10:52 PM (IST) Jan 07

India Latest News Live 7 January 2026ಮೈನಿಂಗ್‌ ದಿಗ್ಗಜ, ವೇದಾಂತ ಚೇರ್ಮನ್‌ ಅನಿಲ್‌ ಅಗರ್ವಾಲ್‌ಗೆ ಪುತ್ರ ವಿಯೋಗ, 49ನೇ ವಯಸ್ಸಿಗೆ ಸಾವು ಕಂಡ ಏಕೈಕ ಪುತ್ರ ಅಗ್ನಿವೇಶ್‌!

ವೇದಾಂತ ಅಧ್ಯಕ್ಷ ಅನಿಲ್ ಅಗರ್ವಾಲ್ ಅವರು ತಮ್ಮ ಮಗ ಅಗ್ನಿವೇಶ್ (49) ಅಮೆರಿಕದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಘೋಷಿಸಿದ್ದಾರೆ. ಇದು ತಮ್ಮ ಜೀವನದ ಅತ್ಯಂತ ಕರಾಳ ದಿನ ಎಂದು ಕರೆದಿದ್ದಾರೆ.

Read Full Story
09:40 PM (IST) Jan 07

India Latest News Live 7 January 2026Budget 2026 - ಇತಿಹಾಸದಲ್ಲೇ ಮೊದಲು! ಫೆ.1ರ ಭಾನುವಾರದಂದೇ ಬಜೆಟ್ ಮಂಡನೆ, ಕಾರಣವೇನು ಗೊತ್ತಾ?

Union Budget 2026: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ (CCPA) ಸಭೆಯಲ್ಲಿ, ಜನವರಿ 7ರ ಬುಧವಾರದಂದು ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನದ ಪ್ರಮುಖ ದಿನಾಂಕಗಳಿಗೆ ಅನುಮೋದನೆ ನೀಡಲಾಗಿದೆ

Read Full Story
09:17 PM (IST) Jan 07

India Latest News Live 7 January 2026ವಾಶ್‌ರೂಮ್‌ನಲ್ಲಿ ರೊಮ್ಯಾನ್ಸ್‌ನಲ್ಲಿದ್ದಾಗ ಮಾಸ್ಟರ್‌ ಕೀ ಬಳಸಿ ರೂಮ್‌ಗೆ ಎಂಟ್ರಿ, ಲೀಲಾ ಪ್ಯಾಲೇಸ್‌ ವಿರುದ್ಧ ಕೇಸ್‌ ಹಾಕಿ ಗೆದ್ದ ಗ್ರಾಹಕ!

Leela Palace Udaipur Fined ₹10 Lakh for Guest Privacy Violation 2025 ಜನವರಿ 26ರಿಂದ ವಾರ್ಷಿಕ ಬಡ್ಡಿಯ ಶೇ. 9 ರಷ್ಟು ಬಡ್ಡಿಯೊಂದಿಗೆ ರೂ. 55,000 ರೂಮ್‌ ಬಾಡಿಗೆಯನ್ನು ಮರುಪಾವತಿಸುವಂತೆ ಆಯೋಗವು ಉದಯಪುರ ಲೀಲಾ ಪ್ಯಾಲೇಸ್‌ಗೆ ಸೂಚನೆ ನೀಡಿದೆ.

Read Full Story
08:21 PM (IST) Jan 07

India Latest News Live 7 January 2026Viral News - 29 ಕೋಟಿಗೆ ಮಾರಾಟವಾದ ಬೃಹತ್‌ ಮೀನು, ರೆಸ್ಟೋರೆಂಟ್‌ನ್ಲಿ ಕೆಜಿಗೆ 11 ಲಕ್ಷದಂತೆ ಮಾರಾಟ!

Giant Bluefin Tuna Sold for Record ₹29 Crore at Tokyo Fish Auction ಜಪಾನ್‌ನ ಟೋಕಿಯೋದಲ್ಲಿ 243 ಕೆಜಿಯ ಬೃಹತ್ ಮೀನು ಬರೋಬ್ಬರಿ 29 ಕೋಟಿಗೆ ಮಾರಾಟವಾಗಿದೆ. ಇದೇ ಮೀನು ಶಾಪ್‌ಗಳಲ್ಲಿ ಪ್ರತಿ ಕೆಜಿಗೆ 11 ಲಕ್ಷ ರೂಪಾಯಿಯಂತೆ ಮಾರಾಟವಾಗಿದೆ.

