- Home
- Entertainment
- Cine World
- ಮದುವೆಯಾಗಿ 5 ತಿಂಗಳಿಗೆ ಸಹ ನಟಿ ನಿಧನ; ನಾಗಿಣಿ ಧಾರಾವಾಹಿ ನಟ ದೀಕ್ಷಿತ್ ಶೆಟ್ಟಿ ಬಿಚ್ಚಿಟ್ಟ ಸತ್ಯ ಏನು?
ಮದುವೆಯಾಗಿ 5 ತಿಂಗಳಿಗೆ ಸಹ ನಟಿ ನಿಧನ; ನಾಗಿಣಿ ಧಾರಾವಾಹಿ ನಟ ದೀಕ್ಷಿತ್ ಶೆಟ್ಟಿ ಬಿಚ್ಚಿಟ್ಟ ಸತ್ಯ ಏನು?
Twisha Sharma death Mystery: ಭೋಪಾಲ್ ಮಾಡೆಲ್ ಟ್ವಿಶಾ ಶರ್ಮಾ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ, ಆಕೆ ತಾಯಿ, ಸಹೋದರಿ, ಗೆಳತಿಯೊಂದಿಗೆ ನಡೆಸಿದ್ದ ಚಾಟ್‌ಗಳು ವೈರಲ್ ಆಗಿವೆ. ಈ ಚಾಟ್‌ಗಳಲ್ಲಿ ಟ್ವಿಶಾ ತಾನು ಅನುಭವಿಸುತ್ತಿದ್ದ ಮಾನಸಿಕ ಹಿಂಸೆ, ಉಸಿರುಗಟ್ಟಿಸುವ ವಾತಾವರಣದ ಬಗ್ಗೆ ಹೇಳಿಕೊಂಡಿದ್ದಳು.

ಪರ್ಸನಲ್ ಚಾಟ್‌ಗಳು ವೈರಲ್
ಭೋಪಾಲ್‌ನ ಮಾಡೆಲ್ ಮತ್ತು ನಟಿ ಟ್ವಿಶಾ ಶರ್ಮಾ ಅವರ ಅನುಮಾನಾಸ್ಪದ ಸಾವು ಪ್ರಕರಣ ದಿನದಿಂದ ದಿನಕ್ಕೆ ಮತ್ತಷ್ಟು ಜಟಿಲವಾಗುತ್ತಿದೆ. ಪ್ರತಿದಿನ ಹೊರಬರುತ್ತಿರುವ ಹೊಸ ಹೊಸ ವಿಚಾರಗಳು ಈ ಕೇಸನ್ನು ಇನ್ನಷ್ಟು ಸೂಕ್ಷ್ಮವಾಗಿಸಿವೆ. ಈಗ ಟ್ವಿಶಾ ತನ್ನ ತಾಯಿ, ಸಹೋದರಿ ಮತ್ತು ಗೆಳತಿಯೊಂದಿಗೆ ನಡೆಸಿದ್ದ ಪರ್ಸನಲ್ ಚಾಟ್‌ಗಳು ವೈರಲ್ ಆಗುತ್ತಿವೆ.
ಈ ಚಾಟ್‌ಗಳಲ್ಲಿ ಆಕೆ ತನ್ನ ಮಾನಸಿಕ ಸ್ಥಿತಿ ಮತ್ತು ವೈವಾಹಿಕ ಜೀವನದ ಸಂಕಷ್ಟಗಳನ್ನು ಹೇಳಿಕೊಂಡಿದ್ದಳು. ಈ ಚಾಟ್‌ಗಳು ಬಹಿರಂಗವಾಗುತ್ತಿದ್ದಂತೆ, ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಟ್ವಿಶಾ ಕುಟುಂಬಸ್ಥರು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸುತ್ತಿದ್ದರೆ, ಪೊಲೀಸರು ಇಡೀ ಘಟನೆಯ ತನಿಖೆಯಲ್ಲಿ ತೊಡಗಿದ್ದಾರೆ.

ದೀಕ್ಷಿತ್ ಶೆಟ್ಟಿ ಏನಂದ್ರು?
“ನಿಮ್ಮ ಜೊತೆ ನಟಿಸಿದ್ದು ಖುಷಿ ಕೊಟ್ಟಿದೆ. ನೀವಿಲ್ಲ ಎನ್ನುವುದು ನಿಜಕ್ಕೂ ಶಾಕ್ ಕೊಟ್ಟಿದೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ದೀಕ್ಷಿತ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಇದರ ಜೊತೆಗೆ ಮಾಧ್ಯಮದ ಜೊತೆ ಮಾತನಾಡಿ, ನಾನು ಟ್ವಿಶಾ ಜೊತೆ ನಾಲ್ಕು ವರ್ಷದ ಹಿಂದೆ ಮಾತನಾಡಿದ್ದೆ. ಟ್ವಿಶಾಗೆ ಮದುವೆ ಆಗಿರುವ ವಿಚಾರವೇ ಗೊತ್ತಿರಲಿಲ್ಲ ಎಂದು ಕೂಡ ಹೇಳಿದ್ದರು.
