School Students Allegedly Used Extra Classes Excuse Before Entering OYO Hotel Viral CCTV Video “ಎಕ್ಸ್ಟ್ರಾ ಕ್ಲಾಸ್” ನೆಪ ಹೇಳಿ OYO ಹೋಟೆಲ್‌ಗೆ ಎಂಟ್ರಿ ಕೊಟ್ಟ ಶಾಲಾ ವಿದ್ಯಾರ್ಥಿಗಳ ವೈರಲ್ CCTV ವಿಡಿಯೋ ಪೋಷಕರಲ್ಲಿ ಭಾರಿ ಆತಂಕ ಹುಟ್ಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾನ್ಪುರದಲ್ಲಿ ದಾಖಲಾಗಿದೆಯೆನ್ನಲಾದ ಒಂದು ಸಿಸಿಟಿವಿ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಶಾಲಾ ಸಮವಸ್ತ್ರ ಧರಿಸಿದ್ದ ಬಾಲಕ ಮತ್ತು ಬಾಲಕಿ ಒಟ್ಟಿಗೆ OYO ಹೋಟೆಲ್‌ಗೆ ಪ್ರವೇಶಿಸುತ್ತಿರುವ ದೃಶ್ಯ ಕಂಡುಬಂದಿದ್ದು, ಇದು ನೆಟ್ಟಿಗರ ನಡುವೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ವರದಿಗಳ ಪ್ರಕಾರ, ಹೋಟೆಲ್ ಸಿಬ್ಬಂದಿಗೆ ಇಬ್ಬರೂ “ಎಕ್ಸ್ಟ್ರಾ ಕ್ಲಾಸ್‌ಗೆ ಬಂದಿದ್ದೇವೆ” ಎಂದು ಹೇಳಿದ್ದಾರಂತೆ. ಈ ಮಾಹಿತಿ ಹೊರಬಿದ್ದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದು, “ಇಂದಿನ ಮಕ್ಕಳ ಮೇಲೆ ಪೋಷಕರು ಹೆಚ್ಚು ಗಮನ ಕೊಡಬೇಕು” ಎಂಬ ಅಭಿಪ್ರಾಯಗಳು ಹೆಚ್ಚಾಗಿ ಕೇಳಿಬರುತ್ತಿವೆ.

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಅಲ್ಲಿ ಚರ್ಚೆ

ಈ ಘಟನೆ ಸಂಬಂಧಿತ ವಿಡಿಯೋ X (ಹಳೆಯ ಟ್ವಿಟರ್) ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ವೇಗವಾಗಿ ಹರಡುತ್ತಿದೆ. ಕೆಲವರು ಇದನ್ನು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಪೋಷಕರ ಮೇಲ್ವಿಚಾರಣೆಯ ಪ್ರಶ್ನೆಯಾಗಿ ನೋಡುತ್ತಿದ್ದರೆ, ಇನ್ನೂ ಕೆಲವರು ಶಾಲೆಗಳು ಹಾಗೂ ಸಮಾಜದ ಜವಾಬ್ದಾರಿಯ ಕುರಿತೂ ಚರ್ಚೆ ಆರಂಭಿಸಿದ್ದಾರೆ.

ನೆಟ್ಟಿಗರೊಬ್ಬರು “ಇದು ಪ್ರತಿಯೊಬ್ಬ ಪೋಷಕರಿಗೂ ಎಚ್ಚರಿಕೆಯ ಗಂಟೆ” ಎಂದು ಪ್ರತಿಕ್ರಿಯಿಸಿದ್ದರೆ, ಮತ್ತೊಬ್ಬರು “ಮಕ್ಕಳು ನಿಜವಾಗಿಯೂ ಎಲ್ಲಿ ಹೋಗುತ್ತಾರೆ ಎಂಬುದನ್ನು ಪೋಷಕರು ತಿಳಿದುಕೊಳ್ಳಲೇಬೇಕು” ಎಂದು ಕಾಮೆಂಟ್ ಮಾಡಿದ್ದಾರೆ.

ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಇನ್ನೂ ಪೊಲೀಸ್ ಇಲಾಖೆ ಅಥವಾ ಸ್ಥಳೀಯ ಆಡಳಿತದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ವಿಡಿಯೋ ಯಾವ ದಿನದದು, ವಿದ್ಯಾರ್ಥಿಗಳು ಯಾರು, ಅಥವಾ ಘಟನೆ ನಿಜವಾಗಿಯೇ ಯಾವ ಸಂದರ್ಭದಲ್ಲಾಯಿತು ಎಂಬುದರ ಬಗ್ಗೆ ದೃಢೀಕರಣ ಸಿಕ್ಕಿಲ್ಲ.

ಇದೀಗ ಈ ವೈರಲ್ ಕ್ಲಿಪ್ ದೇಶಾದ್ಯಂತ ಪೋಷಕರಲ್ಲಿ ಆತಂಕ ಹುಟ್ಟಿಸಿದ್ದು, ಮಕ್ಕಳ ಚಟುವಟಿಕೆಗಳ ಮೇಲೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

Scroll to load tweet…