Read Full Story
07:43 PM (IST) Jan 07

India Latest News Live 7 January 2026ಮಗುವಿಗೆ ತಿಂಗಳು ತುಂಬುವ ಮೊದಲೇ ಮತ್ತೆ ಕೆಲಸಕ್ಕೆ ಹಾಜರಾದ ನಟಿ - ಪಪಾರಾಜಿಗಳ ಮಾತಿಗೆ ಶಾಕ್

ಹಾಸ್ಯನಟಿ ಭಾರ್ತಿ ಸಿಂಗ್ ಇತ್ತೀಚೆಗೆ ತಮ್ಮ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದ ಅವರು, ಈ ಬಗ್ಗೆ ಪಪಾರಾಜಿಗಳೊಂದಿಗೆ ಹಾಸ್ಯಮಯವಾಗಿ ಮಾತನಾಡಿದ್ದು, ಈ ವಿಡಿಯೋ ವೈರಲ್ ಆಗಿದೆ. 

Read Full Story
07:17 PM (IST) Jan 07

India Latest News Live 7 January 2026ಹಿಜಾಬ್‌, ಘುಂಗಟ್ ಧರಿಸಿದರಿಗೆ ಚಿನ್ನದಂಗಡಿಗೆ ಪ್ರವೇಶವಿಲ್ಲ - ಹೊಸ ನಿಯಮ ತಂದ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌!

ಬಿಹಾರದ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌, ರಾಜ್ಯದಲ್ಲಿ ಹೆಚ್ಚುತ್ತಿರುವ ದರೋಡೆ ಪ್ರಕರಣಗಳನ್ನು ತಡೆಯಲು ಭದ್ರತಾ ಕಾರಣಗಳಿಗಾಗಿ ಚಿನ್ನದ ಅಂಗಡಿಗಳಲ್ಲಿ ಹಿಜಾಬ್, ನಖಾಬ್ ಹಾಗೂ ಹೆಲ್ಮೆಟ್‌ ಧರಿಸಿ ಪ್ರವೇಶಿಸುವುದನ್ನು ನಿಷೇಧಿಸಿದೆ. ಈ ನಿರ್ಧಾರವು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

Read Full Story
06:49 PM (IST) Jan 07

India Latest News Live 7 January 2026ಕೋಲಿಗೆ ಮೊಳೆ ಬಡಿದು ರಸ್ತೆಯಲ್ಲಿ ನಿಂತು ಟ್ರಕ್ ಚಾಲಕರಿಂದ ಹಣ ವಸೂಲಿ - ವೀಡಿಯೋ ವೈರಲ್

ಕೋಲಿಗೆ ಮೊಳೆ ಹೊಡೆದು ರಸ್ತೆಯಲ್ಲಿ ಟ್ರಕ್ ಚಾಲಕರನ್ನು ಬೆದರಿಸಿ ಇಬ್ಬರು ಮಹಿಳೆಯರು ಹಣ ವಸೂಲಿ ಮಾಡುತ್ತಿರುವ ಘಟನೆಯ ವೀಡಿಯೋ ವೈರಲ್ ಆಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಈ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
Read Full Story
06:03 PM (IST) Jan 07

India Latest News Live 7 January 2026ಗಂಜಿ ಕುಡಿಯಲು ನಟನೆಗೆ ಬಂದ್ಯಾ - ಇಬ್ಬರು ಖ್ಯಾತ ನಟಿಯರ ಜಡೆ ಜಗಳಕ್ಕೆ ನೆಟ್ಟಿಗರ ಆಕ್ರೋಶ

ಮಲಯಾಳಂ ತಾರೆಯರಿಬ್ಬರ ನಡುವಿನ ಕಿತ್ತಾಟವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಆಡಿಕೊಳ್ಳುವವರ ಸರಕಾಗಿದೆ. ನಟಿ ಸ್ನೇಹಾ ಶ್ರೀಕುಮಾರ್ ವಿರುದ್ಧ ಕಲಾಮಂಡಲಂ ಸತ್ಯಭಾಮ ತೀವ್ರ ವಾಗ್ದಾಳಿ ನಡೆಸಿದ್ದು ಇವರಿಬ್ಬರ ಕಿತ್ತಾಟಕ್ಕೆ ಈಗ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Read Full Story
05:57 PM (IST) Jan 07

India Latest News Live 7 January 2026ಅರ್ಜುನ್ ತೆಂಡೂಲ್ಕರ್ ಮದುವೆ ಡೇಟ್ ಫಿಕ್ಸ್; ಹಸೆಮಣೆ ಏರಲು ರೆಡಿಯಾದ ಸಚಿನ್ ಪುತ್ರ!