ಮನೆಯಲ್ಲಿ ವಿಷಯ ಹೇಳಿದ್ರು
ವೈರಲ್ ಆಗಿರುವ ಚಾಟ್‌ಗಳ ಪ್ರಕಾರ, ಮೇ 7 ರಂದು ಟ್ವಿಶಾ ತನ್ನ ತಾಯಿಗೆ ಮೆಸೇಜ್ ಮಾಡಿ, ತಾನು 'ತುಂಬಾ ಕೆಟ್ಟದಾಗಿ ಸಿಕ್ಕಿಹಾಕಿಕೊಂಡಿದ್ದೇನೆ' ಎಂದು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಮನೆಯವರೆಲ್ಲಾ ತನ್ನನ್ನು ಡ್ರಗ್ಸ್ ತೆಗೆದುಕೊಳ್ಳುವವಳು ಎಂದು ಭಾವಿಸಿದ್ದಾರೆ ಮತ್ತು ತನ್ನ ಮಾನಸಿಕ ಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದೂ ಆಕೆ ಹೇಳಿದ್ದಾಳೆ. ತನ್ನ ಪತಿ ತನ್ನಿಂದ ಅಂತರ ಕಾಯ್ದುಕೊಂಡಿದ್ದಾನೆ, ಇದೇ ಕಾರಣಕ್ಕೆ ತನಗೆ ಉಸಿರುಗಟ್ಟಿದಂತಾಗುತ್ತಿದೆ, ಆದರೆ ಇದನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಟ್ವಿಶಾ ಚಾಟ್‌ನಲ್ಲಿ ಬರೆದಿದ್ದಳು. ಇಲ್ಲಿ ನನಗೆ ಅಳುವುದಕ್ಕೂ ಬಿಡುತ್ತಿಲ್ಲ, ನೆಮ್ಮದಿಯಾಗಿ ಬದುಕುವುದಕ್ಕೂ ಕಾರಣ ಸಿಗುತ್ತಿಲ್ಲ ಎಂದು ಆಕೆ ತನ್ನ ತಾಯಿಯ ಬಳಿ ನೋವು ತೋಡಿಕೊಂಡಿದ್ದಾಳೆ. ಈ ಮೆಸೇಜ್‌ಗಳು ಆಕೆಯ ಮೇಲಿನ ಮಾನಸಿಕ ಹಿಂಸೆಯ ಆರೋಪಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ.
ಹೋರಾಡುವೆ ಎಂದಿದ್ದ ಟ್ವಿಶಾ
ಟ್ವಿಶಾ ತನ್ನ ಸಹೋದರಿ ಮತ್ತು ತಂದೆಯೊಂದಿಗೆ ನಡೆಸಿದ ಚಾಟ್ ಕೂಡ ಈಗ ಚರ್ಚೆಯಲ್ಲಿದೆ. "ನೋಡೋಣ, ಇವನು ಎಲ್ಲಿಯವರೆಗೆ ಹೀಗೆ ಮಾಡುತ್ತಾನೆ" ಎಂದು ಬರೆದಿದ್ದ ಟ್ವಿಶಾ, ತಾನು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧಳಾಗಿದ್ದೇನೆ ಎಂದು ಹೇಳಿದ್ದಳು. ಇದಕ್ಕೆ ಪ್ರತಿಯಾಗಿ, ಕುಟುಂಬದವರು ಆಕೆಗೆ ಶಾಂತವಾಗಿರಲು, ಭಯಪಡದೆ ಧೈರ್ಯದಿಂದ ಇರಲು ಸಲಹೆ ನೀಡಿದ್ದರು. ಈ ಚಾಟ್‌ಗಳಿಂದ, ಟ್ವಿಶಾಳ ಮಾನಸಿಕ ಸ್ಥಿತಿಯ ಬಗ್ಗೆ ಕುಟುಂಬಕ್ಕೆ ಮೊದಲೇ ಆತಂಕವಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಮಾಹಿತಿ ಪ್ರಕಾರ, ಟ್ವಿಶಾ ಶರ್ಮಾ ಮೂಲತಃ ನೋಯ್ಡಾದವಳು. ಆಕೆ ತಮಿಳು ಸಿನಿಮಾಗಳಲ್ಲಿ ಮಾಡೆಲ್ ಮತ್ತು ನಟಿಯಾಗಿ ಕೆಲಸ ಮಾಡಿದ್ದಳು. ಡೇಟಿಂಗ್ ಆ್ಯಪ್ ಒಂದರ ಮೂಲಕ ಆಕೆಗೆ ಭೋಪಾಲ್ ನಿವಾಸಿ, ವಕೀಲ ಸಮರ್ಥ್ ಸಿಂಗ್ ಪರಿಚಯವಾಗಿತ್ತು. ಸಮರ್ಥ್ ಸಿಂಗ್, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರ ಮಗ ಎಂದು ಹೇಳಲಾಗುತ್ತಿದೆ. ಇಬ್ಬರೂ ಡಿಸೆಂಬರ್ 9, 2025 ರಂದು ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ನಂತರ ಅವರ ದಾಂಪತ್ಯದಲ್ಲಿ ಬಿರುಕು ಮೂಡಲು ಶುರುವಾಗಿತ್ತು.
