Most wanted Gangsters arrested: ಭಾರತಕ್ಕೆ ಬೇಕಾಗಿದ್ದ ಹರ್ಯಾಣ ಮೂಲದ ಇಬ್ಬರು ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟಾರ್‌ಗಳಾದ ವೆಂಕಟೇಶ್ ಗಾರ್ಗ್ ಮತ್ತು ಭಾನು ರಾಣಾನನ್ನು ಅಮೆರಿಕಾದಲ್ಲಿ ಬಂಧಿಸಲಾಗಿದೆ. ಇವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಪರ್ಕ ಹೊಂದಿದ್ದರು.
ಅಮೆರಿಕಾದಲ್ಲಿ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಂಡ್ ಉಗ್ರರ ಬಂಧನ
ಭಾರತಕ್ಕೆ ಬೇಕಾಗಿದ್ದ ಇಬ್ಬರು ಹರ್ಯಾಣ ಮೂಲದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟಾರ್‌ಗಳನ್ನು ಅಮೆರಿಕಾದಲ್ಲಿ ಬಂಧಿಸುವಲ್ಲಿ ಭಾರತದ ಪೊಲೀಸರು ಯಶಸ್ವಿಯಾಗಿದೆ. ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ದೇಶದ ಇಬ್ಬರು ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟಾರ್‌ಗಳನ್ನು ಬಂಧಿಸುವಲ್ಲಿ ಭಾರತೀಯ ಭದ್ರತಾ ಸಂಸ್ಥೆಗಳು ಯಶಸ್ಸನ್ನು ಸಾಧಿಸಿವೆ. ಹರಿಯಾಣ ಪೊಲೀಸರೂ ಸೇರಿದಂತೆ ಭದ್ರತಾ ಸಂಸ್ಥೆಯ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಬಂಧಿತರನ್ನು ಹರ್ಯಾಣದ ವೆಂಕಟೇಶ್ ಗಾರ್ಗ್ ಹಾಗೂ ಭಾನು ರಾಣಾ ಎಂದು ಗುರುತಿಸಲಾಗಿದೆ. ಇವರಲ್ಲಿ ವೆಂಕಟೇಶ್ ಗಾರ್ಗ್‌ನನ್ನು ಜಾರ್ಜಿಯಾದಲ್ಲಿ ಬಂಧಿಸಿದ್ದಾರೆ ಭಾನು ರಾಣನನ್ನು ಅಮೆರಿಕಾದಲ್ಲಿ ಬಂಧಿಸಲಾಗಿದೆ. ಇವರಿಬ್ಬರು ವಿದೇಶದಲ್ಲಿ ಕುಳಿತು ದೇಶದಲ್ಲಿ ಅಪರಾಧ ಕೃತ್ಯಗಳನ್ನು ಹ್ಯಾಂಡಲ್ ಮಾಡುತ್ತಿದ್ದರು. ಬಂಧಿತರಲ್ಲಿ ಭಾನು ರಾಣಾ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಗುರುತಿಸಿಕೊಂಡಿದ್ದಾನೆ.
ವೆಂಕಟೇಶ್ ಗಾರ್ಗ್ ಮತ್ತು ಭಾನು ರಾಣಾ ಇಬ್ಬರನ್ನೂ ಶೀಘ್ರದಲ್ಲೇ ಭಾರತಕ್ಕೆ ಗಡೀಪಾರು ಮಾಡಲಾಗುವುದು. ಪ್ರಸ್ತುತ, ಭಾರತದ ಎರಡು ಡಜನ್‌ಗಿಂತಲೂ ಹೆಚ್ಚು ಪ್ರಮುಖ ಗ್ಯಾಂಗ್‌ಸ್ಟಾರ್‌ಗಳು ದೇಶದಿಂದ ಹೊರಗಿದ್ದು, ಅಲ್ಲಿಂದಲೇ ತಮ್ಮ ಗ್ಯಾಂಗ್‌ಗೇ ಯುವಕರನ್ನು ಸೇರಿಸಿಕೊಂಡು ದೇಶದಲ್ಲಿ ಅಪರಾಧ ಕೃತ್ಯಗಳನ್ನು ಮಾಡಿಸುತ್ತಿದ್ದಾರೆ. ಉದ್ಯಮಿಗಳು, ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆಯೊಡ್ಡುತ್ತಿದ್ದಾರೆ.
