ಇರಾನ್ ದಾಳಿಯಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಸಾವನ್ನಪ್ಪಿದ್ದಾರೆ ಎಂಬ ವದಂತಿಗಳಿಗೆ, ಅವರು ಕಾಫಿ ಶಾಪ್‌ನಿಂದಲೇ ವಿಡಿಯೋ ಮೂಲಕ ತಮಾಷೆಯಾಗಿ ಉತ್ತರಿಸಿದ್ದಾರೆ. ತಮ್ಮ ಸಾವಿನ ವದಂತಿ ಹಾಗೂ ಆರು ಬೆರಳುಗಳಿರುವ ಎಐ ವಿಡಿಯೋ ಕುರಿತು ಸ್ಪಷ್ಟನೆ ನೀಡಿದ ಅವರು, ಇಸ್ರೇಲಿ ನಾಗರಿಕರಿಗೆ ಧೈರ್ಯ ತುಂಬಿದ್ದಾರೆ.
- Home
- News
- India News
- India Latest News Live: ಕಾಫಿ ಕುಡಿಯುತ್ತಾ ತನ್ನ ಸಾವಿನ ವದಂತಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ನೇತನ್ಯಾಹು
India Latest News Live: ಕಾಫಿ ಕುಡಿಯುತ್ತಾ ತನ್ನ ಸಾವಿನ ವದಂತಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ನೇತನ್ಯಾಹು

ನವದೆಹಲಿ: ಅನಿಲ ಕೊರತೆಯಿಂದಾಗಿ ಹೊಟೆಲ್, ರೆಸ್ಟೋರೆಂಟ್, ಬೀದಿ ಬದಿ ಅಂಗಡಿಗಳಿಗೆ ಬೀಗ ಬಿದ್ದಿರುವ ಹೊತ್ತಿನಲ್ಲಿ, 29 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಸಿಲಿಂಡರ್ಗಳ ವಿತರಣೆ ಆರಂಭವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ‘ದೇಶದಲ್ಲಿ ಸಾಕಷ್ಟು ಕಚ್ಚಾ ತೈಲ ದಾಸ್ತಾನಿದ್ದು, ದೇಶೀಯ ಸಂಸ್ಕರಣಾಗಾರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಾಗಿಲ್ಲ’ ಎಂದು ಹೇಳಿದ್ದಾರೆ.
ಜತೆಗೇ, ನಗರ ಪ್ರದೇಶಗಳಲ್ಲಿ 25 ದಿನಗಳ ಅಂತರದಲ್ಲಿ ಗ್ಯಾಸ್ ಬುಕ್ ಮಾಡಬಹುದು ಹಾಗೂ ಗ್ರಾಮೀಣ ಭಾಗಗಳಲ್ಲಿ ಈ ಅಂತರ 45 ದಿನ ಇರಲಿದೆ ಎಂದೂ ತಿಳಿಸಿದರು
India Latest News Live 15 March 2026ಕಾಫಿ ಕುಡಿಯುತ್ತಾ ತನ್ನ ಸಾವಿನ ವದಂತಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ನೇತನ್ಯಾಹು
India Latest News Live 15 March 2026ರಶ್ಮಿಕಾ ಮಂದಣ್ಣ 'ಅಣ್ಣ' ಅಂತ ಕರೆಯೋ ಆ ಸ್ಟಾರ್ ನಟ ಯಾರು? ಇದರಲ್ಲಿ ನಿಜವೆಷ್ಟು?
ಟಾಲಿವುಡ್‌ನಲ್ಲಿ ಸ್ಟಾರ್ ಹೀರೋಯಿನ್ ಆಗಿ, ಬಾಲಿವುಡ್‌ನಲ್ಲೂ ತನ್ನ ಛಾಪು ಮೂಡಿಸಿರುವ ನಟಿ ರಶ್ಮಿಕಾ ಮಂದಣ್ಣ. ಚಿತ್ರರಂಗದಲ್ಲಿ ರಶ್ಮಿಕಾ 'ಅಣ್ಣ' ಎಂದು ಕರೆಯುವ ನಟ ಯಾರು ಗೊತ್ತಾ? ಈ ಸುದ್ದಿಯಲ್ಲಿ ಸತ್ಯಾಂಶ ಇದೆಯೇ?