ಮಾನಸಿಕವಾಗಿ ಹಿಂಸೆ ಕೊಟ್ಟರು!
ಮದುವೆಯಾದ ನಂತರ ಟ್ವಿಶಾಗೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿತ್ತು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಕೆಲಸ ಬಿಟ್ಟ ಮೇಲೆ, "ಯಾವುದಕ್ಕೂ ಪ್ರಯೋಜನವಿಲ್ಲದವಳು" ಎಂದು ಅವಮಾನಿಸಲಾಗುತ್ತಿತ್ತು ಎಂದು ಕುಟುಂಬ ಹೇಳಿದೆ. ಟ್ವಿಶಾ ಹಲವು ಬಾರಿ ತವರು ಮನೆಗೆ ವಾಪಸ್ ಬರಲು ಬಯಸಿದ್ದರೂ, ಆಕೆಗೆ ಬರಲು ಬಿಡಲಿಲ್ಲ. ಇದೇ ಕಾರಣಕ್ಕೆ ಆಕೆ ನಿರಂತರವಾಗಿ ಒತ್ತಡ ಮತ್ತು ಭಾವನಾತ್ಮಕ ಸಂಕಟದಲ್ಲಿದ್ದಳು ಎನ್ನಲಾಗಿದೆ.
ತನಿಖೆಯ ಮೇಲೆ ಎಲ್ಲರ ಚಿತ್ತ
ಈ ಇಡೀ ಪ್ರಕರಣದಲ್ಲಿ, ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ. ವೈರಲ್ ಆಗಿರುವ ಚಾಟ್‌ಗಳು, ಸಿಸಿಟಿವಿ ದೃಶ್ಯಾವಳಿ ಮತ್ತು ಕುಟುಂಬದವರ ಆರೋಪಗಳ ಆಧಾರದ ಮೇಲೆ ಘಟನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಮತ್ತು ಅಧಿಕೃತವಾಗಿ ಯಾವುದೇ ತೀರ್ಮಾನವನ್ನು ಪ್ರಕಟಿಸಿಲ್ಲ. ಹೀಗಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯೂ ತನಿಖೆಯ ಭಾಗವಾಗಿದೆ.
ಟ್ವಿಶಾ ಶರ್ಮಾ ಪ್ರಕರಣ ಸೋಶಿಯಲ್ ಮೀಡಿಯಾದಲ್ಲೂ ದೊಡ್ಡ ಸಂಚಲನ ಸೃಷ್ಟಿಸಿದೆ. ಜನರು ನಿರಂತರವಾಗಿ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯವನ್ನು ಹೊರತರಬೇಕೆಂದು ಒತ್ತಾಯಿಸುತ್ತಿದ್ದಾರೆ. ಅನೇಕರು ಈ ಪ್ರಕರಣವನ್ನು ಮಾನಸಿಕ ಆರೋಗ್ಯ ಮತ್ತು ವೈವಾಹಿಕ ಸಂಬಂಧಗಳಲ್ಲಿ ಹೆಚ್ಚುತ್ತಿರುವ ಒತ್ತಡದೊಂದಿಗೆ ತಳುಕು ಹಾಕುತ್ತಿದ್ದಾರೆ. ಸದ್ಯಕ್ಕೆ, ಎಲ್ಲರ ಕಣ್ಣುಗಳು ತನಿಖಾ ಸಂಸ್ಥೆಗಳ ಮುಂದಿನ ಕ್ರಮ ಮತ್ತು ವರದಿಯ ಮೇಲೆ ನೆಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

