ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕೈಗೊಂಡ 'ಆಪರೇಷನ್ ಸಿಂದೂರ' ಆಧಾರಿತ ಚಿತ್ರದ ಪೋಸ್ಟರ್ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲಾಗಿದೆ. ಪೋಸ್ಟರ್‌ನಲ್ಲಿ ಸಿಂದೂರ ಹಚ್ಚಿಕೊಳ್ಳುತ್ತಿರುವ ಮಹಿಳಾ ಸೇನಾಧಿಕಾರಿಯ ಚಿತ್ರವಿದ್ದು, ಚಿತ್ರದ ಕಥಾವಸ್ತುವಿನ ಬಗ್ಗೆ ಕುತೂಹಲ ಮೂಡಿಸಿದೆ.
ಪೂರ್ತಿ ಓದಿ- Home
- News
- India News
- Operation Sindoor Highlights: Operation sindoor ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆಯಾಗಿ ಡಿಲೀಟ್!: ಕಾರಣವೇನು?
Operation Sindoor Highlights: Operation sindoor ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆಯಾಗಿ ಡಿಲೀಟ್!: ಕಾರಣವೇನು?

ಆಪರೇಷನ್ ಸಿಂಧೂರ್ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಉಪಾಧ್ಯಕ್ಷ ಜೆಡಿ ವಾನ್ಸ್ ಪ್ರತಿಕ್ರಿಯಿಸಿದ್ದು, ನಾವು ಯುದ್ಧದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ ಅವರು ಸದ್ಯ ನಾವು ಮಾಡಬಹುದಾದ ಕೆಲಸ ಎಂದರೆ ಜನರ ನಡುವೆ ಉದ್ವಿಗ್ನತೆ ಕಡಿಮೆಯಾಗುವಂತೆ ಮಾಡುವುದು. ಆದರೆ ನಾವು ಯುದ್ಧದ ಮಧ್ಯದಲ್ಲಿ ಭಾಗಿಯಾಗುವುದಿಲ್ಲ, ಅದು ಮೂಲಭೂತವಾಗಿ ನಮ್ಮ ವ್ಯವಹಾರವಲ್ಲ ಮತ್ತುಈ ಯುದ್ಧವನ್ನು ಅಮೆರಿಕದ ಯುದ್ಧವನ್ನು ನಿಯಂತ್ರಿಸುವ ಸಾಮರ್ಥ್ಯಕ್ಕೂ ಯಾವುದೇ ಸಂಬಂಧವಿಲ್ಲ. ಅಮೆರಿಕವು ಭಾರತೀಯರಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಹೇಳಲು ಸಾಧ್ಯವಿಲ್ಲ. ಹಾಗಯೇ ಪಾಕಿಸ್ತಾನಿಗಳಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ನಾವು ಹೇಳಲು ಸಾಧ್ಯವಿಲ್ಲ. ಆದ್ದರಿಂದ, ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ವಿಷಯವನ್ನು ಮುಂದುವರಿಸಲಿದ್ದೇವೆ. ಇದು ವಿಶಾಲವಾದ ಪ್ರಾದೇಶಿಕ ಯುದ್ಧ ಆದರೆ ಇದು, ಪರಮಾಣು ಸಂಘರ್ಷವಾಗಿ ಬದಲಾಗಬಾರದು ಎಂಬುದು ನಮ್ಮ ಆಶಯ ಮತ್ತು ನಮ್ಮ ನಿರೀಕ್ಷೆಯಾಗಿದೆ. ನಾವು ಈ ವಿಷಯಗಳ ಬಗ್ಗೆ ಚಿಂತಿತರಾಗಿದ್ದೇವೆ. ಭಾರತ ಮತ್ತು ಪಾಕಿಸ್ತಾನದಲ್ಲಿನ ಕೂಲರ್ ಹೆಡ್‌ಗಳ ಕೆಲಸವೆಂದರೆ ಇದು ಪರಮಾಣು ಯುದ್ಧವಾಗದಂತೆ ನೋಡಿಕೊಳ್ಳುವುದು ಮತ್ತು ಅದು ಸಂಭವಿಸಿದಲ್ಲಿ, ಅದು ವಿನಾಶಕಾರಿಯಾಗುತ್ತದೆ ಆದರೆ ಈಗ ಅದು ಸಂಭವಿಸುತ್ತದೆ ಎಂದು ನಾವು ಭಾವಿಸುವುದಿಲ್ಲ ಎಂದು ಜೆಡಿ ವ್ಯಾನ್ಸ್ ಹೇಳಿದ್ದಾರೆ.
