ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ನಲ್ಲಿರುವ ಭಾರತೀಯರಿಗೆ ಭಾರತದಿಂದ ತುರ್ತು ಎಚ್ಚರಿಕೆ, ಡೀಲ್ ಒಪ್ಪದಿದ್ದರೆ ಇರಾನ್ ನಾಗರೀಕತೆಯನ್ನೇ ಮುಗಿಸುತ್ತೇವೆ ಎಂದು ವಾರ್ನಿಂಗ್ ನೀಡಿದ ಬೆನ್ನಲ್ಲೇ ಭಾರತ ಮಹತ್ವದ ಮಾರ್ಗಸೂಚಿ ನೀಡಿದೆ.

ಕೋಲ್ಕತಾ: ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆಯು ಅವರಿಗೆ ಎಕ್ಸ್ ಕೆಟಗರಿಯ ಭದ್ರತೆ ಒದಗಿಸಿದೆ. ಈ ಪ್ರಕಾರ ಅವರನ್ನು ಸಿಐಎಸ್ಎಫ್ ಸಿಬ್ಬಂದಿ ಕಾಯಲಿದ್ದಾರೆ.
ಪಂಚ ರಾಜ್ಯ ಚುನಾವಣಾ ಹೊಸ್ತಿಲಿನಲ್ಲಿ ಬಿಜೆಪಿ ಸೇರಿದ್ದ ಲಿಯಾಂಡರ್ ಪಶ್ಚಿಮ ಬಂಗಾಳ ಮತಕಣದಲ್ಲಿ ಸಕ್ರಿಯವಾಗುವ ಸಾಧ್ಯತೆಗಳಿವೆ. ಈ ಹೊತ್ತಲ್ಲಿಯೇ ಕೇಂದ್ರ ಸರ್ಕಾರ ಭದ್ರತೆ ಒದಗಿಸಿದೆ. ಇದರ ನಡುವೆ ಬಿಜೆಪಿ ಅವರನ್ನು ಸ್ಟಾರ್ ಪ್ರಚಾರಕ ಪಟ್ಟಿಗೂ ಸೇರಿಸಿದೆ.
ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ನಲ್ಲಿರುವ ಭಾರತೀಯರಿಗೆ ಭಾರತದಿಂದ ತುರ್ತು ಎಚ್ಚರಿಕೆ, ಡೀಲ್ ಒಪ್ಪದಿದ್ದರೆ ಇರಾನ್ ನಾಗರೀಕತೆಯನ್ನೇ ಮುಗಿಸುತ್ತೇವೆ ಎಂದು ವಾರ್ನಿಂಗ್ ನೀಡಿದ ಬೆನ್ನಲ್ಲೇ ಭಾರತ ಮಹತ್ವದ ಮಾರ್ಗಸೂಚಿ ನೀಡಿದೆ.
ತಮಿಳುನಾಡಿನ ಸಾತಂಕುಲಂ ಲಾಕಪ್ ಡೆತ್ ಪ್ರಕರಣದಲ್ಲಿ, ತಂದೆ-ಮಗನ ಸಾವಿಗೆ ಕಾರಣರಾದ 9 ಪೊಲೀಸರಿಗೆ ಮರಣದಂಡನೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ, ಸಹೋದ್ಯೋಗಿಗಳ ಬೆದರಿಕೆಯ ನಡುವೆಯೂ ಧೈರ್ಯವಾಗಿ ಸಾಕ್ಷಿ ಹೇಳಿದ ಮಹಿಳಾ ಕಾನ್ಸ್ಟೇಬಲ್ ರೇವತಿ ಅವರಿಗೆ ನ್ಯಾಯಾಲಯವು ಭಾರಿ ಭದ್ರತೆ ಒದಗಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಬೇಗ ಫೇಮಸ್ ಆಗಬೇಕೆಂಬ ಯುವತಿಯರ ಆಸೆಯನ್ನೇ ಬಂಡವಾಳವಾಗಿಸಿಕೊಂಡು ಹೊಸ ರೀತಿಯ ಮೋಸದ ಜಾಲವೊಂದು ಸಕ್ರಿಯವಾಗಿದೆ. ಪ್ರ್ಯಾಂಕ್ ವಿಡಿಯೋಗಳ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು, ಅವರನ್ನು ಪ್ರೀತಿಯ ಬಲೆಗೆ ಬೀಳಿಸಿ ಲವ್ ಜಿಹಾದ್ ಅಥವಾ ದೈಹಿಕ ದೌರ್ಜನ್ಯದಂತಹ ಕೃತ್ಯಗಳಿಗೆ ದೂಡಲಾಗುತ್ತಿದೆ.
