ಶುಕ್ರವಾರ ಸಲ್ಮಾನ್ ಖಾನ್ ತಮ್ಮ ಹೊಸ ಸಿನಿಮಾ ಅನೌನ್ಸ್ ಮಾಡಿದ್ರು. ಅಷ್ಟೇ ಅಲ್ಲ, ಆ ಸಿನಿಮಾ 2027ರ ಈದ್ ಹಬ್ಬಕ್ಕೆ ರಿಲೀಸ್ ಆಗುತ್ತೆ ಅಂತಾನೂ ಹೇಳಿದ್ರು. ಸಲ್ಮಾನ್ ಈ ಸುದ್ದಿ ಕೊಡ್ತಿದ್ದ ಹಾಗೆ..
- Home
- News
- India News
- India Latest News Live: ಸಲ್ಮಾನ್ ಹೊಸ ಸಿನಿಮಾ ಅನೌನ್ಸ್ ಮಾಡ್ತಿದ್ದಂತೆ, ಶಾರುಖ್ ಖಾನ್ 'ಕಿಂಗ್' ರಿಲೀಸ್ ಡೇಟ್ ಘೋಷಣೆ!
India Latest News Live: ಸಲ್ಮಾನ್ ಹೊಸ ಸಿನಿಮಾ ಅನೌನ್ಸ್ ಮಾಡ್ತಿದ್ದಂತೆ, ಶಾರುಖ್ ಖಾನ್ 'ಕಿಂಗ್' ರಿಲೀಸ್ ಡೇಟ್ ಘೋಷಣೆ!

ನವದೆಹಲಿ: ಅಮೆರಿಕಕ್ಕೆ ಹೋಗಿ ನೆಲಸಬೇಕು ಎನ್ನುವ ಭಾರತೀಯರ ಕನಸು ಕ್ರಮೇಣ ಕಮರುತ್ತಿದೆ. ಮಾತ್ರವಲ್ಲ ಈಗಾಗಲೇ ಅಲ್ಲಿರುವ ಶೇ.40ರಷ್ಟು ಭಾರತೀಯರು ಅಮೆರಿಕ ತೊರೆಯುವ ಯೋಚನೆಯಲ್ಲಿದ್ದಾರೆ ಎಂದು ವರದಿಯೊಂದು ಹೇಳಿದೆ. ಕಾರ್ನೆಗೀ ಎಂಡೋಮೆಂಟ್ ನಡೆಸಿದ ಸಮೀಕ್ಷೆ ಅನ್ವಯ, ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಆ ದೇಶ ಬಿಡುವ ಚಿಂತನೆ ನಡೆಸಿದ್ದಾರೆ.ಶೇ.40 ರಷ್ಟು ಅನಿವಾಸಿ ಭಾರತೀಯರು ಈ ಬಗ್ಗೆ ಮಾತನಾಡಿದ್ದಾರೆ.ಭಾರತಕ್ಕೆ ಮರಳು ವುದಾಗಿ ಹೇಳಿರುವ ಪೈಕಿ ಶೇ.58ರಷ್ಟು ಜನರು ರಾಜಕೀಯ ವಿದ್ಯಮಾನದ ಕಾರಣ ನೀಡಿದ್ದರೆ, ಉಳಿದವರು ವೆಚ್ಚ, ಜನರು ಸುರಕ್ಷತೆಗೆ ಉಂಟಾಗಿರುವ ಕಳವಳ ಕಾರಣ ಎಂದು ಹೇಳಿದಿದ್ದಾರೆ. ಜತೆಗೆ ಬಹುತೇಕರು ಡೊನಾಲ್ಡ್ ಟ್ರಂಪ್ 2ನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಅವರು ಕೈಗೊಂಡಿರುವ ನೀತಿಗಳು ಕಾರಣ ಎಂದಿದ್ದಾರೆ.ಅಮೆರಿಕದಲ್ಲಿ 52 ಲಕ್ಷ ಭಾರತೀಯರಿದ್ದಾರೆ.
India Latest News Live:ಸಲ್ಮಾನ್ ಹೊಸ ಸಿನಿಮಾ ಅನೌನ್ಸ್ ಮಾಡ್ತಿದ್ದಂತೆ, ಶಾರುಖ್ ಖಾನ್ 'ಕಿಂಗ್' ರಿಲೀಸ್ ಡೇಟ್ ಘೋಷಣೆ!
