ಭಾರತದ ಪ್ರತಿದಾಳಿಯಿಂದ ನಲುಗಿರುವ ಪಾಕಿಸ್ತಾನ ಇದೀಗ ಮದರಸಾ ವಿದ್ಯಾರ್ಥಿಗಳು ನಮ್ಮ ಸೈನಿಕರು. ಅವರು ದೇಶಕ್ಕಾಗಿ ಸಮರ್ಪಿತರು.ಅಗತ್ಯ ಬಿದ್ದಾಗ ಮದರಸಾ ವಿದ್ಯಾರ್ಥಿಗಳನ್ನು ರಕ್ಷಣೆಗೆ ಸೆಕೆಂಡ್ ಲೈನ್ ಡಿಫೆನ್ಸ್ ಆಗಿ ಬಳಕೆ ಮಾಡಲಾಗುತ್ತದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಸಂಸತ್ತಿನ ಹೇಳಿದ್ದಾರೆ.

ಇಸ್ಲಾಮಾಬಾದ್(ಮೇ.09) ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ತೀವ್ರಗೊಂಡಿದೆ. ಪಾಕಿಸ್ತಾನ ಪ್ರಯೋಗಿಸಿದ ಎಲ್ಲಾ ಆಸ್ತ್ರಗಳು ವಿಫಲಗೊಂಡಿದೆ. ಇತ್ತ ಭಾರತದ ಪ್ರತಿದಾಳಿಯನ್ನು ತಡೆಯಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ. ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ಜಾಯಮಾನ ಪಾಕಿಸ್ತಾನದ್ದು. ಪಾಕಿಸ್ತಾನದ ಮಿಸೈಲ್ ದಾಳಿ ವಿಫಲ, ಡ್ರೋನ್ ವಿಫಲ, ಹಾಗೂ ಫೈಟರ್ ಜೆಟ್ ನಷ್ಟ ಎಲ್ಲದರ ಕುರಿತು ಪಾಕಿಸ್ತಾನ ರಕ್ಷಣಾ ಸಚಿವ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ಈ ವೇಳೆ ಪಾಕಿಸ್ತಾನ ನಡೆಯನ್ನು ಸಮರ್ಥಿಸಿಕೊಂಡಿದ್ದು ಮಾತ್ರವಲ್ಲ, ಸ್ಫೋಟಕ ವಿಚಾರವೊಂದನ್ನು ಮುಂದಿಟ್ಟಿದ್ದಾರೆ. ಪಾಕಿಸ್ತಾನ ಸೇನೆಗೆ ಅಗತ್ಯ ಬಿದ್ದರೆ ಮದರಸಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದಿದ್ದಾರೆ. ಅವರು ಈ ದೇಶಕ್ಕಾಗಿ ಸಮರ್ಪಿತರಾಗಿದ್ದಾರೆ ಎಂದು ರಕ್ಷಣಾ ಸಚಿವ ಖವಾಜ ಆಸಿಫ್ ಹೇಳಿದ್ದಾರೆ.

ಮದರಸಾ ವಿದ್ಯಾರ್ಥಿಗಳ ದೇಶಕ್ಕಾಗಿ ಸಮರ್ಪಿತರು
ಭಾರತದ ದಾಳಿಯನ್ನು ಪಾಕಿಸ್ತಾನ ಸಮರ್ಥವಾಗಿ ಎದುರಿಸುತ್ತಿದೆ ಎಂದು ರಕ್ಷಣಾ ಸಚಿವ ಸಂಸತ್ತಿನಲ್ಲಿ ಹೇಳಿದ್ದಾರೆ. ಪಾಕಿಸ್ತಾನವನ್ನು ಗುಣಗಾಣ ಮಾಡಿದ ರಕ್ಷಣಾ ಸಚಿವ, ದೇಶಕ್ಕಾಗಿ ಪ್ರತಿಯೊಬ್ಬರು ಸಜ್ಜಾಗಿದ್ದಾರೆ ಎಂದಿದ್ದಾರೆ. ಇದೇ ವೇಳೆ ಮಾತು ಮುಂದುವರಿಸಿದ ಖವಾಜಾ ಆಸಿಫ್, ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯಲ್ಲಿ ಅಗತ್ಯ ಬಿದ್ದರೆ ಮದರಸಾ ವಿದ್ಯಾರ್ಥಿಗಳನ್ನು ಸೇನೆಯ ಎರಡನೇ ಲೈನ್ ರಕ್ಷಣಾ ವ್ಯವಸ್ಥೆಯಾಗಿ ಬಳಕೆ ಮಾಡಲಾಗುತ್ತದೆ ಎಂದಿದ್ದಾರೆ. ಮದರಸಾ ವಿದ್ಯಾರ್ಥಿಗಳು ದೇಶಕ್ಕಾಗಿ ಸಮರ್ಪಿತರು ಎಂದು ಖವಾಜ ಆಸಿಫ್ ಹೇಳಿದ್ದಾರೆ.