Operation sindoor ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆಯಾಗಿ ಡಿಲೀಟ್!: ಕಾರಣವೇನು?
ಕೇವಲ 5 ಆಯುಧಗಳಿಗೆ ಪಾಕಿಸ್ತಾನ ಮಂಡಿಯೂರಿ; ಒಂದು ವೇಳೆ ಭಾರತ ಈ ಬ್ರಹ್ಮಾಸ್ತ್ರ ಬಳಸಿದರೆ ಪಾಕ್ ಗತಿ ಏನಾಗುತ್ತೆ ಗೊತ್ತಾ?
ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಲು ತನ್ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳಾದ ನಾಗಾಸ್ತ್ರ, ಸ್ಕಲ್ಪ್ ಕ್ಷಿಪಣಿ, ಹ್ಯಾಮರ್ ಕ್ಷಿಪಣಿ, ಹಾರ್ಪಿ ಡ್ರೋನ್ ಮತ್ತು ಎಸ್-400ಗಳನ್ನು ಬಳಸಿದೆ. ಅಗ್ನಿ, ಬ್ರಹ್ಮೋಸ್, ಪೃಥ್ವಿ, ಶೌರ್ಯ, ಪ್ರಹಾರ್, ಆಕಾಶ್, ಸಾಗರಿಕಾ, ಅಮೋಘ, ಪಿನಾಕಾ ಮತ್ತು ಸ್ಕೈ ಸ್ಟ್ರೈಕರ್ ಸೇರಿದಂತೆ ಭಾರತದ ಪ್ರಮುಖ ಶಸ್ತ್ರಾಸ್ತ್ರಗಳನ್ನು ಈ ಲೇಖನವು ವಿವರಿಸುತ್ತದೆ.
ಪೂರ್ತಿ ಓದಿಪಾಕಿಸ್ತಾನದ ಡ್ರೋನ್ ದಾಳಿಗೆ ಭಾರತದ ಮೂವರು ನಾಗರೀಕರಿಗೆ ಗಾಯ, ಜನವಸತಿ ಟಾರ್ಗೆಟ್
ಪಾಕಿಸ್ತಾನ ಮತ್ತೆ ಗಡಿಯಲ್ಲಿ ದಾಳಿ ನಡೆಸುತ್ತಿದೆ. ಡ್ರೋನ್ ಬಳಸಿ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್ ಗಡಿ ಭಾಗದ ಮೇಲೆ ಡ್ರೋನ್ ದಾಳಿಯಾಗುತ್ತಿದೆ. ಜನವಸತಿ ಪ್ರದೇಶದ ಮೇಲೆ ದಾಳಿ ಮಾಡಿರುವ ಕಾರಣ ಪಂಜಾಬ್‌ನಲ್ಲಿ ಮೂವರು ನಾಗರೀಕರು ಗಾಯಗೊಂಡಿದ್ದಾರೆ.
ಪೂರ್ತಿ ಓದಿOperation Sindoor: ಕಾರ್ಗಿಲ್ ಯುದ್ಧ ಗೆಲ್ಲಿಸಿದ್ದ ಆ ಕುರಿಗಾಹಿ ಇನ್ನೈದು ತಿಂಗಳು ಬದುಕಿದ್ದರೆ...?