ಭಾರಿ ಕುತೂಹಲ ಕೆರಳಿಸಿದ ಆರ್ಸಿಬಿ ಟ್ರಾವೆಲ್ ಜರ್ಸಿ,ಸಿನಿಮಾ ಹೀರೋಗಿಂತ ಮಿಗಿಲು ಎಂದ ಫ್ಯಾನ್ಸ್, ಸ್ಟೈಲೀಶ್ ಮಾತ್ರವಲ್ಲ, ಅತ್ಯಂತ ಆಕರ್ಷಕ ಜರ್ಸಿ ಡಿಸೈನ್ ಮಾಡಲಾಗಿದೆ. ಇದಕ್ಕೆ ಫ್ಯಾನ್ಸ್ ಕಮೆಂಟ್ ಮತ್ತೂ ಸೂಪರ್.
Love drama of woman: ಬಿಹಾರದ ವೈಶಾಲಿಯಲ್ಲಿ, ಪ್ರೇಮಿ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಹೈಟೆನ್ಷನ್ ವಿದ್ಯುತ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾಳೆ. ಸುಮಾರು 9 ಗಂಟೆಗಳ ಕಾಲ ಪೊಲೀಸರನ್ನು ಕಾಡಿದ ಆಕೆಯನ್ನು, ಕೊನೆಗೆ ಪ್ರೇಮಿಯನ್ನು ಸ್ಥಳಕ್ಕೆ ಕರೆಸಿ ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
ಅನುಷ್ಕಾ ಶೆಟ್ಟಿ ನಟಿಸಿದ ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ 'ಬಾಹುಬಲಿ' ಕೂಡ ಒಂದು. ಈ ಸಿನಿಮಾ ಶೂಟಿಂಗ್ ವೇಳೆ ನಡೆದ ಒಂದು ಘಟನೆ ಈಗ ವೈರಲ್ ಆಗಿದೆ. ರಾಜಮೌಳಿ ನಿರ್ಧಾರದಿಂದ, ಯುವ ನಟ ಮಾಡಿದ ಕೆಲಸಕ್ಕೆ ಅನುಷ್ಕಾಗೆ ಗಾಯವಾಗಿತ್ತು.
high demand blue collar jobs: ಕೃತಕ ಬುದ್ಧಿಮತ್ತೆಯಿಂದಾಗಿ (ಎಐ) ಸಾಫ್ಟ್ವೇರ್ ಉದ್ಯೋಗಗಳು ಅಪಾಯದಲ್ಲಿರುವಾಗ, ಕಾರ್ಪೆಂಟರ್, ಪ್ಲಂಬರ್ಗಳಂತಹ ಬ್ಲೂ ಕಾಲರ್ ಉದ್ಯೋಗಗಳಿಗೆ ನಗರಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.ಇವರು ಗಂಟೆಗೆ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ.
ಇಂದು ರಾತ್ರಿ ಇಡೀ ನಾಗರೀಕತೆಯನ್ನು ಭಸ್ಮ ಮಾಡುತ್ತೇವೆ, ಇರಾನ್ಗೆ ಟ್ರಂಪ್ ವಾರ್ನಿಂಗ್, ಮತ್ತೆಂದು ಈ ನಾಗರೀಕರತೆ ಮರಳವುದಿಲ್ಲ. ಯೋಚನೆ ಮಾಡಿ, ಡೀಲ್ ಒಪ್ಪಿಕೊಳ್ಳಿ ಇದು ಲಾಸ್ಟ್ ಎಚ್ಚರಿಕೆ ಎಂದಿದ್ದಾರೆ.
ರಾಮ್ ಚರಣ್ ನಟನೆಯ ಸೂಪರ್ ಹಿಟ್ ಚಿತ್ರವೊಂದನ್ನು ನಿರ್ದೇಶಕ ರಾಜಮೌಳಿ 'ಆವರೇಜ್ ಸಿನಿಮಾ' ಎಂದು ಕರೆದಿದ್ದರು. ಕಲೆಕ್ಷನ್ ವಿಚಾರದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದ ಆ ಚಿತ್ರದ ಬಗ್ಗೆ ಜಕ್ಕಣ್ಣ ಯಾಕೆ ಹಾಗೆ ಹೇಳಿದರು?
