ಇಲ್ಲೊಂದು ಕಡೆ ವ್ಯಕ್ತಿಯೊರ್ವ ತನ್ನ ಬೋಳು ತಲೆ ಮುಚ್ಚಿಟ್ಟು ಮದುವೆಯಾಗಿದ್ದು, ಈತನ ರಿಯಲ್ ಫೇಸ್ ನೋಡಿದ ಪತ್ನಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗ ಮಹಿಳೆಯ ಪತಿ ಹಾಗೂ ಆತನ ನಾಲ್ವರು ಕುಟುಂಬ ಸದಸ್ಯರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಮಾತಿದೆ. ಆ ಕಾಲದಲ್ಲಿ ಅದು ನಡಿತಿತ್ತು. ಆದರೆ ಕಾಲ ಬದಲಾಗಿದೆ ಸುಳ್ಳು ಹೇಳಿ ಮದ್ವೆ ಆದರೆ ಅದೃಷ್ಟ ಚೆನ್ನಾಗಿದ್ದರೆ ನಡೆಯುತ್ತೆ ಚೆನ್ನಾಗಿಲ್ಲ ಎಂದರೆ ಕೌಟುಂಬಿಕ ನ್ಯಾಯಾಲಯದ ಮುಂದೆ ಸರದಿ ನಿಲ್ಲುವ ಸ್ಥಿತಿ ಬರಬಹುದು. ಅದೇ ರೀತಿ ಇಲ್ಲೊಂದು ಕಡೆ ವ್ಯಕ್ತಿಯೊರ್ವ ತನ್ನ ಬೋಳು ತಲೆ ಮುಚ್ಚಿಟ್ಟು ಮದುವೆಯಾಗಿದ್ದು, ಈತನ ರಿಯಲ್ ಫೇಸ್ ನೋಡಿದ ಪತ್ನಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗ ಮಹಿಳೆಯ ಪತಿ ಹಾಗೂ ಆತನ ನಾಲ್ವರು ಕುಟುಂಬ ಸದಸ್ಯರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಮಹಿಳೆಯ ದೂರಿನಲ್ಲಿರುವಂತೆ ಆಕೆಯ ಮದುವೆ ದೆಹಲಿ ಪ್ರತಾಪ್‌ಬಾಗ್‌ನ ಯುವಕನೊಂದಿಗೆ ಮದುವೆ ಆಗಿದೆ. ಮದುವೆಗೂ ಮೊದಲೇ ಆತ ಹುಡುಗಿ ನೋಡಲು ಬರುವ ವೇಳೆಯೇ ವಿಗ್ ಧರಿಸಿ ಬಂದು ತನ್ನ ಬೋಳು ತಲೆಯನ್ನು ಮುಚ್ಚಿಟ್ಟಿದ್ದಾನೆ. ಹಾಗೂ ತನಗೆ ಕೂದಲು ಸಣ್ಣಪ್ರಮಾಣದಲ್ಲಿ ಉದುರುತ್ತಿದೆ ಎಂದು ಆತ ಆಕೆಯನ್ನು ನಂಬಿಸಿದ್ದ. ಮದುವೆಗೆ ಮೊದಲು ಆಕೆಗಾಗಿ ಆಕೆಯ ಕುಟುಂಬದವರಿಗಾಗಲಿ ಆತನ ತಲೆಯಲ್ಲಿ ಒಂದೂ ಕೂದಲು ಕೂಡ ಇಲ್ಲದೇ ಇರುವ ಬಗ್ಗೆ ಗೊತ್ತಿರಲಿಲ್ಲ. ಮದುವೆ ನಂತರ ಗಂಡನ ಮನೆಗೆ ಬಂದ ಮೇಲೆ ಗಂಡ ವಿಗ್ ಕಿತ್ತೆಸೆದಾಗಲೇ ಆಕೆಗೆ ತಾನು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.
ಇದನ್ನೂ ನೋಡಿ ಆಕೆ ಆಘಾತಗೊಂಡಿದ್ದು, ತನಗೆ ಮೋಸ ಆದ ಅರಿವಾಗಿದೆ. ಈ ಬಗ್ಗೆ ಆತನ ಬಳಿ ಪ್ರಶ್ನೆ ಮಾಡಿದಾಗ ಆತ ಗಂಡ ಹಾಗೂ ಆತನ ಮನೆಯವರ ವರ್ತನೆಯೇ ಬದಲಾಗಿದೆ. ತನ್ನ ಗಂಡ ತನ್ನ ಖಾಸಗಿ ಫೋಟೋಗಳನ್ನು ತೆಗೆದು ಆತನ ಮೊಬೈಲ್‌ನಲ್ಲಿ ಇಟ್ಟುಕೊಂಡಿದ್ದು, ಅದನ್ನು ಸಾರ್ವಜನಿಕಗೊಳಿಸುವೆ ಎಂದು ಬೆದರಿಕೆ ಮಾಡುವುದಕ್ಕೆ ಶುರು ಮಾಡಿದ್ದಾನೆ. ಅಲ್ಲದೇ ಪತ್ನಿಯ ಬಳಿಯೇ ಹಣಕ್ಕಾಗಿ ಆತ ಈ ಫೋಟೋಗಳನ್ನು ಇರಿಸಿಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಆ ಮಹಿಳೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಸಹಜ ಹೆರಿಗೆ: 10 ಹೆಣ್ಣು ಮಕ್ಕಳ ನಂತರ ಕಡೆಗೂ ಜನಿಸಿದ ಗಂಡು ಮಗ: ದಿಲ್‌ಖುಷ್ ಅಂತ ಹೆಸರಿಟ್ಟ ಕುಟುಂಬ
ಇದರ ಜೊತೆಗೆ ಆತ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ಆತನ ಮನೆಯವರು ಆತನನ್ನು ಬೆಂಬಲಿಸುತ್ತಿದ್ದಾರೆ ಎಂದು ಆ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಮೇಲೆ ಹಲ್ಲೆ ಮಾಡಿರುವುದಲ್ಲದೇ ತನ್ನ ಬಳಿ ಇದ್ದ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಒತ್ತಾಯಪೂರ್ವಕವಾಗಿ ಕಿತ್ತುಕೊಂಡಿದ್ದು, ಕೆಲ ದಿನಗಳ ನಂತರ ತನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ಇದಾದ ನಂತರ ತಾನು ಪೊಲೀಸರಿಗೆ ದೂರು ನೀಡಿದ್ದಾಗಿ ಮಹಿಳೆ ಹೇಳಿದ್ದಾರೆ.
ಇದನ್ನೂ ಓದಿ: ಕದಿಯಲು ಬಂದು ಕಿಟಕಿಯಲ್ಲಿ ಸಿಲುಕಿಕೊಂಡ ಕಳ್ಳ: ಪೊಲೀಸರ ಕರೆಸಿ ಕಳ್ಳನ ರಕ್ಷಿಸಿದ ಮನೆಯವರು
ಮಹಿಳೆ ದೂರು ನೀಡಿದ ನಂತರ ಪೊಲೀಸರು ಗಂಡನೂ ಸೇರಿದಂತೆ ಐವರ ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ. ವರದಕ್ಷಿಣೆ ಕಿರುಕುಳ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್‌ಗಳಡಿ ಕೇಸ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಿಸ್ರಾಕ್ ಸ್ಟೇಷನ್ ಹೌಸ್ ಅಧಿಕಾರಿ ಮನೋಜ್ ಕುಮಾರ್ ಮಾತನಾಡಿ, ಮೊಬೈಲ್ ಫೋನ್ ಹಣಕಾಸಿನ ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳು, ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.