1999ರ ಕಾರ್ಗಿಲ್ ಯುದ್ಧದಲ್ಲಿ ಒಬ್ಬ ಸಾಮಾನ್ಯ ಕುರಿಗಾಹಿ ತಾಶಿ ನಮ್ಗ್ಯಾಲ್ ಪ್ರಮುಖ ಪಾತ್ರ ವಹಿಸಿದ್ದರು. ಪಾಕಿಸ್ತಾನದ ಒಳನುಗ್ಗುವಿಕೆಯ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ನೀಡುವ ಮೂಲಕ ಯುದ್ಧದ ಗತಿಯನ್ನೇ ಬದಲಿಸಿದ್ದರು. ಇಂದು ಅವರು ಬದುಕಿದ್ದರೆ...?
ಪೂರ್ತಿ ಓದಿಇದೇ ಮೊದಲ ಬಾರಿಗೆ ರೈಲಿನ ಮೂಲಕ ದೆಹಲಿಗೆ ಪ್ರಯಾಣಿಸಿದ ಐಪಿಎಲ್ ಕ್ರಿಕೆಟಿಗರು
ಐಪಿಎಲ್ ಕ್ರಿಕೆಟಿಗರು ಇದೇ ಮೊದಲ ಬಾರಿಗೆ ರೈಲಿನ ಮೂಲಕ ಪ್ರಯಾಣಿಸಿದ್ದಾರೆ. ಒಂದು ದಿನ ಇಡೀ ಪ್ರಯಾಣಿಸಿ ದೆಹಲಿ ತಲುಪಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿ.
ಪೂರ್ತಿ ಓದಿಇದು ಭಾರತೀಯ ಸೇನೆಯ ಅತ್ಯಂತ ಭಯಾನಕ ರೆಜಿಮೆಂಟ್; ಶತ್ರುಗಳನ್ನ ಸದೆಬಡೆಯುವಲ್ಲಿ ನಿಪುಣರು!
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಡುವೆ, ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್‌ನ ಶಕ್ತಿ ಮತ್ತು ಧೈರ್ಯ ಮುನ್ನೆಲೆಗೆ ಬರುತ್ತಿದೆ. ಈ ರೆಜಿಮೆಂಟ್‌ನ ಸೈನಿಕರು ತಮ್ಮ ಅದಮ್ಯ ಧೈರ್ಯ ಮತ್ತು ಮಾರಕ ಖುಕ್ರಿಗಾಗಿ ಹೆಸರುವಾಸಿಯಾಗಿದ್ದಾರೆ.
ಪೂರ್ತಿ ಓದಿಭಾರತ-ಪಾಕ್ ಗಡಿಯಲ್ಲಿ ಮತ್ತೆ ಉದ್ವಿಗ್ನ; ಅಮೃತಸರದಲ್ಲಿ 4 ಪಾಕ್ ಡ್ರೋನ್ ಉಡೀಸ್!
ಪಾಕಿಸ್ತಾನವು ಜಮ್ಮು, ಸಾಂಬಾ, ಪಠಾಣ್‌ಕೋಟ್ ಮತ್ತು ಜೈಸಲ್ಮೇರ್‌ನಲ್ಲಿ ಡ್ರೋನ್ ದಾಳಿ ನಡೆಸಿದೆ. ಭಾರತೀಯ ಸೇನೆಯು ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಮತ್ತು ಪ್ರತಿದಾಳಿ ನಡೆಸಿದೆ. ಪಾಕಿಸ್ತಾನವು ನಾಗರಿಕ ವಿಮಾನಗಳ ಸೋಗಿನಲ್ಲಿ ಡ್ರೋನ್‌ಗಳನ್ನು ಕಳುಹಿಸುತ್ತಿದೆ.
ಪೂರ್ತಿ ಓದಿಆಪರೇಷನ್ ಸಿಂದೂರ: ಬಾಲಿವುಡ್ ಖಾನ್ಗಳು ಸೈಲೆಂಟ್! ವೈರಲ್ ಆಯ್ತು ವಾಜಪೇಯಿ ಹೇಳಿದ್ದ ಮಾತು...