ನಟಿ ಮಂಚು ಲಕ್ಷ್ಮಿ ತಮ್ಮ ತಂದೆ ಮೋಹನ್ ಬಾಬು ಅವರ ಮೇಲಾದ ಬಾಂಬ್ ಬ್ಲಾಸ್ಟ್ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಆಘಾತಕಾರಿ ಘಟನೆಯನ್ನು ನೆನೆದು, ಅವರು ನಟ ರಾಜಾ ರವೀಂದರ್ ಅವರ ಪಾಡ್ಕಾಸ್ಟ್ ಸಂದರ್ಶನದಲ್ಲಿ ಭಾವುಕರಾದರು.
ವಿಘ್ನೇಶ್ ಶಿವನ್ ಮತ್ತು ಧನುಷ್ ನಡುವಿನ ಸಂಘರ್ಷ 2024ರ ಆರಂಭದಲ್ಲಿ ಶುರುವಾಯ್ತು. ವಿಘ್ನೇಶ್ ನಿರ್ದೇಶಿಸಿ, ನಯನತಾರಾ ನಟಿಸಿದ್ದ 'ನಾನುಂ ರೌಡಿದಾನ್' ಚಿತ್ರವನ್ನು ಧನುಷ್ ನಿರ್ಮಿಸಿದ್ದರು.
from housemaid to airline staff: ಕೆಲವು ಮಕ್ಕಳಿಗಂತೂ ತಾವು ಶಿಕ್ಷಣ ಪಡೆಯುವುದಿರಲಿ, ಮನೆಯ ಸದಸ್ಯರ ತುತ್ತಿನ ಚೀಲವನ್ನು ತಾವೇ ತುಂಬಿಸಬೇಕಾದಂತಹ ಸ್ಥಿತಿ ಇದೆ. ಅಂತಹದ್ದೇ ಸ್ಥಿತಿಯಿಂದ ಮೇಲೆ ಬಂದಂತಹ ಒಬ್ಬಳು ದಿಟ್ಟ ಹೆಣ್ಣು ಮಗಳ ಕತೆ ಇಲ್ಲಿದೆ.
ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಬನ್ನಿ ಹುಟ್ಟುಹಬ್ಬದ ಪ್ರಯುಕ್ತ ಬಿಗ್ ಅಪ್ಡೇಟ್ ಒಂದು ಹೊರಬೀಳಲಿದೆ. ಸದ್ಯ ಅಟ್ಲಿ ಜೊತೆ ಐಕಾನ್ ಸ್ಟಾರ್ ಮಾಡುತ್ತಿರುವ ಪ್ಯಾನ್ ವರ್ಲ್ಡ್ ಸಿನಿಮಾದ ಟೈಟಲ್ ಅನೌನ್ಸ್ ಆಗಲಿದೆ.
ಇಬ್ಬರು ಮಕ್ಕಳ ಸಾವಿನ ಬೆನಲ್ಲೇ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ಇಂಟರ್ನೆಟ್ ಕಡಿತ, ರಾಕೆಟ್ ದಾಳಿಯಲ್ಲಿ ಇಬ್ಬರು ಮಕ್ಕಳ ಸಾವಿನಿಂದ ಮಣಿಪುರದ 5 ಜಿಲ್ಲೆಗಳಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿದೆ.
ಭಾರತದ ಮೇಲೆ ಮತ್ತೆ ಭಯೋತ್ಪಾದಕ ದಾಳಿ ನಡೆದರೆ ತಕ್ಕ ಉತ್ತರ ನೀಡುವುದಾಗಿ ರಾಜನಾಥ್ ಸಿಂಗ್ ಎಚ್ಚರಿಸಿದ್ದರು. ಇದಕ್ಕೆ ಪ್ರತಿಯಾಗಿ ಪಾಕ್ ಸಚಿವರು ಕೋಲ್ಕತ್ತಾ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದು, ಇದಕ್ಕೆ ರಾಜನಾಥ್ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಗೋವಾದ ಪಣಜಿಯಲ್ಲಿ, ಕರ್ನಾಟಕ ಮೂಲದ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು ಕಾರಿನಲ್ಲಿ ನಾಲ್ಕು ಗಂಟೆಗಳ ಕಾಲ ಲಾಕ್ ಮಾಡಿ ಕ್ಯಾಸಿನೊಗೆ ಹೋಗಿದ್ದನು. ಬಿಸಿಲಿನ ತಾಪ ಮತ್ತು ಉಸಿರುಗಟ್ಟುವಿಕೆಯಿಂದ 'ಗೋಲ್ಡನ್ ರಿಟ್ರೈವರ್' ತಳಿಯ ನಾಯಿ ಸಾವನ್ನಪ್ಪಿದೆ.