- Home
- Viral News
- ಮದ್ವೆ ದಿನವೇ ಮೈಚಳಿ ಬಿಟ್ಟು ಡಾನ್ಸ್ ಮಾಡಿದ ರೀಲ್ಸ್ರಾಣಿ: ವಾಪಸ್ ಹೋದ ವರನ ಮನೆಯವ್ರು- ವಿಡಿಯೋ ವೈರಲ್
ಮದ್ವೆ ದಿನವೇ ಮೈಚಳಿ ಬಿಟ್ಟು ಡಾನ್ಸ್ ಮಾಡಿದ ರೀಲ್ಸ್ರಾಣಿ: ವಾಪಸ್ ಹೋದ ವರನ ಮನೆಯವ್ರು- ವಿಡಿಯೋ ವೈರಲ್
ತನ್ನದೇ ಮದುವೆಯ ಮೆರವಣಿಗೆಯಲ್ಲಿ 'ಮೇರೆ ಸೈಯಾನ್ ಸೂಪರ್‌ಸ್ಟಾರ್' ಹಾಡಿಗೆ ಮೈಮರೆತು ಕುಣಿದ ವಧುವನ್ನು ನೋಡಿ ಭಾವಿ ಅತ್ತೆ-ಮಾವ ಮದುವೆಯನ್ನೇ ರದ್ದುಪಡಿಸಿದ್ದಾರೆ. ಮದುವೆ ಮುರಿದುಬಿದ್ದರೂ, ವಧುವಿನ ಈ ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ರೀಲ್ಸ್ರಾಣಿಯ ಪೇಚಾಟ
ಈಗ ಎಲ್ಲೆಲ್ಲೂ ರೀಲ್ಸ್ ಹುಚ್ಚಾಟದವರೇ ಹೆಚ್ಚು. ಯಾವುದಾದರೂ ಹಾಡು ಕೇಳಿದಾಕ್ಷಣ, ಒಂದು ಕ್ಷಣ ಅವರ ಕಾಲುಗಳು ನಿಲ್ಲುವುದೇ ಇಲ್ಲ. ಅಲ್ಲಿಯೇ ಒಂದು ರೀಲ್ಸ್ ಮಾಡಿ, ಅದನ್ನು ಪೋಸ್ಟ್ ಮಾಡುವವರೆಗೂ ಸಮಾಧಾನ ಆಗುವುದಿಲ್ಲ. ಈಗ ಅಂಥದ್ದೇ ರೀಲ್ಸ್ ರಾಣಿಯೊಬ್ಬಳು ತನ್ನದೇ ಮದುವೆಯ ದಿನ ಬೇಕಾಬಿಟ್ಟೆ ಡಾನ್ಸ್ ಮಾಡಿ ಮದುವೆ ಕ್ಯಾನ್ಸಲ್ ಮಾಡಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಮೈಚಳಿ ಬಿಟ್ಟು ನೃತ್ಯ
ಈ ವಿಡಿಯೋದಲ್ಲಿ, ಮದುಮಕ್ಕಳ ಬಾರಾತ್ (ಮೆರವಣಿಗೆ) ಬರುತ್ತಿದೆ. ಆ ಸಂದರ್ಭದಲ್ಲಿ "ಮೇರೆ ಸೈಯಾನ್ ಸೂಪರ್‌ಸ್ಟಾರ್" ಹಾಡಿನ ರಿಕಾರ್ಡ್ ಹಾಕಿಬಿಟ್ಟಿದ್ದಾರೆ. ಈ ವಧುವಿಗೋ ಆ ಹಾಡಿನ ಬೀಟ್ಸ್ ಕೇಳಿ ತಡೆದುಕೊಳ್ಳಲು ಆಗಲೇ ಇಲ್ಲ. ತಾನು ಮದುಮಗಳು ಎನ್ನೋದನ್ನೂ ಮರೆತು ಮೈಚಳಿ ಬಿಟ್ಟು ಡಾನ್ಸ್ ಮಾಡಿದ್ದಾಳೆ.
