- Home
- Entertainment
- TV Talk
- ಮಗುವಿಗೆ ತಿಂಗಳು ತುಂಬುವ ಮೊದಲೇ ಮತ್ತೆ ಕೆಲಸಕ್ಕೆ ಹಾಜರಾದ ನಟಿ: ಪಪಾರಾಜಿಗಳ ಮಾತಿಗೆ ಶಾಕ್
ಮಗುವಿಗೆ ತಿಂಗಳು ತುಂಬುವ ಮೊದಲೇ ಮತ್ತೆ ಕೆಲಸಕ್ಕೆ ಹಾಜರಾದ ನಟಿ: ಪಪಾರಾಜಿಗಳ ಮಾತಿಗೆ ಶಾಕ್
ಹಾಸ್ಯನಟಿ ಭಾರ್ತಿ ಸಿಂಗ್ ಇತ್ತೀಚೆಗೆ ತಮ್ಮ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದ ಅವರು, ಈ ಬಗ್ಗೆ ಪಪಾರಾಜಿಗಳೊಂದಿಗೆ ಹಾಸ್ಯಮಯವಾಗಿ ಮಾತನಾಡಿದ್ದು, ಈ ವಿಡಿಯೋ ವೈರಲ್ ಆಗಿದೆ.

ಪಾಪಾರಾಜಿಗಳ ನಗೆಗಡಲಲ್ಲಿ ತೇಲಿಸಿದ ಭಾರ್ತಿ ಸಿಂಗ್
ಹಿಂದಿ ಕಿರುತೆರೆಯ ಹಾಸ್ಯನಟಿ ಭಾರ್ತಿ ಸಿಂಗ್ ಎಂದರೆ ಇಷ್ಟಪಡದ ಜನರಿಲ್ಲ, ಅವರೆಲ್ಲಿರ್ತಾರೋ ಅಲ್ಲಿ ನಗು ಫಿಕ್ಸ್. ಹಿಂದೆ ಮುಂದೆ ಸುತ್ತುವ ಪಪಾರಾಜಿಗಳನ್ನು ನಗುತ್ತಲೇ ಮಾತನಾಡಿಸುವ ಅವರು ಸಮಯಕ್ಕೆ ತಕ್ಕಂತೆ ಮಾಡುವ ಹಾಸ್ಯದಿಂದ ಎಲ್ಲರೂ ಬಿದ್ದು ಬಿದ್ದು ನಗುತ್ತಾರೆ. ಇತ್ತೀಚೆಗೆ ಅಂದರೆ ಡಿಸೆಂಬರ್ 19ರಂದು ಅವರು 2ನೇ ಮಗುವಿಗೆ ಜನ್ಮ ನೀಡಿದ್ದರು. ಇದಾದ ನಂತರ ಇದೇ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಭಾರ್ತಿ ಸಿಂಗ್ ಅವರಿಗೆ ಎಲ್ಲರೂ ಮಗು ಆಗಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಕಿಸ್ಮಿಸ್ ಬರುತ್ತೆ ಅನ್ಕಂಡ್ವಿ ಆದರೆ ಕಾಜು ಬಂತು
ಎಲ್ಲರಿಗೂ ನಗುತ್ತಾ ಧನ್ಯವಾದ ಹೇಳಿದ ಅವರು, ಕಿಸ್ಮಿಸ್ ಬರುತ್ತೆ ಅನ್ಕಂಡ್ವಿ ಆದರೆ ಕಾಜು ಬಂತು ಎಂದು ಹೇಳಿದ್ದಾರೆ. ಅಂದರೆ ಹೆಣ್ಣು ಮಗಳು ಬರ್ತಾಳೆ ಅನ್ಕೊಂಡ್ವಿ ಆದ್ರೆ ಗಂಡು ಮಗು ಹುಟ್ಟಿದ ಎಂದು ಹೇಳಿದ್ದಾರೆ, ಇದ್ಕೆ ಪ್ರತಿಕ್ರಿಯಿಸಿದ ಪಪಾರಾಜಿಯೊಬ್ಬರು ಮೂರನೇ ಮಗು ಹೆಣ್ಣಾಗುತ್ತೇ ಎಂದಿದ್ದಾರೆ. ಇದಕ್ಕೆ ನಗುತ್ತಲ್ಲೇ ಹಾಸ್ಯಮಯವಾಗಿ ಉತ್ತರಿಸಿದ ಭಾರ್ತಿ ಸಿಂಗ್ ಅಂದ್ರೆ ಬರೀ ಇದೇ ಮಾಡ್ಕೊಂಡು ಕೂರ್ಲಾ ಎಂದು ಹೇಳಿದ್ದಾರೆ ಇವರ ಮಾತಿಗೆ ಅಲ್ಲಿದ್ದವರೆಲ್ಲರೂ ಬಿದ್ದು ಬಿದ್ದು ನಕ್ಕಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಭಾರ್ತಿ ಸಿಂಗ್ ಅವರು ಪ್ರತಿ ಮಾತಲ್ಲೂ ಪಕ್ಕದಲ್ಲಿದ್ದವರ ಮೊಗದಲ್ಲಿ ನಗು ಮೂಡಿಸುತ್ತಿರುವ ಅವರ ಹಾಸ್ಯಕ್ಕೆ ಫಿದಾ ಆಗದವರಿಲ್ಲ.
