ಲೋಕಸಭೆಯಲ್ಲಿ ನಾರಿಶಕ್ತಿ ವಂದನಾ ಮಸೂದೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ್ದಾರೆ. ಮಸೂದೆ ವಿಫಲವಾಗಲು ಕಾಂಗ್ರೆಸ್, ಡಿಎಂಕೆ ಸೇರಿದಂತೆ ವಿಪಕ್ಷಗಳೇ ಕಾರಣ ಎಂದು ಆರೋಪಿಸಿದ ಅವರು, ವಿಪಕ್ಷಗಳು ನಾರಿಶಕ್ತಿಗೆ ಅವಮಾನ ಮಾಡಿವೆ ಎಂದು ವಾಗ್ದಾಳಿ ನಡೆಸಿದರು.
- Home
- News
- India News
- India News Live: ನಾರಿಶಕ್ತಿ ವಂದನಾ ಮಸೂದೆಗೆ ಸೋಲು - ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ
India News Live: ನಾರಿಶಕ್ತಿ ವಂದನಾ ಮಸೂದೆಗೆ ಸೋಲು - ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ

ನವದೆಹಲಿ (ಏ.18): ಲೋಕಸಭೆ, ವಿಧಾನಸಭೆಗಳಲ್ಲಿ ಶೇ.33 ಮಹಿಳಾ ಮೀಸಲಾತಿ ನೀಡಲು ಉದ್ದೇಶಿಸಿದ್ದ 'ಸಂವಿಧಾನ (131ನೇ ತಿದ್ದುಪಡಿ) ಮಸೂದೆ -2026' ಲೋಕಸಭೆಯಲ್ಲಿ ಶುಕ್ರವಾರ ಸೋಲು ಕಂಡಿದೆ. ಈ ಮೂಲಕ 2029ರ ಲೋಕಸಭೆ ಚುನಾವಣೆಯಿಂದ ಶೇ.33 ಮಹಿಳಾ ಮೀಸಲು ಜಾರಿಗೊಳಿಸುವ ಮೋದಿ ಸರ್ಕಾರದ ಕನಸು ಭಗ್ನವಾಗಿದೆ. ಸಾಂವಿಧಾನಿಕ ತಿದ್ದುಪಡಿ ಆದ ಕಾರಣ ಅಂಗೀಕಾರಕ್ಕೆ ಅಗತ್ಯವಾಗಿದ್ದ 3ನೇ 2ರಷ್ಟು ಬಹುಮತ ಬಾರದೇ ಮಸೂದೆಗೆ 54 ಮತ ಅಂತರದಿಂದ ಸೋಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 18th April: ನಾರಿಶಕ್ತಿ ವಂದನಾ ಮಸೂದೆಗೆ ಸೋಲು - ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ
India News Live 18th April: ನಂಬಿ ಬಂದ ನಟಿಗೆ ಸೆಟ್‌ನಲ್ಲೇ ಅವಮಾನ - ಚಿರಂಜೀವಿ ಚಿತ್ರದಲ್ಲಿ ರಾಧಿಕಾಗೆ ಆಗಿದ್ದೇನು?
1981ರಲ್ಲಿ ಕ್ರಾಂತಿ ಕುಮಾರ್ ನಿರ್ಮಾಣದಲ್ಲಿ 'ಕಿರಾಯಿ ರೌಡಿಲು' ಚಿತ್ರ ತೆರೆಕಂಡಿತ್ತು. ಇದರಲ್ಲಿ ಚಿರಂಜೀವಿ, ಮೋಹನ್ ಬಾಬು, ರಾಧಿಕಾ ಮುಖ್ಯಭೂಮಿಕೆಯಲ್ಲಿದ್ದರು. ಕೋದಂಡ ರಾಮಿರೆಡ್ಡಿ ಈ ಚಿತ್ರದ ನಿರ್ದೇಶಕರು.
