ಐಪಿಎಲ್ ಟ್ರೇಡ್ ರೂಲ್ಸ್: ನೀವು ನಿಜಕ್ಕೂ ಕ್ರಿಕೆಟ್ ಫ್ಯಾನ್ಸ್ ಆದ್ರೆ ಈ ಎಲ್ಲಾ ನಿಯಮ ಗೊತ್ತಿರಲಿ!
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೂ ಮೊದಲು ಆಟಗಾರರ ಟ್ರೇಡ್ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಐಪಿಎಲ್ ಟ್ರೇಡ್ ರೂಲ್ಸ್ ಏನು? ಇದು ಹೇಗೆಲ್ಲಾ ವರ್ಕ್ ಆಗುತ್ತೆ ಎನ್ನುವುದನ್ನು ನೋಡೋಣ ಬನ್ನಿ.

ಐಪಿಎಲ್ ಟ್ರೇಡ್ ರೂಲ್ಸ್ ಮಾಹಿತಿ
ಐಪಿಎಲ್ ಟ್ರೇಡ್ ವಿಂಡೋ, ಐಪಿಎಲ್ ಸೀಸನ್ ಮುಗಿದ ಒಂದು ತಿಂಗಳ ನಂತರದಿಂದಲೇ ಓಪನ್ ಆಗಲಿದ್ದು, ಇದು ಮುಂಬರುವ ಆಟಗಾರರ ಹರಾಜಿಗೂ ಒಂದು ವಾರ ಬಾಕಿಯಿರುವರೆಗೆ ಚಾಲ್ತಿಯಲ್ಲಿರಲಿದೆ.
ಎರಡು ರೀತಿ ಟ್ರೇಡ್ ವಿಂಡೋ
ಈ ಟ್ರೇಡ್ ವಿಂಡೋ ಅವಧಿಯಲ್ಲಿ ತಂಡಗಳು ಒನ್ ವೇ ಟ್ರೇಡ್(ಇನ್ನೊಂದು ಫ್ರಾಂಚೈಸಿ ಹಣ ನೀಡಿ ಆಟಗಾರನನ್ನು ಖರೀದಿಸುವುದು) ಅಥವಾ ಟು ವೇ ಸ್ವಾಪ್ಸ್(ಆಟಗಾರರನ್ನು ಬದಲಿಸಿಕೊಳ್ಳುವುದು) ರೀತಿಯಲ್ಲಿ ಟ್ರೇಡ್ ಮಾಡಬಹುದು.
ಆಟಗಾರರ ಟ್ರೇಡಿಂಗ್ ಬಿಸಿಸಿಐ ಗಮನಕ್ಕೆ ತರಬೇಕು
ಒಂದು ವೇಳೆ ಆಟಗಾರರನ್ನು ಟ್ರೇಡ್ ಮಾಡಬೇಕಿದ್ದರೇ ಮೊದಲಿಗೆ ತಂಡವು ಬಿಸಿಸಿಐ ಬಳಿ, ನಾವು ಈ ಆಟಗಾರನ ಟ್ರೇಡ್ ಮಾಡಿಕೊಳ್ಳಲು ಆಸಕ್ತಿ ಹೊಂದಿದ್ದೇವೆ ಎಂದು ತಿಳಿಸಬೇಕು. ಇದಕ್ಕೆ ಮಾರುವ ತಂಡವು 48 ಗಂಟೆಯೊಳಗಾಗಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ.
ಟ್ರೇಡಿಂಗ್‌ಗೆ ಆಟಗಾರರ ಒಪ್ಪಿಗೆ ಮುಖ್ಯ
ಆಟಗಾರ ಹೊಸ ತಂಡ ಸೇರಿಕೊಳ್ಳಲು ಒಪ್ಪಿಗೆಯಿದ್ದರಷ್ಟೇ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕವಷ್ಟೇ ಐಪಿಎಲ್ ಹರಾಜಿಗೂ ಮೊದಲೇ ಆಟಗಾರನನ್ನು ಟ್ರೇಡ್ ಮಾಡಲು ಅವಕಾಶವಿರುತ್ತದೆ.
ಹೆಚ್ಚುವರಿ ಹಣವನ್ನು ಹಂಚಿಕೊಳ್ಳಲು ಅವಕಾಶ
ಒಂದು ವೇಳೆ ಫ್ರಾಂಚೈಸಿಯು ಹೆಚ್ಚಿನ ಫೀ ಬಯಸಿದರೇ, ಆಗ ಹೆಚ್ಚುವರಿ ಪಡೆದುಕೊಂಡ ಹಣವನ್ನು ಆಟಗಾರ ಹಾಗೂ ಮಾರಾಟ ಮಾಡಿದ ತಂಡವು ಸಮಾನವಾಗಿ ಹಂಚಿಕೊಳ್ಳಲಿದೆ.
ಆಟಗಾರರ ಟ್ರೇಡಿಂಗ್‌ಗೆ ಮಿತಿಯಿಲ್ಲ
ಒಂದು ಫ್ರಾಂಚೈಸಿಯು ಇನ್ನೊಂದು ಫ್ರಾಂಚೈಸಿಯ ಜತೆಗೆ ಎಷ್ಟು ಆಟಗಾರರನ್ನು ಬೇಕಿದ್ದರೂ ಟ್ರೇಡ್ ಮಾಡಿಕೊಳ್ಳಬಹುದು. ಇದಕ್ಕೆ ಯಾವುದೇ ಮಿತಿ ಎನ್ನುವುದು ಇರುವುದಿಲ್ಲ.
ಆಟಗಾರರ ಟ್ರೇಡಿಂಗ್‌ಗೂ ಮುನ್ನ ಫಿಟ್ನೆಸ್ ಮುಖ್ಯ
ಮಾರಾಟ ಮಾಡುವ ಫ್ರಾಂಚೈಸಿ ಹಾಗೂ ಆಟಗಾರರನ್ನು ಖರೀದಿಸುವ ಫ್ರಾಂಚೈಸಿಯು ಟ್ರೇಡಿಂಗ್‌ಗೂ ಮುನ್ನ ವೈದ್ಯಕೀಯವಾಗಿ ಸಂಪೂರ್ಣವಾಗಿ ಫಿಟ್ ಆಗಿದ್ದಾರೆಯೇ, ಕ್ರಿಕೆಟ್ ಆಡಲು ಫಿಟ್ ಆಗಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.
ಬಿಸಿಸಿಐಗೆ ಪರಮಾಧಿಕಾರ
ಒಂದು ವೇಳೆ ಈ ಆಟಗಾರರ ಟ್ರೇಡಿಂಗ್‌ನಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘಿಸಿದರೆ, ಬಿಸಿಸಿಐ ಈ ಆಟಗಾರರ ಟ್ರೇಡಿಂಗ್ ರದ್ದು ಮಾಡುವ ಹಾಗೂ ದಂಡ ವಿಧಿಸುವ ಅಧಿಕಾರವನ್ನು ಹೊಂದಿದೆ.