ರೈಲಿನ ಲೋವರ್ ಬರ್ತ್ ಟಿಕೆಟ್ ಬೇಕಿದ್ದರೆ ಈ ತಪ್ಪು ಮಾಡಬೇಡಿ, ಬುಕಿಂಗ್ ಟಿಪ್ಸ್ ನೀಡಿದ ಟಿಟಿಇ, ವಿಶೇಷವಾಗಿ ಹಿರಿಯ ನಾಗರೀಕರು ಟಿಕೆಟ್ ಬುಕಿಂಗ್ ಮಾಡುವಾಗ ಈ ಸಲಹೆ ಪಾಲಿಸಲು ಟಿಕೆಟ್ ಎಕ್ಸಾಮಿನರ್ ಸೂಚಿಸಿದ್ದಾರೆ.
ನವದೆಹಲಿ (ನ.12) ರೈಲು ಟಿಕೆಟ್ ಬುಕಿಂಗ್ ಮಾಡುವ ಬಹುತೇಕರ ಕೆಲ ತಪ್ಪುಗಳನ್ನು ಮಾಡುವ ಕಾರಣ ಸೂಕ್ತ ಟಿಕೆಟ್ ಸಿಗದೇ ಪರದಾಡುತ್ತಾರೆ. ಬಳಿಕ ರೈಲು ಪ್ರಯಾಣದ ವೇಳೆ ಇತರ ಪ್ರಯಾಣಿಕರ ಬಳಿ ಮನವಿ ಮಾಡಿ ಸೀಟು ಬದಲಾಯಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಪ್ರಮುಖವಾಗಿ ಹಿರಿಯ ನಾಗರೀಕರು ರೈಲಿನಲ್ಲಿ ಲೋವರ್ ಬರ್ತ್ ಸೀಟು ಬುಕಿಂಗ್ ಮಾಡುವ ಕೆಲ ತಪ್ಪುಗಳನ್ನು ಮಾಡುತ್ತಾರೆ. ಇದರ ಬದಲು ಸಿಂಪಲ್ ಟಿಪ್ಸ್ ಪಾಲಿಸಲು ರೈಲಿನ ಟಿಟಿಐ ಹೇಳಿದ್ದಾರೆ. ಇದರಿಂದ ಸುಲಭವಾಗಿ ಲೋವರ್ ಬರ್ತ್ ಟಿಕೆಟ್ ಲಭ್ಯವಾಗಲಿದೆ ಎಂದು ಟಿಟಿಐ ಹೇಳಿದ್ದಾರೆ.
ಲೋವರ್ ಬರ್ತ್ ಸೀಕ್ರೆಟ್
ದಿಬ್ರುಗಡ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಟಿಟಿಐ ಟಿಕೆಟ್ ಬುಕಿಂಗ್ ಮಾಡುವಾಗ ಎಚ್ಚರವಹಿಸಬೇಕಾದ ಸಲಹೆ ನೀಡಿದ್ದರೆ. ಈ ಟಿಟಿಐ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೈಲು ಸಂಖ್ಯೆ 2424ರಲ್ಲಿ ಇಂದು ನಾಲ್ಕು ಹಿರಿಯ ನಾಗರೀಕರು ಪ್ರಯಾಣಿಸುತ್ತಿದ್ದಾರೆ. ಆದರೆ ಅವರಿಗೆ ಲೋವರ್ ಬರ್ತ್ ಸೀಟು ಸಿಕ್ಕಿಲ್ಲ.ಅವರಿಗೆ ಮಧ್ಯ ಹಾಗೂ ಅಪ್ಪರ್ ಬರ್ತ್ ಸೀಟು ಸಿಕ್ಕಿದೆ. ಈ ಸೀಟಿನಲ್ಲಿ ಹಿರಿಯ ನಾಗರೀಕರಿಗೆ ಪ್ರಯಾಣ ಅಸಾಧ್ಯವಾಗಿದೆ. ಹೀಗಾಗಿ ಹಿರಿಯ ನಾಗರೀಕರು ಟಿಕೆಟ್ ಬುಕಿಂಗ್ ಮಾಡುವಾಗ ಏನು ಮಾಡಬೇಕು ಎಂದು ಟಿಟಿಇ ವಿವರಿಸಿದ್ದಾರೆ.
