ಹೈದರಾಬಾದ್‌ನಿಂದ ಫುಕೆಟ್‌ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಲ್ಯಾಂಡಿಂಗ್ ವೇಳೆ ನೋಸ್ ವೀಲ್ ತಾಂತ್ರಿಕ ದೋಷದಿಂದಾಗಿ ಅಪಾಯಕ್ಕೆ ಸಿಲುಕಿತ್ತು. ಆದಾಗ್ಯೂ, ಪೈಲಟ್‌ನ ಚಾಣಾಕ್ಷತನದಿಂದ ವಿಮಾನದಲ್ಲಿದ್ದ 133 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದು, ದೊಡ್ಡ ದುರಂತವೊಂದು ತಪ್ಪಿದೆ.

ಬ್ಯಾಂಕಾಕ್: ಹೈದರಾಬಾದ್‌ನಿಂದ ಥೈಲ್ಯಾಂಡ್‌ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವೊಂದು ಕೂದಲೆಳೆ ಅಂತರದಲ್ಲಿ ದೊಡ್ಡ ದುರಂತದಿಂದ ಪಾರಾಗಿದೆ. ಫುಕೆಟ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ವಿಮಾನದ ನೋಸ್ ವೀಲ್‌ನಲ್ಲಿ (ಮುಂಭಾಗದ ಚಕ್ರ) ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಆದರೂ, ಪೈಲಟ್ ಅತ್ಯಂತ ಚಾಣಾಕ್ಷತನದಿಂದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ 133 ಪ್ರಯಾಣಿಕರು ಸೇಫ್ ಆಗಿದ್ದಾರೆ. ಈ ಘಟನೆಯ ನಂತರ ಫುಕೆಟ್ ಏರ್‌ಪೋರ್ಟ್‌ನ ರನ್‌ವೇಯನ್ನು ಮುಚ್ಚಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪಾಯದಿಂದ ಪಾರಾದ ವಿಮಾನ ಬೋಯಿಂಗ್ 737-ಮ್ಯಾಕ್ಸ್8 ಮಾದರಿಯದ್ದಾಗಿದೆ. ಮಾರ್ಚ್ 11 ರಂದು ಹೈದರಾಬಾದ್-ಫುಕೆಟ್ ವಿಮಾನವು ಲ್ಯಾಂಡಿಂಗ್ ವೇಳೆ ನೋಸ್ ವೀಲ್ ಸಮಸ್ಯೆಗೆ ಸಿಲುಕಿತು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಿಮಾನದ ಲ್ಯಾಂಡಿಂಗ್ ಗೇರ್ ಸಿಸ್ಟಮ್‌ನಲ್ಲಿ ನೋಸ್ ವೀಲ್ ಬಹಳ ಮುಖ್ಯವಾದ ಭಾಗವಾಗಿದೆ. ಈ ವಿಮಾನವು ಹೈದರಾಬಾದ್‌ನಿಂದ ಬೆಳಗ್ಗೆ 6:42ಕ್ಕೆ ಟೇಕ್ ಆಫ್ ಆಗಿ, ಸ್ಥಳೀಯ ಕಾಲಮಾನ ಬೆಳಗ್ಗೆ 11:40ಕ್ಕೆ ಫುಕೆಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಸದ್ಯ ವಿಮಾನವು ರನ್‌ವೇಯಲ್ಲಿ ಸಿಲುಕಿಕೊಂಡಿದೆ. ಹೀಗಾಗಿ, ಸಂಜೆವರೆಗೂ ರನ್‌ವೇ ಬಂದ್ ಆಗಿರಲಿದೆ. ಇದರಿಂದಾಗಿ ಹಲವು ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಿಗೆ ಡೈವರ್ಟ್ ಮಾಡಲಾಗಿದೆ.

Scroll to load tweet…