ಬಿಎಸ್ಪಿ ನಾಯಕನ ಹತ್ಯೆಯಲ್ಲಿ ಭಾಗಿಯಾಗಿದ್ದ ವೆಂಕಟೇಶ್ ಗಾರ್ಗ್:
ಬಂಧಿತರಲ್ಲಿ ಓರ್ವನಾದ ವೆಂಕಟೇಶ್ ಗಾರ್ಗ್ ಹರಿಯಾಣದ ನಾರಾಯಣಗಢ ನಿವಾಸಿಯಾಗಿದ್ದು, ಪ್ರಸ್ತುತ ಜಾರ್ಜಿಯಾದಲ್ಲಿ ವಾಸಿಸುತ್ತಿದ್ದ ಈತನ ವಿರುದ್ಧ ಭಾರತದಲ್ಲಿ 10 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಆತ ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಉತ್ತರ ಭಾರತದ ಇತರ ರಾಜ್ಯಗಳಿಂದ ಯುವಕರನ್ನು ತನ್ನ ಅಪರಾಧ ಕೃತ್ಯಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದ. ಗುರುಗ್ರಾಮದಲ್ಲಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ನಾಯಕನ ಕೊಲೆಯಲ್ಲಿಯೂ ಈತ ಭಾಗಿಯಾಗಿದ್ದ ನಂತರ ಆತ ಜಾರ್ಜಿಯಾಕ್ಕೆ ಪಲಾಯನ ಮಾಡಿದ್ದ.
ವಿದೇಶದಲ್ಲಿ ಕುಳಿತು ದೇಶದಲ್ಲಿ ಸುಲಿಗೆ
ಗಾರ್ಗ್, ಪ್ರಸ್ತುತ ವಿದೇಶದಲ್ಲಿ ನೆಲೆಸಿರುವ ಮತ್ತೊಬ್ಬ ಗ್ಯಾಂಗ್‌ಸ್ಟಾರ್ ಕಪಿಲ್ ಸಾಂಗ್ವಾನ್ ಜೊತೆ ಸೇರಿ ಸುಲಿಗೆ, ದರೋಡೆ ಕೃತ್ಯಗಳನ್ನು ನಡೆಸುತ್ತಿದ್ದಾನೆ. ಅಕ್ಟೋಬರ್‌ನಲ್ಲಿ ದೆಹಲಿ ಪೊಲೀಸರು ಈ ಕಪಿಲ್ ಸಾಂಗ್ವಾನ್‌ನ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ನಾಲ್ವರು ಶೂಟರ್‌ಗಳನ್ನು ಬಂಧಿಸಿದ್ದರು, ಅವರು ಬಿಲ್ಡರ್ ಒಬ್ಬರ ಮನೆ ಮತ್ತು ತೋಟದ ಮನೆಯಲ್ಲಿ ಗುಂಡಿನ ದಾಳಿ ನಡೆಸಿದ್ದರು.
ಇತ್ತ ಬಂಧಿತರಲ್ಲಿ ಓರ್ವನಾದ ಭಾನು ರಾಣಾ, ಕುಖ್ಯಾತ ಬಿಷ್ಣೋಯ್ ಗ್ಯಾಂಗ್‌ಗೆ ಜೊತೆ ಸಂಪರ್ಕ ಹೊಂದಿದ್ದಾನೆ. ಹಲವು ಸಮಯದಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದಾನೆ. ಮೂಲತಃ ಕರ್ನಾಲ್ ನಿವಾಸಿಯಾದ ರಾಣಾ ದೀರ್ಘಕಾಲದಿಂದಲೂ ಅಪರಾಧ ಜಗತ್ತಿನಲ್ಲಿ ಸಕ್ರಿಯನಾಗಿದ್ದು, ಅವನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ರಾಣಾನ ಅಪರಾಧ ಕೃತ್ಯದ ಜಾಲವು ಹರಿಯಾಣ, ಪಂಜಾಬ್ ಮತ್ತು ದೆಹಲಿಯವರೆಗೂ ವ್ಯಾಪಿಸಿದೆ.
ಪಂಜಾಬ್‌ನಲ್ಲಿ ನಡೆದ ಗ್ರೆನೇಡ್ ದಾಳಿಯ ತನಿಖೆಯ ಸಮಯದಲ್ಲಿಯೂ ರಾಣಾ ಹೆಸರು ಕೇಳಿ ಬಂದಿತ್ತು. ನಂತರ ಕರ್ನಾಲ್‌ನ ವಿಶೇಷ ಕಾರ್ಯಪಡೆ (STF), ಜೂನ್‌ನಲ್ಲಿ ರಾಣಾನ ಅಣತಿಯಂತೆ ಕೆಲಸ ಮಾಡುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿತು. ಅವರ ಬಳಿಯಿಂದ ಹ್ಯಾಂಡ್ ಗ್ರೆನೇಡ್‌ಗಳು, ಪಿಸ್ತೂಲುಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿತ್ತು.
ಇದನ್ನೂ ಓದಿ: ಆನ್‌ಲೈನ್ ಆರ್ಡರ್ ಲೇಟ್ ಮಾಡಿದ್ರು ಅಂತ ಮ್ಯಾಕ್‌ಡೋನಾಲ್ಡ್ ಕೆಲಸಗಾರನ ಮೇಲೆ ಬಿಸಿ ಟೀ ಎರಚಿದ ಮಹಿಳೆ
ಇದನ್ನೂ ಓದಿ: ಅವಲಕ್ಕಿ ನೀಡಿದಂತೆ ನ್ಯೂಸ್ ಪೇಪರ್‌ನಲ್ಲಿ ಬಿಸಿಯೂಟ ನೀಡಿದ ಶಾಲೆ: ವೀಡಿಯೋ ವೈರಲ್
