- Home
- Sports
- Cricket
- ಭಾರಿ ಕುತೂಹಲ ಕೆರಳಿಸಿದ ಆರ್‌ಸಿಬಿ ಟ್ರಾವೆಲ್ ಜರ್ಸಿ,ಸಿನಿಮಾ ಹೀರೋಗಿಂತ ಮಿಗಿಲು ಎಂದ ಫ್ಯಾನ್ಸ್
ಭಾರಿ ಕುತೂಹಲ ಕೆರಳಿಸಿದ ಆರ್‌ಸಿಬಿ ಟ್ರಾವೆಲ್ ಜರ್ಸಿ,ಸಿನಿಮಾ ಹೀರೋಗಿಂತ ಮಿಗಿಲು ಎಂದ ಫ್ಯಾನ್ಸ್
ಭಾರಿ ಕುತೂಹಲ ಕೆರಳಿಸಿದ ಆರ್‌ಸಿಬಿ ಟ್ರಾವೆಲ್ ಜರ್ಸಿ,ಸಿನಿಮಾ ಹೀರೋಗಿಂತ ಮಿಗಿಲು ಎಂದ ಫ್ಯಾನ್ಸ್, ಸ್ಟೈಲೀಶ್ ಮಾತ್ರವಲ್ಲ, ಅತ್ಯಂತ ಆಕರ್ಷಕ ಜರ್ಸಿ ಡಿಸೈನ್ ಮಾಡಲಾಗಿದೆ. ಇದಕ್ಕೆ ಫ್ಯಾನ್ಸ್ ಕಮೆಂಟ್ ಮತ್ತೂ ಸೂಪರ್.

ಆರ್‌ಸಿಬಿ ಟ್ರಾವೆಲ್ ಜರ್ಸಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭಿಕ 2 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಿಸಿದೆ. ಎರಡೂ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಡಿತ್ತು. ಇದೀಗ ಈ ಆೃತ್ತಿಯಲ್ಲಿ ತವರಿನಾಚೆ ಮೊದಲ ಪಂದ್ಯ ಆಡಲು ತೆರಳಿದೆ. ಈ ವೇಳೆ ಹಾಕಿದ ಟ್ರಾವೆಲ್ ಜರ್ಸಿ ಭಾರಿ ಗಮನ ಸೆಳೆದಿದೆ.
ಆಕರ್ಷಕ ಬಣ್ಣದ ಟಿಶರ್ಟ್
ಆರ್‌ಸಿಬಿ ಟ್ರಾವೆಲ್ ಔಟ್‌ಫಿಟ್ ಇದೀಗ ಚರ್ಚೆಯಾಗುತ್ತಿದೆ. ಮರೂನ್ ಶೇಡ್‌ನ ರೂಬಿ ಶಿಮ್ಮರ್ ಬಣ್ಣದ ಈ ಡ್ರೆಸ್‌ನಲ್ಲಿ ಆರ್‌ಸಿಬಿಯ ಟ್ರೇಡ್ ಮಾರ್ಕ್ ಗೋಲ್ಡನ್ ಬಣ್ಣದಲ್ಲಿ ಆರ್‌ಸಿಬಿ ಎಂದು ಮುದ್ರಿಸಲಾಗಿದೆ. ಶೋಲ್ಡರ್ ಬಾಗದಲ್ಲೂ ಗೋಲ್ಡನ್ ಪೈಪಿಂಗ್ ನೀಡಲಾಗಿದೆ ಇನ್ನು ಜರ್ಸಿ ಸ್ಪಾನ್ಸರ್ ಲೋಗೋ ಇದರಲ್ಲಿ ಸ್ಪಷ್ಟವಾಗಿದೆ.
ಸ್ಯಾಲರಿ ಹೈಕ್ ಮಾಡಿ ಎಂದ ಫ್ಯಾನ್ಸ್
ಆರ್‌ಸಿಬಿ ಟ್ರಾವೆಲ್ ಮಾಡುವಾಗ, ಮಾಧ್ಯಮಗಳ ಮುಂದೆ ಕಾಣಿಸಕೊಳ್ಳುವಾಗ, ಈವೆಂಟ್ ಸೇರಿದಂತೆ ಕ್ರೀಡಾಂಗಣದಿಂದ ಹೊರಗಡೆ ಕಾಣಿಸಿಕೊಳ್ಳುವಾಗ ಹಾಕವು ಜರ್ಸಿಯನ್ನು ಅತ್ಯಂತ ಆಕರ್ಷಕವಾಗಿ ಡಿಸೈನ್ ಮಾಡಿದ್ದಾರೆ. ಹೀಗಾಗಿ ಈ ಡಿಸೈನ್ ಮಾಡಿದವರ ಸ್ಯಾಲರಿ ಹೈಕ್ ಮಾಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಆರ್‌ಸಿಬಿ ಅಭಿಮಾನಿಗಳು ಹೊಸ ಜರ್ಸಿ ನೋಡಿ ಖುಷಿ ಪಟ್ಟಿದ್ದಾರೆ.
ತವರಿನಾಚೆ ಮೊದಲ ಪಂದ್ಯ
2026ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಇದೀಗ ತವರಿನಾಚೆಗೆ ಮೊದಲ ಪಂದ್ಯ ಆಡಲು ಸಜ್ಜಾಗಿದೆ. ಹೀಗಾಗಿ ಬೆಂಗಳೂರಿನಿಂದ ಆರ್‌ಸಿಬಿ ತಂಡ ಗುವ್ಹಾಟಿಗೆ ಪ್ರಯಾಣ ಮಾಡಿದೆ. ಈ ವೇಳೆ ಹೊಸ ಜರ್ಸಿಯಲ್ಲಿ ಆರ್‌ಸಿಬಿ ಆಟಗಾರರು ಕಾಣಿಸಿಕೊಂಡಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ವಿರುದ್ದ ಹೋರಾಟ
ಎಪ್ರಿಲ್ 10 ರಂದು ರಾಜಸ್ಥಾನ ರಾಯಲ್ಸ್ ವಿರುದ್ದ ಆರ್‌ಸಿಬಿ ಹೋರಾಟ ನಡೆಸುತ್ತಿದೆ. 7.30ಕ್ಕೆ ಈ ಪಂದ್ಯ ನಡೆಯಲಿದೆ. ಇದಾದ ಬಳಿಕ ಆರ್‌ಸಿಬಿ ನೇರವಾಗಿ ಮುಂಬೈನ ವಾಂಖೆಡೆ ಕ್ರೀಡಾಂಗಣಧಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಟ ನಡಸೆಲಿದೆ.
ರಾಜಸ್ಥಾನ ರಾಯಲ್ಸ್ ತಂಡದ ವಿರುದ್ದ ಹೋರಾಟ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