India News Live 18th April: ಮಲವಿಸರ್ಜನೆಗೆ ತೆರಳಿದಾಗ ಅತಿ ಆಯಾಸದಿಂದ 10 ವರ್ಷದ ಸ್ಮರಣ ಶಕ್ತಿ ಕಳೆದುಕೊಂಡ ಮಹಿಳೆ
ಮಹಿಳೆಯೊಬ್ಬರು ಮಲಬದ್ಧತೆಯಿಂದಾಗಿ ಶೌಚಾಲಯದಲ್ಲಿ ಅತಿಯಾಗಿ ಆಯಾಸಗೊಂಡ ಪರಿಣಾಮ, ತಮ್ಮ 10 ವರ್ಷಗಳ ನೆನಪಿನ ಶಕ್ತಿಯನ್ನು ತಾತ್ಕಾಲಿಕವಾಗಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ವೈದ್ಯರು ಏನು ಹೇಳ್ತಾರೆ? ಈ ಸಮಸ್ಯೆಗೆ ಕಾರಣ ಏನು?
India News Live 18th April: 'ಡಕಾಯಿತ್' ಹಿಟ್ ಆಗ್ತಿದ್ದಂತೆ ಸಂಭಾವನೆ ಹೆಚ್ಚಿಸಿಕೊಂಡ ಅಡಿವಿ ಶೇಷ್? ಈಗ ಡಿಮ್ಯಾಂಡ್ ಎಷ್ಟು ಕೋಟಿ?
ಡಕಾಯಿತ್ ಸಿನಿಮಾ ಯಶಸ್ಸಿನ ನಂತರ ನಟ ಅಡಿವಿ ಶೇಷ್ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಕಂಟೆಂಟ್ ಇರುವ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುವ ಈ ನಟ, ಇದೀಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಹಾಗಾದರೆ ಅವರು ಎಷ್ಟು ಕೋಟಿ ಬೇಡಿಕೆ ಇಡುತ್ತಿದ್ದಾರೆ?
India News Live 18th April: ಅಕ್ಷಯ್ ಕುಮಾರ್ ಮಗ ಹೀರೋ ಆಗಲ್ವಂತೆ - ಮಾಡ್ತಿರೋದು ಬರೀ ಇಷ್ಟು ಸಾವಿರದ ಕೆಲಸ!
ಸಿನಿಮಾ ಇಂಡಸ್ಟ್ರಿಯಲ್ಲಿ ನಟರ ಮಕ್ಕಳು ನಟರಾಗೋದೇ ಹೆಚ್ಚು. ಆದರೆ 'ಭೂತ್ ಬಂಗ್ಲಾ' ಸ್ಟಾರ್ ಅಕ್ಷಯ್ ಕುಮಾರ್ ಮಗನ ವಿಷಯದಲ್ಲಿ ಇದು ಸುಳ್ಳಾಗಿದೆ. ಅಕ್ಷಯ್ ಪ್ರಕಾರ, ಅವರ ಮಗ ಆರವ್ ಭಾಟಿಯಾಗೆ ಸಿನಿಮಾಗಳಲ್ಲಿ ಕೆಲಸ ಮಾಡಲು ಇಷ್ಟವಿಲ್ಲವಂತೆ.
India News Live 18th April: ಕರೆದಿದ್ದು ಊಟಕ್ಕೆ ಮುಂದೆ ನಡೆದಿದ್ದೇ ಬೇರೆ; 27 ವರ್ಷಗಳ ಹಿಂದಿನ ಮಾಧವನ್ ಲವ್ ಸ್ಟೋರಿ ವೈರಲ್!
ಸಿನೆಮಾ ರಂಗದ ಗ್ಲಾಮರ್ ಜಗತ್ತಿನಲ್ಲಿದ್ದರೂ ಮಾಧವನ್ ಎಂದಿಗೂ ವಿವಾದಗಳಿಗೆ ಸಿಲುಕಿದವರಲ್ಲ. ಸರಿತಾ ಸದಾ ಮಾಧವನ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇಂದಿಗೂ ಸಿನೆಮಾ ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಇವರಿಗೆ ವೇದಾಂತ್ ಎಂಬ ಮಗನಿದ್ದಾನೆ.
India News Live 18th April: ಮೂಗಿನೊಳಗೆ ಸಿಲುಕಿದ ಯುವತಿ ಮೂಗುತಿ; ಅಗ್ನಿಶಾಮಕದಳದ ಸಿಬ್ಬಂದಿಯಿಂದ ಯಶಸ್ವಿ ಆಪರೇಷನ್!