ತಿಂಗಳು ಕಳೆಯುವುದಕ್ಕೂ ಮೊದಲೇ ಕೆಲಸಕ್ಕೆ ಹಾಜರ್
ಡಿಸೆಂಬರ್ 19ರಂದು 2ನೇ ಗಂಡು ಮಗುವನ್ನು ಬರಮಾಡಿಕೊಂಡ ಹರ್ಷ್ ಲಿಂಬಾಚಿಯಾ ಹಾಗೂ ಭಾರ್ತಿ ಸಿಂಗ್ ಒಂದು ತಿಂಗಳು ಕಳೆಯುವುದಕ್ಕೂ ಮೊದಲೇ ಕೆಲಸಕ್ಕೆ ಹಾಜರಾಗಿದ್ದಾರೆ. Laughter Chefs ಸೀಸನ್ 3ರ ಶೂಟ್‌ಗಾಗಿ ಭಾರ್ತಿ ಸಿಂಗ್ ಶೂಟಿಂಗ್ ಆರಂಭಿಸಿದ್ದು, ಅನೇಕರು ಅವರು ಪುಟ್ಟ ಮಗುವನ್ನು ಬಿಟ್ಟು ಕನಿಷ್ಟ ವಿರಾಮವನ್ನು ತೆಗೆದುಕೊಳ್ಳದೇ ಇಷ್ಟು ಬೇಗ ಕೆಲಸಕ್ಕೆ ಬಂದಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರ ಕಳವಳ
ಅನೇಕರು ನೀವು ವಿಶ್ರಾಂತಿ ಪಡೆಯಬೇಕು ಇಷ್ಟು ಬೇಗ ಕೆಲಸಕ್ಕೆ ಬಂದಿರುವುದು ಏಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ನೀವೊಬ್ಬರು ಸ್ಟ್ರಾಂಗ್ ಲೇಡಿ ಆದರೆ ಕನಿಷ್ಠ 40 ದಿನವಾದರೂ ನೀವು ವಿಶ್ರಾಂತಿ ಪಡೆಯಬೇಕು. ಇಷ್ಟೊಂದು ಬೇಗ ಕೆಲಸಕ್ಕೆ ಮರಳಿರುವುದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
2017ರಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ ನಿರೂಪಕಿ ಭಾರ್ತಿ ಸಿಂಗ್ ಹಾಗೂ ಹರ್ಷ ಲಿಂಬಾಚಿಯಾ
ಹಿಂದಿ ಕಿರುತೆರೆಯ ಬಹು ಬೇಡಿಕೆಯ ಕಾಮಿಡಿಯನ್ ಹಾಗೂ ನಿರೂಪಕಿ ಭಾರ್ತಿ ಸಿಂಗ್ ಹಾಗೂ ಹರ್ಷ ಲಿಂಬಾಚಿಯಾ ಅವರು ಕೆಲ ವರ್ಷಗಳ ಕಾಲ ಪ್ರೀತಿಸಿ 2017ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. 2022ರ ಏಪ್ರಿಲ್‌ನಲ್ಲಿ ಅವರು ತಮ್ಮ ಮೊದಲ ಮಗ ಲಕ್ಷ್ ಲಿಂಬಾಚಿಯಾ ಅವರನ್ನು ಬರಮಾಡಿಕೊಂಡಿದ್ದರು. ಈಗ ಮೂರು ವರ್ಷದ ನಂತರ ಅವರ ಮತ್ತೊಬ್ಬ ಮಗನ ಆಗಮನವಾಗಿದ್ದು, ಮಗುವನ್ನು ಅವರು ಪ್ರೀತಿಯಿಂದ ಕಾಜು ಎಂದು ಕರೆಯುತ್ತಿದ್ದಾರೆ.