India Latest News Live 15 March 20262027ರವರೆಗೂ ಕಾರ್ ರೇಸ್‌ನಲ್ಲಿ ಅಜಿತ್! ಶೂಟಿಂಗ್ ನಡುವೆಯೂ ರೇಸಿಂಗ್ - ಮ್ಯಾನೇಜರ್ ಕೊಟ್ಟ ಅಪ್‌ಡೇಟ್
ಅಜಿತ್, ತಮ್ಮದೇ ಆದ 'ಅಜಿತ್ ಕುಮಾರ್ ರೇಸಿಂಗ್' ತಂಡದ ಮೂಲಕ ದುಬೈ, ಅಬುಧಾಬಿ, ಮಲೇಷ್ಯಾ ಹಾಗೂ ಯುರೋಪಿಯನ್ ದೇಶಗಳಲ್ಲಿ ನಡೆದ ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.
India Latest News Live 15 March 2026ನಿಮ್ಮ ಹೃದಯದ ಆರೋಗ್ಯ ಹೇಗಿದೆ? ಮನೆಯಲ್ಲಿಯೇ ಐದು ನಿಮಿಷದ ಈ ಸಿಂಪಲ್ ಟೆಸ್ಟ್ ಮಾಡಿ ನೋಡಿ
ಇತ್ತೀಚೆಗೆ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಕಳವಳದ ನಡುವೆ, ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಹೃದಯದ ಆರೋಗ್ಯವನ್ನು ಪರೀಕ್ಷಿಸಿಕೊಳ್ಳುವ 5 ಸರಳ ವಿಧಾನಗಳನ್ನು ಡಾ. ವಿನಯ್ ವಿವರಿಸಿದ್ದಾರೆ. ಮನೆಯಲ್ಲಿ ಈ ಸುಲಭದ ಪರೀಕ್ಷೆ ಮಾಡುವಂತಹ ಈ ಸುಲಭ ಟೆಸ್ಟ್‌ಗಳಿಂದ ಹೃದಯದ ಸ್ಥಿತಿ ಅರಿಯಬಹುದು.
India Latest News Live 15 March 2026Ram Charan - ಅಲ್ಲು ಅರ್ಜುನ್‌ಗೆ ರಾಮ್ ಚರಣ್ ಪೈಪೋಟಿ? ಮೆಗಾ ಪವರ್ ಸ್ಟಾರ್ ಹೊಸ ಬ್ಯುಸಿನೆಸ್ ಶುರು!
ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸಿನೆಮಾಗಳ ಜೊತೆಗೆ ಬ್ಯುಸಿನೆಸ್‌ನಲ್ಲೂ ರಾಮ್ ಚರಣ್ ಸಖತ್ ಬ್ಯುಸಿ. ಇದೀಗ ಅವರು ಹೊಸ ಉದ್ಯಮವೊಂದನ್ನು ಆರಂಭಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಏನಿದು ಹೊಸ ಬ್ಯುಸಿನೆಸ್? ಇಲ್ಲಿದೆ ಪೂರ್ತಿ ವಿವರ.
India Latest News Live 15 March 20263 ಮದುವೆಗಳ ಏಳು-ಬೀಳು - ರಿವಾಲ್ವರ್ನಿಂದ Pawan Kalyan ಆತ್ಮಹ*ತ್ಯೆಗೆ ಯತ್ನ! ನಟ ಅಂದು ಹೇಳಿದ್ದೇನು?
ನಟ ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿರುವ ಹೊತ್ತಲ್ಲಿ, ಅವರ ವೈಯಕ್ತಿಕ ಜೀವನದ ಚರ್ಚೆ ಮುನ್ನೆಲೆಗೆ ಬಂದಿದೆ. ಅವರು ತಮ್ಮ ಮೂರು ಮದುವೆಗಳ ಹಿಂದಿನ ಕಾರಣ ಮತ್ತು ಹೊಂದಾಣಿಕೆಯ ಕೊರತೆಯಿಂದ ಸಂಬಂಧಗಳು ಮುರಿದುಬಿದ್ದ ಬಗ್ಗೆ ಮಾತನಾಡಿದ್ದು ವಿಡಿಯೋ ವೈರಲ್ ಆಗಿದೆ.