India Latest News Live:500 ಕೋಟಿ ಊಟ ದಾನ ಮಾಡಿದ ಅಕ್ಷಯಪಾತ್ರ - ಗೌರವಾನ್ವಿತ ರಾಷ್ಟ್ರಪತಿ ದೌಪದಿ ಮುರ್ಮು ಅವರಿಂದ ಶ್ಲಾಘನೆ
ಇತ್ತೀಚೆಗೆ ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಅಕ್ಷಯಪಾತ್ರ ಫೌಂಡೇಶನ್ 500 ಕೋಟಿ ಊಟ ದಾನ ಮಾಡಿದ ಸಾಧನೆಯನ್ನು ಮತ್ತು ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮವನ್ನು ಆಚರಿಸಲಾಯಿತು.
India Latest News Live:ಇದು ನನ್ನ ಮಗು, ನಿಮ್ಗೆ ಕೊಡಲ್ಲ - ಮನೆಗೆ ನುಗ್ಗಿ 3 ತಿಂಗಳ ಕಂದನ ಹಿಡಿದಿಟ್ಟುಕೊಂಡ ಕೋತಿ- ವಿಡಿಯೋ ವೈರಲ್
India Latest News Live:ಸೌತೇಕಾಯಿ ಬೆಳಿಗ್ಗೆ ತಿಂದರೆ ಹೀರಾ, ಮಧ್ಯಾಹ್ನ ಜೀರಾ, ರಾತ್ರಿ ತಿಂದರೆ ಕೀಡಾ- ಏನಿದು ವೈದ್ಯರ ಮಾತು?
India Latest News Live:ಮಾರಾಟಕ್ಕಿದೆ ಈ ಪರೀಕ್ಷಾ ಕೇಂದ್ರ! 300 ರೂ. ಕೊಟ್ರೆ ಸಾಕು, ಓದದೇ IAS, IPS, IFS ಅಧಿಕಾರಿಯಾಗಲು ದಾರಿ
ಬಿ.ಎ. ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಮೇಲ್ವಿಚಾರಕರಿಗೆ 300 ರೂಪಾಯಿ ಲಂಚ ನೀಡಿ, ಮೊಬೈಲ್ ಫೋನ್ ಬಳಸಿ ನಕಲು ಮಾಡಿದ್ದಾರೆ. ಲಂಚ ನೀಡಲು ನಿರಾಕರಿಸಿದ ಕೆಲವು ವಿದ್ಯಾರ್ಥಿಗಳು ತಮಗೂ ಉಚಿತವಾಗಿ ನಕಲು ಮಾಡಲು ಅವಕಾಶ ನೀಡಬೇಕೆಂದು ಪ್ರತಿಭಟಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
India Latest News Live:ಇವತ್ತಿನ ಕಾಲಕ್ಕೆ 'ಸಿಮ್ರನ್' ಪಾತ್ರ ಸರಿಹೋಗಲ್ಲ, ಆದ್ರೆ Gen Zಗೆ ಒಂದು ಪಾಠವಿದೆ ಎಂದಿದ್ಯಾಕೆ ಕಾಜೋಲ್?
ಎವರ್‌ಗ್ರೀನ್ ಲವ್ ಸ್ಟೋರಿಗಳಲ್ಲಿ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' (DDLJ) ಚಿತ್ರಕ್ಕೆ ಈಗಲೂ ವಿಶೇಷ ಸ್ಥಾನವಿದೆ. 1995ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ನಟಿಸಿದ್ದರು.
India Latest News Live:Don't Refrigerate - ಈ 5 ತರಕಾರಿಗಳನ್ನು ಅಪ್ಪಿತಪ್ಪಿಯೂ ಫ್ರಿಡ್ಜ್‌ನಲ್ಲಿ ಇಡಲೇಬೇಡಿ, ಇಟ್ರೆ ಕೆಲಸ ಕೆಟ್ಟಂತೆ!
ಮಾರುಕಟ್ಟೆಯಿಂದ ತಂದ ಎಲ್ಲಾ ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಡುವುದು ಒಳ್ಳೆಯದು ಎಂಬ ಭಾವನೆ ತಪ್ಪು. ಕೆಲವು ತರಕಾರಿಗಳನ್ನು ತಂಪಾದ ವಾತಾವರಣದಲ್ಲಿಟ್ಟರೆ ಅವುಗಳ ರುಚಿ, ಸುವಾಸನೆ ಮತ್ತು ಪೋಷಕಾಂಶಗಳು ಕಡಿಮೆಯಾಗಿ ಬೇಗನೆ ಹಾಳಾಗುತ್ತವೆ.