ಸಿನಿಮಾಗಳಲ್ಲಿ ದೇಶಭಕ್ತಿಯ ಡೈಲಾಗ್ಗಳ ಮೂಲಕ ಕೋಟಿ ಕೋಟಿ ರೂಪಾಯಿ ಬಾಚಿಕೊಳ್ಳುವ ಬಾಲಿವುಡ್, ಆಪರೇಷನ್ ಸಿಂದೂರದ ವಿಷಯದಲ್ಲಿ ಫುಲ್ ಸೈಲೆಂಟ್ ಆಗಿದೆ. ಪಾಕಿಸ್ತಾನದ ವಿರುದ್ಧ ಒಂದೂ ಮಾತನಾಡದ ಖಾನ್ ತ್ರಯರ ನಿಲುವಿನ ಬಗ್ಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮಾತೀಗ ವೈರಲ್ ಆಗಿದೆ.
ಪೂರ್ತಿ ಓದಿOperation Sindoor: ರಾಣಿ ಲಕ್ಷ್ಮಿ ಬಾಯಿ ಜತೆ ಸೋಫಿಯಾ ಖುರೇಷಿ ಸಂಬಂಧ! ರೋಚಕ ಇತಿಹಾಸ ತೆರೆದಿಟ್ಟ ಕರ್ನಲ್
ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂದೂರ್‌ನ ಎಲ್ಲಾ ವಿವರಗಳನ್ನು ಜಗತ್ತಿಗೆ ನೀಡಿದ ಕರ್ನಲ್ ಸೋಫಿಯಾ ಖುರೇಷಿ, ರಾಣಿ ಲಕ್ಷ್ಮೀ ಬಾಯಿಗೆ ಸಂಬಂಧ ಇರುವ ಕುತೂಹಲದ ವಿಷಯ ಈಗ ಬೆಳಕಿಗೆ ಬಂದಿದೆ. ಏನದು?
ಪೂರ್ತಿ ಓದಿ'ಭಾರತ ಮತ್ತು ಇಸ್ರೇಲ್ ಇಸ್ಲಾಂನ ಶತ್ರುಗಳು' ದೇಶದ ವಿರುದ್ಧ ವಿಷ ಕಾರಿದ ಪಾಕ್ ರಕ್ಷಣಾ ಸಚಿವ!
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್, ಭಾರತ ಏಕಾಂಗಿಯಾಗಿದೆ ಮತ್ತು ಇಸ್ರೇಲ್ ಜೊತೆಗೆ ಇಸ್ಲಾಂಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನಕ್ಕೆ ಅನೇಕ ದೇಶಗಳ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ.
ಪೂರ್ತಿ ಓದಿಮದರಸಾ ವಿದ್ಯಾರ್ಥಿಗಳನ್ನು ಸೈನಿಕರಾಗಿ ಬಳಕೆ, ಸಂಸತ್ತಿನಲ್ಲಿ ಘೋಷಿಸಿದ ಪಾಕ್ ರಕ್ಷಣಾ ಸಚಿವ
ಭಾರತದ ಪ್ರತಿದಾಳಿಯಿಂದ ನಲುಗಿರುವ ಪಾಕಿಸ್ತಾನ ಇದೀಗ ಮದರಸಾ ವಿದ್ಯಾರ್ಥಿಗಳು ನಮ್ಮ ಸೈನಿಕರು. ಅವರು ದೇಶಕ್ಕಾಗಿ ಸಮರ್ಪಿತರು.ಅಗತ್ಯ ಬಿದ್ದಾಗ ಮದರಸಾ ವಿದ್ಯಾರ್ಥಿಗಳನ್ನು ರಕ್ಷಣೆಗೆ ಸೆಕೆಂಡ್ ಲೈನ್ ಡಿಫೆನ್ಸ್ ಆಗಿ ಬಳಕೆ ಮಾಡಲಾಗುತ್ತದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಸಂಸತ್ತಿನ ಹೇಳಿದ್ದಾರೆ.