India Latest News Live 15 March 2026ಮೆಗಾ ಸೊಸೆ ಲಾವಣ್ಯ ಕೈಬಿಟ್ಟ ವಿಜಯ್ ಸಿನಿಮಾ ಸೂಪರ್ ಹಿಟ್ - ರಶ್ಮಿಕಾ ಮಾಡಿದ ಪಾತ್ರ ವೈರಲ್
ಮೆಗಾ ಸೊಸೆ ಲಾವಣ್ಯ ತ್ರಿಪಾಠಿ ತಮ್ಮ ಹೊಸ ಚಿತ್ರ 'ಸತಿ ಲೀಲಾವತಿ' ಪ್ರಚಾರದಲ್ಲಿ ನಿರತರಾಗಿದ್ದಾರೆ. ಮದುವೆಯ ನಂತರದ ಅವರ ಮೊದಲ ಚಿತ್ರ ಇದಾಗಿದ್ದರಿಂದ ಅಭಿಮಾನಿಗಳಲ್ಲಿ ವಿಶೇಷ ಆಸಕ್ತಿ ಮೂಡಿದೆ.
India Latest News Live 15 March 2026Rajamouli - ಚಿರಂಜೀವಿ ಚಿತ್ರದಿಂದ ಸಾಲದ ಸುಳಿಗೆ ಸಿಲುಕಿದ್ದ ನಿರ್ಮಾಪಕ - ರಾಜಮೌಳಿಗೆ ಧೈರ್ಯ ತುಂಬಿದ್ಹೇಗೆ?
ನಿರ್ದೇಶಕ ರಾಜಮೌಳಿ ಸದ್ಯ ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ 'ವಾರಣಾಸಿ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು 1300 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ.
India Latest News Live 15 March 2026Trisha Krishnan - ಜಗಳ ಮುಗೀತಾ? ಪಾರ್ತಿಬನ್ ಮಗಳ ಜೊತೆ ನಟಿ ತ್ರಿಷಾ - ವೈರಲ್ ಆಯ್ತು ಮದುವೆಯ ಫೋಟೋ!
ನಟ ಪಾರ್ತಿಬನ್ ಜೊತೆಗಿನ ವಿವಾದದ ನಂತರ, ನಟಿ ತ್ರಿಷಾ ಕೃಷ್ಣನ್ ಇದೀಗ ಅವರ ಮಗಳು ಕೀರ್ತನಾ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
India Latest News Live 15 March 2026ಪಂಚರಾಜ್ಯ ಚುನಾವಣೆ - ಪಶ್ಚಿಮ ಬಂಗಾಳದಲ್ಲಿ 8 ಹಂತಗಳ ಬದಲು ಈ ಬಾರಿ ಕೇವಲ 2 ಹಂತಗಳಲ್ಲಿ ಮತದಾನ ಏಕೆ?
ಪಶ್ಚಿಮ ಬಂಗಾಳವೂ ಸೇರಿದಂತೆ 5 ರಾಜ್ಯಗಳ ವಿಧಾನಸಭಾ ದಿನಾಂಕ ಘೋಷಣೆಯಾಗಿದೆ. ಈ ಹಿಂದೆ ಹಲವು ಚುನಾವಣಾ ಹಿಂಸಾಚಾರಕ್ಕೆ ಕಾರಣವಾಗಿರುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಕೇವಲ 2 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಅದಕ್ಕೇನು ಕಾರಣ…
India Latest News Live 15 March 2026'ನೀವ್ ಹಾಕಿದ್ ಬಟ್ಟೆನಾ ಇನ್ನೊಬ್ರು ಹಾಕಿದ್ರೆ ಸುಮ್ನಿರ್ತೀರಾ?' - ಜಯಂ ರವಿಗೆ ಟಾಂಗ್ ಕೊಟ್ಟರಾ ಆರ್ತಿ ರವಿ?
ಆರ್ತಿ ರವಿ ತಮ್ಮ ಸ್ಟೋರಿಯಲ್ಲಿ, ಬಟ್ಟೆ ಮತ್ತು ಬಣ್ಣದ ಬಗ್ಗೆ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ, 'ನೀವು ಒಂದು ಕಡೆಗೆ ಹೋದಾಗ, ಅಲ್ಲಿ ಬೇರೊಬ್ಬರು ನಿಮ್ಮಂತೆಯೇ ಅದೇ ಬಣ್ಣದ ಬಟ್ಟೆ ಧರಿಸಿದ್ದರೆ ಸುಮ್ಮನಿರುತ್ತೀರಾ?
