10:26 PM (IST) Nov 12

India News Live 12th November:ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಆರ್‌ಜೆಡಿ ಅತಿದೊಡ್ಡ ಪಕ್ಷ, ಮಹಾಮೈತ್ರಿಕೂಟ ಸರ್ಕಾರ, ಇಲ್ಲಿದೆ ಲೆಕ್ಕಾಚಾರ!

ಬಿಹಾರ ವಿಧಾನಸಭಾ ಚುನಾವಣೆಯ ಹೆಚ್ಚಿನ ಎಕ್ಸಿಟ್ ಸಮೀಕ್ಷೆಗಳು ಎನ್‌ಡಿಎಗೆ ಜಯ ಸೂಚಿಸಿದರೂ, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ಮಹಾಮೈತ್ರಿಕೂಟಕ್ಕೂ ಅವಕಾಶವಿದೆ ಎಂದಿದೆ. ಓವೈಸಿ ಪಕ್ಷ ಮತ್ತು ಇತರರ ಬೆಂಬಲದಿಂದ ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗುವ ಸಂಭಾವ್ಯ ರಾಜಕೀಯ ಲೆಕ್ಕಾಚಾರ ಈ ವರದಿ ವಿಶ್ಲೇಷಿಸುತ್ತದೆ.

Read Full Story
10:08 PM (IST) Nov 12

India News Live 12th November:ರೈಲಿನ ಲೋವರ್ ಬರ್ತ್ ಟಿಕೆಟ್ ಬೇಕಿದ್ದರೆ ಈ ತಪ್ಪು ಮಾಡಬೇಡಿ, ಬುಕಿಂಗ್ ಟಿಪ್ಸ್ ನೀಡಿದ ಟಿಟಿಇ

ರೈಲಿನ ಲೋವರ್ ಬರ್ತ್ ಟಿಕೆಟ್ ಬೇಕಿದ್ದರೆ ಈ ತಪ್ಪು ಮಾಡಬೇಡಿ, ಬುಕಿಂಗ್ ಟಿಪ್ಸ್ ನೀಡಿದ ಟಿಟಿಇ, ವಿಶೇಷವಾಗಿ ಹಿರಿಯ ನಾಗರೀಕರು ಟಿಕೆಟ್ ಬುಕಿಂಗ್ ಮಾಡುವಾಗ ಈ ಸಲಹೆ ಪಾಲಿಸಲು ಟಿಕೆಟ್ ಎಕ್ಸಾಮಿನರ್ ಸೂಚಿಸಿದ್ದಾರೆ.

Read Full Story
09:06 PM (IST) Nov 12

India News Live 12th November:ದೆಹಲಿ ಕಾರು ಸ್ಫೋಟ ಭಯೋತ್ಪಾದಕ ಕೃತ್ಯ, ಕೇಂದ್ರದಿಂದ ಅಧಿಕೃತ ಘೋಷಣೆ ಬೆನ್ನಲ್ಲೇ ಭದ್ರತಾ ಸಭೆ

ದೆಹಲಿ ಕಾರು ಸ್ಫೋಟ ಭಯೋತ್ಪಾದಕ ಕೃತ್ಯ, ಕೇಂದ್ರದಿಂದ ಅಧಿಕೃತ ಘೋಷಣೆ ಬೆನ್ನಲ್ಲೇ ಭದ್ರತಾ ಸಭೆ ನಡೆಯುತ್ತಿದೆ. ಪ್ರಧಾನಿ ಮೋದಿ, ಅಜಿತ್ ದೋವಲ್, ಅಮಿತ್ ಶಾ ಸೇರಿದಂತೆ ಪ್ರಮುಖರ ಉನ್ನತ ಮಟ್ಟದ ಸಭೆ ಆಪರೇಶನ್ ಸಿಂದೂರ್ 2ನೇ ಭಾಗದ ಸುಳಿವು ನೀಡುತ್ತಿದೆ.

Read Full Story
07:23 PM (IST) Nov 12

India News Live 12th November:ಮದುವೆ ಮನೆಯಲ್ಲೇ ವರನಿಗೆ ಚಾಕು ಇರಿತ - 2 ಕಿ.ಮೀವರೆಗೆ ಹಿಂಬಾಲಿಸಿದ ಡ್ರೋನ್ ಕ್ಯಾಮರಾ!