ಭಾರಿ ಡಾನ್ಸ್
ಇಡೀ ಪೆಂಡಲ್ ಭೂಕಂಪದಿಂದ ಅಪ್ಪಳಿಸಿದಂತೆ ಭಾಸವಾಗುವ ರೀತಿಯಲ್ಲಿ ಡಾನ್ಸ್ ಮಾಡಿದ್ರೆ, ಆಕೆಯ ಸ್ನೇಹಿತೆಯರೂ ಅವಳಿಗೆ ಆಥ್ ನೀಡಿದರು. ಅಲ್ಲಿ ಇದ್ದವರೆಲ್ಲರೂ ವ್ಹಾರೆವ್ಹಾ ಎಂದರು.
ಅತ್ತೆ-ಮಾವ ಶಾಕ್
ಆದರೆ, ಈಕೆಯ ಭಾವಿ ಅತ್ತೆ-ಮಾವ ಅಲ್ಲಿಗೆ ಬಂದು ತಮ್ಮ ಭಾವಿ ಸೊಸೆಯ ಆವಾಂತರ ನೋಡಿ ಬೆಚ್ಚಬಿದ್ದರು. ಈಕೆ ಭಾರಿ ಅಪಾಯಕಾರಿ ನೃತ್ಯವನ್ನು ಪ್ರದರ್ಶಿಸುತ್ತಿದ್ದಾಳೆ ಎಂದು ಹೇಳಿದ ಅತ್ತೆ-ಮಾವ ಇಂಥವಳು ತಮ್ಮ ಮನೆಯ ಸೊಸೆಯಾಗಿ ಬಂದ್ರೆ ಅಷ್ಟೇ ಕಥೆ ಎಂದು ವಾಪಸ್ ಹೋಗಿಯೇ ಬಿಟ್ಟರು! ಮಂಟಪಕ್ಕೆ ಬರಬೇಕಿದ್ದ ವರನ ಮೆರವಣಿಗೆ ವಾಪಸ್ ಹೋಯಿತು!
ರೀಲ್ಸ್ ಹಿಟ್
ಮದುವೆಯೇನೋ ಮುರಿದು ಬಿತ್ತು. ಆದರೆ ಈ ವಧುವಿನ ಅದೃಷ್ಟ ಇನ್ನೊಂದು ರೀತಿ ಖುಲಾಯಿಸಿದೆ. ಈಕೆ ಇಲ್ಲಿಯವರೆಗೆ ಮಾಡಿದ್ದ ರೀಲ್ಸ್ಗಳು ಇಷ್ಟು ಹಿಟ್ ಆಗಿದ್ಯೋ ಇಲ್ವೋ ಗೊತ್ತಿಲ್ಲ. ಆದರೆ ಮದುವೆ ಮನೆಯ ರೀಲ್ಸ್ ಮಾತ್ರ ಸಿಕ್ಕಾಪಟ್ಟೆ ಹಿಟ್ ಆಗಿಹೋಗಿದೆ.
ನೆಟ್ಟಿಗರ ಅಭಿಪ್ರಾಯ
ಮದುವೆ ಕ್ಯಾನ್ಸಲ್ ಆದ್ರೂ ರೀಲ್ಸ್ರಾಣಿಗೆ ತನ್ನ ಡಾನ್ಸ್ ಈ ಪರಿ ವ್ಯೂವ್ಸ್ ಕಂಡಿದ್ದು ನೋಡಿ ಖುಷಿಯಾಗಿದ್ಯೋ ಗೊತ್ತಿಲ್ಲ. ಒಟ್ಟಿನಲ್ಲಿ ರೀಲ್ಸ್ಪ್ರೇಮಿಗಳೆಲ್ಲಾ ಕೊನೆಯ ಪಕ್ಷ ತಮ್ಮ ಮದುವೆಯ ದಿನವಾದರೂ ಸ್ವಲ್ಪ ಕೈಕಾಲು ಆಡಿಸದೇ ಬಿಗಿಯಾಗಿ ಇಟ್ಟುಕೊಳ್ಳೋದನ್ನು ಕಲಿಯಿರಿ ಎಂದು ಕಮೆಂಟ್ಸ್ ಸುರಿಮಳೆ ಆಗ್ತಿದೆ.