India Latest News Live 15 March 2026Arjun Das - ಲವ್ ಫೇಲ್ಯೂರ್‌ನಿಂದ ಕಂಗೆಟ್ಟಿದ್ದ ನಟ! ಆ ಖಡಕ್ ವಾಯ್ಸ್ ಹಿಂದಿದೆ ನೋವಿನ ಕಥೆ
‘ಕೈದಿ’, ‘ಮಾಸ್ಟರ್’ ಚಿತ್ರಗಳ ಮೂಲಕ ಖಡಕ್ ವಿಲನ್ ಆಗಿ, ‘ಅನೀತಿ’ ಚಿತ್ರದ ಮೂಲಕ ಅತ್ಯುತ್ತಮ ನಟನಾಗಿ ಗುರುತಿಸಿಕೊಂಡಿರುವ ಅರ್ಜುನ್ ದಾಸ್, ಇದೀಗ ತಮ್ಮ ಬದುಕಿನ ಒಂದು ಕಹಿ ಅಧ್ಯಾಯವನ್ನು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
India Latest News Live 15 March 2026ನಾನು ನಿರ್ಮಿಸಿದ ಎಲ್ಲಾ ಸಿನಿಮಾಗಳಿಂದಲೂ ನಷ್ಟ, ಆದ್ರೆ ಪಶ್ಚಾತ್ತಾಪ ಇಲ್ಲ - ನಟ ವಿಜಯ್ ಸೇತುಪತಿ
ನಟ ವಿಜಯ್ ಸೇತುಪತಿ ತಾವು ನಿರ್ಮಾಪಕರಾಗಿ ಮಾಡಿದ ಎಲ್ಲಾ ಸಿನಿಮಾಗಳೂ ತಮಗೆ ಆರ್ಥಿಕವಾಗಿ ದೊಡ್ಡ ನಷ್ಟವನ್ನುಂಟು ಮಾಡಿವೆ ಎಂದು ಬಹಿರಂಗಪಡಿಸಿದ್ದಾರೆ. ಆದರೂ ಈ ಬಗ್ಗೆ ತಮಗೆ ಯಾವುದೇ ಬೇಸರವಿಲ್ಲ ಎಂದಿದ್ದಾರೆ.
India Latest News Live 15 March 2026Ram Gopal Varma - 'ಧುರಂಧರ್' ಡೈರೆಕ್ಟರ್‌ಗೆ ಇಂಡಸ್ಟ್ರಿಯಲ್ಲಿ ಶತ್ರುಗಳು ಜಾಸ್ತಿ, ಹುಷಾರಾಗಿರಿ - RGV ಎಚ್ಚರಿಕೆ
ಬಾಲಿವುಡ್ ಸಿನಿಮಾ 'ಧುರಂಧರ್' ಸೂಪರ್ ಹಿಟ್ ಆದ್ಮೇಲೆ, ಡೈರೆಕ್ಟರ್ ಆದಿತ್ಯ ಧರ್ ಮತ್ತು ಅವರ ಪತ್ನಿ ಯಾಮಿ ಗೌತಮ್‌ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದು ಗಂಭೀರ ಎಚ್ಚರಿಕೆ ಕೊಟ್ಟಿದ್ದಾರೆ.
India Latest News Live 15 March 2026ಬಹು ನಿರೀಕ್ಷಿತ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ ಚುನಾವಣಾ ಆಯೋಗ
ರಾಷ್ಟ್ರಿಯ ಚುನಾವಣಾ ಆಯೋಗವೂ ಬಹು ನಿರೀಕ್ಷಿತ 5 ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ದಿನಾಂಕವನ್ನು ಇಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.
India Latest News Live 15 March 2026ಕೊನೆಗೂ ಮದುವೆಗೆ ರೆಡಿಯಾದ್ರಾ ಅನುಷ್ಕಾ ಶೆಟ್ಟಿ? 44ನೇ ವಯಸ್ಸಲ್ಲಿ ಸಿಕ್ತು ಬಿಗ್ ಟ್ವಿಸ್ಟ್!
India Latest News Live 15 March 2026ಸತ್ಯ ಬಯಲಾಗುವ ಮೊದಲೇ ಸಂಭ್ರಮಿಸಿ ಪೇಚಿಗೆ ಸಿಲುಕಿದ ಊರ ಜನ - ಆಗಿದ್ದೇನು?
