Shaheena Syed ex-husband interview: ದೆಹಲಿ ಬಾಂಬ್ ಬ್ಲಾಸ್ಟ್ ಹಾಗೂ ಫರಿದಾಬಾದ್‌ನಲ್ಲಿ ಭಾರಿ ಪ್ರಮಾಣದ ಸ್ಫೋಟಕ ಸಂಗ್ರಹ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ವೈದ್ಯೆ 45 ವರ್ಷದ ಡಾ. ಶಾಹೀನಾ ಸೈಯದ್‌ ಬಗ್ಗೆ ಆಕೆಯ ಮಾಜಿ ಪತಿ ಮಾತನಾಡಿದ್ದು ಅವರು ಏನು ಹೇಳಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಡಾಕ್ಟರ್ ಟೆರರಿಸ್ಟ್ ಶಾಹೀನಾ ಸೈಯದ್ ಬಗ್ಗೆ ಮಾಜಿ ಪತಿ ಹೇಳಿದ್ದೇನು?

ನವದೆಹಲಿ: ದೆಹಲಿ ಬಾಂಬ್ ಬ್ಲಾಸ್ಟ್ ಹಾಗೂ ಫರಿದಾಬಾದ್‌ನಲ್ಲಿ ಭಾರಿ ಪ್ರಮಾಣದ ಸ್ಫೋಟಕ ಸಂಗ್ರಹ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ವೈದ್ಯೆ 45 ವರ್ಷದ ಡಾ. ಶಾಹೀನಾ ಸೈಯದ್‌ ಬಗ್ಗೆ ಆಕೆಯ ಮಾಜಿ ಪತಿ ಮಾತನಾಡಿದ್ದು ಅವರು ಏನು ಹೇಳಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಶಾಹೀನಾ ನನ್ನನ್ನು ತೊರೆದು ಹೋದ ನಂತರ ಆಕೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಳು. ಆಕೆ ಎಲ್ಲಿ ಹೋದಳು ಎಂಬ ಬಗ್ಗೆ ಸುಳಿವು ಇರಲಿಲ್ಲ, ಹೀಗಾಗಿ ಅವಳ ಬಗ್ಗೆ ಅನುಮಾನವಿತ್ತು ಎಂದು ಶಾಹೀನಾ ಸೈಯದ್ ಮಾಜಿ ಪತಿ ಹೇಳಿದ್ದಾರೆ. ಅವರಿಗೆ ಶಾಹೀನಾ ಜೊತೆ 2003ರಲ್ಲಿ ಮದುವೆಯಾಗಿತ್ತು. 2013ರಲ್ಲಿ ಅವರು ಪರಸ್ಪರ ದೂರಾಗಿದ್ದರು.

ಈ ಬಗ್ಗೆ ಮಾತನಾಡಿದ ಶಾಹೀನಾ ಮಾಜಿ ಪತಿ ಆಕೆ ಯುರೋಪ್‌ಗೆ ಸ್ಥಳಾಂತರ ಆಗಬೇಕೆಂದು ಬಯಸಿದ್ದಳು. ಆದರೆ ಆಕೆ ನಮ್ಮಿಂದ ದೂರ ಆದ ನಂತರ ಆಕೆಯ ಜೊತೆ ನಮಗೆ ಯಾವುದೇ ಸಂಪರ್ಕ ಇರಲಿಲ್ಲ. ನಿಮಗೆ ನಿಮ್ಮ ಮಾಜಿ ಪತ್ನಿಯ ಜೊತೆ ಸಂಪರ್ಕವಿದೆಯೇ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಅವರು, ಅವಳು ಹೊರಟು ಹೋಗಬೇಕೆಂದು ಬಯಸಿದ್ದಳು, ನಾನು ಸರಿ ಹೋಗು ಎಂದೆ, ನಾನು ಇನ್ನೇನು ಮಾಡಬಹುದಿತ್ತು ಎಂದು ಅವರು ಹೇಳಿದ್ದಾರೆ.

2013ರಲ್ಲಿ ಪತಿಗೆ ವಿಚ್ಛೇದನ ನೀಡಿದ್ದ ಶಾಹೀನಾ

ನಾನು ಆಕೆಗೆ ವಿಚ್ಛೇದನ ನೀಡಿರಲಿಲ್ಲ, ಆಕೆ ಅವಳ ಇಷ್ಟದಂತೆ ಹೊರಟು ಹೋಗಿದ್ದಳು, ಆದರೆ ಎಲ್ಲಿ ಹೋಗುವೆ ಎಂದು ಆಕೆ ಹೇಳಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕೆಲಸದ ಸ್ಥಳದಲ್ಲೂ ಆಕೆ ಯಾವಾಗಲೂ ಇರುತ್ತಿರಲಿಲ್ಲವಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಹೀನಾ ಮಾಜಿ ಪತಿ, ಆಕೆ ಸರಿಯಾಗಿಯೇ ಕೆಲಸ ಮಾಡುತ್ತಿದ್ದಳು. ಆದರೆ 2013ರಲ್ಲಿ ನಮ್ಮ ವಿಚ್ಛೇದನದ ನಂತರ ಏನಾಯಿತು ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ನನ್ನ ಜೊತೆಗಾಗಲಿ ನಮ್ಮ ಮಕ್ಕಳ ಜೊತೆಗಾಗಲಿ ಆಕೆ ಸಂಪರ್ಕದಲ್ಲಿ ಇಲ್ಲ