ಪೂರ್ತಿ ಓದಿFact Check: ಎಟಿಎಂಗಳು 2-3 ದಿನಗಳವರೆಗೆ ಬಂದ್ ಆಗುತ್ತಾ? ವೈರಲ್ ಆಗಿರೋ ಸುದ್ದಿಯ ಸತ್ಯಾಂಶವೇನು?
ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಎಟಿಎಂಗಳು ಮುಚ್ಚುವ ಬಗ್ಗೆ ಹರಿದಾಡುತ್ತಿರುವ ವಾಟ್ಸಾಪ್ ಸಂದೇಶಗಳು ಸುಳ್ಳು ಎಂದು ಪಿಐಬಿ ಖಚಿತಪಡಿಸಿದೆ. ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ.
ಪೂರ್ತಿ ಓದಿಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಿದ್ದ ಸರ್ಕಾರಿ ಜಮೀನು ಒತ್ತುವರಿ ಮಾಡಿ ಮೇಕೆ ಶೆಡ್ಡು!
ಹನೂರಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಿರುವ ಜಾಗದ ಪಕ್ಕದ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಿರುವ ಮೇಕೆ ಶೆಡ್ಡು, ಮನೆ ತೆರವಿಗೆ ಸರ್ಕಾರ ನೋಟಿಸ್ ನೀಡಿದೆ. ಒತ್ತುವರಿದಾರರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.
ಪೂರ್ತಿ ಓದಿ'ಹಿಂದೂಸ್ಥಾನ್ ನಹಿ, ಮುಸ್ಲಿಂಸ್ಥಾನ ಬೋಲ್..' ಉಡುಪಿಯಲ್ಲಿ ದೇಶ ವಿರೋಧಿ ಬರಹ!
ಉಡುಪಿಯ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ಗೋಡೆಯ ಮೇಲೆ 'ಹಿಂದೂಸ್ಥಾನ್ ನಹಿ, ಮುಸ್ಲಿಂಸ್ಥಾನ್ ಬೋಲ್' ಎಂಬ ದೇಶವಿರೋಧಿ ಬರಹ ಕಾಣಿಸಿಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿನಿಯೊಬ್ಬಳೇ ಬರೆದಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪೂರ್ತಿ ಓದಿಏರ್ಸ್ಪೇಸ್ ಬಂದ್ ಮಾಡದೇ ಪಾಕಿಸ್ತಾನದ ದಾಳಿ, ಭಾರತದ ಮೇಲೆ ಟರ್ಕಿ ಡ್ರೋನ್ ಬಳಕೆ: ಕೇಂದ್ರ ಸರ್ಕಾರ
ಪಾಕಿಸ್ತಾನವು ಭಾರತದ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿತು, ಆದರೆ ಭಾರತವು ಆ ದಾಳಿಯನ್ನು ವಿಫಲಗೊಳಿಸಿತು ಮತ್ತು ಪ್ರತಿದಾಳಿ ನಡೆಸಿತು. ಪಾಕಿಸ್ತಾನವು ಪ್ರಯಾಣಿಕರ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿರಲಿಲ್ಲ, ಇದು ಸಾಮಾನ್ಯ ನಾಗರೀಕರ ಭದ್ರತೆಗೆ ಅಪಾಯಕಾರಿ.
ಪೂರ್ತಿ ಓದಿಮೋಹನ್ ಭಾಗವತ್ ಧಾರವಾಡಕ್ಕೆ; ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಹೈ ಅಲರ್ಟ್!