ಯುವಕನೋರ್ವ ತಾನು ಐಎಎಸ್ ಪಾಸಾಗಿದ್ದೇನೆ ಎಂದು ಹೇಳಿಕೊಂಡು ಊರ ತುಂಬೆಲ್ಲಾ ಜನರಿಂದ ಸನ್ಮಾನ ಮಾಡಿಸಿಕೊಂಡ ಘಟನೆ ನಡೆದಿದೆ. ಆದರೆ ನಂತರ ಸುಳ್ಳು ಹೇಳಿರುವುದು ಗೊತ್ತಾಗಿ ಜನ ಬೆಸ್ತು ಬಿದ್ದಿದ್ದಾರೆ. ಬಿಹಾರದ ಶೇಖ್‌ಪುರ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.ಡಿಟೇಲ್ ಸ್ಟೋರಿ ಇಲ್ಲಿದೆ.
India Latest News Live 15 March 2026ಸ್ವಪ್ನ ಶಾಸ್ತ್ರದ ಪ್ರಕಾರ ಯಾವ ದಿನ ಬಿದ್ದ ಕನಸು ಹೆಚ್ಚು ನಿಜವಾಗುತ್ತೆ ಗೊತ್ತಾ?
ನಿದ್ದೆಯಲ್ಲಿ ಕನಸು ಬೀಳೋದು ಸಹಜ. ಕೆಲವು ಕನಸುಗಳು ಸಾಮಾನ್ಯವಾಗಿ ಕಂಡರೂ, ಇನ್ನು ಕೆಲವು ಮನಸ್ಸಲ್ಲಿ ಅನುಮಾನ ಹುಟ್ಟಿಸುತ್ತವೆ. ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನ ಸ್ವಭಾವ, ಸಮಯ ಮತ್ತು ಬಿದ್ದ ದಿನದ ಆಧಾರದ ಮೇಲೆ ಅವುಗಳ ಅರ್ಥವನ್ನು ತಿಳಿಯಬಹುದು.
India Latest News Live 15 March 2026ಕಳೆದ ಐಪಿಎಲ್‌ನಲ್ಲಿ ಕೆಕೆಆರ್ ಈ ಇಬ್ಬರನ್ನು ಕೈಬಿಟ್ಟು ಮಹಾ ಎಡವಟ್ಟು ಮಾಡಿತು ಎಂದ ಅನಿಲ್ ಕುಂಬ್ಳೆ!
ಐಪಿಎಲ್ 2025ಕ್ಕೆ ಮುನ್ನ ಟ್ರೋಫಿ ಗೆದ್ದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಫಿಲ್ ಸಾಲ್ಟ್ ಅವರನ್ನು ಕೈಬಿಟ್ಟ ಕೆಕೆಆರ್ ನಿರ್ಧಾರವನ್ನು ಅನಿಲ್ ಕುಂಬ್ಳೆ ತೀವ್ರವಾಗಿ ಟೀಕಿಸಿದ್ದಾರೆ. ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಕೆಕೆಆರ್ ಸ್ಥಿರತೆ ತೋರುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
India Latest News Live 15 March 2026'ಟಿ20 ವಿಶ್ವಕಪ್ ಗೆಲುವು ಬರೀ ಆರಂಭವಷ್ಟೇ' - ಇದು ಟೀಂ ಇಂಡಿಯಾ ಯುಗವೆಂದು ಗುಡುಗಿದ ರೋಹಿತ್ ಶರ್ಮಾ
ಟೀಂ ಇಂಡಿಯಾದ ಗೆಲುವಿನ ಓಟ ಮುಂದಿನ ವರ್ಷಗಳಲ್ಲಿಯೂ ಮುಂದುವರಿಯಲಿದೆ ಎಂದು ಮಾಜಿ ನಾಯಕ ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುರುಷ ಮತ್ತು ಮಹಿಳಾ ತಂಡಗಳು ಇತ್ತೀಚೆಗೆ ಗೆದ್ದಿರುವ ವಿಶ್ವಕಪ್‌ಗಳು ಈ ಪ್ರಾಬಲ್ಯದ ಆರಂಭವಷ್ಟೇ ಎಂದಿದ್ದಾರೆ.