ಮಹಾರಾಷ್ಟ್ರದ ಅಮರಾವತಿಯಲ್ಲಿ, ಮದುವೆ ದಿನವೇ ವರನಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ಈ ಸಂಪೂರ್ಣ ಘಟನೆಯು ಮದುವೆಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಡ್ರೋನ್ ಆಪರೇಟರ್‌ನ ಸಮಯಪ್ರಜ್ಞೆಯಿಂದ ಆರೋಪಿಯನ್ನು ಸುಮಾರು 2 ಕಿ.ಮೀ ವರೆಗೆ ಹಿಂಬಾಲಿಸಲಾಗಿದೆ.

Read Full Story
06:55 PM (IST) Nov 12

India News Live 12th November:ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ, ದೆಹಲಿ ಸೇರಿ 5 ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್ ಘೋಷಣೆ

ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ, ದೆಹಲಿ ಸೇರಿ 5 ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ದೆಹಲಿ ಸ್ಫೋಟದ ಬೆನ್ನಲ್ಲೇ ಬೆದರಿಕೆ ಬಂದಿದ್ದು, ತನಿಖಾ ಎಜೆನ್ಸಿಗಳು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಿದೆ.

Read Full Story
06:05 PM (IST) Nov 12

India News Live 12th November:ವೃದ್ಧ ಪೋಷಕರ ಹೊರ ಹಾಕಿದ್ದ ಮಕ್ಕಳು - ಹಸಿವಿನಿಂದ ಬೀದಿಯಲ್ಲಿ ಅಲೆಯುತ್ತಿದ್ದವರಿಗೆ ಪೊಲೀಸರಿಂದ ನೆರವು

Elderly parents abandoned by sons: ಉತ್ತರ ಪ್ರದೇಶದ ಇತ್ತಾಹ್‌ನಲ್ಲಿ, ಇಬ್ಬರು ಗಂಡು ಮಕ್ಕಳು ತಮ್ಮ ವೃದ್ಧ ಪೋಷಕರನ್ನು ಜಗಳವಾಡಿ ಮನೆಯಿಂದ ಹೊರಹಾಕಿದ್ದಾರೆ. ನಾಲ್ಕು ದಿನಗಳ ಕಾಲ ಬೀದಿಯಲ್ಲಿ ಹಸಿವಿನಿಂದ ಬಳಲುತ್ತಿದ್ದ ದಂಪತಿಯನ್ನು ಗಮನಿಸಿದ ಪೊಲೀಸರು, ಅವರಿಗೆ ಸಹಾಯ ಮಾಡಿ ಮನೆಗೆ ಸೇರಿಸಿದ್ದಾರೆ.

Read Full Story
06:03 PM (IST) Nov 12

India News Live 12th November:ಒಂದು ವೇಳೆ ವಿರಾಟ್ ಕೊಹ್ಲಿಯಾಗಿ ಬದಲಾದರೇ ಎಬಿ ಡಿವಿಲಿಯರ್ಸ್ ಮೊದಲು ಮಾಡುವ ಕೆಲಸ ಏನು?

ಬೆಂಗಳೂರು: ಎಬಿ ಡಿವಿಲಿಯರ್ಸ್ ಯಾರಿಗೆ ಗೊತ್ತಿಲ್ಲ ಹೇಳಿ? ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್, ಆರ್‌ಸಿಬಿ ಪಾಲಿನ ಆಪತ್ಬಾಂದವ ಎಂದೇ ಕರೆಸಿಕೊಳ್ಳುವ ಎಬಿಡಿ, Q&A ಕಾರ್ಯಕ್ರಮವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Read Full Story
05:45 PM (IST) Nov 12

India News Live 12th November:ರಿಸಿನ್ - ಜಾಗತಿಕ ಭದ್ರತೆಗೆ ಬೆದರಿಕೆ ಹಾಕಿದ ಹೊಸ ಜೈವಿಕ ಆಯುಧ! ಈ ರಾಸಾಯನಿಕ ಏಕಿಷ್ಟು ಅಪಾಯಕಾರಿ?

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಮೂವರು ಉಗ್ರರನ್ನು ಬಂಧಿಸಿದ್ದು, ಇವರು ಮಾರಣಾಂತಿಕ ರಿಸಿನ್ ವಿಷ ಬಳಸಿ ದೇಶಾದ್ಯಂತ ದಾಳಿ ನಡೆಸಲು ಸಂಚು ರೂಪಿಸಿದ್ದರು. ದೆಹಲಿ, ಅಹಮದಾಬಾದ್‌ನ ನೀರಿನ ಮೂಲಗಳು ಮತ್ತು ದೇವಾಲಯಗಳ ಪ್ರಸಾದವನ್ನು ಕಲುಷಿತಗೊಳಿಸಿ ಸಾಮೂಹಿಕ ಹತ್ಯೆ ನಡೆಸುವುದು ಇವರ ಯೋಜನೆಯಾಗಿತ್ತು.

