಕಾರಣ, ಅಂಥದ್ದೊಂದು ಮ್ಯಾಜಿಕ್​ ಆಪರೇಷನ್​ ಸಿಂದೂರ್​ ಸಮಯದಲ್ಲಿಯೇ ಇಡೀ ಜಗತ್ತು ಕಂಡಿದೆ. ರಕ್ಷಣಾ ಕ್ಷೇತ್ರದಲ್ಲಿಯೂ ಸ್ವದೇಶಿ ಬಳಕೆಯಿಂದ ಹೇಗೆ ಪಾಕಿಸ್ತಾನದ ಭಯೋತ್ಪಾದಕರು ನಲುಗಿ ಹೋದರು ಎನ್ನುವುದು ಎಲ್ಲರೂ ನೋಡಿಯಾಗಿದೆ.

ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆ

ಇದೀಗ ಇನ್ನೊಂದು ಮಹತ್ತರ ವರದಿಯೊಂದು ಬಿಡುಗಡೆಯಾಗಿದೆ. ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 2014-15ರಲ್ಲಿ ರೂ. 1.9 ಲಕ್ಷ ಕೋಟಿಯಿಂದ 2024-25ರಲ್ಲಿ ರೂ. 11.3 ಲಕ್ಷ ಕೋಟಿಗೆ ಏರಿದೆ. ರಫ್ತು ಎಂಟು ಪಟ್ಟು ಹೆಚ್ಚಾಗಿ, ರೂ. 38,000 ಕೋಟಿಯಿಂದ ರೂ. 3.27 ಲಕ್ಷ ಕೋಟಿಗೆ ಏರಿದೆ, ಆದರೆ ಉದ್ಯಮವು 25 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. 2020–21ರ ಹಣಕಾಸು ವರ್ಷದಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ವಿದೇಶಿ ನೇರ ಹೂಡಿಕೆ 4 ಬಿಲಿಯನ್ ಡಾಲರ್​ ಮೀರಿದೆ, ಇದು ವಲಯದ ಹೆಚ್ಚುತ್ತಿರುವ ಜಾಗತಿಕ ಆಕರ್ಷಣೆಯನ್ನು ಎತ್ತಿ ತೋರಿಸುತ್ತದೆ. 2024–25ನೇ ಹಣಕಾಸು ವರ್ಷದಲ್ಲಿ ಭಾರತೀಯ ಎಲೆಕ್ಟ್ರಾನಿಕ್ ಸರಕುಗಳಿಗೆ ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್, ನೆದರ್‌ಲ್ಯಾಂಡ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಇಟಲಿ ಮೊದಲ ಐದು ತಾಣಗಳಾಗಿವೆ.

ಮೇಕ್​ ಇನ್​ ಇಂಡಿಯಾ

ಇದಲ್ಲದೆ, ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿನ ಏರಿಕೆಗೆ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್‌ನಂತಹ ಉಪಕ್ರಮಗಳು, ಬಲವಾದ ನೀತಿ ಬೆಂಬಲ, ತಾಂತ್ರಿಕ ಪ್ರಗತಿಗಳು ಮತ್ತು ಕೌಶಲ್ಯಪೂರ್ಣ ಕಾರ್ಯಪಡೆ ಕಾರಣವಾಗಿವೆ. ಮೊಬೈಲ್ ಫೋನ್ ಉತ್ಪಾದನೆಯು 2014-15ರಲ್ಲಿ ರೂ. 18 ಸಾವಿರ ಕೋಟಿಯಿಂದ 2024-25ರಲ್ಲಿ ರೂ. 5.45 ಲಕ್ಷ ಕೋಟಿಗೆ ಏರಿಕೆಯಾಗಿದೆ, ಇದು 28 ಪಟ್ಟು ಏರಿಕೆಯಾಗಿದ್ದು, ಭಾರತವನ್ನು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವನ್ನಾಗಿ ಮಾಡಿದೆ.

ರಫ್ತು 127 ಪಟ್ಟು ಹೆಚ್ಚು

2014 ರಲ್ಲಿ ಕೇವಲ ಎರಡು ಘಟಕಗಳಿಂದ ಉದ್ಯಮವು 300 ಕ್ಕಿಂತ ಹೆಚ್ಚಾಗಿದೆ. ರಫ್ತು 127 ಪಟ್ಟು ಹೆಚ್ಚಾಗಿ 2 ಲಕ್ಷ ಕೋಟಿ ರೂ.ಗೆ ತಲುಪಿದೆ, 2024 ರಲ್ಲಿ ಆಪಲ್ ಸಾಧನ ಸಾಗಣೆಯಲ್ಲಿ 1.1 ಲಕ್ಷ ಕೋಟಿ ರೂ. ಕೊಡುಗೆ ನೀಡಿದೆ. 2025–26 ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ, ಭಾರತವು ಚೀನಾವನ್ನು ಹಿಂದಿಕ್ಕಿ ಅಮೆರಿಕಕ್ಕೆ ಪ್ರಮುಖ ಸ್ಮಾರ್ಟ್‌ಫೋನ್ ರಫ್ತುದಾರನಾಯಿತು. ಭಾರತವು 2030–31ರ ವೇಳೆಗೆ 500 ಬಿಲಿಯನ್ ಡಾಲರ್​ ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ತಲುಪುವ ಗುರಿಯನ್ನು ಹೊಂದಿದೆ, ಏಕೆಂದರೆ ಕಳೆದ ದಶಕದಲ್ಲಿ ಈ ವಲಯವು ಸುಮಾರು ಆರು ಪಟ್ಟು ಬೆಳೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.