India Latest News Live:ನಟಿ ಶ್ರದ್ಧಾ ಕಪೂರ್ ಪ್ರಪೋಸಲ್ ರಿಜೆಕ್ಟ್ ಮಾಡಿ ಪೆಟ್ಟು ತಿಂದಿದ್ದೆ - ವರುಣ್ ಧವನ್ ಕಥೆ ವೈರಲ್
ನಟ ವರುಣ್ ಧವನ್ ತಮ್ಮ 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವೇಳೆ, ಬಾಲ್ಯದಲ್ಲಿ ಶ್ರದ್ಧಾ ಕಪೂರ್ ತನಗೆ ಪ್ರಪೋಸ್ ಮಾಡಿದ್ದಾಗ, ತಾನು ಅದನ್ನು ನಿರಾಕರಿಸಿದ್ದಕ್ಕೆ ಹುಡುಗರ ಗುಂಪಿನಿಂದ ಪೆಟ್ಟು ತಿಂದಿದ್ದ ತಮಾಷೆಯ ಘಟನೆಯೊಂದನ್ನು ವರುಣ್ ನೆನಪಿಸಿಕೊಂಡಿದ್ದಾರೆ.
India Latest News Live:ಒಂದೇ ಏಟಿಗೆ ಆಪ್ ಗಲಿಬಿಲಿ, ಪಕ್ಷ ತೊರೆದು 7 ಸಂಸದರು ಬಿಜೆಪಿಗೆ, ಉಳಿದಿರೋ ಮೂವರು ಯಾರು?
ಒಂದೇ ಏಟಿಗೆ ಆಪ್ ಗಲಿಬಿಲಿ, ಪಕ್ಷ ತೊರೆದು 7 ಸಂಸದರು ಬಿಜೆಪಿಗೆ, ಉಳಿದಿರೋ ಮೂವರು ಯಾರು? ರಾಘವ್ ಚಡ್ಡಾಗೆ ಪಾಠ ಕಲಿಸಲು ಹೋದ ಆಮ್ ಆದ್ಮಿ ಪಾರ್ಟಿ ಕಂಗಾಲಾಗಿದೆ. 7 ಸಂಸದರು ಪಕ್ಷ ತೊರೆದು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ.
India Latest News Live:Madurai Meenakshi - ಮಧುರೈ ಮೀನಾಕ್ಷಿ ಅಮ್ಮನಿಗೆ ಆ ಹೆಸರು ಇಟ್ಟಿದ್ಯಾರು? ಅಸಲಿ ಹೆಸರೇ ಬೇರೆ!
ಮದುರೈ ಮೀನಾಕ್ಷಿ ಅಮ್ಮನ ದೇವಸ್ಥಾನ ಜಗತ್ತಿಗೇ ಫೇಮಸ್. ಆದರೆ, 'ಮೀನಾಕ್ಷಿ' ಅನ್ನೋದು ದೇವಿಯ ನಿಜವಾದ ಹೆಸರಲ್ಲ. ಹಾಗಿದ್ರೆ ಆಕೆಗೆ ಈ ಹೆಸರು ಹೇಗೆ ಬಂತು, ಯಾರು ಇಟ್ಟರು ಅನ್ನೋದರ ಹಿಂದೆ ಅಚ್ಚರಿಯ ಕಥೆಗಳಿವೆ. ಈ ದೇವಸ್ಥಾನದ ಬಗ್ಗೆ ಗೊತ್ತಿಲ್ಲದ ಹಲವು ರಹಸ್ಯಗಳನ್ನು ಇಲ್ಲಿ ತಿಳಿಯೋಣ.
India Latest News Live:ಶಾರುಖ್ ಖಾನ್ 'ಪಠಾಣ್' ರೆಕಾರ್ಡ್ ಬ್ರೇಕ್ - ಬಾಕ್ಸಾಫೀಸ್ ಚಿಂದಿ ಉಡಾಯಿಸಿದ ಧುರಂಧರ್ 2
ಶಾರುಖ್ ಖಾನ್ ನಟನೆಯ 'ಪಠಾಣ್' ಚಿತ್ರದ ದಾಖಲೆಯನ್ನು ಮುರಿದು ರಣವೀರ್ ಸಿಂಗ್ ಅಭಿನಯದ 'ಧುರಂಧರ್ ಪ್ರತಿಕಾರ' ಸಿನಿಮಾ ಹೊಸ ಇತಿಹಾಸ ಬರೆದಿದೆ. ವಿಶ್ವಾದ್ಯಂತ ಈ ಚಿತ್ರ ₹1783 ಕೋಟಿ ಗಳಿಕೆ ಕಂಡಿದೆ.