ಬೆಂಗಳೂರು: ಭಾರತ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಮದುವೆ ಡೇಟ್ ಫಿಕ್ಸ್ ಆಗಿದೆ ಎಂದು ವರದಿಯಾಗಿದೆ.

Read Full Story
05:20 PM (IST) Jan 07

India Latest News Live 7 January 2026ವಿಗ್ ಧಿರಿಸಿ ಬೋಳು ತಲೆ ಮುಚ್ಚಿಟ್ಟು ಮದುವೆಯಾದ ವ್ಯಕ್ತಿ - ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಇಲ್ಲೊಂದು ಕಡೆ ವ್ಯಕ್ತಿಯೊರ್ವ ತನ್ನ ಬೋಳು ತಲೆ ಮುಚ್ಚಿಟ್ಟು ಮದುವೆಯಾಗಿದ್ದು, ಈತನ ರಿಯಲ್ ಫೇಸ್ ನೋಡಿದ ಪತ್ನಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗ ಮಹಿಳೆಯ ಪತಿ ಹಾಗೂ ಆತನ ನಾಲ್ವರು ಕುಟುಂಬ ಸದಸ್ಯರ ವಿರುದ್ಧ ಕೇಸು ದಾಖಲಿಸಿದ್ದಾರೆ.

Read Full Story
05:07 PM (IST) Jan 07

India Latest News Live 7 January 2026ಮತ್ತೊಮ್ಮೆ ಸ್ಪೋಟಕ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ; ಹರಿಣಗಳೆದುರು ಬೃಹತ್ ಮೊತ್ತ ದಾಖಲಿಸಿದ ಭಾರತ ಯುವ ಪಡೆ

ದಕ್ಷಿಣ ಆಫ್ರಿಕಾ ಅಂಡರ್ 19 ವಿರುದ್ಧದ ಮೂರನೇ ಯೂತ್ ಏಕದಿನ ಪಂದ್ಯದಲ್ಲಿ, ಭಾರತದ ನಾಯಕ ವೈಭವ್ ಸೂರ್ಯವಂಶಿ ಮತ್ತು ಆರೋನ್ ಜಾರ್ಜ್ ಸ್ಫೋಟಕ ಶತಕ ಸಿಡಿಸಿದ್ದಾರೆ. ಈ ಜೋಡಿಯ 227 ರನ್‌ಗಳ ಜೊತೆಯಾಟದ ನೆರವಿನಿಂದ ಭಾರತ ತಂಡವು 7 ವಿಕೆಟ್‌ಗೆ 388 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.

Read Full Story
04:22 PM (IST) Jan 07

India Latest News Live 7 January 2026ಸಹಜ ಹೆರಿಗೆ - 10 ಹೆಣ್ಣು ಮಕ್ಕಳ ನಂತರ ಕಡೆಗೂ ಜನಿಸಿದ ಗಂಡು ಮಗ - ದಿಲ್‌ಖುಷ್ ಅಂತ ಹೆಸರಿಟ್ಟ ಕುಟುಂಬ

ಹರ್ಯಾಣದ ಜಿಂದ್‌ನಲ್ಲಿ ಮಹಿಳೆಯೊಬ್ಬರು 10 ಹೆಣ್ಣು ಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದು, ಕುಟುಂಬದಲ್ಲಿ ಸಂತಸ ಮನೆಮಾಡಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 11 ಮಕ್ಕಳನ್ನು ಹೆತ್ತ ತಾಯಿಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ.