ಶೇಕಡಾ 100 ರಷ್ಟು ಮದರಸಾ ವಿದ್ಯಾರ್ಥಿಗಳು ರೆಡಿ
ಭಾರತದ ದಾಳಿ ನಡೆಸುತ್ತಲೇ ಇದೆ. ನಾಗರೀಕರ ಗುರಿಯಾಗಿಸಿ ಭಾರತ ದಾಳಿ ನಡೆಸುತ್ತಿದೆ. ಡ್ರೋನ್ ದಾಳಿಗಳ ನಡುವೆ ಪಾಕಿಸ್ತಾನ ಸೇನೆಗೆ ಅಗತ್ಯಬಿದ್ದರೆ ಮದರಸಾ ವಿದ್ಯಾರ್ಥಿಗಳು ಶೇಕಡಾ 100 ರಷ್ಟು ಸೇವೆ ಸಲ್ಲಿಸಲು ಸಿದ್ಧರಿದ್ದಾರೆ. ಅವರು ದೇಶದ ಸೆಕೆಂಡ್ ಲೈನ್ ಡಿಫೆನ್ಸ್ ಎಂದು ವ್ಯಾಖ್ಯಾನಿಸಿದ್ದಾರೆ. ಈ ಮೂಲಕ ಪಾಕಿಸ್ತಾನದ ಮದರಾಸಾ ಶಿಕ್ಷಣದ ಅಸಲಿಯತ್ತು ಬಯಲು ಮಾಡಿದ್ದಾರೆ. ಪಾಕಿಸ್ತಾನ ರಕ್ಷಣಾ ಸಚಿವ ಪಾಕಿಸ್ತಾನ ಸಂಸತ್ತಿನಲ್ಲಿ ಹೇಳಿದ ಈ ಮಾತು ವಿಶ್ವದ ಹಲೆವೆಡೆ ಚರ್ಚೆಯಾಗುತ್ತಿದೆ. 

Scroll to load tweet…

ಪಾಕಿಸ್ತಾನ ಮದರಸಾ ಶಿಕ್ಷಣದಲ್ಲಿ ಕಲಿಸುವುದೇನು? 
ಪಾಕಿಸ್ತಾನದ ರಕ್ಷಣಾ ಸಚಿವ ಮದರಸಾ ವಿದ್ಯಾರ್ಥಿಗಳನ್ನು ನೇರವಾಗಿ ಪಾಕಿಸ್ತಾನ ಸೇನೆಯ ಸೆಕೆಂಡ್ ಲೈನ್ ಡಿಫೆನ್ಸ್ ಆಗಿ ಬಳಕೆ ಮಾಡಲಾಗುತ್ತದೆ ಎಂದು ಹೇಳಿದ್ದರೆ. ಅವರು ದೇಶಕ್ಕಾಗಿ ಸಮರ್ಪಿತರು ಎಂದಿದ್ದಾರೆ. ಈ ಹೇಳಿಕೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರಿ ಚರ್ಚೆ ಶುರುವಾಗಿದೆ. ಪಾಕಿಸ್ತಾನ ಮದರಸಾದಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತರುವುದೇನು? ಎಂದು ಪ್ರಶ್ನಿಸಿದ್ದಾರೆ. ಸೈನಿಕರಾಗಿ ಬಳಕೆ ಮಾಡಲಾಗುತ್ತದೆ ಎಂದರೆ ಮದರಾಸದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಪರಿ ಹೇಗಿದೆ ಅನ್ನೋದು ಬಯಲು ಮಾಡಿದ್ದಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನ ಸಂಸತ್ತಿನಲ್ಲಿ ಭಾರಿ ಆಕ್ರೋಶ
ಆಪರೇಶನ್ ಸಿಂದೂರ್‌ನಿಂದ ಪಾಕಿಸ್ತಾನ ತತ್ತರಿಸಿದೆ. ಪಾಕಿಸ್ತಾನ ಸಂಸತ್ತಿನಲ್ಲಿ ಭಾರತದ ವಿರುದ್ದ ಹಲವು ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಸೇನೆ ಎನು ಮಾಡುತ್ತಿಲ್ಲ, ಭಾರತದ ದಾಳಿಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ, ಫೈಟರ್ ಜೆಟ್ ಕಳೆದುಕೊಂಡಿದ್ದೇವೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ. ಇದರ ವಿರುದ್ದ ಹಲವು ನಾಯಕರು ಹರಿ ಹಾಯ್ದಿದ್ದಾರೆ.

ಆಪರೇಶನ್ ಸಿಂದೂರ್‌ಗೆ ಬೆಂಬಲ ನೀಡಿದ ಪಾಕಿಸ್ತಾನಿ, ವಿಡಿಯೋ ಮಾಡಿ ಕಾರಣ ಹೇಳಿದ ಯುವಕ