India Latest News Live:Air Cooler Cleaning - ನಿಮ್ಮ ಏರ್ ಕೂಲರ್‌ನಿಂದ ಕೆಟ್ಟ ವಾಸನೆ ಬರ್ತಿದ್ಯಾ? ಚಿಂತೆ ಮಾಡ್ಬೇಡಿ, ಖರ್ಚಿಲ್ಲದೆ ಹೀಗೆ ಸರಿಪಡಿಸಿ!
ಬೇಸಿಗೆಯಲ್ಲಿ ಏರ್ ಕೂಲರ್ ಬಳಸುವಾಗ ಕೆಲವೊಮ್ಮೆ ಕೆಟ್ಟ ವಾಸನೆ ಬರುವುದು ಸಾಮಾನ್ಯ. ಈ ಸಮಸ್ಯೆಯನ್ನು ಮನೆಯಲ್ಲೇ ಸುಲಭವಾಗಿ, ಯಾವುದೇ ಖರ್ಚಿಲ್ಲದೆ ಹೇಗೆ ಬಗೆಹರಿಸಬಹುದು ಎಂದು ಈ ಗ್ಯಾಲರಿಯಲ್ಲಿ ನೋಡೋಣ.
India Latest News Live:Mamitha Controversy - ಕಪ್ಪು ಬಣ್ಣ ಬಳಿದು ನಟಿಸಿದ್ದೀರಾ? ಟ್ರೋಲ್‌ಗಳಿಗೆ ನಟಿ ಮಮಿತಾ ಖಡಕ್ ಉತ್ತರ!
ಧನುಷ್ ಜೊತೆಗಿನ 'ಕಾರ' ಸಿನಿಮಾದಲ್ಲಿ ಕಪ್ಪಾಗಿ ಕಾಣಲು ಮೇಕಪ್ ಮಾಡಿಕೊಂಡಿದ್ದಾರೆ ಎಂಬ ಟೀಕೆಗೆ ನಟಿ ಮಮಿತಾ ಬೈಜು ಪ್ರತಿಕ್ರಿಯಿಸಿದ್ದಾರೆ. ಒಬ್ಬ ನಟಿಯಾಗಿ ನನ್ನ ಎಲ್ಲೆ ಮೀರಿ ನಟಿಸುವುದು ನನ್ನ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.
India Latest News Live:ಶಾರುಖ್ ಖಾನ್ ಸಕ್ಸಸ್ ಹಿಂದೆ ಆ ಮಹಿಳೆ ಕೈವಾಡ; ಮುಂಬೈನ ದುಬಾರಿ ಬಾಂದ್ರಾದಲ್ಲಿ ಅಪಾರ್ಟ್‌ಮೆಂಟ್ ಖರೀದಿ!
ಶಾರುಖ್ ಖಾನ್ ಅವರು ಸದ್ಯ ತಮ್ಮ ಮುಂದಿನ ಸಿನಿಮಾ 'ಕಿಂಗ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಮಗಳು ಸುಹಾನಾ ಖಾನ್ ಕೂಡ ಅಭಿನಯಿಸುತ್ತಿರುವುದು ವಿಶೇಷ. 2023ರಲ್ಲಿ 'ಪಠಾಣ್' ಮತ್ತು 'ಜವಾನ್' ಮೂಲಕ ಸಾವಿರಾರು ಕೋಟಿ ಕೊಳ್ಳೆ ಹೊಡೆದಿದ್ದ ಕಿಂಗ್ ಖಾನ್, ಈಗ ಮತ್ತೆ ಬಾಕ್ಸ್ ಆಫೀಸ್ ಧೂಳಿಪಟ ಮಾಡಲು ಸಜ್ಜಾಗಿದ್ದಾರೆ.