Read Full Story
04:12 PM (IST) Jan 07

India Latest News Live 7 January 2026T20 World Cup 2026 ಟೂರ್ನಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪ್ರಕಟ; ಇಬ್ಬರು ಮ್ಯಾಚ್ ವಿನ್ನರ್ಸ್ ಆರಂಭಿಕ ಪಂದ್ಯಗಳಿಂದ ಔಟ್!

2026ರ ಐಸಿಸಿ ಟಿ20 ವಿಶ್ವಕಪ್‌ಗೆ 15 ಸದಸ್ಯರ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ತಂಡವನ್ನು ಮುನ್ನಡೆಸಲಿದ್ದಾರೆ. ರಚಿನ್ ರವೀಂದ್ರ, ಡೆವೊನ್ ಕಾನ್‌ವೇ ಅವರಂತಹ ತಾರಾ ಆಟಗಾರರು ತಂಡದಲ್ಲಿದ್ದಾರೆ.

Read Full Story
04:08 PM (IST) Jan 07

India Latest News Live 7 January 2026ಸಮುದ್ರ ತೀರದಲ್ಲಿ ತಾನೇ ಹೆರಿಗೆ ಮಾಡಿಕೊಂಡ ಮಹಿಳೆ - ವಿಡಿಯೋ ನೋಡಿ ಶಾಕ್​ ಆದ ಜನರು!

ನಿಕರಾಗುವಾದ ಜೋಸಿ ಪ್ಯೂಕರ್ಟ್ ಎಂಬ ಮಹಿಳೆ, ವೈದ್ಯಕೀಯ ಸಹಾಯವಿಲ್ಲದೆ ಸಮುದ್ರ ತೀರದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸಹಜ ಹೆರಿಗೆಯ ಕನಸನ್ನು ನನಸಾಗಿಸಲು, ಪತಿಯ ನೆರವಿನೊಂದಿಗೆ ಕಡಲತೀರಕ್ಕೆ ತೆರಳಿ ಆರೋಗ್ಯವಂತ ಗಂಡು ಮಗುವನ್ನು ಹೆತ್ತಿದ್ದು, ಈ ಘಟನೆ ವೈರಲ್ ಆಗಿದೆ.
Read Full Story
02:53 PM (IST) Jan 07

India Latest News Live 7 January 2026ಕದಿಯಲು ಬಂದು ಕಿಟಕಿಯಲ್ಲಿ ಸಿಲುಕಿಕೊಂಡ ಕಳ್ಳ - ಪೊಲೀಸರ ಕರೆಸಿ ಕಳ್ಳನ ರಕ್ಷಿಸಿದ ಮನೆಯವರು

ರಾಜಸ್ಥಾನದ ಕೋಟಾದಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳನೊಬ್ಬ, ಸಣ್ಣ ಕಿಟಕಿಯಲ್ಲಿ ನುಗ್ಗಲು ಹೋಗಿ ತಲೆಕೆಳಗಾಗಿ ಸಿಕ್ಕಿಬಿದ್ದಿದ್ದಾನೆ. ತೀರ್ಥಯಾತ್ರೆಯಿಂದ ಹಿಂತಿರುಗಿದ ಮನೆಯವರು ಆತನನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆತನನ್ನು ರಕ್ಷಿಸಿ ಬಂಧಿಸಿದ್ದಾರೆ.
Read Full Story
02:10 PM (IST) Jan 07

India Latest News Live 7 January 2026ಆರ್‌ಸಿಬಿ ಕ್ರಿಕೆಟಿಗ ಜೇಕಬ್ ಬೆಥೆಲ್ ಶತಕದ ಹೊರತಾಗಿಯೂ ಸಂಕಷ್ಟದಲ್ಲಿ ಇಂಗ್ಲೆಂಡ್! ಸಿಡ್ನಿ ಟೆಸ್ಟ್‌ನ ನಾಲ್ಕನೇ ದಿನದಾಟ ಹೀಗಿತ್ತು