ದೆಹಲಿ ಬ್ಲಾಸ್ಟ್‌ನ ಮಾಸ್ಟರ್ ಮೈಂಡ್ ಎಂಬ ಆರೋಪ ಕೇಳಿ ಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಕೆಯ ಪತಿ ಅದರ ಬಗ್ಗೆ ತನಗೇನು ಗೊತ್ತಿಲ್ಲ, ನನಗೆ ಆಕೆಯ ಜೊತೆ ಯಾವುದೇ ಸಂಪರ್ಕ ಇಲ್ಲ, ನನ್ನ ಜೊತೆಗಾಗಲಿ ನಮ್ಮ ಮಕ್ಕಳ ಜೊತೆಗಾಗಲಿ ಆಕೆ ಸಂಪರ್ಕದಲ್ಲಿ ಇಲ್ಲ ಎಂದು ಅವರು ಹೇಳಿದ್ದಾರೆ. ನೀವು ಮದ್ಯವ್ಯಸನಿಯಾಗಿ ಆಕೆಗೆ ಥಳಿಸುತ್ತಿದ್ದೀರಿ ಎಂಬ ಆರೋಪವಿದೆಯಲ್ಲ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಅವರು, ನೀವು ನನ್ನ ಬಗ್ಗೆ ಸುತ್ತಮುತ್ತಲಿನ ಜನರ ಬಳಿ ವಿಚಾರಿಸಬಹುದು ಎಂದು ಹೇಳಿದ್ದಾರೆ.

ಶಾಹೀನಾಳ ಅಣ್ಣ ಮೊಹಮ್ಮದ್ ಶೋಯೇಬ್ ಹೇಳೋದೇನು?

ಅತ್ತ ಶಾಹೀನಾಳ ತವರು ಮನೆಯವರು ಕೂಡ ಆಕೆಯ ಜೊತೆಗೆ ತಮಗೆ ಯಾವುದೇ ಸಂಪರ್ಕ ಇಲ್ಲ ಎಂದು ಹೇಳಿದ್ದು, ತಾವು ಅಮಾಯಕರು ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಶಾಹೀನಾಳ ಅಣ್ಣ ಮೊಹಮ್ಮದ್ ಶೋಯೇಬ್, ಕಳೆದ ಮೂರು ವರ್ಷಗಳಿಂದ ನನ್ನ ಸೋದರಿ ಶಾಹೀನಾ ಸೈಯದ್ ಹಾಗೂ ಸಹೋದರ್ ಪರ್ವೇಜ್ ಅನ್ಸಾರಿ ನಮ್ಮ ಕುಟುಂಬದ ಜೊತೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಹಾಗೂ ಈ ಕೃತ್ಯಕ್ಕೂ ತಮ್ಮ ಕುಟುಂಬಕ್ಕೂ ಯಾವುದೇ ಸಂಪರ್ಕ ಇಲ್ಲ ಎಂದು ಹೇಳಿದ್ದಾರೆ.

ನನ್ನ ಸೋದರ ಹಾಗೂ ಸೋದರಿ ಮುಗ್ಧರು, ಅವರು ಕಳೆದ ಮೂರು ವರ್ಷಗಳಿಂದ ನಮ್ಮ ಕುಟುಂಬದ ಸಂಪರ್ಕದಲ್ಲಿ ಇಲ್ಲ, ಅವರ ಚಟುವಟಿಕೆಗಳು ಹಾಗೂ ಸಂಪರ್ಕದ ಬಗ್ಗೆ ನಮಗೆ ಯಾವುದೇ ವಿಚಾರ ಗೊತ್ತಿಲ್ಲ ಎಂದು ಹೇಳಿದ್ದಾರೆ. ತಮ್ಮ ಕುಟುಂಬ ಲಕ್ನೋದಲ್ಲಿ ಶಾಂತವಾಗಿ ಬದುಕುತ್ತಿದ್ದು, ಶಾಹೀನಾ ಹಾಗೂ ಪರ್ವೇಜ್ ಜೊತೆ ತಮಗೆ ಸಂಪರ್ಕವಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಸ್ಫೋಟದ ನಂತರ ತೀವ್ರಗೊಂಡ ವಾಹನ ತಪಾಸಣೆ: ಕಾರಲ್ಲಿ 1 ಕೋಟಿ ಮೊತ್ತದ ದಾಖಲೆ ಇಲ್ಲದ ನಗದು ಪತ್ತೆ

ಇದನ್ನೂ ಓದಿ: ಮದುವೆ ಮನೆಯಲ್ಲಿ ಮಸಣದ ಪ್ಲಾನ್: ಮಸೂದ್ ಅಜರ್ ಸೋದರಿ ಜೊತೆ ನೇರ ಸಂಪರ್ಕ ಹೊಂದಿದ್ದ ಶಾಹೀನ್

ಇದನ್ನೂ ಓದಿ: ಅಲ್ ಫಲಾಹ್ ವಿವಿಯ ವೈದ್ಯೆ, ಟೆರರಿಸ್ಟ್ ಡಾ. ಶಾಹೀನ್ ಬಂಧನದ ಬಗ್ಗೆ ತಂದೆ ಹೇಳಿದ್ದೇನು