1981ರಲ್ಲಿ ಕ್ರಾಂತಿ ಕುಮಾರ್ ನಿರ್ಮಾಣದಲ್ಲಿ 'ಕಿರಾಯಿ ರೌಡಿಲು' ಚಿತ್ರ ತೆರೆಕಂಡಿತ್ತು. ಇದರಲ್ಲಿ ಚಿರಂಜೀವಿ, ಮೋಹನ್ ಬಾಬು, ರಾಧಿಕಾ ಮುಖ್ಯಭೂಮಿಕೆಯಲ್ಲಿದ್ದರು. ಕೋದಂಡ ರಾಮಿರೆಡ್ಡಿ ಈ ಚಿತ್ರದ ನಿರ್ದೇಶಕರು.

ಚಿರಂಜೀವಿ ಮತ್ತು ಮೋಹನ್ ಬಾಬು ಒಟ್ಟಿಗೆ ನಟಿಸಿದ ಹಲವು ಚಿತ್ರಗಳಲ್ಲಿ 'ಕಿರಾಯಿ ರೌಡಿಲು' ಕೂಡ ಒಂದು. ಈ ಸಿನಿಮಾದ ಶೂಟಿಂಗ್ ವೇಳೆ ನಡೆದ ಒಂದು ಘಟನೆಯಿಂದ ನಟಿ ರಾಧಿಕಾಗೆ ತೀವ್ರ ಅವಮಾನವಾಗಿತ್ತು. ಮೆಗಾಸ್ಟಾರ್ ಚಿರಂಜೀವಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ನಿರ್ಮಾಪಕ ಕ್ರಾಂತಿ ಕುಮಾರ್ ಜೊತೆ ಹೆಚ್ಚು ಸಿನಿಮಾ ಮಾಡಿದ್ದರು. 1981ರಲ್ಲಿ ಕ್ರಾಂತಿ ಕುಮಾರ್ ನಿರ್ಮಾಣದಲ್ಲಿ 'ಕಿರಾಯಿ ರೌಡಿಲು' ಚಿತ್ರ ತೆರೆಕಂಡಿತ್ತು. ಇದರಲ್ಲಿ ಚಿರಂಜೀವಿ, ಮೋಹನ್ ಬಾಬು, ರಾಧಿಕಾ ಮುಖ್ಯಭೂಮಿಕೆಯಲ್ಲಿದ್ದರು. ಕೋದಂಡ ರಾಮಿರೆಡ್ಡಿ ಈ ಚಿತ್ರದ ನಿರ್ದೇಶಕರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಲಕೋನ ಅರಣ್ಯದಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ನಟಿ ರಾಧಿಕಾಗೆ ಘೋರ ಅವಮಾನವೊಂದು ಎದುರಾಗಿತ್ತು. ಮೋಹನ್ ಬಾಬು ಮತ್ತು ರಾಧಿಕಾ ನಡುವಿನ ಅತ್ಯಾ*ಚಾರ ದೃಶ್ಯದ ಬಗ್ಗೆ ಲೇಖಕ-ನಿರ್ದೇಶಕ ಕಾನಗಾಲ ಜಯಕುಮಾರ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಸ್ಕ್ರಿಪ್ಟ್‌ನಲ್ಲಿ ಆ ದೃಶ್ಯ ಅಷ್ಟು ಅಸಭ್ಯವಾಗಿರಲಿಲ್ಲ. ನಟಿಗೆ ಮುಜುಗರ ಆಗದಂತೆ ಬಹಳ ಜಾಗರೂಕತೆಯಿಂದ ಚಿತ್ರೀಕರಿಸಬೇಕೆಂದು ನಿರ್ಮಾಪಕ ಕ್ರಾಂತಿ ಕುಮಾರ್ ಸೂಚಿಸಿದ್ದರು.

ಆದರೆ ಮೋಹನ್ ಬಾಬು ದೃಶ್ಯದಲ್ಲಿ ನಟಿಸುವಾಗ ರಾಧಿಕಾ ಉಟ್ಟಿದ್ದ ಸೀರೆ ಜಾರಿ ಅವರ ಕೈಗೆ ಬಂತು. ಎಲ್ಲರ ಮುಂದೆ ಹೀಗಾಗಿದ್ದರಿಂದ ಅವಮಾನ ತಾಳಲಾರದೆ ರಾಧಿಕಾ ಅಲ್ಲೇ ಕುಸಿದುಬಿದ್ದರು. ತಕ್ಷಣ ನಿರ್ಮಾಪಕ ಕ್ರಾಂತಿ ಕುಮಾರ್ ಕ್ಯಾಮರಾ ಸ್ವಿಚ್ ಆಫ್ ಮಾಡಿ 'ಕಟ್' ಎಂದು ಜೋರಾಗಿ ಕೂಗಿದರು. ನಂತರ ರಾಧಿಕಾ ಅಳುತ್ತಲೇ ಪಕ್ಕಕ್ಕೆ ಹೋದರು. ಕ್ರಾಂತಿ ಕುಮಾರ್ ಸಹ ನಿರ್ದೇಶಕರ ಮೇಲೆ ಗರಂ ಆದರು. 'ಮೋಹನ್ ಬಾಬು ಯಾಕೆ ಹಾಗೆ ಮಾಡ್ತಿದ್ದಾರೆ? ನಿಮಗೆ ದೃಶ್ಯ ವಿವರಿಸೋಕೆ ಬರಲ್ವಾ?' ಎಂದು ಬೈದರು.

ಒಳ್ಳೆಯ ಭವಿಷ್ಯವಿದೆ

ಕ್ರಾಂತಿ ಕುಮಾರ್ ಹೋದ ಮೇಲೆ, 'ಏನೋ ದೊಡ್ಡ ಅನಾಹುತ ಆದ ಹಾಗೆ ಯಾಕೆ ಅಷ್ಟು ಕೂಗಾಡ್ತಾರೆ?' ಎಂದು ಮೋಹನ್ ಬಾಬು ಅಂದರಂತೆ. 'ತಪ್ಪಿ ಜಾರಿಹೋಯ್ತು, ಅದಕ್ಕೆ ಇಷ್ಟು ರಂಪಾಟ ಬೇಕಾ' ಎಂದರಂತೆ. ರಾಧಿಕಾ ಆಗ ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದರು. 'ತೆಲುಗಿನಲ್ಲೂ ನಟಿಸಿದರೆ ಒಳ್ಳೆಯ ಭವಿಷ್ಯವಿದೆ' ಎಂದು ಹೇಳಿ ಕ್ರಾಂತಿ ಕುಮಾರ್ ಅವರನ್ನೇ ಟಾಲಿವುಡ್‌ಗೆ ಕರೆತಂದಿದ್ದರು. ರಾಧಿಕಾ ಅವರು ನಿರ್ಮಾಪಕ ಕ್ರಾಂತಿ ಕುಮಾರ್ ಅವರನ್ನು ನಂಬಿ ಬಂದಿದ್ದರು. ಹೀಗಾಗಿ ಅವರ ಜವಾಬ್ದಾರಿ ಕ್ರಾಂತಿ ಕುಮಾರ್ ಅವರದ್ದೇ ಆಗಿತ್ತು. ಅದಕ್ಕಾಗಿಯೇ ರಾಧಿಕಾಗೆ ಅವಮಾನವಾದಾಗ ಅವರು ಗಂಭೀರವಾಗಿ ಪ್ರತಿಕ್ರಿಯಿಸಿದ್ದರು ಎಂದು ಜಯಕುಮಾರ್ ವಿವರಿಸಿದ್ದಾರೆ.