ಶಾರುಖ್ ಖಾನ್ ನಟನೆಯ 'ಪಠಾಣ್' ಚಿತ್ರದ ದಾಖಲೆಯನ್ನು ಮುರಿದು ರಣವೀರ್ ಸಿಂಗ್ ಅಭಿನಯದ 'ಧುರಂಧರ್ ಪ್ರತಿಕಾರ' ಸಿನಿಮಾ ಹೊಸ ಇತಿಹಾಸ ಬರೆದಿದೆ. ವಿಶ್ವಾದ್ಯಂತ ಈ ಚಿತ್ರ ₹1783 ಕೋಟಿ ಗಳಿಕೆ ಕಂಡಿದೆ.

ಶಾರುಖ್ ಖಾನ್ ನಟನೆಯ 'ಪಠಾಣ್' ಚಿತ್ರದ ದಾಖಲೆಯನ್ನು ಮುರಿದು ರಣವೀರ್ ಸಿಂಗ್ ಅಭಿನಯದ 'ಧುರಂಧರ್ ಪ್ರತಿಕಾರ' ಸಿನಿಮಾ ಹೊಸ ಇತಿಹಾಸ ಬರೆದಿದೆ. ವಿಶ್ವಾದ್ಯಂತ ಈ ಚಿತ್ರ ₹1783 ಕೋಟಿ ಗಳಿಕೆ ಕಂಡಿದೆ. ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ 'ಧುರಂಧರ್ ಪ್ರತಿಕಾರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರ, ಬಿಡುಗಡೆಯಾಗಿ 30 ದಿನ ಕಳೆದರೂ ತನ್ನ ನಾಗಾಲೋಟ ಮುಂದುವರಿಸಿದೆ.

ಭಾರತದಲ್ಲೇ ₹1000 ಕೋಟಿ ನೆಟ್ ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ 'ಧುರಂಧರ್ ಪ್ರತಿಕಾರ' ಪಾತ್ರವಾಗಿದೆ. ಬಿಡುಗಡೆಯಾದ ಒಂದು ತಿಂಗಳಲ್ಲಿ ಈ ಚಿತ್ರ ವಿಶ್ವಾದ್ಯಂತ ಬರೋಬ್ಬರಿ ₹1783 ಕೋಟಿ ಬಾಚಿಕೊಂಡಿದೆ. ಭಾರತದಿಂದಲೇ ಚಿತ್ರದ ನೆಟ್ ಕಲೆಕ್ಷನ್ ₹1153 ಕೋಟಿ ದಾಟಿದೆ. ಅಷ್ಟೇ ಅಲ್ಲ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲೂ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾ ಎಂಬ ದಾಖಲೆಯನ್ನೂ ಈ ಚಿತ್ರ ತನ್ನದಾಗಿಸಿಕೊಂಡಿದೆ.

ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ

ಈ ಹಿಂದೆ ಈ ದಾಖಲೆ ಶಾರುಖ್ ಖಾನ್ ಅವರ 'ಪಠಾಣ್' ಚಿತ್ರದ ಹೆಸರಲ್ಲಿತ್ತು. ಚಿತ್ರದ ನಿರ್ಮಾಪಕರು ಭಾರತದ ಕಲೆಕ್ಷನ್ ವಿವರವನ್ನು ಹಂಚಿಕೊಂಡಿದ್ದಾರೆ. ಅದರಂತೆ, ಮೊದಲ ವಾರ (8 ದಿನ) ₹690 ಕೋಟಿ, ಎರಡನೇ ವಾರ ₹271 ಕೋಟಿ, ಮೂರನೇ ವಾರ ₹120 ಕೋಟಿ ಹಾಗೂ ನಾಲ್ಕನೇ ವಾರ ₹58 ಕೋಟಿ ನೆಟ್ ಕಲೆಕ್ಷನ್ ಮಾಡಿದೆ.

ಐದನೇ ವೀಕೆಂಡ್‌ನಲ್ಲೂ ಚಿತ್ರ ಉತ್ತಮ ಗಳಿಕೆ ಕಂಡಿದೆ. ಶುಕ್ರವಾರ (30ನೇ ದಿನ) ₹3 ಕೋಟಿ, ಶನಿವಾರ ₹5 ಕೋಟಿ ಹಾಗೂ ಭಾನುವಾರ ₹5.50 ಕೋಟಿ ಗಳಿಸಿದೆ. ಒಟ್ಟಾರೆ ಐದನೇ ವೀಕೆಂಡ್‌ನಲ್ಲಿ ₹13.50 ಕೋಟಿ ಕಲೆಕ್ಷನ್ ಆಗಿದೆ. 32 ದಿನಗಳಲ್ಲಿ ಭಾರತದಲ್ಲಿ ಚಿತ್ರದ ನೆಟ್ ಕಲೆಕ್ಷನ್ ₹1153 ಕೋಟಿ ಆಗಿದ್ದು, ಒಟ್ಟು ಗ್ರಾಸ್ ಕಲೆಕ್ಷನ್ ₹1360 ಕೋಟಿ ಆಗಿದೆ. ವಿದೇಶಗಳಿಂದ ಚಿತ್ರ ₹423 ಕೋಟಿ ಗಳಿಸಿದೆ. ಇದರೊಂದಿಗೆ, ಚಿತ್ರದ ವಿಶ್ವಾದ್ಯಂತ ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ ₹1783 ಕೋಟಿ ದಾಟಿದೆ.