India News Live 18th April: RCB ಇವತ್ತು ರೆಡ್ ಜೆರ್ಸಿ ಬಿಟ್ಟು ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
India News Live 18th April: ಆಗ ಬಾಲಿವುಡ್ ನಟಿ, ಈಗ ಜರ್ಮನ್ ಬ್ಯೂಟಿ - ವಿರಾಟ್ ಕೊಹ್ಲಿ ರಾತ್ರಿಯ 'Like' ಸೃಷ್ಟಿಸಿದೆ ಹಲ್ಚಲ್
India News Live 18th April: ನನ್ನ ಹೃದಯದಲ್ಲಿ ನಿರಂತರ ನೋವಿದೆ - ಅಮ್ಮನ ನೆನಪಲ್ಲಿ ಕಣ್ಣೀರಿಟ್ಟ ನಟಿ ಜರೀನ್ ಖಾನ್
ತಾಯಿ ಪರ್ವೀನ್ ಖಾನ್ ನಿಧನದ ನಂತರ ನಟಿ ಜರೀನ್ ಖಾನ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಅಮ್ಮನೇ ನನ್ನ ಪ್ರಪಂಚ, ನನ್ನ ಎಲ್ಲವೂ ಆಗಿದ್ದರು. ನನ್ನ ಹೃದಯದಲ್ಲಿ ನಿರಂತರ ನೋವಿದೆ ಮತ್ತು ಖಾಲಿತನ ಕಾಡುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.
India News Live 18th April: ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿದ ನಟ ವಿದ್ಯುತ್ ಜಮ್ವಾಲ್ - ಮಂತ್ರಮುಗ್ಧರಾದ ಸ್ಟಾರ್ಸ್
ಲಾಸ್ ವೇಗಾಸ್‌ನಲ್ಲಿ ನಡೆದ ಸಿನಿಮಾಕಾನ್ ಈವೆಂಟ್‌ನಲ್ಲಿ ನಟ ವಿದ್ಯುತ್ ಜಮ್ವಾಲ್ ತಮ್ಮ 'ಸ್ಟ್ರೀಟ್ ಫೈಟರ್' ಚಿತ್ರದ ಟ್ರೈಲರ್ ಲಾಂಚ್ ವೇಳೆ ಗಾಯತ್ರಿ ಮಂತ್ರ ಪಠಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಈ ನಡೆಗೆ ಸಹನಟರಾದ ನೋವಾ ಸೆಂಟಿನಿಯೊ ಮತ್ತು ಜೇಸನ್ ಮೊಮೊವಾ ಮಂತ್ರಮುಗ್ಧರಾಗಿದ್ದಾರೆ.
India News Live 18th April: ಅತಿವೇಗದ ಐಪಿಎಲ್ 1000 ರನ್! ಸಾಲ್ಟ್, ಹೆಡ್ ದಾಖಲೆ ಮುರಿದ ಟಿಮ್ ಡೇವಿಡ್‌ಗೆ ಎರಡನೇ ಸ್ಥಾನ!
ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್ ಅತಿವೇಗವಾಗಿ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
India News Live 18th April: 'ದುಪಟ್ಟಾ ಬಿಸಿ ಮಾಡಿ ಕಣ್ಣಿಗಿಡುತ್ತಿದ್ದರು' - ಅಮ್ಮನ ನೆನಪಲ್ಲಿ ಭಾವುಕರಾದ ಅಮಿತಾಭ್ ಬಚ್ಚನ್!
ಈ ಪೋಸ್ಟ್‌ನ ಮುಖ್ಯ ಉದ್ದೇಶವೇ ದಿವಂಗತ ತಾಯಿ ತೇಜಿ ಬಚ್ಚನ್ ಅವರನ್ನು ನೆನಪಿಸಿಕೊಳ್ಳುವುದಾಗಿತ್ತು. ಬಾಲ್ಯದಲ್ಲಿ ತಾಯಿ ತಮಗೆ ಮಾಡುತ್ತಿದ್ದ 'ಮನೆಮದ್ದು' ಉಪಚಾರವನ್ನು ಅಮಿತಾಭ್ ವಿವರಿಸಿದ್ದಾರೆ.