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬೆಳಗಾವಿಗೆ ಆಗಮಿಸಿ ಧಾರವಾಡಕ್ಕೆ ತೆರಳಿದರು. ಭಾರತ-ಪಾಕಿಸ್ತಾನ ವಾಯುದಾಳಿ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಪೂರ್ತಿ ಓದಿಮಂಡ್ಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್; ಆರೋಪಿ ಜಾವಿದ್ ಬಂಧನ
ಪ್ರಧಾನಿ ಮೋದಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದ ಆರೋಪದಲ್ಲಿ ಮಂಡ್ಯದ ವ್ಯಕ್ತಿಯನ್ನು ಬಂಧಿಸಲಾಗಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಮೋದಿ ಶೂ ಧರಿಸುವಂತೆ ಎಡಿಟ್ ಮಾಡಿದ ಫೋಟೊವನ್ನು ಶೇರ್ ಮಾಡಿದ್ದ ಆರೋಪ. ಇದೇ ರೀತಿಯ ಘಟನೆ ಕೋಲಾರದಲ್ಲೂ ನಡೆದಿದ್ದು, ಸುಳ್ಳು ಸುದ್ದಿ ಹಬ್ಬಿಸಿದ ಆರೋಪದಲ್ಲಿ ವಿಚಾರಣೆ ನಡೆಯುತ್ತಿದೆ.
ಪೂರ್ತಿ ಓದಿಅಕ್ರಮ ಸಂಬಂಧ ಇದೆ ಎಂದಿದ್ದ ಪತ್ನಿ ಆರೋಪವನ್ನೇ ಸತ್ಯ ಮಾಡಿದ ಖ್ಯಾತ ನಟ ಜಯಂ ರವಿ! ಏನ್ ಸುಳ್ಳು ಹೇಳಿದ್ರಿ ಹೀರೋ?
ನಿರ್ಮಾಪಕ ಇಶಾರಿ ಗಣೇಶ್ ಅವರ ಮಗಳ ಮದುವೆಯಲ್ಲಿ ನಟ ರವಿ ಮೋಹನ್ ಮತ್ತು ಗಾಯಕಿ ಕೆನಿಷಾ ಫ್ರಾನ್ಸಿಸ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಹೊಸ ಸಂಬಂಧದ ವದಂತಿಗಳಿಗೆ ಕಾರಣವಾಗಿದೆ. ಮಾಜಿ ಪತ್ನಿ ಆರತಿಯಿಂದ ಬೇರ್ಪಟ್ಟ ನಂತರ ಕೆನಿಷಾ ಜೊತೆ ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಪೂರ್ತಿ ಓದಿಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನತೆ; ನಿಮ್ಮ ಮೊಬೈಲ್‌ನಲ್ಲಿ ಈ ಆಪ್ಶನ್ ಆನ್ ಮಾಡಿದ್ರೆ ಸೇಫ್ ಆಗ್ತೀರಾ!
ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿ ಆಗುತ್ತಿದೆ. ಹೀಗಾಗಿ ನಾಗಕರಿಕರು ಒಂದಷ್ಟು ಜವಾಬ್ದಾರಿಗಳನ್ನು ನಿಭಾಯಿಸಬೇಕು.
ವಯಸ್ಸು 40 ದಾಟಿತಾ? ಕಂಡಿದ್ದೆಲ್ಲ ತಿನ್ನುವಂತಿಲ್ಲ, ಇನ್ಮುಂದೆ ಆಹಾರ ಕ್ರಮ ಹೀಗಿರಲಿ
ನಮ್ಮ ಮೆಟಬಾಲಿಸಮ್ ನಿಧಾನವಾಗಬಹುದು, ಹಾರ್ಮೋನ್ ಬದಲಾವಣೆಗಳಾಗಬಹುದು, ಹೃದ್ರೋಗ, ಮಧುಮೇಹ, ಆಸ್ಟಿಯೊಪೊರೋಸಿಸ್ ಮುಂತಾದ ಸ್ಥಿತಿಗಳಿಗೆ ಅಪಾಯ ಹೆಚ್ಚಾಗಬಹುದು. ಹಾಗಾಗಿ ವಯಸ್ಸಾದಂತೆ, ಆಹಾರಕ್ರಮದಲ್ಲಿ ಬದಲಾವಣೆ ತರುವುದು ಮುಖ್ಯ.
ಪೂರ್ತಿ ಓದಿ