RSS Chief Mohan Bhagwat on Love Jihad ಬೆಂಗಳೂರಿನಲ್ಲಿ ಮಾತನಾಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಲವ್ ಜಿಹಾದ್ ತಡೆಯಲು ಹಿಂದೂ ಹೆಣ್ಣುಮಕ್ಕಳಿಗೆ ಮನೆಯಲ್ಲೇ ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರು (ನ.9):ಲವ್ ಜಿಹಾಡ್‌ಗೆ ಬಲಿಯಾಗದಂತೆ ನಮ್ಮ ಹೆಣ್ಣು ಮಕ್ಕಳನ್ನು ಬೆಳೆಸೋದು ನಮ್ಮ ಕೈಲಿದೆ ಎಂದು ಆರೆಸ್ಸೆಸ್ ಮುಖ್ಯಸ್ಐ ಮೋಹನ್ ಭಾಗವತ್ ಹೇಳಿದ್ದಾರೆ. ಬೆಂಗಳೂರಿನಲ್ಲಿ '100 ವರ್ಷಗಳ ಸಂಘ ಪಯಣ: ಹೊಸ ದಿಗಂತಗಳು' ಕುರಿತು ಉಪನ್ಯಾಸ ಕಾರ್ಯಕ್ರಮಕ್ಕಾಗಿ ಬಂದಿದ್ದ ಅವರು ನಂತರ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇರಳ ಸ್ಟೋರಿ ಸ್ಟೈಲ್ ಲವ್ ಜಿಹಾದ್ ಬಗ್ಗೆ ಪೂರ್ಣಿಮಾ ಎನ್ನುವವರು ಪ್ರಶ್ನೆ ಕೇಳಿದ್ದರು. ಜಿಹಾದ್ ಮೂವ್‌ಮೆಂಟ್, ಅನ್ಯ ಧರ್ಮದವರು ಜನಸಂಖ್ಯೆ ಹೆಚ್ಚು ಮಾಡಿಕೊಳ್ಳುತ್ತಿರುವ ಬಗ್ಗೆ ಮತ್ತು ಬೇರೆ ಧರ್ಮವರು ಹಿಂದೂ ದೇವರಗಳ ಭಾವಚಿತ್ರ ಬಳಸಿಕೊಂಡು ವ್ಯಾಪಾರ ಹಾಗೂ ಲವ್ ಜಿಹಾದ್ ಹೇಗೆ ತಡೆಯುವುದು ಎಂಬ ಪ್ರಶ್ನೆ ಮಾಡಿದ್ದರು.
ಇದಕ್ಕೆ ಉತ್ತರಿಸಿದ ಮೋಹನ್ ಭಾಗವತ್, 'ಸಂಘ ಹೇಳುವುದು, ಬೇರೆಯವರು ಏನ್ ಮಾಡ್ತಾರೆ ಅನ್ನುವುದರ ಬಗ್ಗೆ ಚಿಂತಿಸಬೇಡಿ. ನಾವು ಏನು ಮಾಡಬೇಕು ಎನ್ನುವುದರ ಬಗ್ಗೆ ಆಲೋಚನೆ ಮಾಡಿ. ಜಿಹಾದ್ ಬೇರೆಯವರು ಇವತ್ತಿನಿಂದ ಮಾಡುತ್ತಿಲ್ಲ. ತುಂಬಾ ದಿನಗಳಿಂದ ಮಾಡುತ್ತಿದ್ದಾರೆ. ಲವ್ ಜಿಹಾದ್ ಆಗುವಾಗ ನಾವು ಏನು ಮಾಡಬೇಕು? ಹಿಂದೂ ಹೆಣ್ಣು ಮಕ್ಕಳು ಕೆಲವು ಆಕರ್ಷಣೆ ಒಳಗಾಗಿ, ಮೂರ್ಖರಾಗುತ್ತಿದ್ದಾರೆ. ನಮ್ಮ ಮನೆಯಲ್ಲೇ ಅವರಿಗೆ ಸಂಸ್ಕಾರ ಕಲಿಸಬೇಕು,. ಲವ್ ಜಿಹಾದ್ ಗೆ ಒಳಗಾಗದಂತೆ ಹೆಣ್ಣು ಮಕ್ಕಳನ್ನು ಬೆಳೆಸಬೇಕು. ಇದರಿಂದ ಲವ್ ಜಿಹಾದ್ ಕೊನೆಯಾಗಲಿದೆ ಎಂದರು.
ಎಲ್ಲಾ ಮುಸ್ಲಿಮರನ್ನು ಒಂದೇ ರೀತಿ ನೋಡಲು ಆಗೋದಿಲ್ಲ
ಮುಸ್ಲಿಂ ಜಿಹಾದ್ ಗಳ ವಿಚಾರದ ಬಗ್ಗೆ ಮಾತನಾಡಿದ ಅವರು, 'ಎಲ್ಲಾ ಭಾರತೀಯ ಮುಸ್ಲಿಮರನ್ನು ಒಂದೇ ರೀತಿಯಲ್ಲಿ ನೋಡಲು ಆಗೋದಿಲ್ಲ. ಎಲ್ಲಾ ಮುಸ್ಲಿಮರನ್ನು ಜಿಹಾದಿಗಳು ಅಂತ ಕರೆಯಲು ಆಗೋದಿಲ್ಲ. ಆ ರೀತಿಯಲ್ಲಿ ನೋಡುವುದು ತಪ್ಪು. ಹಿಂದೂಗಳು ಆ ರೀತಿಯಲ್ಲಿ ನೋಡೊದಿಲ್ಲ. ಮುಸ್ಲಿಂ ಸಮುದಾಯ ಇಸ್ಲಾಂ ಬಗ್ಗೆ ಶಿಕ್ಷಣ ನೀಡಬೇಕು. ಸಮಾಧಾನದ ನೀತಿಯೂ ಬೇಕು ಹಾಗೆಯೇ ದಂಡ ನೀತಿಯೂ ನಮಗೆ ಬೇಕಿದೆ. ಒಳ್ಳೆಯ ಮುಸ್ಲಿಮರು ಇದ್ದಾರೆ ಕೆಟ್ಟ ಮುಸ್ಲಿಮರು ಇದ್ದಾರೆ. ಅದನ್ನು ಮೊದಲು ಗುರುತಿಸಬೇಕು. ನಾವು ಬಲಿಷ್ಠರಾಗಬೇಕು, ಕೆಟ್ಟವರು ಹೆದರಿಕೊಳ್ಳಬೇಕು. ತಪ್ಪು ಮಾಡಿದರೆ ಶಿಕ್ಷೆ ಆಗಲೇಬೇಕು' ಎಂದು ಹೇಳಿದ ಅವರು ಸಂಸ್ಕತ ಶ್ಲೋಕವನ್ನು ಉಲ್ಲೇಖ ಮಾಡಿ, ಹಿಂದೂ ಮುಸ್ಲಿಂ ವಿಚಾರಕ್ಕೆ ಹಿಂದೂ ನೋಡಿದರೆ ದುಷ್ಟರು ಭಯ ಪಡಬೇಕು ಎಂದರು.