ಆಶಸ್ ಸರಣಿಯ ಅಂತಿಮ ಟೆಸ್ಟ್‌ನಲ್ಲಿ, ಆರ್‌ಸಿಬಿ ಆಟಗಾರ ಜೇಕಬ್ ಬೆಥೆಲ್ ಅವರ ಚೊಚ್ಚಲ ಶತಕದ (142*) ನೆರವಿನಿಂದ ಇಂಗ್ಲೆಂಡ್ ಹೋರಾಟ ನಡೆಸುತ್ತಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ 302/8 ಸ್ಕೋರ್ ಮಾಡಿರುವ ಇಂಗ್ಲೆಂಡ್, 119 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದ್ದು, ಆಸ್ಟ್ರೇಲಿಯಾ ಗೆಲುವಿನ ಸನಿಹದಲ್ಲಿದೆ.
Read Full Story
01:12 PM (IST) Jan 07

India Latest News Live 7 January 2026ಬಾಂಗ್ಲಾದೇಶ ಮನವಿ ರಿಜೆಕ್ಟ್‌; ಟಿ20 ವಿಶ್ವಕಪ್‌ ಬಾಯ್ಕಾಟ್ ಮಾಡಿದ್ರೆ ಬಾಂಗ್ಲಾಕ್ಕೆ ಕೋಟ್ಯಾಂತರ ರುಪಾಯಿ ನಷ್ಟ!

ಮುಸ್ತಾಫಿಜುರ್ ವಿವಾದದ ಹಿನ್ನೆಲೆಯಲ್ಲಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸಲು ಐಸಿಸಿಗೆ ಮನವಿ ಮಾಡಿತ್ತು. ಈ ಬೇಡಿಕೆಯನ್ನು ತಿರಸ್ಕರಿಸಿದ ಐಸಿಸಿ, ಭಾರತದಲ್ಲಿ ಆಡದಿದ್ದರೆ ಟೂರ್ನಿಯಿಂದಲೇ ಹೊರಹೋಗುವಂತೆ ಎಚ್ಚರಿಕೆ ನೀಡಿದೆ.

Read Full Story
01:04 PM (IST) Jan 07

India Latest News Live 7 January 2026ಹ್ಯೂಮನ್ ಬ್ಲಡ್ ಎಂಬ ಲೇಬಲ್‌ - ಸಿರಿಂಜ್ ಮೂಲಕ ಕುರಿಗಳ ರಕ್ತ ತೆಗೆದು ಮಾರುತ್ತಿದ್ದ ಖದೀಮರ ಬಂಧನ

ಹೈದರಾಬಾದ್‌ನಲ್ಲಿ, ಜೀವಂತ ಕುರಿ ಮತ್ತು ಆಡುಗಳಿಂದ ಸಿರಿಂಜ್ ಮೂಲಕ ಅಕ್ರಮವಾಗಿ ರಕ್ತ ತೆಗೆದು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿಗಳು ಈ ರಕ್ತದ ಪ್ಯಾಕೆಟ್‌ಗಳ ಮೇಲೆ 'ಮಾನವ ರಕ್ತ' ಎಂದು ಲೇಬಲ್ ಮಾಡಿದ್ದರಿಂದ ಹಲವು ಅನುಮಾನಗಳು ಹುಟ್ಟಿವೆ.

Read Full Story
12:18 PM (IST) Jan 07

India Latest News Live 7 January 2026ಬೆಂಗಳೂರಿನಿಂದ ಆರ್‌ಸಿಬಿ ಮ್ಯಾಚ್ ಪುಣೆಗೆ ಶಿಫ್ಟ್ ಮಾಡಲು ಬಿಸಿಸಿಐ ಮೇಲೆ ಮಹಾರಾಷ್ಟ್ರ ಒತ್ತಡ!

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಯೋಜನೆಗೆ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳನ್ನು ಪುಣೆಗೆ ಶಿಫ್ಟ್ ಮಾಡಲು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯು ಬಿಸಿಸಿಐ ಮೇಲೆ ಒತ್ತಡ ಹೇರುತ್ತಿದೆ.

Read Full Story
12:04 PM (IST) Jan 07

India Latest News Live 7 January 2026ದುಬೈನಲ್ಲಿ ಭೀಕರ ಅಪಘಾತ - ಕೇರಳದ ಒಂದೇ ಕುಟುಂಬದ ನಾಲ್ವರು ಪುಟ್ಟ ಮಕ್ಕಳು ಸಾವು

ಅಬುಧಾಬಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಮಕ್ಕಳ ಪೋಷಕರು ಮತ್ತು ಓರ್ವ ಸಹೋದರಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read Full Story