ಚೆನ್ನೈನಲ್ಲಿ ನಡೆದ ಮದುವೆಯಲ್ಲಿ ನಟ ರವಿ ಮೋಹನ್, ಗಾಯಕಿ ಕೆನಿಷಾ ಫ್ರಾನ್ಸಿಸ್ ಜೊತೆ ಕಾಣಿಸಿಕೊಂಡರು. ವಿಚ್ಛೇದನದ ನಂತರ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಸಂಬಂಧದ ವದಂತಿಗಳಿಗೆ ಪುಷ್ಟಿ ನೀಡಿದೆ. ಕಳೆದ ವರ್ಷ ಇದೇ ಆರೋಪ ಕೇಳಿಬಂದಿದ್ದರೂ, ಇಬ್ಬರೂ ನಿರಾಕರಿಸಿದ್ದರು. ದಂಪತಿಗಳಂತೆ ಫೋಟೋಗೆ ಪೋಸ್ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಚೆನ್ನೈ: ಶುಕ್ರವಾರ ಚೆನ್ನೈನಲ್ಲಿ ನಡೆದ ನಿರ್ಮಾಪಕ ಇಶಾರಿ ಗಣೇಶ್ ಅವರ ಮಗಳ ಮದುವೆಯಲ್ಲಿ ತಮಿಳು ನಟ ರವಿ ಮೋಹನ್ ಅವರು ಬಂಗಾರದ ಬಣ್ಣದ ಶರ್ಟ್‌, ಪಂಚೆ ಉಟ್ಟು ಎಲ್ಲರ ಗಮನ ಸೆಳೆದರು. ಡಿವೋರ್ಸ್ ನಂತರ ನಟ ಗಾಯಕಿ ಕೆನಿಷಾ ಫ್ರಾನ್ಸಿಸ್ ಜೊತೆ ಕಾಣಿಸಿಕೊಂಡಿದ್ದು ದೊಡ್ಡ ಚರ್ಚೆ ಆಗುತ್ತಿದೆ. ರವಿ ಮೋಹನ್ ತಮ್ಮ ಮಾಜಿ ಪತ್ನಿ ಆರತಿಯಿಂದ ಬೇರ್ಪಡುವುದಾಗಿ ಘೋಷಿಸಿದ ಕೆಲವು ತಿಂಗಳ ನಂತರದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು.
ಕಳೆದ ವರ್ಷವೇ ಆರೋಪ ಬಂದಿತ್ತು! 


ರವಿ, ಕೆನಿಷಾ ನಡುವೆ ಸಂಬಂಧ ಇದೆ ಎಂಬ ಆರೋಪ ಬಂದಿತ್ತು. ಕಳೆದ ವರ್ಷ ರವಿ ಮತ್ತು ಕೆನಿಷಾ ತಾವು ಸ್ನೇಹಿತರೆಂದು ಹೇಳಿದ್ದರು, ಆದರೆ ಈಗ ಇವರಿಬ್ಬರು ಒಟ್ಟಿಗೆ ಬಂದಿರುವುದು ಅವರ ಸಂಬಂಧದ ಬಗ್ಗೆ ವದಂತಿಗಳಿಗೆ ಕಾರಣವಾಗಿದೆ. ರವಿ ಮೋಹನ್ ಅವರ ವಿಚ್ಛೇದನಕ್ಕೆ ಕೆನಿಷಾ ಫ್ರಾನ್ಸಿಸ್ ಕಾರಣ ಎಂದು ಹೇಳಲಾಗಿತ್ತು. ಆದರೆ ಅಂತಹ ಆರೋಪಗಳನ್ನು ರವಿ ಮೋಹನ್ ಸೇರಿದಂತೆ ಎಲ್ಲರೂ ತಳ್ಳಿಹಾಕಿದ್ದರು.


ದಂಪತಿಗಳ ಥರ ಫೋಟೋಗೆ ಪೋಸ್‌ ಕೊಟ್ರು! 
ವೇಲ್ಸ್ ಫಿಲ್ಮ್ಸ್ ಮಾಲೀಕರ ಮಗಳ ಮದುವೆಗೆ ರವಿ ಮತ್ತು ಕೆನಿಷಾ ಆಕರ್ಷಕ ಉಡುಪುಗಳನ್ನು ಧರಿಸಿ ಬಂದಿದ್ದರು. ನಟ ಪಾರಂಪರಿಕ ಶರ್ಟ್ ಮತ್ತು ಧೋತಿ ಧರಿಸಿದ್ದರೆ, ಕೆನಿಷಾ ಗೋಲ್ಡನ್ ಬಣ್ಣದ ಸೀರೆಯನ್ನು ಧರಿಸಿದ್ದರು. ಇಬ್ಬರೂ ದಂಪತಿಗಳಂತೆ ಕಾಣುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಅಷ್ಟೇ ಅಲ್ಲದೆ ಮದುವೆ ಮುಗಿಯುವವರೆಗೂ ಇವರಿಬ್ಬರು ಜೋಡಿಗಳಂತೆ ಓಡಾಡಿದ್ದರು, ಅಷ್ಟೇ ಅಲ್ಲದೆ ಫೋಟೋಕ್ಕೆ ದಂಪತಿ ರೀತಿ ಪೋಸ್‌ ಕೂಡ ಕೊಟ್ಟಿದ್ದಾರೆ.