ಬುಕಿಂಗ್‌ನಲ್ಲಿ ಸಣ್ಣ ಬದಲಾವಣೆ
ಬಹುತೇಕ ಹಿರಿಯ ನಾಗರೀಕರು ಟಿಕೆಟ್ ಬುಕಿಂಗ್ ಮಾಡುವಾಗ ಸೀನಿಯರ್ ಕೋಟಾದಲ್ಲಿ ಬುಕ್ ಮಾಡುತ್ತಾರೆ. ಅದರೂ ಅವರಿಗೆ ಲೋವರ್ ಬರ್ತ್ ಸಿಗುವುದಿಲ್ಲ. ಉದಾಹರಣೆಗೆ ಒಂದೇ ಕುಟುಂಬದ ನಾಲ್ಕು ಹಿರಿಯ ನಾಗರೀಕರು ಪ್ರಯಾಣ ಮಾಡಲು ಟಿಕಟ್ ಬುಕಿಂಗ್ ಮಾಡುವಾಗ ಒಬ್ಬರ ಐಡಿ ಅಥವಾ ಆ್ಯಪ್ ಮೂಲಕ ನಾಲ್ಕು ಟಿಕೆಟ್ ಬುಕಿಂಗ್ ಮಾಡುತ್ತಾರೆ. ಈ ವೇಳೆ ಸೀನಿಯರ್ ಟಿಕೆಟ್ ಕೋಟಾದಲ್ಲಿ ಮಾಡಿದರೂ ಲೋವರ್ ಬರ್ತ್ ಸಿಗುವುದಿಲ್ಲ. ಕಾರಣ ಸೀನಿಯರ್ ಟಿಕೆಟ್ ಬುಕಿಂಗ್ ಮಾಡುವಾಗ ಒಬ್ಬರ ಟಿಕೆಟ್‌ನಲ್ಲಿ 2 ಸೀಟುಗಳಿಗೆ ಬುಕಿಂಗ್ ಮಾಡಿದರೆ ಮಾತ್ರ ಲೋವರ್ ಬರ್ತ್ ಸಿಗಲಿದೆ. ಎರಡಕ್ಕಿಂತ ಹೆಚ್ಚು ಟಿಕಟ್ ಬುಕಿಂಗ್ ಮಾಡಿದರೆ ಎಲ್ಲವೂ ಜನರಲ್ ಕೆಟಗರಿಯಲ್ಲಿ ಟಿಕೆಟ್ ಬುಕ್ ಆಗಲಿದೆ. ಹೀಗಾಗಿ ನಾಲ್ಕು ಟಿಕೆಟ್ ಬೇಕಿದ್ದರೆ ಎರಡು ಹಾಗೂ ಎರಡು ಈ ರೀತಿ ಟಿಕೆಟ್ ಬುಕಿಂಗ್ ಮಾಡಬೇಕು ಎಂದು ರೈಲ್ವೇ ಟಿಟಿಐ ಸಲಹೆ ನೀಡಿದ್ದಾರೆ.
60 ವರ್ಷಕ್ಕಿಂತ ಮೇಲ್ಪಟ್ಟ ಪುರುಷ ಹಾಗೂ 45 ವರ್ಷ ಮಹಿಳಾ ಹಿರಿಯ ನಾಗರೀಕರಿಗೆ ರೈಲ್ವೇ ಟಿಕೆಟ್ ಬುಕಿಂಗ್‌ನಲ್ಲಿ ಕೆಲ ಸವಲತ್ತುಗಳಿವೆ. ಈ ಪೈಕಿ ಲೋವರ್ ಬರ್ತ್ ಸೀಟು ಕೂಡ ಒಂದು. ಹೀಗಾಗಿ ಈ ಸವಲತ್ತುಗಳನ್ನು ಪಡೆಯಲು ಟಿಕೆಟ್ ಬುಕಿಂಗ್ ವೇಳೆ ಎಚ್ಚರವಹಿಸುವಂತೆ ಟಿಟಿಐ ವಿಡಿಯೋ ಮೂಲಕ ಹೇಳಿದ್ದಾರೆ.