Read Full Story
05:28 PM (IST) Nov 12

India News Live 12th November:ಮೀನುಗಾರರ ಬಲೆಗೆ ಸಿಕ್ಕೇ ಬಿಟ್ಟಿತು ಕೋಟಿ ಕೋಟಿ ಮೌಲ್ಯದ ವಾಂತಿ! ಸರ್ಕಾರಕ್ಕೆ ಹೊಡೀತು ಲಾಟರಿ- ಏನಿದು?

ಕೇರಳದ ಕೊಯಿಲಾಂಡಿಯಲ್ಲಿ ಮೀನುಗಾರರ ಬಲೆಗೆ ಕೋಟಿಗಟ್ಟಲೆ ಮೌಲ್ಯದ ತಿಮಿಂಗಲದ ವಾಂತಿ (ಅಂಬರ್ಗ್ರಿಸ್) ಸಿಕ್ಕಿದೆ. 'ತೇಲುವ ಚಿನ್ನ' ಎಂದೇ ಖ್ಯಾತವಾದ ಇದನ್ನು ಸುಗಂಧ ದ್ರವ್ಯದಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಇದರ ಮಾರಾಟ ಕಾನೂನುಬಾಹಿರವಾದ್ದರಿಂದ, ಮೀನುಗಾರರು ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ

Read Full Story
04:35 PM (IST) Nov 12

India News Live 12th November:ನಿಗೂಢವಾಗಿ ಕಣ್ಮರೆಯಾಗಿದ್ದಳು ಅನುಮಾನವಿತ್ತು - ಟೆರರಿಸ್ಟ್ ವೈದ್ಯೆ ಡಾ. ಶಾಹೀನಾ ಮಾಜಿ ಪತಿ ಹೇಳಿದ್ದೇನು?

Shaheena Syed ex-husband interview: ದೆಹಲಿ ಬಾಂಬ್ ಬ್ಲಾಸ್ಟ್ ಹಾಗೂ ಫರಿದಾಬಾದ್‌ನಲ್ಲಿ ಭಾರಿ ಪ್ರಮಾಣದ ಸ್ಫೋಟಕ ಸಂಗ್ರಹ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ವೈದ್ಯೆ 45 ವರ್ಷದ ಡಾ. ಶಾಹೀನಾ ಸೈಯದ್‌ ಬಗ್ಗೆ ಆಕೆಯ ಮಾಜಿ ಪತಿ ಮಾತನಾಡಿದ್ದು ಅವರು ಏನು ಹೇಳಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

Read Full Story
04:19 PM (IST) Nov 12

India News Live 12th November:ಭಾರತದ ಕ್ರಿಕೆಟ್ ಕ್ರಶ್ ಸ್ಮೃತಿ ಮಂಧನಾಗೆ ಈ ಕನ್ನಡ ಫೇಮಸ್ ಹಾಡು ಅಂದ್ರೆ ಪಂಚಪ್ರಾಣವಂತೆ!

ಬೆಂಗಳೂರು: ಭಾರತ ಮಹಿಳಾ ತಂಡವು ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಬೀಗಿದೆ. ಇನ್ನು ಟೂರ್ನಿಯಲ್ಲಿ ಭಾರತ ಪರ ಗರಿಷ್ಠ ರನ್ ಬಾರಿಸುವ ಮೂಲಕ ಚಾಂಪಿಯನ್ ಆಗಲು ಮಹತ್ವದ ಪಾತ್ರ ವಹಿಸಿದ ಭಾರತದ ಕ್ರಿಕೆಟ್ ಕ್ರಶ್ ಸ್ಮೃತಿ ಮಂಧನಾಗೆ ಕನ್ನಡದ ಈ ಹಾಡು ಅಂದ್ರೆ ಪಂಚಪ್ರಾಣವಂತೆ.

Read Full Story
04:17 PM (IST) Nov 12

India News Live 12th November:ಬಾಂಬ್​ ಬ್ಲಾಸ್ಟ್​ನ ಉಗ್ರರು 'ರೆಜಿಸ್ಟರ್'​ ಆಗಿಲ್ಲ ಎನ್ನೋದೇ ಕಾಂಗ್ರೆಸ್ ಚಿಂತೆಯೆ? ಚರ್ಚೆ ಹುಟ್ಟುಹಾಕಿದ ವಕ್ತಾರೆ ಪೋಸ್ಟ್​

ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಭಯೋತ್ಪಾದಕ ದಾಳಿಯು ರಾಜಕೀಯ ತಿರುವು ಪಡೆದುಕೊಂಡಿದೆ. ಈ ನಡುವೆ, ಕಾಂಗ್ರೆಸ್ ವಕ್ಆರೆ ನಜ್ಮಾ ನಜೀರ್ ಅವರು 'ನೋಂದಾವಣಿ ಇಲ್ಲದ ಉಗ್ರ ಸಂಘಟನೆ' ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಈ ಹೇಳಿಕೆಯು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Read Full Story
03:42 PM (IST) Nov 12

India News Live 12th November:ಸಿಕ್ ಲೀವ್ ಪಡೆದಿದ್ದಕ್ಕೆ ಕೆಲಸದಿಂದ ವಜಾ - ಕಂಪನಿ ವಿರುದ್ಧ ಕೇಸ್ ದಾಖಲಿಸಿ ಗೆದ್ದ ಉದ್ಯೋಗಿ

employee fired for walking on sick leave: ಅನಾರೋಗ್ಯದ ರಜೆ ಪಡೆದು 16,000 ಹೆಜ್ಜೆ ನಡೆದಿದ್ದಕ್ಕೆ ಚೀನಾದಲ್ಲಿ ಉದ್ಯೋಗಿಯೊಬ್ಬರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಕಂಪನಿ ವಿರುದ್ಧ ಕೇಸು ಹಾಕಿ ಗೆದ್ದ ಆತನಿಗೆ 14 ಲಕ್ಷ ರೂ ಹಣ ಪಾವತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

Read Full Story
03:37 PM (IST) Nov 12

India News Live 12th November:ಸ್ಯಾಮ್ ಕರ್ರನ್‌ ತಂಡಕ್ಕೆ ಸೇರಿಸಿಕೊಳ್ಳಲು ಈ ಇಬ್ಬರು ಆಟಗಾರರಿಗೆ ರಾಜಸ್ಥಾನ ರಾಯಲ್ಸ್ ಗೇಟ್‌ಪಾಸ್?

ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ಈ ಒಪ್ಪಂದದ ಭಾಗವಾಗಿ ಜಡೇಜಾ ಮತ್ತು ಸ್ಯಾಮ್ ಕರ್ರನ್ ರಾಜಸ್ಥಾನ ತಂಡಕ್ಕೆ ಬರಲಿದ್ದು, ವಿದೇಶಿ ಆಟಗಾರರ ಕೋಟಾ ಮತ್ತು ಸಂಭಾವನೆಯ ಸಮಸ್ಯೆಯಿಂದಾಗಿ ರಾಯಲ್ಸ್‌ಗೆ ವರ್ಗಾವಣೆ ಪ್ರಕ್ರಿಯೆ ಕಷ್ಟಕರವಾಗಿದೆ.

Read Full Story
02:08 PM (IST) Nov 12

India News Live 12th November:ಐಪಿಎಲ್ ಟ್ರೇಡ್ ರೂಲ್ಸ್ - ನೀವು ನಿಜಕ್ಕೂ ಕ್ರಿಕೆಟ್ ಫ್ಯಾನ್ಸ್ ಆದ್ರೆ ಈ ಎಲ್ಲಾ ನಿಯಮ ಗೊತ್ತಿರಲಿ!

ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೂ ಮೊದಲು ಆಟಗಾರರ ಟ್ರೇಡ್ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಐಪಿಎಲ್ ಟ್ರೇಡ್ ರೂಲ್ಸ್ ಏನು? ಇದು ಹೇಗೆಲ್ಲಾ ವರ್ಕ್ ಆಗುತ್ತೆ ಎನ್ನುವುದನ್ನು ನೋಡೋಣ ಬನ್ನಿ.

Read Full Story
01:43 PM (IST) Nov 12

India News Live 12th November:ಮದುವೆ ಮನೆಯಲ್ಲಿ ಮಸಣದ ಪ್ಲಾನ್ - ಮಸೂದ್ ಅಜರ್ ಸೋದರಿ ಜೊತೆ ನೇರ ಸಂಪರ್ಕ ಹೊಂದಿದ್ದ ಶಾಹೀನ್

ದೆಹಲಿಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ ತನಿಖೆಯು 'ವೈಟ್ ಕಾಲರ್ ಟೆರರ್' ಎಂಬ ಭಯಾನಕ ಜಾಲವನ್ನು ಬಯಲುಮಾಡಿದೆ. ಈ ಸ್ಫೋಟಕ್ಕೆ ಮದುವೆಯೊಂದರಲ್ಲಿ ಪ್ಲಾನ್ ಮಾಡಲಾಗಿತ್ತು ಎಂಬ ವಿಚಾರ ತನಿಖೆಯಿಂದ ಬಯಲಾಗಿದೆ.