ಅಂದು ಆರೋಪ ತಳ್ಳಿ ಹಾಕಿದ್ರು!
2024 ರ ಸೆಪ್ಟೆಂಬರ್‌ನಲ್ಲಿ ರವಿ ಹಾಗೂ ಆರತಿ ಅವರು ಬೇರ್ಪಡುವ ನಿರ್ಧಾರವನ್ನು ಘೋಷಿಸಿದ ನಂತರ, ರವಿ ಮೋಹನ್ ಮತ್ತು ಆರತಿ ಸೋಶಿಯಲ್‌ ಮೀಡಿಯಾದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ್ದರು. ಡಿಟಿ ನೆಕ್ಸ್ಟ್‌ಗೆ ನೀಡಿದ ಸಂದರ್ಶನದಲ್ಲಿ, ಅಂದು ಕೆನಿಷಾ ಅವರು ರವಿಯೊಂದಿಗಿನ ಅಕ್ರಮ ಸಂಬಂಧದ ವದಂತಿಗಳನ್ನು ತಳ್ಳಿಹಾಕಿದ್ದರು. ಆರತಿ ಮತ್ತು ಅವರ ಕುಟುಂಬ ರವಿಯನ್ನು ನಿಂದಿಸಿದ್ದಾರೆ ಎಂದು ಕೆನಿಷಾ ಹೇಳಿದ್ದರು. ವೃತ್ತಿಪರ ಕಾರಣಗಳಿಗಾಗಿ ತಾನು ರವಿಯನ್ನು ಭೇಟಿಯಾದೆ ಎಂದು ಅವರು ಹೇಳಿದ್ದರು.


ಎಮೋಶನಲ್‌ ಭಾಷಣ ಮಾಡಿದ್ದ ಕೆನಿಷಾ! 
ರವಿ ಮೋಹನ್ ಅವರ ಮಾಜಿ ಪತ್ನಿ ಆರತಿ, ಅವರ ಕುಟುಂಬದ ವಿರುದ್ಧ ಆರೋಪಗಳನ್ನು ಮಾಡಿದ್ದರು. “ಜಯಂ ರವಿ ಅವರ ಪತ್ನಿ ಮತ್ತು ಸಂಬಂಧಿಕರು ನನಗೆ ನೀಡಿದ ನೋವು ನನ್ನ ಹೆತ್ತವರನ್ನು ಕಳೆದುಕೊಂಡ ನೋವಿಗಿಂತ ಹೆಚ್ಚು” ಎಂದು ಕೆನಿಷಾ ಹೇಳಿದ್ದರು. “ಆರತಿ ಮತ್ತು ಅವರ ಹೆತ್ತವರಿಂದ ನಾನು ಅನುಭವಿಸಿದ ನೋವಿನ ಬಗ್ಗೆ ಹೇಳುವುದು ತುಂಬಾ ನೋವಿನ ಸಂಗತಿ. ಯಾರಿಗೂ ಇಷ್ಟೊಂದು ಕಿರುಕುಳ ನೀಡಬಾರದು, ಬೇಕಾದರೆ ಈ ಕಿರುಕುಳದ ಪುರಾವೆಗಳನ್ನು ನ್ಯಾಯಾಲಯದಲ್ಲಿ ಅಥವಾ ಸಾರ್ವಜನಿಕವಾಗಿ ಇಡಲು ಸಿದ್ಧ” ಎಂದು ಕೆನಿಷಾ ಹೇಳಿದ್ದರು.


ತಮಿಳು ಚಿತ್ರರಂಗದ ಸುಂದರ ಜೋಡಿ ದೂರ! 
ಆರತಿ ಅವರು ಕಳೆದ ಒಂದು ವರ್ಷದಿಂದ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿಲ್ಲ. ಇನ್ನೊಂದು ಕಡೆ ರವಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪತ್ನಿ, ಮಕ್ಕಳ ಜೊತೆಗೆ ಇರುವ ಫೋಟೋಗಳನ್ನು ಕೂಡ ಡಿಲಿಟ್‌ ಮಾಡಿದ್ದಾರೆ. ರವಿ ಹಾಗೂ ಆರತಿ ಜೋಡಿ ನೋಡಿ ಅನೇಕರು ತಮಿಳು ಚಿತ್ರರಂಗದ ಮುದ್ದಾದ ಜೋಡಿ, ಲವ್‌ಲೀ ಕಪಲ್‌ ಎಂದು ಅಂದುಕೊಂಡಿತ್ತು. ಆದರೀಗ ಇವರಿಬ್ಬರು ದೂರ ಆಗಿರೋದು ಎಲ್ಲರಿಗೂ ಶಾಕ್‌ ನೀಡಿದೆ.