India Latest News Live:ರಾಘವ್ ಚಡ್ಡಾ ಜೊತೆ ಪಕ್ಷ ತೊರೆದ ಇಬ್ಬರು ಸಂಸದರು ಬಿಜೆಪಿಗೆ, ಆಪ್ ಪಾರ್ಟಿ ಖಾಲಿ ಖಾಲಿ
ರಾಘವ್ ಚಡ್ಡಾ ಜೊತೆ ಪಕ್ಷ ತೊರೆದ ಇಬ್ಬರು ಸಂಸದರು ಬಿಜೆಪಿಗೆ, ಆಪ್ ಪಾರ್ಟಿ ಖಾಲಿ ಖಾಲಿ, ಈ ಬೆಳವಣಿಗೆ ಬೆನ್ನಲ್ಲೇ ರಾಜಕೀಯ ತಲ್ಲಣ ಸೃಷ್ಟಿಯಾಗಿದೆ. ಮೊದಲೆ ಕಳೆಗುಂದಿದ್ದ ಆಪ್ ಇದೀಗ ನಾಯಕರಿಲ್ಲದೆ ಬರಿಗಾಗುತ್ತಿದೆ.
India Latest News Live:Annu Kapoor - ಆತ ಅದ್ಭುತ ನಟ, ಆದ್ರೆ ಕೆಟ್ಟ ಗಂಡ.. 'ಓಂ ಪುರಿ ನನ್ನ ತಂಗಿ ಲೈಫನ್ನು ನರಕ ಮಾಡ್ಬಿಟ್ರು'..!
ಪ್ರಸ್ತುತ ಅಣ್ಣು ಕಪೂರ್ ತಮಗೆ ಯಾರ ಮೇಲೂ ದ್ವೇಷವಿಲ್ಲ ಎಂದು ಹೇಳಿದ್ದರೂ, ತನ್ನ ತಂಗಿಯ ಬದುಕು ಹಾಳಾಯಿತು ಮತ್ತು ಆಕೆಗೆ ಯಾವುದೇ ಬೆಂಬಲವಿಲ್ಲ ಎನ್ನುವ ಕೊರಗು ಮಾತ್ರ ಅವರಲ್ಲಿ ಹಾಗೆಯೇ ಉಳಿದಿದೆ. ಬಾಲಿವುಡ್‌ನ ಈ ಕರಾಳ ಮುಖ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
India Latest News Live:ಗುಜರಾತ್ ಎದುರಿನ ಹೈವೋಲ್ಟೇಜ್ ಮ್ಯಾಚ್‌ಗೆ ಆರ್‌ಸಿಬಿ ತಂಡದಲ್ಲಿ ಎರಡು ಬದಲಾವಣೆ? ಕನ್ನಡಿಗನಿಗಿಲ್ಲ ಸ್ಥಾನ!
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲಿ ಆರ್‌ಸಿಬಿ ತಂಡವು ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ರಿಪೋರ್ಟ್ ಇಲ್ಲಿದೆ ನೋಡಿ.
India Latest News Live:ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ರಾಜ್ಯಸಭಾ ಎಂಪಿ ರಾಘವ್ ಚಡ್ಡಾ
ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ರಾಜ್ಯಸಭಾ ಎಂಪಿ ರಾಘವ್ ಚಡ್ಡಾ, ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಸದ್ದಡಿಗಿಸಲು ಪ್ರಯತ್ನಿಸಿದ ಆಪ್‌ಗೆ ಯುವಕ ನಾಯಕ ತಿರುಗೇಟು ನೀಡಿದ್ದಾರೆ.
India Latest News Live:ಇವ್ರಂತೂ ಗೆಲ್ಲಲ್ಲ...! ಚೆನ್ನೈ ಎದುರಿನ ಮ್ಯಾಚ್ ಮುಗಿಯುವ ಮೊದಲೇ ಮೈದಾನ ತೊರೆದ ಮುಂಬೈ ಮಾಲೀಕ ಆಕಾಶ್ ಅಂಬಾನಿ! ವಿಡಿಯೋ ವೈರಲ್
India Latest News Live:ದೆಹಲಿಯನ್ನೇ ನಾನು ಆಕ್ರಮಿಸಿಕೊಳ್ಳುತ್ತೇನೆ ಪಶ್ಚಿಮ ಬಂಗಾಳದಲ್ಲಿ ಗುಡುಗಿದ ಮಮತಾ - ದೀದಿ ಮಾತಿಗೆ ಅಮಿತ್ ಷಾ ಹೇಳಿದ್ದೇನು?
ಪಶ್ಚಿಮ ಬಂಗಾಳದಲ್ಲಿ ಗೆದ್ದ ನಂತರ ದೆಹಲಿಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ವಿರೋಧ ಪಕ್ಷಗಳನ್ನು ಒಗ್ಗೂಡಿಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಅವರ ಈ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.