- Home
- Sports
- Cricket
- ಸಂಜು ಸ್ಯಾಮ್ಸನ್ ಬೇಕಿದ್ರೆ, ಜಡೇಜಾ ಜತೆಗೆ ಈ ಬಿಗ್ ಹಿಟ್ಟರ್ ಕೊಡಿ ಎಂದು ಬೇಡಿಕೆಯಿಟ್ಟ ರಾಜಸ್ಥಾನ ರಾಯಲ್ಸ್!
ಸಂಜು ಸ್ಯಾಮ್ಸನ್ ಬೇಕಿದ್ರೆ, ಜಡೇಜಾ ಜತೆಗೆ ಈ ಬಿಗ್ ಹಿಟ್ಟರ್ ಕೊಡಿ ಎಂದು ಬೇಡಿಕೆಯಿಟ್ಟ ರಾಜಸ್ಥಾನ ರಾಯಲ್ಸ್!
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟ್ರೇಡ್ ವಿಂಡೋ ಕೊನೆಯಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗಲೇ ಸಂಜು ಸ್ಯಾಮ್ಸನ್ ಟ್ರೇಡಿಂಗ್ ವಿಚಾರವಾಗಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಸಂಜು ಬೇಕಿದ್ರೆ ನಮಗೆ ಜಡೇಜಾ ಜತೆಗೆ ಈ ಸ್ಪೋಟಕ ಬ್ಯಾಟರ್ ಬೇಕು ಎಂದು ರಾಜಸ್ಥಾನ ಡಿಮ್ಯಾಂಡ್ ಇಟ್ಟಿದೆ.

ಸಂಜು ಸೆಳೆಯಲು ಮುಂದುವರೆದ ಸಿಎಸ್‌ಕೆ ಕಸರತ್ತು
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಈ ಬಾರಿ ಹೊಸ ತಂಡದ ಪರ ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿಕೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಕೇರಳ ಮೂಲದ ಆಟಗಾರನನ್ನು ತನ್ನತ್ತ ಸೆಳೆಯಲು ಸರ್ಕಸ್ ನಡೆಸುತ್ತಿದೆ.
ಸಂಜುಗೆ 18 ಕೋಟಿ ನೀಡಿ ರೀಟೈನ್ ಮಾಡಿಕೊಂಡಿದ್ದ ರಾಯಲ್ಸ್
ಕಳೆದ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಸಂಜು ಸ್ಯಾಮ್ಸನ್ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 18 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು.
18 ಕೋಟಿಗೆ ರೀಟೈನ್ ಆಗಿದ್ದ ಜಡೇಜಾ
ಇನ್ನು ಇದೇ ವೇಳೆ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತನ್ನ ನಂಬಿಗಸ್ಥ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾಗೂ ಬರೋಬ್ಬರಿ 18 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು.
ಸಂಜುಗಾಗಿ ಜಡೇಜಾ ಬಿಡಲು ಸಿಎಸ್‌ಕೆ ಸಜ್ಜು
ಹೀಗಾಗಿ ಸಂಜು ಸ್ಯಾಮ್ಸನ್‌ಗೆ ಸರಿಸಾಟಿಯಾಗಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ನೀಡುವುದಾಗಿ ಸಿಎಸ್‌ಕೆ ಫ್ರಾಂಚೈಸಿಯು ರಾಜಸ್ಥಾನ ರಾಯಲ್ಸ್‌ಗೆ ಆಫರ್ ನೀಡಿದೆ ಎಂದು ವರದಿಯಾಗಿತ್ತು.
ಹೊಸ ಡಿಮ್ಯಾಂಡ್ ಇಟ್ಟ ರಾಜಸ್ಥಾನ ರಾಯಲ್ಸ್
ಇದೀಗ ಆಫರ್‌ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಸಂಜು ಸ್ಯಾಮ್ಸನ್ ಬೇಕಿದ್ರೆ, ರವೀಂದ್ರ ಜಡೇಜಾ ಜತೆಗೆ ದಕ್ಷಿಣ ಆಫ್ರಿಕಾ ಮೂಲದ ಪ್ರತಿಭಾನ್ವಿತ ಸ್ಪೋಟಕ ಬ್ಯಾಟರ್ ಡೆವಾಲ್ಡ್ ಬ್ರೆವೀಸ್ ಅವರನ್ನು ತಮಗೆ ಕೊಡಿ ಎಂದು ಸಿಎಸ್‌ಕೆ ಫ್ರಾಂಚೈಸಿ ಬಳಿ ರಾಜಸ್ಥಾನ ರಾಯಲ್ಸ್ ಹೊಸ ಡಿಮ್ಯಾಂಡ್ ಇಟ್ಟಿದೆ ಎಂದು ಕ್ರಿಕ್‌ಬಜ್ ವೆಬ್‌ಸೈಟ್ ವರದಿ ಮಾಡಿದೆ.
ಮರಿ ಎಬಿಡಿ ಬ್ರೆವೀಸ್ ಮೇಲೆ ರಾಯಲ್ಸ್ ಕಣ್ಣು
ದಕ್ಷಿಣ ಆಫ್ರಿಕಾ ಮೂಲದ ಮರಿ ಎಬಿಡಿ ಎಂದೇ ಗುರುತಿಸಿಕೊಂಡಿರುವ ಡೆವಾಲ್ಡ್ ಬ್ರೆವೀಸ್, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯ ಮಧ್ಯದಲ್ಲಿ ಸಿಎಸ್‌ಕೆ ತಂಡವನ್ನು ಕೂಡಿಕೊಂಡು ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದರು.
🚨 CSK AND RR TRADE UPDATE. 🚨
- Rajasthan Royals have asked CSK for Ravindra Jadeja and Dewald Brevis for Sanju Samson. (Cricbuzz). pic.twitter.com/unRw0WRhwM— Mufaddal Vohra (@mufaddal_vohra) November 9, 2025
ಯಾವ ತಂಡದ ಪಾಲಾಗ್ತಾರೆ ಸಂಜು?
ಚೆನ್ನೈ ಸೂಪರ್ ಕಿಂಗ್ಸ್ ಮಾತ್ರವಲ್ಲದೇ ಕೋಲ್ಕತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಕೂಡಾ ಹೊಸ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಹುಡುಕಾಟದಲ್ಲಿದ್ದು ಸಂಜು ಸ್ಯಾಮ್ಸನ್ ಮೇಲೆ ಕಣ್ಣಿಟ್ಟಿವೆ. ಹೀಗಾಗಿ ಸಂಜು ಸ್ಯಾಮ್ಸನ್ ಯಾವ ತಂಡದ ಪಾಲಾಗ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.