India News Live 18th April: ಪಾದಯಾತ್ರೆಯಲ್ಲಿ ದೀದೀ ಜೀವ ಬಾಯಿಗೆ ತಂದ ಅಭಿಮಾನಿ - ಹೃದಯ ಅರೆಕ್ಷಣ ಸ್ತಬ್ಧ- Video Viral
India News Live 18th April: ಆ ಇಬ್ಬರು ಬೌಲರ್‌ಗಳಿಗೆ ಸಂಬಳ ಕೊಟ್ಟು ಮನೆಗೆ ಕಳಿಸಿ! ಮುಂಬೈ ಇಂಡಿಯನ್ಸ್ ವೇಗಿಗಳ ಮೇಲೆ ಕಿಡಿಕಾರಿದ ಮಾಜಿ ಕ್ರಿಕೆಟಿಗ
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಬೌಲರ್‌ಗಳಾದ ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಹಾರ್ ಅವರ ಕಳಪೆ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಆಟಗಾರರಿಗೆ ಸಂಬಳ ಕೊಟ್ಟು ಮನೆಗೆ ಕಳುಹಿಸುವಂತೆ ಸಲಹೆ ನೀಡಿದ್ದು, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಿದ್ದಾರೆ.
India News Live 18th April: ಮದ್ವೆ ನಂತರ ನಾಲ್ಕು ನಾಯಿಗಳ ಜೊತೆ ಬಂದ ವಿಜಯ್ ದೇವರಕೊಂಡ - ಪೌರಾಣಿಕ ಲೋಕದಲ್ಲಿ ಭರ್ಜರಿ ಎಂಟ್ರಿ
'ಹಾಯ್ ನಾನ್ನ' ಖ್ಯಾತಿಯ ನಿರ್ದೇಶಕ ಶೌರ್ಯುವ್ ಜೊತೆ ನಟ ವಿಜಯ್ ದೇವರಕೊಂಡ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ಇದೊಂದು ದೊಡ್ಡ ಮಟ್ಟದ, ಪೌರಾಣಿಕ ಹಿನ್ನೆಲೆಯುಳ್ಳ ಚಿತ್ರವಾಗಲಿದೆ.
India News Live 18th April: ಕೋವಿಡ್ನಲ್ಲಿ ರೀಲ್ಸ್ ನೋಡಿದ್ದೇ ಬದಲಾಗೋಯ್ತು ಬದುಕು - 21ನೇ ವಯಸ್ಸಲ್ಲಿ ಕೋಟಿ ಕೋಟಿ ಗಳಿಕೆ
India News Live 18th April: ದೇಶವನ್ನದ್ದುದೇಶಿ ಪ್ರಧಾನಿ ಮೋದಿ ಮಾತು ; ಈ ಬಾರಿ ಸಮಯ 8 ಗಂಟೆ ಅಲ್ಲ, 8.30 ಯಾಕೆ?
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಸೋತ ನಂತರ, ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ವಿಪಕ್ಷಗಳ ಒಗ್ಗಟ್ಟಿನಿಂದಾಗಿ ಸರ್ಕಾರದ ಪ್ರಯತ್ನ ವಿಫಲವಾಗಿದೆ.
India News Live 18th April: 25ನೇ ವಯಸ್ಸಿಗೆ ಮಾಡಿದ ಆ ಒಂದು ನಿರ್ಧಾರವೇ ನನ್ನ ಜೀವನದ ಮಹಾ ದೊಡ್ಡ ತಪ್ಪು - ನಟಿ ಜಯಪ್ರದಾ ಹೇಳಿದ ಸೀಕ್ರೆಟ್!
ಬೆಳ್ಳಿತೆರೆಯ ಮೇಲೆ ರಾಣಿಯಂತೆ ಮೆರೆದ ಜಯಪ್ರದಾ ಅವರ ಈ ಮಾತುಗಳು ಸಿನೆಮಾ ರಂಗದ ಗ್ಲಾಮರ್ ಅಡಿಯಲ್ಲೂ ಎಂತಹ ಕರಾಳ ಸತ್ಯಗಳು ಅಡಗಿರುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಭಿಮಾನಿಗಳು ಅವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದು, "ನೀವು ಇಂದಿಗೂ ನಮಗೆ ಸ್ಫೂರ್ತಿ" ಎಂದಿದ್ದಾರೆ.