Read Full Story
01:36 PM (IST) Nov 12

India News Live 12th November:Delho Bomb Blast - ಜಾಗತಿಕ ಭೂಪಟದಿಂದ ಪಾಕಿಸ್ತಾನ ಮಾಯ? ಪಾಪಿಗಳಿಗೆ ನಡುಕ! ಉಗ್ರ ರಾಷ್ಟ್ರದಲ್ಲಿ ಹೈ ಅಲರ್ಟ್​

ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟದ ಹಿಂದೆ ಜೈಶ್-ಎ-ಮೊಹಮ್ಮದ್ ಸಂಘಟನೆಯ ಕೈವಾಡ ಶಂಕಿಸಲಾಗಿದೆ. ಈ ದಾಳಿಯ ಬಳಿಕ, ಭಾರತವು 'ಆಪರೇಷನ್ ಸಿಂದೂರ್ 2.0' ಕಾರ್ಯಾಚರಣೆಯ ಎಚ್ಚರಿಕೆ ನೀಡಿದ್ದು, ಇದರಿಂದ ಭಯಭೀತವಾಗಿರುವ ಪಾಕಿಸ್ತಾನವು ತನ್ನ ಸೇನೆಗೆ ಹೈ ಅಲರ್ಟ್ ಘೋಷಿಸಿದೆ.
Read Full Story
01:20 PM (IST) Nov 12

India News Live 12th November:IPL 2026 ಟೂರ್ನಿಗೆ ಬದಲಾಗಬಹುದು ಆರ್‌ಸಿಬಿ ಹೋಮ್ ಗ್ರೌಂಡ್; ಈ ಸ್ಟೇಡಿಯಂನಿಂದ ಹಾಲಿ ಚಾಂಪಿಯನ್‌ಗೆ ಓಪನ್ ಆಫರ್!

ಐಪಿಎಲ್ ಚಾಂಪಿಯನ್ ಆದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತದಿಂದಾಗಿ, ಸ್ಟೇಡಿಯಂನಲ್ಲಿ ಪಂದ್ಯಗಳ ಆಯೋಜನೆಗೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಮೈದಾನವನ್ನು ಬದಲಿಸುವ ಸಾಧ್ಯತೆಯಿದೆ.

Read Full Story
12:46 PM (IST) Nov 12

India News Live 12th November:ದೆಹಲಿ ಸ್ಫೋಟದ ನಂತರ ತೀವ್ರಗೊಂಡ ವಾಹನ ತಪಾಸಣೆ - ಕಾರಲ್ಲಿ 1 ಕೋಟಿ ಮೊತ್ತದ ದಾಖಲೆ ಇಲ್ಲದ ನಗದು ಪತ್ತೆ

found Rs 1 crore cash in car: ದೆಹಲಿ ಕಾರು ಬಾಂಬ್ ಸ್ಫೋಟದ ನಂತರ ಹರಿಯಾಣ ಪೊಲೀಸರು ವಾಹನ ತಪಾಸಣೆಯನ್ನು ತೀವ್ರಗೊಳಿಸಿದ್ದು, ಈ ವೇಳೆ ದೆಹಲಿ ನೋಂದಣಿಯ ಕಾರೊಂದರಲ್ಲಿ ದಾಖಲೆಗಳಿಲ್ಲದ ₹1 ಕೋಟಿ ನಗದು ಪತ್ತೆಯಾಗಿದ್ದು, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

Read Full Story
12:13 PM (IST) Nov 12

India News Live 12th November:ಧಮೇಂದ್ರ ಡಿಸ್​ಚಾರ್ಜ್​ - ಭೇಟಿ ಕೊಟ್ಟು ಬಂದ ನಟ ಗೋವಿಂದ ಕುಸಿದು ಬಿದ್ದು ಸ್ಥಿತಿ ಗಂಭೀರ- ಆಸ್ಪತ್ರೆಗೆ ದಾಖಲು!

ಹಿರಿಯ ನಟ ಧರ್ಮೇಂದ್ರ ಅವರನ್ನು ಭೇಟಿಯಾದ ಬಳಿಕ, ನಟ ಗೋವಿಂದ ಅವರು ತಮ್ಮ ನಿವಾಸದಲ್ಲಿ ಮಧ್ಯರಾತ್ರಿ ಕುಸಿದು ಬಿದ್ದಿದ್ದಾರೆ. ಸದ್ಯ ಅವರನ್ನು ಮುಂಬೈನ ಕ್ರಿಟಿಕೇರ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

Read Full Story