ಮೊದಲ ಮಗು ಗೋಲು
ಮೊದಲ ಮಗುವನ್ನು ಗೋಲು ಗೋಲು ಎಂದು ಅವರು ಅವರು ಕರೆಯುತ್ತಿದ್ದು, ತಮ್ಮ ಸರಳ ವ್ಯಕ್ತಿತ್ವದಿಂದಾಗಿ ಭಾರ್ತಿ ಸಿಂಗ್ ಅವರು ಅನೇಕರ ಪಾಲಿನ ಅಚ್ಚು ಮೆಚ್ಚಿನ ನಟಿ ಎನಿಸಿದ್ದಾರೆ. ಇವರ ಮೊದಲ ಮಗು ಗೋಲುವಿನೊಂದಿಗಿನ ವೀಡಿಯೋಗಳು ಕೂಡ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದ ಜೋಡಿ
ಭಾರ್ತಿ ಸಿಂಗ್ ಗರ್ಭಿಣಿಯಾಗಿದ್ದಾಗ ಪತಿ ಹರ್ಷ್ ಲಿಂಬಾಚಿಯಾ ಜೊತೆ ಅವರು ಸೋನಾಲಿ ಬೇಂದ್ರೆ ಅವರ ಪೋಡ್‌ಕಾಸ್ಟ್‌ನಲ್ಲಿ ಆಗಮಿಸಿದ್ದ ವೇಳೆ ತಮಗೆ ಹೆಣ್ಣು ಮಗು ಬೇಕು ಎಂದು ಆಸೆ ವ್ಯಕ್ತಪಡಿಸಿದದರು. ಅಲ್ಲದೇ ಹೆಣ್ಣು ಮಗು ಜನಿಸಿದೆ ಇದ್ದರೆ ಮತ್ತೊಂದು ಮಗು ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು. ಇನ್ನು ಇವರ ಕೆಲಸದ ಬಗ್ಗೆ ಹೇಳುವುದಾದರೆ ಅವರು ಪ್ರಸ್ತುತ Laughter Chefs ಕಾರ್ಯಕ್ರಮವನ್ನು ಶೆಪ್ ಹರ್ಪಲ್ ಸಿಂಗ್ ಸೊಖಿ ಜೊತೆಗೂಡಿ ನಿರೂಪಣೆ ಮಾಡ್ತಿದ್ದಾರೆ.
Laughter Chefs ಕಾರ್ಯಕ್ರಮದಲ್ಲಿ ಭಾರ್ತಿ ಸಿಂಗ್
ಈ ಕಾರ್ಯಕ್ರಮದಲ್ಲಿ ಅಲಿ ಗೋನಿ, ಕರಣ್ ಕುಂದ್ರಾ, ಈಶಾ ಸಿಂಗ್, ಇಶಾ ಮಾಲ್ವಿಯಾ, ತೇಜಸ್ವಿ ಪ್ರಕಾಶ್, ಎಲ್ವಿಶ್ ಯಾದವ್, ಕೃಷ್ಣ ಅಭಿಷೇಕ್ ಮತ್ತು ಕಾಶ್ಮೀರಾ ಶಾ ಮುಂತಾದವರು ಭಾಗವಹಿಸಿದ್ದಾರೆ. ಈ ಅಡುಗೆ ಸಂಬಂಧಿ ರಿಯಾಲಿಟಿ ಶೋ ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುತ್ತದೆ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿಯೂ ಸಹ ಸ್ಟ್ರೀಮ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

